ಅಮ್ಮಾ, ನಂಗೆ ಟೈಮ್‌ ಕೊಡ್ತೀಯಾ?


Team Udayavani, Jul 4, 2018, 6:00 AM IST

p-3.jpg

ಮಗಳು ಸೋಲುತ್ತಾಳೆ, ನಿಜ. ನಿರೀಕ್ಷಿತ ಪೈಪೋಟಿ ಅವಳಿಂದ ಅಸಾಧ್ಯ ಎನ್ನುವುದೂ ಸತ್ಯವೇ. ಹಾಗಂತ, ಮಗಳೊಂದಿಗೆ ನೀವು ಆಡದೇ ಸುಮ್ಮನಿದ್ದರೆ, ಮುಂದೊಂದು ದಿನ ಬದುಕಿನಲ್ಲಿ ಮಗಳೇ ಸೋತುಬಿಡುತ್ತಾಳೆ!

ಗಂಡ ಇನ್ನೂ ಆಫೀಸಿನಿಂದ ಬಂದಿಲ್ಲ. ಸೋಫಾದ ಮೇಲೆ ಟಿವಿ ನೋಡುತ್ತಲೋ, ಮೊಬೈಲ್‌ನ ಸ್ಕ್ರೀನ್‌ ಅನ್ನು ಮೇಲಿಂದ ಕೆಳಕ್ಕೆ ಜಾರಿಸುತ್ತಲೋ ಕೂತಿರುತ್ತೀರಿ. ತಲೆಯೆಲ್ಲ ಆ ಡಿಜಿಟಲ್‌ ಪ್ರಪಂಚದೊಳಗೇ ಕಳೆದುಹೋಗಿದೆ. ಅಷ್ಟೊತ್ತಿಗೆ ಮಗಳು ಕರೀತಾಳೆ: “ಅಮ್ಮಾ, ಬಾ ಚೆಸ್‌ ಆಡೋಣ’. ಆ ಪುಟಾಣಿ ಕರೆಯುವುದನ್ನು ನೋಡಿ, ನಿಮಗೆ ಥ್ರಿಲ್‌ ಅನ್ನಿಸುವುದೇ ಇಲ್ಲ. ಮಗಳು ಚದುರಂಗದಾಟ ಕಲಿತಿದ್ದೇ ಮೊನ್ನೆ ಮೊನ್ನೆ. ಕುದುರೆ ಯಾವುದು, ಆನೆ ಯಾವುದು, ಸೈನಿಕ ಯಾವುದೆನ್ನುವ ಅವಳ ಗೊಂದಲ ಬಗೆಹರಿದೇ ಇಲ್ಲ. ಆಟದುದ್ದಕ್ಕೂ ತಲೆ ತಿನ್ತಾಳೆ. ಹತ್ತಾರು ಕಾಯಿನ್‌ ದಾಟಿಸುವ ಹೊತ್ತಿಗೆ ಸೋಲುತ್ತಾಳೆ. ಆಟದಲ್ಲಿ ಒಂದು ಪೈಪೋಟಿ ಇರೋಲ್ಲ. ಮನರಂಜನೆ ದಕ್ಕುವುದೇ ಇಲ್ಲ. ಇವೆಲ್ಲವನ್ನೂ ಅಂದಾಜಿಸಿ ನೀವು ಹೇಳುತ್ತೀರಿ; “ಇಲ್ಲಾ ಪುಟ್ಟಾ… ಯಾಕೋ ಮೂಡ್‌ ಇಲ್ಲ. ಬೇರೆ ಏನಾದ್ರೂ ಆಡು ಹೋಗು’. ಈ ಮಾತು ಕೇಳುತ್ತಿದ್ದಂತೆಯೇ ಪುಟಾಣಿ ಸಪ್ಪಗಾಗುತ್ತಾಳೆ.

   ಮಗಳು ಸೋಲುತ್ತಾಳೆ, ನಿಜ. ನಿರೀಕ್ಷಿತ ಪೈಪೋಟಿ ಅವಳಿಂದ ಅಸಾಧ್ಯ ಎನ್ನುವುದೂ ಸತ್ಯವೇ. ಹಾಗಂತ, ಮಗಳೊಂದಿಗೆ ನೀವು ಆಡದೇ ಸುಮ್ಮನಿದ್ದರೆ, ಮುಂದೊಂದು ದಿನ ಬದುಕಿನಲ್ಲಿ ಮಗಳೇ ಸೋತುಬಿಡುತ್ತಾಳೆ! ಈಗ ನಿಮ್ಮ ಮಗಳು ಆಡುವ ಆಟವನ್ನು ನೀವು ಬಾಲ್ಯದಲ್ಲೇ ಆಡಿರುತ್ತೀರಿ. ಅದೇ ಆಟವನ್ನೇ ಪುಟಾಣಿಯೊಂದಿಗೆ ಆಡುವುದು ನಿಮಗೆ ಬೋರ್‌ ವಿಚಾರವೇ ಇದ್ದಿರಬಹುದು. ಆದರೆ, ಮಗಳ ಆಲೋಚನಾ ಶಕ್ತಿಯನ್ನು ವಿಸ್ತರಿಸಲು, ಒಳನೋಟಗಳನ್ನು ಬೆಳೆಸಲು ಆಕೆಯೊಂದಿಗೆ ನೀವು ಕೆಲ ಹೊತ್ತಾದರೂ ಕಳೆಯಲೇಬೇಕು. ಅರ್ಥ ಮಾಡಿಕೊಳ್ಳಿ: ಮಗಳೊಂದಿಗೆ ಮುಖಾಮುಖೀಯಾಗಿ ಇಂಥ ಆಟಗಳನ್ನು ಆಡುವುದರಿಂದ ಆಕೆಯ ಬೌದ್ಧಿಕ ಪ್ರಪಂಚ ವಿಕಾಸವಾಗುತ್ತೆ.

ನೀವೇ ಅವರಿಗೆ ಪಾಠ!
ಮಕ್ಕಳು ಬಿಳಿ ಹಾಳೆ ಇದ್ದಂತೆ. ನೀವು ಚುಕ್ಕಿ ಇಟ್ಟಹಾಗೆ, ಅವರು ಚಿತ್ತಾರವಾಗುತ್ತಾರೆ. ಮಕ್ಕಳೊಂದಿಗೆ ನೀವು ಕಳೆದಷ್ಟು ಹೊತ್ತು, ಅವು ಚುರುಕಾಗುತ್ತವೆ ಎನ್ನುವುದು ಎಲ್ಲ ಮನಃಶಾಸ್ತ್ರಜ್ಞರು ಹೇಳುವಂಥ ಮಾತು. ನಿಮ್ಮ ಪ್ರತಿ ಹೆಜ್ಜೆ, ನಡತೆಗಳನ್ನೂ ಮಕ್ಕಳು ಸೂಕ್ಷ್ಮವಾಗಿ ಗಮನಿಸುತ್ತವೆ. ಅವರ ಪಾಲಿಗೆ ನೀವೇ ದೊಡ್ಡ ಸಿಲೆಬಸ್‌. ಹಾಗಿದ್ದೂ, ನೀವು ಸುಮ್ಮನೆ ಕುಳಿತರೆ, ಅವುಗಳ ಕಲಿಕೆಯೇ ನಿಂತುಹೋಗುತ್ತೆ. ಅವುಗಳೊಂದಿಗೆ ಆಡುವಾಗ, ಪುಟ್ಟ ಪುಟ್ಟ ಸಂಗತಿಗಳ ಬಗ್ಗೆ ವಿಚಾರಗಳನ್ನು ಹೇಳುತ್ತಾ ಇರಿ. ಮಕ್ಕಳು ಅದನ್ನು ಶಾಶ್ವತವಾಗಿ ನೆನಪಿಟ್ಟುಕೊಳ್ಳುತ್ತವೆ. 

ನೀವು ಸೋಲೊಪ್ಪಿಕೊಳ್ಳಿ…
ಮಕ್ಕಳ ಜತೆ ಆಟಕ್ಕೆ ಕುಳಿತಾಗ ನೀವೇ ಪಂಟರ್‌. ನಿಮ್ಮನ್ನು ಮಣಿಸುವಷ್ಟು ಬೌದ್ಧಿಕವಾಗಿ ಅವರು ಸರಿಸಮಾನರಲ್ಲ. ಆದರೆ, ನೀವು ಗೆಲ್ಲುತ್ತಾ ಹೋದಂತೆ, ಅವುಗಳಿಗೆ ಆ ಆಟದ ಮೇಲೆ ಆಸಕ್ತಿ ಕಳೆದುಹೋಗುವ ಅಪಾಯವೂ ಇದ್ದೀತು. ಈ ಕಾರಣದಿಂದ, ನೀವು ಬೇಕಂತಲೇ ತಪ್ಪು ಮಾಡುತ್ತಾ, ಸೋಲುತ್ತಾ ಹೋಗಿ. ನಿಮ್ಮ ಮೇಲಿನ ಒಂದು ಪುಟ್ಟ ಗೆಲುವೂ ಅವುಗಳ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸುತ್ತೆ. ನಡುವೆ ಒಂದೊಂದು ಸಲ ಸೋಲುವುದನ್ನೂ ಕಲಿಸಿ. ಆಗ ಅವರು ಸೋಲು- ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣ ಬೆಳೆಸಿಕೊಳ್ಳುತ್ತಾರೆ.

ಟೈಮ್‌ ಇಲ್ಲ ಅನ್ನಬೇಡಿ…
ಇಂದು ಎಲ್ಲರೂ ತಮ್ಮ ನಿತ್ಯದ ನಿಮಿಷಗಳನ್ನೂ ತೂಕಕ್ಕೆ ಇಟ್ಟಿದ್ದಾರೆ. ಕಾಲದ ಲೆಕ್ಕಾಚಾರದಲ್ಲೇ ಬದುಕು ಸಾಗುತ್ತಿದೆ. “ಪೋಷಕ ಪಾತ್ರ’ ನಿರ್ವಹಿಸಲು ಬಹುತೇಕ ತಂದೆ- ತಾಯಂದಿರಿಗೆ ಸಮಯವೇ ಇಲ್ಲದಂತಾಗಿದೆ. ಹಾಗಾಗಿ, ಮಕ್ಕಳು ಆಟಕ್ಕೆ ಕರೆದಾಗ ಅನೇಕ ಪೋಷಕರು ನಿರಾಸಕ್ತಿ ತೋರಿಸುತ್ತಾರೆ. ಆದರೆ, ಹೀಗೆ ನಿರ್ಲಕ್ಷ್ಯ ತೋರಿದರೆ, ಒಂದು ಅದ್ಭುತ ಕಲಾಕೃತಿಯನ್ನು ನಿರ್ಮಿಸುವ ಅವಕಾಶವನ್ನು ನೀವು ಕಳೆದುಕೊಂಡಂತಾಗುತ್ತೆ. ದೈನಂದಿನ ಕೆಲಸಗಳನ್ನು ತುಸುಬೇಗನೆ ಮುಗಿಸಿಕೊಂಡು, ಮಕ್ಕಳೊಂದಿಗೆ ಕಳೆಯಲು ಇಂತಿಷ್ಟು ಸಮಯವನ್ನು ಮೀಸಲಿಡಿ. ಮಕ್ಕಳ ಮನಸ್ಸು ಅರಳಲು ಈ ಸಮಯವೇ ಬಹುದೊಡ್ಡ ಉಡುಗೊರೆ.

  ಇನ್ನಾದ್ರೂ ಗೊತ್ತಾಯ್ತಲ್ಲ, ಮಕ್ಕಳು ಆಟಕ್ಕೆ ಕರೆದರೆ, ನೆಪ ಹೇಳಿ ನುಣುಚಿಕೊಳ್ಳದಿರಿ.

ಮಕ್ಕಳೊಂದಿಗೆ ನೀವೇಕೆ ಆಡಬೇಕು?
–  ಮಕ್ಕಳೊಂದಿಗೆ ನೀವು ಕಳೆದಷ್ಟು ಹೊತ್ತು, ಅವು ನಿಮ್ಮಿಂದ ಹೊಸ ವಿಚಾರಗಳನ್ನು ಕಲಿಯುತ್ತವೆ.

– ಆಟದಲ್ಲಿ ಮಕ್ಕಳೆದುರು ಸೋಲೊಪ್ಪಿಕೊಳ್ಳಿ. ಆ ಒಂದೇ ಒಂದು ಗೆಲುವಿನಿಂದ ಅವುಗಳ ಕಲಿಯುವ ಉತ್ಸಾಹ ಇಮ್ಮಡಿಗೊಳ್ಳುತ್ತದೆ.

– ಮಕ್ಕಳು ಬಿಳಿ ಹಾಳೆ ಇದ್ದಹಾಗೆ. ನೀವು ಚುಕ್ಕಿ ಇಟ್ಟಂತೆ, ಅವರು ಚೆಂದದ ಚಿತ್ತಾರವಾಗುತ್ತಾರೆ ಎಂಬುದು ತಿಳಿದಿರಲಿ.

– ಹೊಸ ಪದ, ಹೊಸ ವಿಚಾರ, ವಿಭಿನ್ನ ಒಳನೋಟಗಳನ್ನು ಮಕ್ಕಳು ಕಲಿಯುತ್ತವೆ.

– ದೊಡ್ಡವರನ್ನು ಹೇಗಾದರೂ ಮಣಿಸಬೇಕೆಂಬ ಅವುಗಳ ಛಲವೇ, ಬದುಕಿನ ಹೋರಾಟವನ್ನು ಕಲಿಸುತ್ತದೆ.

– ಮಕ್ಕಳೊಂದಿಗೆ ನೀವು ಕಳೆದುಹೋದಷ್ಟು, ನಿಮ್ಮ ಒತ್ತಡವೂ ಕರಗಿಹೋಗುತ್ತೆ.

ಟಾಪ್ ನ್ಯೂಸ್

Actor Pratham: ಬಿಗ್‌ ಬಾಸ್‌ ಖ್ಯಾತಿಯ ನಟ ಪ್ರಥಮ್‌ಗೆ ಜೀವ ಬೆದರಿಕೆ; ದೂರು ದಾಖಲು

Actor Pratham: ಬಿಗ್‌ ಬಾಸ್‌ ಖ್ಯಾತಿಯ ನಟ ಪ್ರಥಮ್‌ಗೆ ಜೀವ ಬೆದರಿಕೆ; ದೂರು ದಾಖಲು

Bengaluru: ಅಮೆಜಾನ್‌ ಪಾರ್ಸೆಲ್‌ ನೊಳಗೆ ವಿಷಕಾರಿ ಹಾವು-ಮಹಿಳೆ ಬಚಾವ್!‌ Watch

Bengaluru: ಅಮೆಜಾನ್‌ ಪಾರ್ಸೆಲ್‌ ನೊಳಗೆ ವಿಷಕಾರಿ ಹಾವು-ಮಹಿಳೆ ಬಚಾವ್!‌ Watch

10

ದರ್ಶನ್‌ ನನ್ನ ಮೇಲೆ ಹಲ್ಲೆ ನಡೆಸಿಲ್ಲ.. ನಾನು ಅವರ ದೊಡ್ಡ ಅಭಿಮಾನಿ: ಪವಿತ್ರಾ ಮಾಜಿ ಪತಿ  

10-mng

Umrahಕ್ಕೆ ತೆರಳಿದ್ದವರ ಟ್ರಾಲಿ ಬ್ಯಾಗ್ ನಿಂದ ಹಣ ಕಳವು; ವಿಮಾನಯಾನ ಸಂಸ್ಥೆಯ ಮೇಲೆ ಆರೋಪ

ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ತಿರುಚುವ ಪ್ರಯತ್ನದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ

ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ತಿರುಚುವ ಪ್ರಯತ್ನದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

9-hunsur

Hunsur: ನಾಗರಹೊಳೆ ಉದ್ಯಾನದಲ್ಲಿ ಕಾಡಾನೆ ಶವ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಹೊಸ ಸೇರ್ಪಡೆ

Actor Pratham: ಬಿಗ್‌ ಬಾಸ್‌ ಖ್ಯಾತಿಯ ನಟ ಪ್ರಥಮ್‌ಗೆ ಜೀವ ಬೆದರಿಕೆ; ದೂರು ದಾಖಲು

Actor Pratham: ಬಿಗ್‌ ಬಾಸ್‌ ಖ್ಯಾತಿಯ ನಟ ಪ್ರಥಮ್‌ಗೆ ಜೀವ ಬೆದರಿಕೆ; ದೂರು ದಾಖಲು

11-yellapur

Yellapur: ನಿಯಂತ್ರಣ ತಪ್ಪಿ ಕಾರು ಪಲ್ಟಿ; ಪ್ರಯಾಣಿಕರು ಪಾರು

Bengaluru: ಅಮೆಜಾನ್‌ ಪಾರ್ಸೆಲ್‌ ನೊಳಗೆ ವಿಷಕಾರಿ ಹಾವು-ಮಹಿಳೆ ಬಚಾವ್!‌ Watch

Bengaluru: ಅಮೆಜಾನ್‌ ಪಾರ್ಸೆಲ್‌ ನೊಳಗೆ ವಿಷಕಾರಿ ಹಾವು-ಮಹಿಳೆ ಬಚಾವ್!‌ Watch

10

ದರ್ಶನ್‌ ನನ್ನ ಮೇಲೆ ಹಲ್ಲೆ ನಡೆಸಿಲ್ಲ.. ನಾನು ಅವರ ದೊಡ್ಡ ಅಭಿಮಾನಿ: ಪವಿತ್ರಾ ಮಾಜಿ ಪತಿ  

Cow

Chikkaballapura: ಮುಂಗಾರು ಬೆನ್ನಲ್ಲೇ ಹೈನೋದ್ಯಮಕ್ಕೆ ಜೀವಕಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.