ಕೆಂಪು ಮುನಿಯ

Team Udayavani, Jan 20, 2018, 3:19 PM IST

2-bb.jpg

ಕಪ್ಪು ತಲೆ, ಮೈ ಬಣ್ಣ ಕೆಂಪು, ಮೈಮೇಲೆ ಬಿಳಿ ಚುಕ್ಕೆ ಇದರ ಲಕ್ಷಣ. ಇದರಿಂದ ಈ ಹಕ್ಕಿಯನ್ನು ಸುಲಭವಾಗಿ ಗುರುತು ಹಿಡಿಯಬಹುದು. ಬಾಲದ  ಕೆಳಗಿನ‌ ಗರಿಗಳಲ್ಲಿ ಕೆಂಪು ಬಣ್ಣ ಇದೆ. ಗಂಡು ಸಂತಾನಾಭಿವೃದ್ಧಿ ಸಮಯದಲ್ಲಿ ಕೆಂಪುಬಣ್ಣದಲ್ಲಿರುವುದು. ಇದರ ಮೈಬಣ್ಣ ಸ್ವಲ್ಪ ಮಸುಕಾಗಿರುತ್ತದೆ.

ಇದನ್ನು ಕೆಂಪುಗುಬ್ಬಿ, ಕೆಂಪು ಮುನಿಯ, ಕೆಂಪು ರಾಟವಾಳ, ಕೆಂಪು ಚಿಕ್ಕ ಚಿಟಗುಬ್ಬಿ ಎಂದು ಕರೆಯುತ್ತಾರೆ. ಈಗ ಮೂರು ವರ್ಷಗಳಿಂದೆ ನಮ್ಮ ಮೂರೂರಿನ ಪಕ್ಕ ಇರುವ ಬಾಳೆಗುಡಿ ಹತ್ತಿರದ ಗದ್ದೆಯ ಪಕ್ಕದ ದಿಬ್ಬದಲ್ಲಿರುವ ತೆಂಗಿನ ತೋಟದ‌ ಹತ್ತಿರ ಇರುವ ಗದ್ದೆಯಲ್ಲಿ ಸ್ನೆಫೆ- ಪಟ್ಟೆವ ಹಕ್ಕಿಯನ್ನು ಅವಲೋಕಿಸುತ್ತಿದ್ದೆ. ಗದ್ದೆ ಇನ್ನೂ ಉಳುಮೆ ಆಗಿರಲಿಲ್ಲ. ಅಲ್ಲಿ ಚಿಕ್ಕ, ಚಿಕ್ಕ ಹಸಿರು ಹುಲ್ಲಿನ ಜಡ್ಡಿ ಬೆಳೆದಿತ್ತು. ಸ್ವಲ್ಪ ನೀರು ತುಂಬಿತ್ತು. ಚಿವ್‌ ಚಿವ್‌ ಕೂಗು ಕೇಳಿತು. ತಕ್ಷಣ ಆ ಕಡೆ ಗಮನ ಹರಿಸಿದೆ. 

ಮೂರು ನಾಲ್ಕು ಚಿಕ್ಕ ಹಕ್ಕಿಗಳು ತಲೆ ಕೆಳಗೆ ಮಾಡಿ ಆಹಾರ ಅರಸಿ ತಿನ್ನುತ್ತಿದ್ದವು. ತಲೆ ಮೈ ಸ್ವಲ್ಪ ಕೆಂಪುಬಣ್ಣ ಇತ್ತು. ಗುಬ್ಬಿಗಿಂತ ಸ್ವಲ್ಪ ಚಿಕ್ಕದಿತ್ತು. ಮನೆ ಗುಬ್ಬಿ ಸುಮಾರು 7 ಸೆಂ.ಮೀ. ಇರುತ್ತದೆ. ಆದರೆ ಈ ಕೆಂಪು ಮುನಿಯ ಚಿಕ್ಕದು. 4-5 ಸೆಂ.ಮೀ. ದೊಡ್ಡದು. “ಎಸ್ಟ್ರಿಲ್ಡಿದೇ’ ಕುಟುಂಬಕ್ಕೆ ಸೇರಿದೆ. ‘ಅಮಂಡವ ಅಮಂಡವ’ ಎಂದು ಇದರ ವೈಜಾnನಿಕ ಹೆಸರು. ಏಷ್ಯಾ ಖಂಡದ ಉಷ್ಣವಲಯದ ಪ್ರದೇಶದಲ್ಲಿ ಕಾಣುವುದು. ಕುರುಚಲು ಕಾಡು, ಪಾಳು ಬಿದ್ದ ಭತ್ತದ ಗದ್ದೆ, ಕಲ್ಲು ಪಾರೆ ಇರುವ ಗುಡ್ಡದ ಎತ್ತರದ ಸಪಾಟಾದ ಕಡೆ ಹುಲ್ಲು ಬೆಳೆಯುವ, ಹುಲ್ಲಗಾವಲು ಜಾಗದಲ್ಲಿ ಇರುತ್ತದೆ. ಚಿಕ್ಕ ಕೊಕ್ಕರೆ, ದನಗಾಹಿ ಕೊಕ್ಕರೆ, ಕೊಳದ ಕೊಕ್ಕರೆ, ಕಪ್ಪುತಲೆ ಮುನಿಯ, ಬಿಳಿಬೆನ್ನಿನ ಮುನಿಯ ಇದರಜೊತೆ ಕಾಣುತ್ತದೆ. ಕೆಲವೊಮ್ಮೆ ಇವು ಇರುವ ನೆಲಗಳಲ್ಲಿ ನೀಲಿಕೆನ್ನೆ ಹುಳಗುಳಕ, ಮೈನಾ, ಕಾಡು ಮೈನಾ ಸಹ ಕಾಣಸಿಗುತ್ತದೆ. ಸಂತಾನಾಭಿವೃದ್ಧಿ ಕಾಲದಲ್ಲಿ ರೆಕ್ಕೆ ಕೆಂಪಾಗಿರುತ್ತದೆ. ಕೆಂಪಾದ ರೆಕ್ಕೆಗಳಲ್ಲಿ ಬಿಳಿ ಚುಕ್ಕೆ ಇರುತ್ತದೆ. ಈ ಪುಟ್ಟ ಹಕ್ಕಿಯ ಬಾಲದ ಸುತ್ತ ಕಪ್ಪುಬಣ್ಣ ಇದೆ. ಕಪ್ಪು ತಲೆ, ಮೈ ಬಣ್ಣ ಕೆಂಪು, ಮೈಮೇಲೆ ಬಿಳಿ ಚುಕ್ಕೆ ಇದರ ಲಕ್ಷಣ. ಇದರಿಂದ ಈ ಹಕ್ಕಿಯನ್ನು ಸುಲಭವಾಗಿ ಗುರುತು ಹಿಡಿಯಬಹುದು. ಬಾಲದ  ಕೆಳಗಿನ‌ ಗರಿಗಳಲ್ಲಿ ಕೆಂಪು ಬಣ್ಣ ಇದೆ. ಗಂಡು ಸಂತಾನಾಭಿವೃದ್ಧಿ ಸಮಯದಲ್ಲಿ ಕೆಂಪುಬಣ್ಣದಲ್ಲಿರುವುದು. ಇದರ ಮೈಬಣ್ಣ ಸ್ವಲ್ಪ ಮಸುಕಾಗಿರುತ್ತದೆ. 

ಕಣ್ಣಿನ ಸುತ್ತಾ ಕಪ್ಪುಬಣ್ಣ ಇದೆ. ಹಸಿರು ಬಣ್ಣದ ಗುಬ್ಬಚ್ಚಿ ಬದಲಾಗಿ ಕೆಂಪು ಮುನಿಯ ಆಗಿದೆ ಎಂಬ ಅಭಿಪ್ರಾಯವೂ ಇದೆ. ಕೆಂಪು ಗುಬ್ಬಿ ಸಹ ಎಸ್ಟ್ರಿಲ್ಡ ಕುಟುಂಬಕ್ಕೆ ಸೇರಿದೆ ಎಂದು ಜೀನ್‌ ಡೆಲರ್ಕೋ ಹೇಳಿದ್ದಾರೆ. ಆದರೆ ಇದರ ಅಂಗರಚನೆ, ಜೀವರಸ, ನಡವಳಿಕೆ, ಡಿ.ಎನ್‌.ಎ. ಅಧ್ಯಯನ ಮಾಡಿ ಇದನ್ನು ‘ಅಮಾಂಡವ’ಗುಂಪಿಗೆ ಸೇರಿಸಬೇಕೆಂದು ತೀರ್ಮಾನಿಸಲಾಗಿದೆ. ಇವು ಭಾರತದ ಉಪಖಂಡದ ಹಕ್ಕಿಗಳು. ಇಲ್ಲಿ ಇವು ವಿಕಾಸಗೊಂಡು, ಆಫ್ರಿಕಾ ಖಂಡಕ್ಕೆ ಹಾರುತ್ತದೆ ಎಂಬುದು ದೃಡಪಟ್ಟಿದೆ. 

ಎತ್ತರದ ಮೈದಾನದ ಬಯಲು, ಕಲ್ಲು ಅರೆಯ ವಿಸ್ತಾರವಾದ ಬಯಲುಭಾಗ ನೀರು ತುಂಬಿರುವ ಭತ್ತದ ಪೈರು ಬೆಳೆಯದೇ ಹಾಳುಬಿಟ್ಟ ಹಸಿರು ಹುಲ್ಲುಗಳಿರುವ ಭತ್ತ ಬೆಳೆಯುವ ಬಯಲು ಇವುಗಳಿಗೆ ಪ್ರಿಯವಾದ ಜಾಗ. 

ಇದರಲ್ಲಿ ನಾಲ್ಕು ಉಪಜಾತಿಗಳಿವೆ. ಇವು ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳಗಳಲ್ಲಿ ಇವೆ. ಬರ್ಮಾ ಚೀನಾ, ಥೈಲ್ಯಾಂಡಿನಲ್ಲಿ ‘ಪ್ಲಾರಿಡಿ ಲೆಂಡ್ರೆಸ್‌’ ಎಂದು ಕರೆಯುವರು. ಜಾವಾ ಪೂರ್ವದಜನ ‘ಪುನಿಸಿ’ ಎಂದೂ, ಕಾಂಬೋಡಿಯಾದಲ್ಲಿ-‘ಡೆಕೋಕ್ಸಿ’ ಎಂದು ಕರೆಯುತ್ತಾರೆ. ಸ್ಪೇನ್‌, ಈಜಿಪ್ಟ್, ಮಲೇಶಿಯಾ, ಪೋರ್ಚುಗಲ್‌, ಸಿಂಗಾಪುರಗಳಲ್ಲೂ ಇವೆ.  ಮೂರೂರಿನ ಭಾಗ, ಪಶ್ಚಿಮ ಘಟ್ಟದ ಪ್ರದೇಶಗಳಾದ ಹೊಸಳ್ಳಿ, ಬಡಾಳ, ಚಂದಾವರ, ಸಂತೆಗುಳಿ, ತಲಗೆರೆ ಭಾಗಗಳಲ್ಲಿ ಪಾಳುಬಿದ್ದ ಗದ್ದೆಗಳಲ್ಲಿ ಹಾಗೂ ಬಯಲು ಭಾಗದಲ್ಲಿ ಇವು ಹೆಚ್ಚಾಗಿ ಕಾಣಿಸುತ್ತದೆ. ಈ ಕುರಿತು ಹೆಚ್ಚಿನ ಅಧ್ಯಯನ ನಡೆದರೆ ಹೊಸ ವಿಚಾರಗಳು ತಿಳಿಯಬಹುದು. ಇತರ ಗುಬ್ಬಿಗಳಂತೆ ಹುಲ್ಲು ನಾರಿನಿಂದ ಬಟ್ಟಲಾಕಾರದ ಗೂಡು ಕಟ್ಟುತ್ತದೆ. ಹೆಣ್ಣು ಕಂದು ಮಿಶ್ರಿತ ತಿಳಿ ಹಸಿರಿದ್ದು ರೆಕ್ಕೆ ಮಸುಕಾಗಿದ್ದು ಅದರಲ್ಲಿ ಬಿಳಿ ಚುಕ್ಕೆ ಇದೆ. ಮರಿಗಳ ಪಾಲನೆ ಪೋಷಣೆಯಲ್ಲಿ ಪಾಲ್ಗೊಳ್ಳುವುದು. ಚಿಕ್ಕ ಕಾಳು, ಹುಲ್ಲಿನ ಬೀಜ, ಚಿಕ್ಕ ಚಿಕ್ಕ ಕ್ರಿಮಿಗಳೇ ಇದರ ಆಹಾರ.

ಪಿ.ವಿ.ಭಟ್‌ ಮೂರೂರು 

ಟಾಪ್ ನ್ಯೂಸ್

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.