ಡೌನ್‌ಟೌನ್‌ನಲ್ಲಿ ಕಂಡದ್ದು


Team Udayavani, Mar 1, 2020, 5:35 AM IST

downtown

ಸುಮಾರು ಒಂದೂವರೆ ವರ್ಷ ಹಿಂದೆ ಮಗಳು ಆಹ್ವಾನಿಸಿದಳೆಂದು ನನಗೆ ಅಮೆರಿಕಕ್ಕೆ ಹೋಗುವ ಅವಕಾಶ ಲಭಿಸಿತ್ತು. ಎರಡು ತಿಂಗಳ ತೀರ ಖಾಸಗಿ ಭೇಟಿಯಲ್ಲಿ ಮಗಳು-ಅಳಿಯ ತಮ್ಮ ಪುರುಸೊತ್ತೇ ಇಲ್ಲದ ದಿನಚರಿಯ ನಡುವೆಯೂ ಸುಮಾರು 3000 ಕಿ.ಮೀ. ಪ್ರವಾಸ ಮಾಡಿಸಿ ಅಮೆರಿಕೆಯ ಅನೇಕ ಸ್ಥಳಗಳನ್ನು ತೋರಿಸಿ ತಂದರಲ್ಲದೇ ತಮ್ಮ ಮನೆಯಿರುವ ಸ್ಥಳದ ಸುತ್ತಮುತ್ತಲಲ್ಲಿದ್ದ ಹಲವಾರು ಡೌನ್‌ಟೌನ್‌ ಎಂದು ಕರೆಯಲ್ಪಡುವ ಸ್ಥಳಗಳಿಗೆ ಕರೆದುಕೊಂಡೂ ಹೋದರು. ಡೌನ್‌ಟೌನ್‌ ಎಂದರೆ ನಗರಪ್ರದೇಶದಲ್ಲಿದ್ದ ಜನರು ನಗರ ಜೀವನದಿಂದ ಬೇಸತ್ತಾಗ ಬಿಡುವಿನ ವೇಳೆ ಕಳೆಯಲು ಹತ್ತಿರದ ಒಂದು ಶಾಂತ ವಾತಾವರಣದಲ್ಲಿ ಮನೆ ಕಟ್ಟಿಸಿ ಅಲ್ಲಿಗೆ ಹೋಗಿ ಇರುವುದಕ್ಕಾಗಿ ಮಾಡಿಕೊಂಡ ವ್ಯವಸ್ಥೆ. ಪ್ರತಿಯೊಂದು ಊರಿನ ಹೊರಗೂ ಇಂಥ ಒಂದು ಡೌನ್‌ಟೌನ್‌ ಇದೆ. ಸ್ವತ್ಛಬೀದಿಗಳು, ಯಾವುದೇ ವಾಹನಗಳ ರುಂಯ್‌ ರುಂಯ್‌ ಇಲ್ಲದ ಶಾಂತತೆ, ಕಲುಷಿತವಾಗದ ವಾತಾವರಣ, ನಿಶ್ಶಬ್ದತೆ ತುಂಬಿದ ಮೌನ, ಚಿತ್ರದಲ್ಲಿ ಕಾಣಿಸುವ ರೀತಿಯ ಅಚ್ಚುಕಟ್ಟಾದ ಮನೆಗಳು, ಸಣ್ಣ ಸಣ್ಣ ಪಾರ್ಕುಗಳು, ಹೊಟೇಲುಗಳು, ಇತ್ಯಾದಿ ಇರುವ ಸ್ಥಳ.

ಅಂಥ ಒಂದು ಡೌನ್‌ಟೌನ್‌ನ ಬೀದಿಯಲ್ಲಿ ನಾನು ನನ್ನ ಮಗಳು ಮೊಮ್ಮಕ್ಕಳ ಜೊತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ನಮ್ಮೆದುರು ಕೆಲವು ಮಾರುಗಳಾಚೆ ಅರೇಳು ಶಾಲೆಯ ಮಕ್ಕಳು ಮೌನವಾಗಿ ಹೋಗುವುದನ್ನು ನೋಡುತ್ತಿದ್ದೆ. ರಸ್ತೆಯ ಪಕ್ಕದಲ್ಲಿದ್ದ ಒಂದು ಮನೆ ಎದುರು ಆ ಮಕ್ಕಳು ಮುಟ್ಟಿದಾಗ ಬಾಗಿಲು ತೆರೆದು ಸುಮಾರು ನಲುವತ್ತರ ಪ್ರಾಯದ ತೆಳುವಾದ ಮೈಕಟ್ಟಿನ ವ್ಯಕ್ತಿಯೊಬ್ಬ ಹೊರಗೆ ಬಿದ್ದ. ಅವನನ್ನು ನೋಡಿದವರೇ ಆ ಶಾಲಾಮಕ್ಕಳು ತಮ್ಮ ಹೆಗಲ ಮೇಲಿದ್ದ ಪುಸ್ತಕಗಳ ಚೀಲಗಳನ್ನು ನೆಲದ ಮೇಲಿಟ್ಟು ಅಟೆನ್ಶನ್‌ಗೆ ಬಂದು ಅವನಿಗೆ ಸೆಲ್ಯೂಟ್‌ ಮಾಡಿದರು. ಅವನು ಮುಗುಳ್ನಗೆ ಸೂಸಿ ಅವರನ್ನು ದಾಟಿ ಮುಂದಕ್ಕೆ ಬಂದು ನಮ್ಮನ್ನು ಹಾದುಹೋದ. ಆ ಮಕ್ಕಳು ಮತ್ತೆ ತಮ್ಮ ಚೀಲಗಳನ್ನು ಎತ್ತಿಕೊಂಡು ಅವರ ದಾರಿ ಹಿಡಿದರು. ನನಗೆ ಆಶ್ಚರ್ಯವೆನಿಸಿತು.

ನನ್ನ ಮಗಳು ನನಗೆ ವಿವರಿಸಿದಳು. ಆತ ನಿವೃತ್ತ ಸೈನಿಕ. ಪ್ರತಿಯೊಬ್ಬ ಸೈನಿಕನ ಮನೆಯ ಗೋಡೆಯ ಹೊರಮೂಲೆಯಲ್ಲಿ ಅಮೆರಿಕನ್‌ ಧ್ವಜ ನೇತು ಹಾಕಿರುತ್ತಾರೆ. ಅದರಿಂದಾಗಿ ಅದು ಸೈನಿಕನ ಮನೆಯೆನ್ನುವುದು ತಿಳಿಯುತ್ತದೆ. ಅಮೆರಿಕದಲ್ಲಿ ಸೈನಿಕರಿಗೆ ಜನರು ಬಹಳ ಮರ್ಯಾದೆ ಕೊಡುತ್ತಾರೆ. ಅವರನ್ನು ಎಲ್ಲೇ ಕಂಡರೂ ವಂದಿಸುತ್ತಾರಲ್ಲದೆ ಸರಕಾರ ಕೂಡ ಅವರಿಗೆ ಹಲವು ಸೌಲಭ್ಯಗಳನ್ನು ಕೊಟ್ಟಿದೆ. ಅದನ್ನು ಶಾಲೆಯಲ್ಲಿರುವಾಗಲೇ ಮಕ್ಕಳಿಗೆ ಕಲಿಸುತ್ತಾರೆ. ಇಲ್ಲಿ ಅದು ರೂಢಿ. ಯಾಕೆಂದರೆ, ಅವರು ನಮ್ಮನ್ನು ರಕ್ಷಿಸಲು ತಮ್ಮ ಪ್ರಾಣಗಳನ್ನು ಪಣಕ್ಕಿಟ್ಟು ಹೋರಾಡುವ ಮಂದಿ. ಹಾಗಾಗಿ, ಈ ಮಕ್ಕಳು ಅವನಿಗೆ ನಿಂತು ತಮ್ಮ ಗೌರವ ಸೂಚಿಸಿದರು ಎಂದು.

ಅಮೆರಿಕನ್ನರಿಗೆ ತಮ್ಮ ದೇಶದ ಮೇಲೆ ಅತ್ಯಂತ ಪ್ರೀತಿ ಹಾಗೂ ಅಭಿಮಾನವಿದೆ. ಅದನ್ನು ರಕ್ಷಿಸುವ ಸೈನಿಕರಿಗೆ ಅವರು ಎಲ್ಲಿಲ್ಲದ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ. ನಾನು ಡೆಟ್ರಾಯ್‌r ಎಂಬ ಪ್ರದೇಶಕ್ಕೆ ಹೋಗಲು ಜರ್ಮನಿಯ ಫ್ರಾಂಕ್‌ಫ‌ರ್ಟ್‌ ನಿಂದ ವಿಮಾನ ಹಿಡಿದಿದ್ದೆ. ಯಾವಾಗ ನಮ್ಮ ವಿಮಾನ ಅಟ್ಲಾಂಟಿಕ್‌ ಸಮುದ್ರ ದಾಟಿ ಅಮೆರಿಕದ ಸರಹದ್ದಿರುವ ಆಕಾಶ ಪ್ರವೇಶಿಸಿತೋ, ಆಗ ವಿಮಾನದಲ್ಲಿ ಎಲ್ಲೆಲ್ಲೋ ಕೂತಿದ್ದ ಹತ್ತಾರು ಯುವಕರು ಎದ್ದು ನಿಂತು ತಮ್ಮ ಎದೆಯ ಹತ್ತಿರ ಬಲಗೈ ಹಿಡಿದು ಇಂಗ್ಲಿಷ್‌ ಗೀತೆಯೊಂದನ್ನು ದೊಡ್ಡಸ್ವರದಲ್ಲಿ ಹಾಡಲು ಆರಂಭಿಸಿದರು. ನನಗೆ ಇಂಗ್ಲಿಷ್‌ ಹಾಡುಗಳ ಪರಿಚಯವಿರಲಿಲ್ಲ. ಆದರೆ, ಕ್ರಮೇಣ ಅವರು ಹಾಡುತ್ತಿದ್ದ ಹಾಡು ಅಮೆರಿಕದ ರಾಷ್ಟ್ರಗೀತೆಯೆನ್ನುವುದು ತಿಳಿಯಿತು. ಅವರು ಅದನ್ನು ಯಾರ ಬಲವಂತದಿಂದಲೂ ಹಾಡಿರಲಿಲ್ಲ ಮಾತ್ರವಲ್ಲ, ಹಾಡುವಾಗ ಬಹಳ ಹೆಮ್ಮೆ ಪಡುತ್ತಿರುವುದನ್ನು ಗಮನಿಸಿದೆ.

ಇದು ಅವರ ದೇಶಪ್ರೇಮದ ಬಗ್ಗೆ ಹೇಳುವುದಾದರೆ ಅವರು ಸೈನಿಕರಿಗೆ ಕೊಡುವ ಗೌರವಕ್ಕೆ ಪ್ರತೀಕವಾಗಿ ವಾಷಿಂಗ್ಟನ್‌ ನಗರದ ಹತ್ತಿರದಲ್ಲಿರುವ ಆರ್ಲಿಂಗ್ಟನ್‌ ನ್ಯಾಶನಲ್‌ ಸಿಮೆಟರಿಯನ್ನು ನೋಡಬೇಕು. ಸುಮಾರು 625 ಎಕರೆ ವಿಶಾಲವಾಗಿರುವ ಹಸುರಾದ ಹುಲ್ಲುಹಾಸಿನ ಪ್ರದೇಶದಲ್ಲಿ ನಾಲ್ಕು ಲಕ್ಷಕ್ಕಿಂತಲೂ ಹೆಚ್ಚಿನ ಸೈನಿಕರ ಸಮಾಧಿಗಳಿರುವ ಸ್ಥಳ ಅದು. ಪ್ರತಿಯೊಬ್ಬ ಮೃತ ಸೈನಿಕನ ಸಮಾಧಿಯ ಮೇಲೆ ಸಮಾನ ಎತ್ತರದಲ್ಲಿ ಬಿಳಿಯ ಶಿಲೆಕಲ್ಲುಗಳನ್ನು ಸಾಲಾಗಿ ಸ್ಥಾಪಿಸಿ ಅದಕ್ಕೊಂದು ರೀತಿಯ ಗಾಂಭೀರ್ಯ ಮತ್ತು ಸೌಂದರ್ಯವನ್ನು ಕೊಡಲಾಗಿದೆ. ಮನೋಹರವಾಗಿ ಕಾಣುವ ಈ ಸ್ಥಳ ಸಂದರ್ಶಕರನ್ನು ನಿಬ್ಬೆರಗಾಗಿಸುತ್ತದೆ. ವಾಷಿಂಗ್ಟನ್‌ಗೆ ಭೇಟಿ ಕೊಡುವ ಪ್ರತಿಯೊಬ್ಬನೂ ಈ ಆರ್ಲಿಂಗ್ಟನ್‌ ರಾಷ್ಟ್ರೀಯ ಸಮಾಧಿಸ್ಥಳವನ್ನು ನೋಡದೇ ಬರುವುದಿಲ್ಲ. ಎಷ್ಟೋ ಜನರಿಗೆ ತಮ್ಮ ಸಮಾಧಿಯೂ ಈ ಸ್ಥಳದಲ್ಲಿಯೇ ಇರಬೇಕು ಅನ್ನುವ ಆಸೆ ಹುಟ್ಟಿಸುವ ಸೌಂದರ್ಯವುಳ್ಳ ಪ್ರದೇಶವದು.

ವಾಷಿಂಗ್ಟನ್‌ನಲ್ಲಿರುವ ಸ್ಮಿತೊನಿಯನ್‌ ಮ್ಯೂಸಿಯಮ್‌ನಲ್ಲಿ ಒಂದು ವಿಭಾಗವಿದೆ. ತಮ್ಮ ದೇಶದ ಸೈನಿಕರು ಯುದ್ಧದಲ್ಲಿ ಯಾವುದೇ ದೇಶದಲ್ಲಿ ಸಾಯಲಿ, ಅವರ ಪಾರ್ಥಿವ ಶರೀರವನ್ನು ತಾಯ್ನಾಡಿಗೆ ಮರಳಿ ತಂದು ಆರ್ಲಿಂಗ್ಟನ್‌ ಸಮಾಧಿಸ್ಥಳದಲ್ಲಿ ಸಮಾಧಿಮಾಡಿದ್ದಾರಲ್ಲ. ಎರಡನೆಯ ಮಹಾಯುದ್ಧದಲ್ಲಿ ಹಾಗೆ ಸತ್ತವರ ಶರೀರಗಳು ಸಿಕ್ಕದಿದ್ದಾಗ, ಅವರ ಬೂಟು, ಚಪ್ಪಲಿಗಳನ್ನು ಸಂಗ್ರಹಿಸಿ ಆ ವಿಭಾಗದಲ್ಲಿ ಇಡಲಾಗಿದೆ. ಅವು ಯಾರ ಬೂಟುಗಳು, ಯಾವ ಸೈನಿಕನ ಪಳೆಯುಳಿಕೆಗಳು ಎಂದು ತಿಳಿಯದಿದ್ದರೂ ಅವುಗಳಿಗೆ ಕೊಡಬೇಕಾದ ಗೌರವವನ್ನು ಅಲ್ಲಿ ಕೊಡಲಾಗಿದೆ. ಅವುಗಳ ರಾಶಿ ಕಂಡಾಗ ಮನಸ್ಸು ಖೇದಗೊಳ್ಳುತ್ತದೆ. ಮಾತು ಮರೆಯಾಗುತ್ತದೆ.

ಹಾಗೆ ನೋಡಿದರೆ ಅಮೆರಿಕಕ್ಕೆ ನಮ್ಮ ದೇಶದಷ್ಟು ಪುರಾತನ ಇತಿಹಾಸವಿಲ್ಲ. ಅಲ್ಲಿರುವ ಮೂಲನಿವಾಸಿ ರೆಡ್‌ಇಂಡಿಯನ್ಸ್‌ಗಳನ್ನು ಬಿಟ್ಟರೆ (ಈಗ ಅವರ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿದೆ) ಪ್ರತಿಯೊಬ್ಬರೂ ಜಗತ್ತಿನ ಬೇರೆ ಬೇರೆ ದೇಶಗಳಿಂದ ವಲಸೆ ಬಂದವರೇ. ಹಾಗೆ ವಲಸೆ ಬಂದು ಇನ್ನೂ 500 ವರ್ಷಗಳಾಗಿಲ್ಲ. ಅಲ್ಲಿರುವ ಯಾರಿಗೂ ಅಮೆರಿಕ ತಾಯ್ನಾಡಲ್ಲ. ಆದರೂ ಅಲ್ಲಿಯ ಈಗಿನ ತಲೆಮಾರುಗಳು, ವಿಶೇಷವಾಗಿ ನಾಲ್ಕು ವರ್ಷ ನಡೆದು 1865ರಲ್ಲಿ ಅಂತ್ಯಗೊಂಡ ಅಮೆರಿಕ ಆಂತರಿಕ ಯುದ್ಧ American civil ನ ನಂತರದ ತಲೆಮಾರುಗಳು, ಅಮೆರಿಕವನ್ನು ತಮ್ಮದೇ ದೇಶ ಎಂದು ಭಾವಿಸಿ ಅದನ್ನು ಪ್ರೀತಿ-ಗೌರವಗಳಿಂದ ಕಾಣುತ್ತಾರಲ್ಲ, ಅದು ವಿಶೇಷ. ಅದಕ್ಕೆ ಮೂಲಕಾರಣ ಅಮೆರಿಕದ ಮೊದಲ ಅಧ್ಯಕ್ಷ ಜಾರ್ಜ್‌ ವಾಷಿಂಗ್ಟನ್‌ ಹಾಗೂ ಅಮೆರಿಕದ ಸಂವಿಧಾನವನ್ನು ಬರೆದ ಜೇಮ್ಸ್‌ ಮ್ಯಾಡಿಸನ್‌ ಅವರ ದೂರದರ್ಶಿತ್ವ ಎನ್ನುವುದರಲ್ಲಿ ಸಂಶಯವಿಲ್ಲ.

ಅತ್ಯಂತ ಸರಳ ಸಂವಿಧಾನ ಮತ್ತು ತಮ್ಮ ಎಲ್ಲ ಜನರಿಗೆ ಸಮಸ್ತ ನಾಗರಿಕ ಸೌಲಭ್ಯಗಳನ್ನು ಒದಗಿಸುವತ್ತ ಅವರ ಕಾಳಜಿ ಅಮೆರಿಕದಂಥ ವಿಶಾಲ ದೇಶವನ್ನು ಒಗ್ಗಟ್ಟಿನಲ್ಲಿರಿಸಲು ಹಾಕಿದ ಬುನಾದಿಯಾಗಿದ್ದು ಅದನ್ನು ಅಭೇದ್ಯವನ್ನಾಗಿ ಮಾಡಿದೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವಾಗ ಬದಲಾಗುವ ಪ್ರಾಕೃತಿಕ, ಸಾಮಾಜಿಕ, ಸಾಮಯಿಕ ವೈಪರೀತ್ಯಗಳಿದ್ದೂ ಇದು ಒಂದೇ ದೇಶ ಮತ್ತು ಇದನ್ನು ನಾವು ಪ್ರೀತಿಸಬೇಕು, ಹೆಮ್ಮೆ ಪಡಬೇಕು, ಹಾಗೂ ಇದನ್ನು ರಕ್ಷಣೆ ಮಾಡುವ ಸೈನಿಕರನ್ನು ಗೌರವದಿಂದ ಕಾಣ‌ಬೇಕು ಅನ್ನುವ ಭಾವನೆ ಅಲ್ಲಿಯ ನಾಗರಿಕರಲ್ಲಿ ಮೂಡಿಬರಲು ಅವರು ಮತ್ತವರ ಮುಂದಿನ ತಲೆಮಾರಿನ ಅಧ್ಯಕ್ಷರುಗಳು ನಡೆದುಕೊಂಡು ಬಂದ ರೀತಿ. ಅಲ್ಲಿ ವೈವಿಧ್ಯತೆ ಇದೆ, ಆದರೆ ದೇಶದ ಏಕತೆಯ ವಿಚಾರ ಬಂದರೆ ಅದಕ್ಕೆ ಭಿನ್ನಾಭಿಪ್ರಾಯವಿಲ್ಲ. ಅಭಿವೃದ್ಧಿಗೊಂಡು ಜಗತ್ತಿನ ಎಲ್ಲ ದೇಶದ ಜನರನ್ನೂ ಆಕರ್ಷಿಸುವ ರೀತಿಯಲ್ಲಿ ಅದೀಗ ಬೆಳೆದು ನಿಂತಿದೆ. ಇಂದಿಗೂ ಎಲ್ಲರ ಕನಸಿನ ದೇಶ ಅದೇ ಆಗಿದೆ. ಹೋದರೆ ಆ ದೇಶಕ್ಕೆ ಹೋಗಿ ನೆಲಸಬೇಕು ಎನ್ನುವ ಆಸೆ ಜಗತ್ತಿನ ಪ್ರತಿಯೊಂದು ದೇಶದ ಯುವಜನರಿಗೆ ಇದ್ದೇ ಇದೆ. ಅಲ್ಲಿ ಎಲ್ಲ ರೀತಿಯ ಸೌಲಭ್ಯಗಳಿದ್ದು ಅವು ಕೈಗೆಟಕುವ ಹಾಗೆ ಸನಿಹದಲ್ಲಿದ್ದು, ಸಂಶೋಧನೆಗೋ, ವಿದ್ಯಾರ್ಜನೆಗೋ, ಹೊಟ್ಟೆಪಾಡಿಗೋ ದಕ್ಕಬಹುದಾದ ದೇಶವದು.

ಹಾಗೆಂದು ಅಲ್ಲಿ ಭ್ರಷ್ಟಾಚಾರ, ಲಂಚಕೋರತನ, ಮೋಸ, ದಗಲಬಾಜಿ, ಅತ್ಯಾಚಾರ, ಇತ್ಯಾದಿ ಇಲ್ಲವೆಂದಲ್ಲ. ಮುಕ್ತ ಸಮಾಜ, ಸುಲಭವಾಗಿ ದೊರಕುವ ಮಾರಕಾಯುಧಗಳು, ಮಾದಕದ್ರವ್ಯಗಳು ಇವೆಲ್ಲವೂ ಅಲ್ಲಿದ್ದರೂ ಸಾಮಾನ್ಯ ನಾಗರಿಕನಿಗೆ ಸುಲಭದಲ್ಲಿ (ಆರ್ಥಿಕವಾಗಿ ಅಲ್ಲ) ನ್ಯಾಯ ಒದಗಿಸುವ ಸರಳ ವಿಧಾನಗಳಿದ್ದುದರಿಂದಲೂ, ತಪ್ಪು ಮಾಡಿದವರಿಗೆ ಬಹಳ ಬೇಗ ಶಿಕ್ಷೆಯಾಗುವುದರಿಂದಲೂ ಸಾಮಾನ್ಯ ಜನರು ನೆಮ್ಮದಿಯ ಬದುಕು ಮಾಡಲು ಯಾವ ಅಡ್ಡಿ-ಆತಂಕಗಳನ್ನೆದುರಿಸುವ ಅಗತ್ಯವಿಲ್ಲ. ಒಂದು ಕಾಲದಲ್ಲಿ ಕ್ರೂರವಾದ ವರ್ಣದ್ವೇಷ, ಜನಾಂಗ ದ್ವೇಷ ತುಂಬಿದ್ದ ಆ ದೇಶದಲ್ಲಿ ಅಬ್ರಾಹಾಮ್‌ ಲಿಂಕನ್‌ ಅಧ್ಯಕ್ಷರಾದ ಮೇಲೆ ಅಂತಹ ಸಮಸ್ಯೆಗಳ ಹುಟ್ಟಡಗಿಸಿ, ಈಗ ಇಲ್ಲ ಎನ್ನಿಸುವಷ್ಟರ ಮಟ್ಟಿಗೆ ಪರಿಸ್ಥಿತಿ ತಿಳಿಯಾಗಿದೆ.

ಅಮೆರಿಕ ಅಭಿವೃದ್ಧಿಗೊಳ್ಳಲು, ಬಲಾಡ್ಯವಾಗಲು, ಅವಕಾಶಗಳ ಮಹಾಪೂರವನ್ನೊದಗಿಸಲು ಸಾಧ್ಯವಾದುದು ಅಲ್ಲಿಯ ಜನರ ಹುಟ್ಟುನೆಲದ ಮೇಲಿನ ಪ್ರೀತಿ. ಆ ಪ್ರೀತಿ ಅವರಲ್ಲಿ ಪಾಮಾಣಿಕತೆಯನ್ನು ಉದ್ದೀಪಿಸಿತು. ನಮ್ಮಲ್ಲಿ ಇಂಥ ದೇಶಪ್ರೇಮವನ್ನು ನಾವು ಕಾಣುತ್ತಿದ್ದೇವೆಯೇ? ಸೈನಿಕರ ಮೇಲೆ ಕಲ್ಲೊಗೆಯುವ, ಶತ್ರುದೇಶವನ್ನು ಹೊಗಳುವ, ನಮ್ಮ ಅನ್ನದ ಬಟ್ಟಲಿನಲ್ಲಿಯೇ ಉಗುಳುವ ಒಂದು ಪೀಳಿಗೆಯನ್ನು ಹುಟ್ಟು ಹಾಕುತ್ತಿದ್ದೇವೆಯೆ?

ಗೋಪಾಲಕೃಷ್ಣ ಪೈ

ಟಾಪ್ ನ್ಯೂಸ್

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.