ಮನೆಯ ಮೇಲೆ ಆಮೆಯ ಮೋಹ

Team Udayavani, Jan 19, 2020, 4:13 AM IST

meg-4

ಬ್ರಹ್ಮದತ್ತ ಎಂಬಾತ ಬೆನಾರಸ್‌ ಎಂಬ ನದಿ ಬಯಲಿನ ರಾಜ್ಯವನ್ನು ಆಳುತ್ತಿದ್ದನು. ಆಗ ಬೋಧಿಸತ್ವನು ಒಬ್ಬ ಕುಂಬಾರನ ಮಗನಾಗಿ ಆ ಊರಿನಲ್ಲಿ ಜನಿಸಿನು. ಪ್ರತಿದಿನವೂ ಮಡಕೆ ತಯಾರಿಕೆಗೆ ಬೇಕಾದ ಮಣ್ಣು ಸಂಗ್ರಹಿಸುತ್ತ ಅಪ್ಪನಿಗೆ ಸಹಾಯ ಮಾಡುತ್ತಿದ್ದನು.

ಈ ಬೆನಾರೆಸ್‌ ನದಿಯ ಬಳಿ ಒಂದು ವಿಶಾಲವಾದ ಕೆರೆಯಿದ್ದಿತು. ಆ ಊರಿನಲ್ಲಿ ಭಾರೀ ಮಳೆ ಸುರಿದಾಗ ಕೆರೆಯೂ, ನದಿಯೂ ಒಂದಾಗಿಬಿಡುತ್ತಿತ್ತು. ಆದರೆ, ನೀರು ಭಾರೀ ಕಡಿಮೆಯಾದಾಗ ಕೆರೆ, ನದಿ ಪ್ರತ್ಯೇಕವಾಗಿ ಕಾಣುತ್ತಿತ್ತು. ಇಲ್ಲಿ ವಾಸಿಸುತ್ತಿದ್ದ ಮೀನು ಮತ್ತು ಆಮೆಗೆ, ಯಾವಾಗ ಕೆರೆಯಲ್ಲಿ ನೀರು ತುಂಬುವುದು ಮತ್ತು ಯಾವಾಗ ಕೆರೆ ಖಾಲಿಯಾಗುವುದು ಎಂಬ ಬಗ್ಗೆ ಸಹಜವಾಗಿಯೇ ಜ್ಞಾನ ವಿದ್ದಿತು. ಹಾಗಂತ ಕೆರೆಯ ನೀರೇನೂ ಪೂರ್ತಿ ಖಾಲಿಯಾದ ಉದಾಹರಣೆ ಇರಲಿಲ್ಲ.

ಹೀಗೊಂದು ದಿನ, ಮೀನು ಮತ್ತು ಆಮೆಗೆ ಭವಿಷ್ಯದಲ್ಲಿ ಬರಗಾಲ ಪರಿಸ್ಥಿತಿ ಎದುರಾಗುವ ಸೂಚನೆ ದೊರೆಯಿತು. ಕೆರೆಯಲ್ಲಿ ನೀರು ಚೆನ್ನಾಗಿರುವಾಗಲೇ ಅವುಗಳು ತಮ್ಮ ತಮ್ಮ ಬಂಧು-ಬಾಂಧವರೊಡನೆ, ಈಜುತ್ತ ನದಿಯನ್ನು ಸೇರಿಕೊಂಡವು. ಆದರೆ, ಆಮೆಯ ಬಂಧುಗಳ ಪೈಕಿ ಒಂದು ಆಮೆ ಮಾತ್ರ ಹೀಗೆ ಈಜುತ್ತ ನದಿ ಸೇರಲು ಒಪ್ಪಲಿಲ್ಲ.

“”ನಾನು ಇಲ್ಲಿಯೇ ಹುಟ್ಟಿದ್ದೇನೆ, ಇಲ್ಲಿಯೇ ನಾನು ಬೆಳೆದಿದ್ದೇನೆ. ಇದು ನನ್ನ ಹಿರಿಯರ ಮನೆ. ಆದ್ದರಿಂದ, ಈ ಕೆರೆಯನ್ನು ಬಿಟ್ಟು ನಾನು ಬರಲಾರೆ” ಎಂದು ಅಳುತ್ತ ಕುಳಿತಿತು.

ಕೆಲಕಾಲದಲ್ಲೇ ಭಾರೀ ಬರಗಾಲ ಆ ಊರನ್ನು ಆವರಿಸಿತು. ಕೆರೆಯಲ್ಲಿ ನೀರು ಕಡಿಮೆಯಾದಂತೆ, ಆಮೆಯು ಮಣ್ಣಿನಲ್ಲಿ ಬಿಲ ಕೊರೆದು ಆದಷ್ಟು ಒಳ ಹೊಕ್ಕು ವಾಸಿಸಲು ಶುರು ಮಾಡಿತು. ಅಲ್ಲಿಗೆ ಬೋಧಿಸತ್ವನು ಮಣ್ಣಿಗಾಗಿ ಆಗಾಗ ಬರುವುದಿತ್ತು. ಒಂದು ದಿನ ತನ್ನ ಹಾರೆಯೊಂದಿಗೆ ಬಂದ ಬೋಧಿಸತ್ವನಿಗೆ ಮಣ್ಣು ಅಗೆಯುತ್ತಿರುವಾಗ ಆಮೆಯ ಚಿಪ್ಪು ಕಾಣಿಸಿತು. ಆಮೆಯು ಬೇಸರದಿಂದ ಬೋಧಿಸತ್ವನಿಗೆ ಹೇಳಿತು. “”ನನ್ನ ಮನೆ, ನನ್ನ ಕೆರೆ ಎಂದು ಪ್ರೀತಿಯಿಂದ ನಾನು ಇಲ್ಲಿಯೇ ಉಳಿದುಕೊಂಡದ್ದಕ್ಕೆ ನನಗೆ ಈ ಶಿಕ್ಷೆ ಅಲ್ಲವೆ?” ಎಂದು ದುಃಖೀ ಸಲಾರಂಭಿಸಿತು.

ಬೋಧಿಸತ್ವ ಹೇಳಿದ, “”ನನ್ನ ಮನೆ, ನನ್ನದು ಎಂಬ ಮಮಕಾರ ಸಲ್ಲದು ಅಲ್ಲವೆ? ಆದ್ದರಿಂದ ಎಲ್ಲಿ ಬದುಕು ಸಾಧ್ಯವೋ ಅಲ್ಲಿಗೇ ನೀನು ಹೋಗಬೇಕು ಅಲ್ಲವೇ”. ಆದರೆ, ಆಮೆಯು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ತಾಳ್ಮೆಯನ್ನೇ ಹೊಂದಿರಲಿಲ್ಲ. ಬೋಧಿಸತ್ವನ ಬಳಿ ವಾದ ಮಾಡುತ್ತಲೇ ಮುಂದುವರೆಯಿತು.

ಹೀಗೆ ಹಲವು ದಿನಗಳು ಕಳೆದ ಬಳಿಕ ಆಮೆಯು ಸಾವನ್ನಪ್ಪಿತು. ಬೋಧಿಸತ್ವನು ಅಲ್ಲಿ ಸೇರಿದ್ದ ಜನರನ್ನು ಉದ್ದೇಶಿಸಿ ಹೇಳಿದ, “”ಪ್ರಕೃತಿಯು ಮುನಿದಾಗ ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳುವುದೇ ಬದುಕಿಗೆ ಉಳಿದಿರುವ ದಾರಿ. ಈ ಜೀವನ ಮುಖ್ಯವೇ ಹೊರತು, ಕೇವಲ ನಂಬಿಕೆಗಳಲ್ಲ”.

(ಸಂಗ್ರಹ)

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.