ಬ್ಲೇಝರ್‌ ಬಾಲೆ

Team Udayavani, Sep 11, 2019, 5:00 AM IST

ಬ್ಲೇಝರ್‌, ಈವರೆಗೂ ಹೆಚ್ಚಾಗಿ ಕ್ರೀಡಾಪಟುಗಳು ತೊಡುವ ದಿರಿಸಾಗಿತ್ತು. ಆದರೆ, ಅದೀಗ ಕಾಲೇಜು ಸಮವಸ್ತ್ರ, ಜಂಪ್‌ಸೂಟ್‌ ಆಗಿಯೂ ಜನಪ್ರಿಯವಾಗಿದೆ.ಪ್ಯಾಂಟ್‌ ಜೊತೆಗೆ ಮಾತ್ರವಲ್ಲ ಸೀರೆಯ ಮೇಲೂ, ಅಷ್ಟೇ ಯಾಕೆ; ಬ್ಲೇಝರ್‌ ಅನ್ನೇ ಡ್ರೆಸ್‌ನಂತೆ ತೊಡುವಷ್ಟರ ಮಟ್ಟಿಗೆ ಅದು ಫ್ಯಾಷನ್‌ ಲೋಕದಲ್ಲಿ ಟ್ರೆಂಡ್‌ ಸೆಟ್‌ ಮಾಡಿದೆ…

19ನೇ ಶತಮಾನದ ಬೋಟಿಂಗ್‌ ಮತ್ತು ಕ್ರಿಕೆಟಿಂಗ್‌ ಸಂಸ್ಕೃತಿಯಲ್ಲಿ ಕಾಣಿಸಿಕೊಂಡ ಬ್ಲೇಝರ್‌, ಅತ್ತ ಫಾರ್ಮಲ್‌ ಸೂಟ್‌ ಕೋಟ್‌ ಅಲ್ಲ, ಇತ್ತ ನ್ಪೋರ್ಟ್ಸ್ ಜಾಕೆಟ್‌ ಕೂಡಾ ಅಲ್ಲ. ಇವೆರಡರ ನಡುವಿನ ಈ ದಿರಿಸು ಪುರುಷರಿಗೆ ಮಾತ್ರ ಸೀಮಿತವಾಗದೆ ಮಕ್ಕಳು, ಮಹಿಳೆಯರೂ ತೊಡುವ ಉಡುಪಾಗಿ ಜನಪ್ರಿಯವಾಯಿತು. ಇದು, ಶಾಲಾ-ಕಾಲೇಜು ಸಮವಸ್ತ್ರ, ಕ್ರೀಡಾಪಟುಗಳು ತೊಡುವ ದಿರಿಸು, ಆಫೀಸ್‌ಗೆ ಹೋಗುವವರು ತೊಡುವ ಕ್ಯಾಶುವಲ್‌ ಉಡುಪುಗಳಲ್ಲಿ ಒಂದಾಗಿದೆ.

ಇದೀಗ ಈ ಬ್ಲೇಝರ್‌ ಮೇಕ್‌ ಓವರ್‌ ಪಡೆದು ಫ್ಯಾಷನ್‌ ಲೋಕದಲ್ಲಿ ಹೊಸ ಬಗೆಯಲ್ಲಿ ಕಾಣಿಸಿಕೊಂಡಿದೆ. ಬಣ್ಣಬಣ್ಣದ ಉಡುಗೆಗಳ ಜೊತೆ ಮಿಂಚುತ್ತಿದೆ. ಪ್ಯಾಂಟ್‌ ಅಲ್ಲದೆ, ಲಂಗ, ಶಾರ್ಟ್ಸ್, ಜಂಪ್‌ಸೂಟ್‌, ಅಷ್ಟೇ ಅಲ್ಲ; ಸೀರೆಯ ಜೊತೆಗೂ ಬ್ಲೇಝರ್‌ ತೊಡುವುದು ಈಗಿನ ಟ್ರೆಂಡ್‌.

ಈ ಬ್ಲೇಝರ್‌ ಅನ್ನೇ ಅಂಗಿಯಂತೆ ಕೂಡಾ ತೊಡಬಹುದು. ಕೇಳಲು ಸ್ವಲ್ಪ ವಿಚಿತ್ರವೆನಿಸಿದರೂ ಇದು ಸತ್ಯ. ಬ್ಲೇಝರ್‌ ಅನ್ನು ಡ್ರೆಸ್‌ನಂತೆ ತೊಡುವ ಟ್ರೆಂಡ್‌, ಸೆಲೆಬ್ರಿಟಿಗಳಿಂದ ಪ್ರಾರಂಭವಾಗಿ, ಈಗ ಬಹುತೇಕ ಹುಡುಗಿಯರು ಅದನ್ನು ಮೆಚ್ಚಿಕೊಂಡಿದ್ದಾರೆ.

ಅಂದು, ಇಂದು, ಎಂದೆಂದೂ
ಅಂದು ಬ್ರಿಟಿಷ್‌ ರಾಜಮನೆತನದ ರಾಣಿ ಎಲಿಜಬೆತ್‌, ಡಯಾನಾರಿಂದ ಇಂದಿನ ಮೇಘನ್‌ ಮಾರ್ಕಲ್‌ವರೆಗೆ; ಅಂದಿನ ಹಾಲಿವುಡ್‌ನ‌ ಟಿನಿಕೋಲ್‌ ಕಿಡ್ಮನ್‌ನಿಂದ ಇಂದಿನ ಬಾಲಿವುಡ್‌ ನಟಿ ಕರೀನಾ ಕಪೂರ್‌ವರೆಗೆ, ಪಾಪ್‌ ಗಾಯಕಿಯರಾದ ರಿಹಾನ್ನ, ಟೇಲರ್‌ ಸ್ವಿಫr… ಮುಂತಾದವರು ಈ ಬ್ಲೇಝರ್‌ ಮತ್ತೆ ಮತ್ತೆ ಟ್ರೆಂಡ್‌ಆಗಲು ಕಾರಣ.

ಕಾಲರ್‌ ಖದರ್‌
ತೊಡೆ ತನಕದ ಉದ್ದಗಿನ ಅಳತೆಯ ಈ ಕೋಟ್‌ನ ವೈಶಿಷ್ಟ್ಯವೆಂದರೆ ದೊಡ್ಡ ಗಾತ್ರದ ಕಾಲರ್‌. ಗಮನ ಸೆಳೆಯುವ ಬಟನ್‌ಗಳು, ಸಡಿಲ ಭುಜ, ಎದ್ದು ಕಾಣುವ ಜೇಬುಗಳು ಮತ್ತದರ ಬಾರ್ಡರ್‌. ಮೇಕ್‌ಓವರ್‌ ಪಡೆದ ಈ ಬ್ಲೇಝರ್‌ನ ತೋಳುಗಳಲ್ಲೂ ಈಗ ಬಟನ್‌ಗಳಿರುತ್ತವೆ. ಕೆಲವು ಬ್ಲೇಝರ್‌ ಮೇಲೆ ಬೆಲ್ಟ್ (ಸೊಂಟಪಟ್ಟಿ) ಕೂಡ ತೊಡಬಹುದು.

ವೆಲ್ವೆಟ್‌ (ಮಕ್ಮಲ್‌), ಕೋರ್ಡುರೊಯ…, ಡೆನಿಮ್‌ (ಜೀನ್ಸ್), ಕಾಟನ್‌ (ಹತ್ತಿ), ಸಿಂಥೆಟಿಕ್‌ ಫ್ಯಾಬ್ರಿಕ್‌ನಿಂದ ಬ್ಲೇಝರ್‌ ತಯಾರಿಸಲಾಗುತ್ತದೆ. ಇವುಗಳು ಚೆಕ್ಸ್ (ಚೌಕಾಕಾರ), ಪೋಲ್ಕಾಡಾಟ್ಸ್‌, ಮೆಟಾಲಿಕ್‌ ಪ್ರಿಂಟ್‌, ಸಾಲಿಡ್‌ ಕಲರ್‌, ಮೊನೊಕ್ರೋಮ್‌ (ಒಂದೇಬಣ್ಣ), ಫ್ಲೋರಲ್‌ ಪ್ರಿಂಟ್‌ (ಹೂವಿನಾಕೃತಿ), ನಿಯಾನ್‌ ಬಣ್ಣ, ಪೇಸ್ಟಲ್‌ ಶೇಡ್‌ (ಬಳಪದ ಕಡ್ಡಿಯಂಥ ತಿಳಿಬಣ್ಣ), ಇಂಡಿಯನ್‌ ಪ್ರಿಂಟ್‌ ಮುಂತಾದ ವಿನ್ಯಾಸಗಳಲ್ಲಿ ಲಭ್ಯ ಇವೆ.

ಅಲ್ಲದೆ ಇವು ಕ್ಲಾಸಿಕ್‌ ಬ್ಲಾಕ್‌ ಅಂಡ್‌ ವೈಟ್‌ (ಕಪ್ಪು – ಬಿಳುಪು), ಕಂದು, ಬೂದಿ, ನೀಲಿ, ಹಳದಿ, ಕೆಂಪು ಮತ್ತು ಹಸಿರು ಬಣ್ಣಗಳಲ್ಲೂ ಸಿಗುತ್ತವೆ. ನಿಮಗೆ ಬೇಕಾದ ಬಣ್ಣ, ವಿನ್ಯಾಸ, ಕಲೆ ಅಥವಾ ಶೈಲಿಯನ್ನು ಬ್ಲೇಝರ್‌ ಮೇಲೆ ಮೂಡಿಸಲು ಕಸ್ಟಮೈಸ್ಡ್ ಆಯ್ಕೆಗಳೂ ಲಭ್ಯ ಇವೆ.

ಬಹು ಉಪಯೋಗಿ
ಹೆಣ್ಮಕ್ಕಳಿಗೆ ಪಾಕೆಟ್‌/ ಕಿಸೆ ಇರುವ ಡ್ರೆಸ್‌ಗಳೆಡೆಗೆ ತುಸು ಹೆಚ್ಚೇ ವ್ಯಾಮೋಹ ಇರುವುದು ಸುಳ್ಳಲ್ಲ. ಬ್ಲೇಝರ್‌ ಅನ್ನು ಇಷ್ಟಪಡಲು ಪಾಕೆಟ್‌ಗಳೂ ಒಂದು ಕಾರಣ. ಇವುಗಳಲ್ಲಿ ದೊಡ್ಡ ಗಾತ್ರದ ಜೇಬುಗಳಿದ್ದು, ಮೊಬೈಲ್‌, ಸಣ್ಣ ಕ್ಲಚ್‌, ಪೆನ್‌, ಲಿಪ್‌ಸ್ಟಿಕ್‌, ಮಾಯಿಶ್ಚರೈಸರ್‌ನಂಥ ಸಣ್ಣಪುಟ್ಟ ವಸ್ತುಗಳನ್ನು ಜೊತೆಗೆ ಕೊಂಡೊಯ್ಯಬಹುದು. ಎಲ್ಲ ಕಾಲಕ್ಕೂ ಸೂಕ್ತ ಅನ್ನಿಸುವ ಈ ಬ್ಲೇಝರ್‌ ಸ್ಟೆçಲಿಶ್‌ ಮಾತ್ರವಲ್ಲ, ಉಪಯುಕ್ತ ಮತ್ತು ಆರಾಮದಾಯಕವೂ ಹೌದು.

ಐದು ಬ್ಲೇಝರ್‌ ಸ್ಟೈಲ್‌
1. ಬ್ಲೇಝರ್‌ ಜೊತೆಗೆ ಡೆನಿಮ್‌ ಅಥವಾ ರಿಪ್ಡ್ ಜೀನ್ಸ್‌
2. ಲೆಪರ್ಡ್‌ ಪ್ರಿಂಟ್‌ ಬ್ಲೇಝರ್‌ ಜೊತೆ ವೈಟ್‌ ಷರ್ಟ್‌
3. ಬ್ಲೇಝರ್‌ ಜೊತೆ ಟಿ ಷರ್ಟ್‌
4. ಮ್ಯಾಕ್ಸಿ ಡ್ರೆಸ್‌ ಜೊತೆಗೆ ಬ್ಲೇಝರ್‌
5. ಜಂಪ್‌ಸೂಟ್‌ ಜೊತೆ ಬ್ಲೇಝರ್‌

-ಅದಿತಿಮಾನಸ ಟಿ.ಎಸ್‌.


ಈ ವಿಭಾಗದಿಂದ ಇನ್ನಷ್ಟು

  • ಪ್ರಕೃತಿ ಮತ್ತು ಭೂಮಿಯ ಹೋಲಿಕೆ ಸಲ್ಲುವುದು ತಾಯಿಗೆ ಮಾತ್ರ. ಆಕೆ ಸಹನಾಮಯಿ. ಮಕ್ಕಳ ಎಲ್ಲ ಕಷ್ಟವನ್ನು ಹೊರಲು ಆಕೆ ಸದಾ ಸಿದ್ಧ. ಈ ಮಾತಿಗೆ ಸಾಕ್ಷಿ ಎನ್ನುವಂಥ ತಾಯಿಯೊಬ್ಬಳು...

  • ಬಸ್ಸಿನಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ತನಕ ಒಂದು ಹಂತ. ನಂತರ ಬಸ್‌ ಲೈಟ್‌ ಆಫ್ ಮಾಡಿಬಿಡುತ್ತಾರಲ್ಲ? ಆಗ ಕೆಲವು ಗಂಡಸರ "ವಾಸನಾ' ವ್ಯಕ್ತಿತ್ವದ ಅನಾವರಣ...

  • ಟ್ರ್ಯಾಕ್‌ ಪ್ಯಾಂಟ್‌ ಅಥವಾ ಶರ್ಟ್‌ಗಳನ್ನು ಈ ಮೊದಲು ಕ್ರೀಡೆ, ಜಾಗಿಂಗ್‌ ಅಥವಾ ಯೋಗಾಸನ ತರಗತಿಗೆ ಹೋಗುವಾಗ ತೊಡುವ ಪದ್ಧತಿ ಇತ್ತು. ಆದರೆ, ಈಗ ಟ್ರ್ಯಾಕ್‌ಸೂಟ್‌ನಲ್ಲಿಯೇ...

  • ರಾತ್ರಿ ಊಟಕ್ಕೆ ಎಲ್ಲರಿಗೂ ಹೊಸದಾಗಿ ಊರಿಂದ ತಂದ ಮಾವಿನ ಮಿಡಿ ಉಪ್ಪಿನಕಾಯಿ, ಕೊಬ್ಬರಿಎಣ್ಣೆ ಹಾಕಿಕೊಂಡು ಅನ್ನಕ್ಕೆ ಕಲೆಸಿ ತಿನ್ನುವ ಹುಕಿ. ಈರುಳ್ಳಿ ಹೆಚ್ಚಿಕೊಡು...

  • ಹೆಣ್ಣು ಮಕ್ಕಳ ಪಾಲಿಗೆ ರಾತ್ರಿ ಪ್ರಯಾಣ ಯಾವತ್ತಿಗೂ ಆತಂಕದ ವಿಷಯವೇ. ಸರಿಯಾದ ಸಮಯಕ್ಕೆ ಬಸ್‌ ಬರದಿದ್ದರೆ, ನಿಲ್ದಾಣದಲ್ಲಿ ಯಾರಾದರೂ ಹಲ್ಲೆ ಮಾಡಿದರೆ, ಬಸ್‌ನಲ್ಲಿ...

ಹೊಸ ಸೇರ್ಪಡೆ