ಅಧರ ಮಧುರ

Team Udayavani, Nov 20, 2019, 6:00 AM IST

ತುಟಿ ಕಪ್ಪಾಗಿದೆ. ಏನು ಮಾಡಿದರೂ ಅಂದ ಗಾಣಿಸಲು ಆಗುತ್ತಿಲ್ಲ- ಇದು ಹಲವು ಹುಡುಗಿಯರ ಗೊಣಗಾಟ. ನೀನು ಸ್ಮೋಕ್‌ ಮಾಡ್ತೀಯಾ? ಕಾಫಿ, ಟೀ ಜಾಸ್ತಿ ಕುಡಿತೀಯ ಅನ್ಸುತ್ತೆ, ಅದಕ್ಕೇ ಹೀಗಾಗಿದೆ… ಎಂಬಿತ್ಯಾದಿ ಪ್ರಶ್ನೆ, ಸಲಹೆಗಳಿಂದ ಬೇಸತ್ತು ಹೋಗಿರುವ ಹುಡುಗಿಯರಿಗಾಗಿ ಇಲ್ಲಿ ಕೆಲವು ಸಲಹೆಗಳಿವೆ. ದುಬಾರಿ ಕ್ರೀಂ, ಜೆಲ್‌ಗ‌ಳನ್ನು ಬಳಸದೆಯೇ, ತುಟಿಯ ಬಣ್ಣವನ್ನು ತಿಳಿಯಾಗಿಸುವ ವಿಧಾನ ಗಳನ್ನು ನೀವೂ ಮಾಡಿ ನೋಡಿ.

-ಒಂದು ಚಮಚ ಅರಿಶಿಣ, ಹಾಲು, ಅರ್ಧ ಚಮಚ ಜೇನುತುಪ್ಪ, ಅರ್ಧ ಚಮಚ ಲಿಂಬೆರಸ ಮತ್ತು ಒಂದು ಚಮಚ ರೋಸ್‌ವಾಟರ್‌ ಅನ್ನು ಮಿಶ್ರಣ ಮಾಡಿ, ತುಟಿಗಳಿಗೆ ಲೇಪಿಸಿ, ಅರ್ಧ ಗಂಟೆ ನಂತರ ತೊಳೆಯಿರಿ.

-ಯೋಗರ್ಟ್‌/ ಮೊಸರು, ಜೇನುತುಪ್ಪ, ಕಡಲೆಹಿಟ್ಟು, ಲಿಂಬೆರಸವನ್ನು ಸಮಪ್ರಮಾಣದಲ್ಲಿ ಬೆರೆಸಿ ಪೇಸ್ಟ್‌ ತಯಾರಿಸಿ. ಅದನ್ನು ತುಟಿಗಳಿಗೆ ಹಚ್ಚಿ, ಅರ್ಧ ಗಂಟೆ ನಂತರ ತೊಳೆಯಿರಿ.

-ಚಂದನ ಮತ್ತು ಅರಿಶಿಣವನ್ನು ಸಮಪ್ರಮಾಣ­ದಲ್ಲಿ ನೀರಿನಲ್ಲಿ ಕಲಸಿ, ತುಟಿಗಳಿಗೆ ಹಚ್ಚಿ.

-ಗ್ಲಿಸರಿನ್‌ ಅನ್ನು ರೋಸ್‌ವಾಟರ್‌ ಜೊತೆಗೆ ಮಿಶ್ರಣ ಮಾಡಿ, ತುಟಿ ಹಾಗೂ ಬಾಯಿಯ ಸುತ್ತ ಹಚ್ಚಬಹುದು.

-ಟೊಮೇಟೊ ಹೋಳನ್ನು ತುಟಿಗಳಿಗೆ ಉಜ್ಜಿದರೆ ಅಥವಾ ಟೊಮೆಟೋ ರಸವನ್ನು ಹಚ್ಚಿದರೆ, ತುಟಿಯ ರಂಗು ಹೆಚ್ಚುತ್ತದೆ.

-ಅರ್ಧ ಚಮಚ ಸಕ್ಕರೆಗೆ (ಬ್ರೌನ್‌ಶುಗರ್‌ ಇದ್ದರೆ ಉತ್ತಮ), ಸಮಪ್ರಮಾಣದಲ್ಲಿ ಜೇನುತುಪ್ಪ ಬೆರೆಸಿ, ತುಟಿಗೆ ಹಚ್ಚಿ ಹತ್ತು ನಿಮಿಷದ ನಂತರ ತೊಳೆದುಕೊಳ್ಳಿ.

-ಲಿಂಬೆರಸಕ್ಕೆ, ಬಾದಾಮಿ ಎಣ್ಣೆಯನ್ನು ಬೆರೆಸಿ ಹಚ್ಚಿದರೂ ಉಪಯೋಗವಾಗುತ್ತದೆ.


ಈ ವಿಭಾಗದಿಂದ ಇನ್ನಷ್ಟು

  • ಪ್ರಕೃತಿ ಮತ್ತು ಭೂಮಿಯ ಹೋಲಿಕೆ ಸಲ್ಲುವುದು ತಾಯಿಗೆ ಮಾತ್ರ. ಆಕೆ ಸಹನಾಮಯಿ. ಮಕ್ಕಳ ಎಲ್ಲ ಕಷ್ಟವನ್ನು ಹೊರಲು ಆಕೆ ಸದಾ ಸಿದ್ಧ. ಈ ಮಾತಿಗೆ ಸಾಕ್ಷಿ ಎನ್ನುವಂಥ ತಾಯಿಯೊಬ್ಬಳು...

  • ಬಸ್ಸಿನಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ತನಕ ಒಂದು ಹಂತ. ನಂತರ ಬಸ್‌ ಲೈಟ್‌ ಆಫ್ ಮಾಡಿಬಿಡುತ್ತಾರಲ್ಲ? ಆಗ ಕೆಲವು ಗಂಡಸರ "ವಾಸನಾ' ವ್ಯಕ್ತಿತ್ವದ ಅನಾವರಣ...

  • ಟ್ರ್ಯಾಕ್‌ ಪ್ಯಾಂಟ್‌ ಅಥವಾ ಶರ್ಟ್‌ಗಳನ್ನು ಈ ಮೊದಲು ಕ್ರೀಡೆ, ಜಾಗಿಂಗ್‌ ಅಥವಾ ಯೋಗಾಸನ ತರಗತಿಗೆ ಹೋಗುವಾಗ ತೊಡುವ ಪದ್ಧತಿ ಇತ್ತು. ಆದರೆ, ಈಗ ಟ್ರ್ಯಾಕ್‌ಸೂಟ್‌ನಲ್ಲಿಯೇ...

  • ರಾತ್ರಿ ಊಟಕ್ಕೆ ಎಲ್ಲರಿಗೂ ಹೊಸದಾಗಿ ಊರಿಂದ ತಂದ ಮಾವಿನ ಮಿಡಿ ಉಪ್ಪಿನಕಾಯಿ, ಕೊಬ್ಬರಿಎಣ್ಣೆ ಹಾಕಿಕೊಂಡು ಅನ್ನಕ್ಕೆ ಕಲೆಸಿ ತಿನ್ನುವ ಹುಕಿ. ಈರುಳ್ಳಿ ಹೆಚ್ಚಿಕೊಡು...

  • ಹೆಣ್ಣು ಮಕ್ಕಳ ಪಾಲಿಗೆ ರಾತ್ರಿ ಪ್ರಯಾಣ ಯಾವತ್ತಿಗೂ ಆತಂಕದ ವಿಷಯವೇ. ಸರಿಯಾದ ಸಮಯಕ್ಕೆ ಬಸ್‌ ಬರದಿದ್ದರೆ, ನಿಲ್ದಾಣದಲ್ಲಿ ಯಾರಾದರೂ ಹಲ್ಲೆ ಮಾಡಿದರೆ, ಬಸ್‌ನಲ್ಲಿ...

ಹೊಸ ಸೇರ್ಪಡೆ