ಜಪಾನ್‌ನ ನವೋಮಿಗೆ ಕಿರೀಟ: ಟೆನಿಸ್‌ ಲೋಕದ ಅಚ್ಚರಿ 


Team Udayavani, Sep 15, 2018, 3:44 PM IST

84.jpg

“You can never get complacent because a loss is always around the corner”
ಎಂದು ಸೋಲನ್ನು ವಿಶ್ಲೇಷಿಸುತ್ತಿದ್ದ ವೀನಸ್‌ ವಿಲಿಯಮ್ಸ್‌ ಸೋದರಿ ಸೆರೆನಾ ವಿಲಿಯಮ್ಸ್‌ ಸೋಲನ್ನು ಹೇಗೆ ವಿಶ್ಲೇಷಿಸುತ್ತಾರೋ ಗೊತ್ತಿಲ್ಲ. ಆದರೆ ಸೆರೆನಾ ಸೋಲು ಮಾತ್ರ ಅದಾವುದೋ ಮೂಲೆಯಿಂದ ಬಂದು ಅಪ್ಪಳಿಸಿದ್ದರೂ, ಆಕೆಯನ್ನು ಸೋಲಿಸಿದ ಜಪಾನ್‌ನ ನವೋಮಿ ಒಸಾಕಾ ಮಾತ್ರ ಈಗ ಸ್ವದೇಶದಲ್ಲಷ್ಟೇ ಅಲ್ಲ ವಿಶ್ವವನ್ನೇ ದಿಗ್ಬ†ಮೆಗೊಳಿಸಿದೆ.

ಹೌದು, ನವೋಮಿ ಒಸಾಕಾ ಕನಸಲ್ಲೂ ಅಮೆರಿಕದ ನೆಲದಲ್ಲೇ ವಿಶ್ವ ಟೆನಿಸ್‌ನ ಟಾಪ್‌ ಮೋಸ್ಟ್‌ ಆಟಗಾತಿಯನ್ನು ಸೋಲಿಸಿ ಚಾಂಪಿಯನ್‌ ಆಗುತ್ತೇನೆ ಎಂದುಕೊಂಡಿರಲಿಲ್ಲವೇನೊ. ಆದರೆ ಕನಸು ನನಸಾಗಿದೆ. ಒಸಾಕಾ ಪ್ರಸಕ್ತ ಸಾಲಿನ ಯುಎಸ್‌ ಓಪನ್‌ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ಗ್ರಾಂಡ್‌ ಸ್ಲಾಮ್‌ ಪ್ರಶಸ್ತಿಯನ್ನು ಗೆದ್ದುಕೊಂಡ ಜಪಾನ್‌ನ ಪ್ರಪ್ರಥಮ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒಸಾಕಾ ಪಾಲಿಗೆ ಇದು ಚೊಚ್ಚಲ ಗ್ರಾಂಡ್‌ ಸ್ಲಾಮ್‌ ಫೈನಲ್‌ ಆಗಿತ್ತು. ಅದೇ ಪಂದ್ಯದಲ್ಲೇ ಸಾಕಷ್ಟು ಅನುಭವಿ ಆಟಗಾರ್ತಿಯಾಗಿರುವ ಸೆರೆನಾ ಅವರನ್ನು 6-2, 6-4 ನೇರ ಸೆಟ್‌ಗಳಿಂದ ಮಣಿಸಿ ಪ್ರಾಬಲ್ಯ ಮೆರೆದಿರುವುದು ವಿಶೇಷ.

20 ವರ್ಷ ಪ್ರಾಯದ ಒಸಾಕಾಗೆ ಇದೇ ಮೊದಲ ಗ್ರಾಂಡ್‌ ಸ್ಲಾಮ್‌ ಪ್ರಶಸ್ತಿ. ಅಷ್ಟೇ ಏಕೆ, ಜಪಾನ್‌ನ ಆಟಗಾರ್ತಿಯೊಬ್ಬರು ಫೈನಲ್‌ ತಲುಪಿದ್ದೂ ಇದೇ ಮೊದಲು. ಇಂಥ ಸಾಧನೆಯೊಂದಿಗೆ ಒಸಾಕಾ ದೈತ್ಯ ಎದುರಾಳಿಗಳನ್ನೇ ಮಣಿಸಿ ಯುಎಸ್‌ ಓಪನ್‌ ಸಿಂಗಲ್ಸ್‌ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಒಸಾಕಾ ಸಾಧನೆಯ ಹೆಜ್ಜೆ
ನವೋಮಿ ಒಸಾಕಾಗೆ ಇದೇ ಮೊದಲ ಗ್ರಾಂಡ್‌ ಸ್ಲಾಮ್‌ ಟೂರ್ನಿಯೇನಲ್ಲ. 2016ರಲ್ಲಿ ಚೊಚ್ಚಲ ಗ್ರಾಂಡ್‌ ಸ್ಲಾಮ್‌ ಟೂರ್ನಿ ಆಡಿದ ಒಸಾಕಾ, ಮೊದಲ ಮೂರ್‍ನಾಲ್ಕು ಸುತ್ತುಗಳಲ್ಲೇ ನಿರ್ಗಮಿಸುತ್ತ ಬಂದಿದ್ದರು. ಅಲ್ಲಿಂದ ಇಲ್ಲಿಯ ವರೆಗಿನ ಅವರ ಎಲ್ಲಾ ಪಂದ್ಯಗಳ ಫ‌ಲಿತಾಂಶ ಗಮನಿಸಿದಾಗ ಪ್ರಸಕ್ತ ಸಾಲಿನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿರುವುದು ಸ್ಪಷ್ಟ.

ಸೋತ ಸೆರೆನಾ ಕಿರಿಕ್‌
ಸಾಮಾನ್ಯ ಎನಿಸಿದರೂ ಟೆನಿಸ್‌ ಸಾಧಕಿಯೊಬ್ಬರಿಗೆ ಇಂಥ ನಡತೆಗಳು ಒಮ್ಮೊಮ್ಮೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿ ಬಿಡುತ್ತದೆ. ಸೆರೆನಾ ಮಾಡಿಕೊಂಡಿದ್ದೂ ಅದನ್ನೇ. ಎರಡನೇ ಸೆಟ್‌ ಆಟದ ಮಧ್ಯೆ ರೆಫ‌ರಿ ಕಾರ್ಲೊಸ್‌ ರಾಮೋಸ್‌ ತಪ್ಪು ನಿರ್ಣಯ ನೀಡಿದರೆಂದು ಸೆರೆನಾ ಆಕ್ಷೇಪ ವ್ಯಕ್ತಪಡಿಸಿದರು. ಕೆಲ ಕ್ಷಣ ಸೆರೆನಾ ಮತ್ತು ರೆ‌ಫ‌ರಿ ಕಾರ್ಲೊಸ್‌ ನಡುವೆ ವಾಗ್ವಾದವೇ ನಡೆಯಿತು. ಇಷ್ಟೆಲ್ಲಾ ನಡೆದ ಮೇಲೆ ಕಾರ್ಲೊಸ್‌ ಸುಮ್ಮನಾಗಲಿಲ್ಲ. ಸೆರೆನಾ ಶಿಸ್ತು ಉಲ್ಲಂಸಿದ್ದಾಗಿ ಪೆನಾಲ್ಟಿ ಪಾಯಿಂಟ್‌ ಘೋಷಿಸಿದರು. ಇದರಿಂದ ಇನ್ನಷ್ಟು ಸಿಡಿಮಿಡಿಗೊಂಡ ಸೆರೆನಾ ಅಷ್ಟೊಂದು ಮೇರು ಸಾಧಕಿಯಾಗಿ ಸಣ್ಣತನ ಪ್ರದರ್ಶಿಸಿ ಟೀಕೆಗೆ ಗುರಿಯಾಗಿದ್ದಾರೆ. ಸೆರೆನಾ ವೃತ್ತಿ ಜೀವನದಲ್ಲಿ ಇಂಥ ಇನ್ನೂ ಒಂದಿಷ್ಟು ಘಟನೆಗಳು ಸಿಕ್ಕಾವು. ಆದರೆ ಈ ಘಟನೆ ಅವರ ಪಾಲಿಗೆ ಕಪ್ಪು ಚುಕ್ಕೆ ಎನ್ನುವುದರಲ್ಲಿ ಅನುಮಾನವಿಲ್ಲ. ಜತೆಗೆ ತಾಯ್ನೆಲದಲ್ಲೇ ಇದೇ ಮೊದಲ ಬಾರಿಗೆ ಗ್ರಾಂಡ್‌ ಸ್ಲಾಮ್‌ ಫೈನಲ್‌ ಪ್ರವೇಶಿಸಿದ್ದ ಯುವ ಆಟಗಾರ್ತಿಯ ವಿರುದ್ಧದ ಸೋಲು ಒಂದು ದೊಡ್ಡ ಮುಖಭಂಗ.

ನೊವಾಕ್‌ ಪ್ರಾಬಲ್ಯ
ಸೆರ್ಬಿಯಾದ ಸ್ಟಾರ್‌ ಆಟಗಾರ ನೊವಾಕ್‌ ಜೋಕೊವಿಚ್‌ ಪ್ರಸಕ್ತ ಸಾಲಿನ ಯುಎಸ್‌ ಓಪನ್‌ ಟೂರ್ನಿಯ ಚಾಂಪಿಯನ್‌. ಫೈನಲ್‌ ಪಂದ್ಯದಲ್ಲಿ ಅರ್ಜೆಂಟೀನಾದ ಜುವಾನ್‌ ಮಾರ್ಟಿನ್‌ ಡೆಲ್‌ ಪೊಟ್ರೊರನ್ನು ಮಣಿಸಿದ ವಿಶ್ವ ನಂ.3 ಆಟಗಾರ ಜೋಕೊವಿಚ್‌ ಮತ್ತೂಮ್ಮೆ ಪ್ರಾಬಲ್ಯ ಸಾಬೀತು ಪಡಿಸಿದ್ದಾರೆ. ಇದು ನೊವಾಕ್‌ಗೆ ವೃತ್ತಿ ಜೀವನದ ಮೂರನೇ ಯುಎಸ್‌ ಓಪನ್‌ ಗ್ರಾಂಡ್‌ ಸ್ಲಾಮ್‌ ಪ್ರಶಸ್ತಿಯಾಗಿದೆ. ಒಟ್ಟಾರೆ 14ನೇ ಗ್ರಾಂಡ್‌ ಸ್ಲಾಮ್‌ ಪ್ರಶಸ್ತಿ. 6-3, 7-6(7-4), 6-3 ಅಂತರದಿಂದ ಪೊಟ್ರೋ ಮಣಿಸಿದ ನೊವಾಕ್‌ ಅವರು, ಟಿನಿಸ್‌ನ ದಿಗ್ಗಜ ರೋಜರ್‌ ಫೆಡರರ್‌ ಅವರ ದಾರಿ ತುಳಿದಿದ್ದಾರೆ. ಸಾಧನೆಯ ಬೆನ್ನತ್ತಿದ್ದಾರೆ.

ಡಬಲ್ಸ್‌ ಕಿರೀಟ; ಫೆಡ್‌ ಇತಿಹಾಸ
ಯುಎಸ್‌ ಓಪನ್‌ ಟೂರ್ನಿಯ ಮಹಿಳಾ ಡಬಲ್ಸ್‌ನಲ್ಲಿ ಜಿಂಬಾಬ್ವೆಯ ಕಾರಾ ಬ್ಲ್ಯಾಕ್‌ ಮತ್ತು ಅಮೆರಿಕದ ಲಿಜೆಲ್‌ ಹ್ಯೂಬರ್‌ ಜೋಡಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಅಮೆರಿಕದವರೇ ಆದ ಲಿಸಾ ರೇಮಂಡ್‌ ಮತ್ತು ಆಸ್ಟ್ರೇಲಿಯಾದ ಸಮಂ ಜೋಡಿಯನ್ನು 6-3, 7-6(6) ಅಂತರದಿಂದ ಸೋಲಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಈ ಜೋಡಿಗೆ ಇದು ನಾಲ್ಕನೇ ಗ್ರಾಂಡ್‌ ಸ್ಲಾಂ ಪ್ರಶಸ್ತಿಯಾಗಿದೆ. ಇನ್ನು ಕಾರಾ ಬ್ಲ್ಯಾಕ್‌ ಅವರು ಮಿಶ್ರ ಡಬಲ್ಸ್‌ನಲ್ಲಿ ಭಾರತದ ಲಿಯಾಂಡರ್‌ ಪೇಸ್‌ ಅವರ ಜೊತೆಗೂಡಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಗಣಪತಿ ಅಗ್ನಿಹೋತ್ರಿ

ಟಾಪ್ ನ್ಯೂಸ್

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.