ಪ್ರಾರಬ್ಧಗಳನ್ನು ನಿವಾರಿಸಿಕೊಳ್ಳುವ ದಾರಿಗಳು ಹೀಗಿವೆ…


Team Udayavani, Feb 3, 2018, 3:25 AM IST

2558.jpg

ದೇವರು ಎಲ್ಲಿದ್ದಾನೆ, ಹೇಗಿದ್ದಾನೆ ಎಂಬುದರ ಬಗೆಗೆ ತೀವ್ರವಾಗಿ ತಲೆ ಕೆಡಿಸಿಕೊಳ್ಳದಿರಿ. ದೈವೀ ಶಕ್ತಿ  ಇದೆ ಎಂಬುದನ್ನು ನಂಬಿ ಹೆಜ್ಜೆ ಇಡಿ.  ಸಮರ್ಪಣಾ ಮನೋಭಾವದಿಂದ ಪ್ರಾರ್ಥಿಸಿ, ಮನಸ್ಸಿಗೆ ಶಾಂತಿ-ಸಮಾಧಾನ ನೀಡುವಂತೆ ಬೇಡಿಕೊಳ್ಳಿ. 

ಹೋಮ ಹವನಾದಿಗಳು, ಅನುಷ್ಠಾನಗಳು, ಉತ್ತಮ ಫ‌ಲಿತಾಂಶಗಳ ಬಗೆಗೆ ಶಕ್ತಿದಾಯಕ ಉತ್ಸಾಹ ತುಂಬಲು (ಮಂತ್ರ ಪಠಣಗಳು, ಧ್ಯಾನ, ಸ್ತುತಿ, ಪೂಜೆ ಇತ್ಯಾದಿಗಳೂ ಅನುಕೂಲಕರವಾಗಿವೆ) ಬೆಂಬಲ ಕೊಡುವ ವಿಚಾರ ಸರಿ. ಜಾತಕದಲ್ಲಿನ ದೋಷ ನಿವಾರಣೆಗೆ ಇವೆಲ್ಲಾ ಇವೆಯೆಂಬುದು ನಿಜ. ಆದರೆ, ಕೆಲವು ಸರಳ ಉಪಾಯಗಳು ನಿಮ್ಮಲ್ಲಿ ದೋಷಗಳ ವಿರುದ್ಧ ಒಂದು ಪ್ರಭಾವೀ ನಿಯಂತ್ರಣವನ್ನು ಸಾಧಿಸಬಲ್ಲವು. ದೇವರು ಎಲ್ಲಿದ್ದಾನೆ, ಹೇಗಿದ್ದಾನೆ ಎಂಬುದರ ಬಗೆಗೆ ತೀವ್ರವಾಗಿ ತಲೆ ಕೆಡಿಸಿಕೊಳ್ಳದಿರಿ. ದೈವೀ ಶಕ್ತಿ  ಇದೆ ಎಂಬುದನ್ನು ನಂಬಿ ಹೆಜ್ಜೆ ಇಡಿ.  ಸಮರ್ಪಣಾ ಮನೋಭಾವದಿಂದ ಪ್ರಾರ್ಥಿಸಿ, ಮನಸ್ಸಿಗೆ ಶಾಂತಿ-ಸಮಾಧಾನ ನೀಡುವಂತೆ ಬೇಡಿಕೊಳ್ಳಿ. 
 ಶಾಂತ ಸ್ಥಳ ಮತ್ತು ಆವರಣದಲ್ಲಿ ದೇವರೊಂದಿಗೆ ನಡೆಸುವ ಸಂಭಾಷಣೆ, ಪ್ರಾರ್ಥನೆ ಅಸಾಧ್ಯವಾದುದನ್ನು ಸಾಧಿಸಿ ಕೊಡುವ ಶಕ್ತಿ ವಲಯವನ್ನು ನಿರ್ಮಿಸುತ್ತದೆ. ನೀವಿದನ್ನು ನಂಬಿ ಜಪಕ್ಕೆ, ಧ್ಯಾನಕ್ಕೆ ಆ ಶಕ್ತಿ ಇದೆ. 

 ನಿಮ್ಮ ವ್ಯಕ್ತಿತ್ವ ಶುದ್ಧವಾಗಿರಲಿ
ಸಾಮಾಜಿಕ ಜೀವನದಲ್ಲಿ ನಾಗರೀಕತೆ ಶಾಪವಾಗುವ ಭೀತಿ ಇದ್ದರೂ ಅನಾಗರೀಕತೆ ದೇವರನ್ನು ಸ್ಪಂದಿಸಲಾರದು. ನೀವು ಉತ್ತಮ ನಾಗರೀಕರಾಗಬೇಕು. ಯಾವುದೇ ಕುರೂಪಗಳಿದ್ದರೂ ಮುಖದ ಸೌಂದರ್ಯ ಒಂದೇ ವರ್ಚಸ್ಸನ್ನೂ, ತೂಕವನ್ನು ಹೆಚ್ಚಿಸದು. ನಿಮ್ಮ ತಾಳ್ಮೆ, ಸಂಯಮ, ನಯ, ವಿನಯ, ವ್ಯವಧಾನಗಳು, ಇತರರ ನಡುವೆ ಶೋಭೆಗೆ ಕಾರಣವಾಗುವ ಶಕ್ತಿ ನೀಡಿ ನಿಮ್ಮನ್ನು ಮಿಂಚಿಸುತ್ತದೆ.  ಅಬ್ದುಲ್‌ ಕಲಾಂ, ಬರ್ನಾಡ್‌ ಶಾ, ಅಬ್ರಹಾಂ ಲಿಂಕನ್‌, ಹಾಪ್ಕಿನ್ಸ್‌ ಇತ್ಯಾದಿ ಇತ್ಯಾದಿ ಲಕ್ಷಗಟ್ಟಲೆ ಜನ ಸೌಂದರ್ಯದಿಂದ ಮಿಂಚಿದ್ದಲ್ಲ. ಅನನ್ಯವಾದ ಜ್ಞಾನ, ನಯ, ವಿನಯ, ಕರ್ತವ್ಯದ ತತ್ಪರತೆಗಳಿಂದ ಕೋಟಿಗಟ್ಟಲೆ ಜನರನ್ನು ತಲುಪಿದ್ದಾರೆ. ಇವರ ಉತ್ಸಾಹ, ಚೈತನ್ಯಗಳೇ ಇವರನ್ನು ತುಂಬಿದ ಕೊಡಗಳನ್ನಾಗಿಸಿದ್ದಾದೆ. ಅಂದರೆ, ಸೌಂದರ್ಯ, ಮೋಹಕ ರೂಪ ಪಡೆದವರೆಲ್ಲ ಶುದ್ಧ ವ್ಯಕ್ತಿತ್ವದವರಲ್ಲ ಎಂದು ಅರ್ಥವಲ್ಲ. ಒಟ್ಟಿನಲ್ಲಿ ವ್ಯಕ್ತಿತ್ವಕ್ಕೆ ಒಂದು ಘನತೆ ಇದ್ದರೆ ಎತ್ತರಕ್ಕೆ ಏರಬಹುದು. ಪಡಿಪಾಟಲುಗಳನ್ನು ದಾಟಿ ಆದರ್ಶ ಜೀವಿಗಳಾಗಬಹುದು. 

ಮಾತು, ವಾಕ್ಚಾತುರ್ಯ, ಸಂವಹನ ಕಲೆ
ಎಲ್ಲಾ ಪ್ರತಿಭೆಗಳಿದ್ದರೂ ಮಾತಿನ ನೈಪುಣ್ಯ, ಸಂವೇದನೆಗಳನ್ನು ತೆರೆದಿಡುವ ಸಂವೇದನಾ ಕಲೆ, ಇತರರು ನಿಮ್ಮ ಬಗ್ಗೆ ನಂಬಿಕೆ ತಾಳುವಂತೆ (ಸುಳ್ಳು ಹೇಳಿ ಒಮ್ಮೆ ಗೆಲ್ಲಬಹುದು. ಸದಾ ಸಾಧ್ಯವಿಲ್ಲ) ಮಾತನಾಡುವ ಕಲೆಗಾರಿಕೆಯಿಂದ ನೀವು ಮೇಲೇರಬಲ್ಲಿರಿ. ಬರೀ ಬಂಡವಾಳವಿರದ ಬಡಾಯಿಗಳಿಂದ ಫ‌ಲವಿಲ್ಲ. ತೋಳ ಬಂತಲೇ ತೋಳ ಕತೆ ನಿಮಗೆಲ್ಲ ತಿಳಿದಿದೆ. ಇಂದಿನ ಜಗತ್ತು ಮಾತನ್ನು ನಂಬುತ್ತದೆ. ನಂಬುವಂತೆ ಮಾತನಾಡಿ, ಸುಳ್ಳಾಡಿದವರನ್ನು ಕಸದ ಬುಟ್ಟಿಗೆ ಎಸೆಯುತ್ತದೆ. 

ಧೈರ್ಯಂ ಸರ್ವತ್ರ ಸಾಧನಂ
ಧೈರ್ಯ ಬೇಕು. ಆದರೆ ಭಂಡ ಧೈರ್ಯ ಬೇಡ. ಧೈರ್ಯ-ಸಾಹಸಗಳಿಂದ, ಸ್ಥೈರ್ಯ,  ಏಕಾಗ್ರತೆಗಳಿಂದ ಗ್ರಹಗಳ ವೈಪರೀತ್ಯಗಳನ್ನು ನಿಯಂತ್ರಿಸಬಹುದು. ಆತ್ಮವಿಶ್ವಾಸ, ಅತಿಯಾದ ಆತ್ಮವಿಶ್ವಾಸಗಳ ನಡುವೆ ಕೂದಲೆಳೆಯ ಅಂತರವಿದೆ ಅಷ್ಟೇ. ಸ್ವಾಭಿಮಾನ, ದುರಭಿಮಾನಗಳ ನಡುವೆಯೂ ಅಷ್ಟೆ. ವ್ಯಕ್ತಿತ್ವ, ಶುದ್ಧಿ, ಮಾತಿನ ಚಾತುರ್ಯ, ಸಂವಹನಾಶಕ್ತಿಯ ಬಲದಿಂದ ಸಮತೋಲನ ಪೂರ್ಣ ಧೈರ್ಯ ಸಂಪಾದಿಸಲು ಸಾಧ್ಯ. 

ವಿದ್ಯೆ, ಜ್ಞಾನ, ಪರರಿಂದ ಕೇಳಿ ತಿಳಿಯುವ ಶ್ರದ್ಧೆ ಇರಲಿ
ವಿದ್ಯೆ, ಜ್ಞಾನಗಳು, ವ್ಯಾವಹಾರಿಕ ಕೌಶಲಗಳು, ತನ್ನ ಒಳಿತಿಗಾಗಿ ಇನ್ನೊಬ್ಬನನ್ನು ತುಳಿಯದ ಧರ್ಮಾಧರ್ಮ ವಿವೇಚನೆಗಳಿದ್ದರೆ, ಪರರಿಂದ ಉತ್ತಮವಾದುದನ್ನು ತಿಳಿಯುವ ಉತ್ಸಾಹ, ಒಳ್ಳೆಯ ಮನಸ್ಸು ಇದ್ದರೆ ನಮ್ಮ ಸಂಬಂಧವಾದ ಜಾತಕದ ದೋಷಗಳು ನಿವಾರಣೆಯಾಗುತ್ತವೆ. ಹರಿಹರರೇ ನಮ್ಮ ವಿರುದ್ಧವಾಗಿ ನಿಂತರೂ ನಮಗೆ ಜ್ಞಾನ ಒದಗಿಸುವ ಗುರು ನಮ್ಮನ್ನು ಕಾಪಾಡುತ್ತಾನೆ. ಗಾಡ್‌ಫಾದರ್‌ ಎಂಬ ಶಬ್ದವನ್ನು ಈ ಅರ್ಥದ ಬೆಳಕಿನಲ್ಲಿ ನೋಡುವಂತಾಗಲಿ. 

ಪೂರ್ವ ಜನ್ಮದ ಪುಣ್ಯ ನಮ್ಮನ್ನು ರಕ್ಷಿಸುತ್ತದೆ
ನಾವು ಹಿಂದಿನ ಜನ್ಮದಲ್ಲಿ ಮಾಡಿದ ಸುಧರ್ಮ ನಮ್ಮನ್ನು ಈ ಜನ್ಮದಲ್ಲಿ ಕಾಯುವ ವಜ್ರಾಯುಧವಾಗುತ್ತದೆ. ನಮ್ಮ ಸಂಸ್ಕಾರವು  ಹೊಳೆಯುವ ಚಿನ್ನದ ಅದಿರುಗಳಾಗಿ ನಮ್ಮ ವ್ಯಕ್ತಿತ್ವವನ್ನು ಕಾಪಾಡುತ್ತದೆ. ಜ್ಞಾನದಾಹಿ, ಆತ್ಮ ಪರಮಾತ್ಮನ ಸಂಬಂಧಗಳ ಬಗೆಗಿನ ನಮ್ಮ ಮಂಥನ ಒಳಿತಿಗೆ ಕೊಂಡೊಯ್ಯುತ್ತದೆ. ಮನುಷ್ಯನೂ ಒಂದು ಪ್ರಾಣಿ. ಆದರೆ ಬೇರೆಯಾಗಿ ನಿಂತು ಶ್ರೇಷ್ಠರಾಗುವುದೇ ದೈವ ಸಿದ್ಧಿ, ಸಂಕಲ್ಪ.  ನಮಗೆ ನ್ಯಾಯಾನ್ಯಾಯಗಳ ಬಗ್ಗೆ ವಿವೇಚನೆ ನೀಡಿರುವುದರಿಂದ. ವಿದ್ವಾನ್‌ ಸರ್ವತ್ರ ಪೂಜ್ಯತೆ ಎಂಬ ಮಾತು ನೆನಪಿಸಿಕೊಳ್ಳಿ. ಎದುರುಬದುರಾದ ಕನ್ನಡಿಗಳು ಸತ್ಯ. ಆದರೆ, ಅವುಗಳ ಒಳಗಿನ ಅನಂತಾನಂತ ಪ್ರತಿಫ‌ಲನಗಳು ನಮಗೆ ಸತ್ಯವಾಗುವುದು ನಮ್ಮ ನಂಬಿಕೆಯಿಂದ ಮಾತ್ರ. ದೇವರೂ ಹಾಗೆಯೇ. ಅವನ ಬಗೆಗಿನ ನಮ್ಮ ನಂಬಿಕೆ ನಮ್ಮನ್ನು ಕಾಪಾಡುತ್ತದೆ. ಕಾಣದಿದ್ದರೂ ಆ ಶಕ್ತಿ ಇದ್ದೇ ಇದೆ. ನಮ್ಮ ಮಕ್ಕಳನ್ನೂ ಸಂಸ್ಕಾರಪೂರ್ಣರನ್ನಾಗಿಸಿದರೆ ಇಳಿ ವಯಸ್ಸಿನಲ್ಲಿ ನಮ್ಮನ್ನವರು ಕಾಪಾಡುತ್ತಾರೆ. 

 ಮಾನಸಿಕ ದಾರಿದ್ರ್ಯದಿಂದ ಹೊರಬನ್ನಿ
ಮಾನಸಿಕ ದಾರಿದ್ರ್ಯದಿಂದ ಹೊರಬರಲು ಸಾಧ್ಯವಿದೆ. ಧರ್ಮ, ಅರ್ಥ, ಕಾಮ, ಮೋಕ್ಷಗಳಿಂದ ನಾವು ದಾರಿದ್ರé ಅನುಭವಿಸಲು ಸಾಧ್ಯವೇ ಇಲ್ಲ. ಧರ್ಮ, ಸರಿಯಾದ ಸೂಕ್ತ ಶ್ರಮ. ಇದರಿಂದ ಹೊರಬರುವ ದ್ರವ್ಯ (ಹಣ ಅಥವಾ ಅರ್ಥ, ಸಂಪತ್ತು) ನಿರಾಯಾಸವಾದ ಬಿಡುಗಡೆಯೇ ಮೋಕ್ಷಕ್ಕೆ ದಾರಿ ಒದಗಿಸುತ್ತದೆ. ಪೊಲೀಸ್‌, ಕೋರ್ಟ್‌ ಇತ್ಯಾದಿ (ನಾವು ಸೂಕ್ತವಾಗಿ ನಡೆದುಕೊಂಡರೆ) ನಮಗೆ ಬೇಕಾಗಿಯೇ ಇಲ್ಲ. ನಾವು ಮನುಷ್ಯರಾದರೆ ರೌಡಿಗಳು, ವಂಚಕರು, ಕೇಡಿಗಳು, ಕೊಲೆ, ದರೋಡೆಕೋರರು ಇರಲಾರರು. ಅಪರಾಧ ಮುಕ್ತ ಸಮಾಜ ಇದ್ದರೆ ಜಾತಕದ ಯಾವ ಬಾಧೆಗಳೂ ನಮ್ಮನ್ನು ಸಂತೋಷದಿಂದ ವಿಮುಖಗೊಳಿಸಲಾರವು. 

 ಮದುವೆ ಎಂಬ ಮೃದು ಬಂಧನ ಹಿತಕ್ಕೆ ದಾರಿಯಾಗಲಿ
ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯ ಎಂಬ ಮಾತೇ ಇದೆ. ಬಾಳ ಸಂಗಾತಿಯಿಂದ ಎಲ್ಲವೂ ನಿರಾಳ. ಬಾಳ ಸಂಗಾತಿಯ ಜೊತೆಗೇ ಕದನ, ಮುನಿಸು, ತರ್ಕ, ಜಟಾಪಟಿ ಎದ್ದರೆ ಬಾಳು ಹಾಳು. ಮನೆಯ ಒಳಗಿನ ಶಾಂತಿ ಧನ ಲಾಭವನ್ನ, ಆರೋಗ್ಯ ಸಂವರ್ಧನೆಯನ್ನ, ಸಂಸ್ಕಾರಪೂರ್ಣವಾದ ರಸಮಯ ಸಂವಿಧಾನದ ದಾರಿಯನ್ನ ಎತ್ತರಕ್ಕೇರಿಸಿ ಜೀವನವನ್ನು ಗೆಲ್ಲಿಸಬಲ್ಲದು. ಇದೇ ಇಲ್ಲದಿದ್ದರೆ ಎಲ್ಲವೂ ಶೂನ್ಯ. ಧರ್ಮಾರ್ಥ ಕಾಮ ಮೋಕ್ಷಗಳ ಮುಖ್ಯ ಬಿಂದುವೇ ಕಾಮ. ಆದರೆ, ಕಾಮ ವಿಕೃತವಾಗಬಾರದು. ಹೆಣ್ಣು-ಗಂಡು ಪಾರ್ವತಿ ಪರಮೇಶ್ವರರ ಚಿಕ್ಕ ಸ್ವರೂಪ. ಪ್ರಕೃತಿ ಪುರುಷರ ಸಂಯೋಜನ ಸ್ವರೂಪ. ಆದರೆ ಹೆಚ್ಚು ತಿಂದರೆ ಅಜೀರ್ಣ. ತಿನ್ನದಿದ್ದರೆ ಬಸವಳಿಕೆ. ಜೀವನಕ್ಕೆ ಅರ್ಥವಿಲ್ಲ. ಪಾಲಿಗೆ ಬಂದದ್ದು ಪಂಚಾಮೃತ. ಬಾಳಸಂಗಾತಿಯೊಡನೆ ಅರಿತು ನಡೆಯಿರಿ. ಜಾಗತಿಕ ಹಿಂಸೆಗೆ ಮೂಲ ಕಾರಣ ಮನೆಯೊಳಗಿನ ಅಶಾಂತಿ. ಈ ಅಶಾಂತಿ ಹೊರಗೆ ಬಂದರೆ ಬವಣೆ ನಿರ್ಮಾಣ. ಮನೆಯ ಹೊರಗಿನ ಒತ್ತಡವನ್ನು ಮನೆಯ ಒಳಗಡೆ ತರಬೇಡಿ. ಇದರಿಂದಲೂ ಅಶಾಂತಿಗೆ ದಾರಿ. ಪ್ರತಿ ಮನೆಯೂ ನಂದನವನವಾಗಲಿ. ಜಗತ್ತೇ ಒಂದು ಕುಟುಂಬ (ವಸುದೈವ ಕುಟುಂಬಕಂ) ಎಂಬ ಮಾತು, ನಮ್ಮ ಆಷೇìಯ ಪ್ರತಿಪಾದನೆ ನೆನಪಿಸಿಕೊಳ್ಳಿ. 

ಈ  ಮೇಲಿನ ವಿಚಾರಗಳನ್ನು ಗಮನದಲ್ಲಿರಿಸಿ ಹೆಜ್ಜೆ ಇಡಿ. ಆಗ ನಿಮ್ಮ ಜಾತಕದ ಬವಣೆಗಳನ್ನು ಸರಳವಾಗಿ ಎದುರಿಸಬಹುದು. ಭಾಗ್ಯವು ದೈವಕೃಪೆಯಿಂದಲೇ ಒದಗಬೇಕು. ಮೋಕ್ಷವೂ ದೈವಕೃಪೆಯಿಂದಲೇ ಸಿಗಬೇಕು. ಹೀಗಾಗಿ ಪರಮಾತ್ಮನಿಗೆ ಶರಣಾಗಿ. ನಿನಗೆ ಶರಣಾಗುವುದರ ವಿನಾ ಬೇರೆ ಮಾರ್ಗವಿಲ್ಲ ಶರಣಾಗಿದ್ದೇನೆ ಎಂಬ ನಿಮ್ಮ ಮಾತು ದೈವಶಕ್ತಿಗೆ ಕೇಳಿಸುವಂತಾದರೆ ಆಗ ಎಲ್ಲವೂ ಚಿನ್ನ. ನಿಮ್ಮನ್ನು ನೀವು ಗೌರವಿಸಿ. ಆದರೆ ಸ್ವಾರ್ಥಿಯಾಗುತ್ತ ಸಾಧಿಸಬೇಡಿ. ಸ್ವಾರ್ಥದಿಂದ ನಿಮ್ಮನ್ನು ನೀವೇ ಗೌರವಿಸಲಾಗದು. 

ಅನಂತ ಶಾಸ್ತ್ರಿ, ಬೆಂಗಳೂರು 
 

ಟಾಪ್ ನ್ಯೂಸ್

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.