ಹುಡುಗರೇಕೆ ಹಾಗೆ? ಅಕ್ಕ ಹೇಳಿದ ಹಸಿ ಸತ್ಯಗಳು

Team Udayavani, Nov 8, 2017, 6:30 AM IST

hudugaru.jpg

ನಿಜಕ್ಕೂ ಕೆಲವು ಗಂಡಸರಿಗೆ ಬೇಕಾಗಿರೋದು ಏನು? ಮನಸ್ಸು ಅನ್ನೋದು ಅವರಿಗೆ ಇರೋದೇ ಇಲ್ವಾ? ಅಷ್ಟಕ್ಕೂ ಇಂಥವರಿಗೆಲ್ಲಾ ಮನೇಲಿ ಅಕ್ಕ ತಂಗಿ ಇರೋದಿಲ್ವಾ? ನೀನೇ ಹೇಳು? ಅಂತ ಅಕ್ಕ ಪ್ರಶ್ನಿಸುತ್ತಿದ್ದಳು…

ಅವಳು ಫೇಸ್‌ಬುಕ್ಕಲ್ಲಿ ಯಾರ ಫೋಟೋಗಳಿಗೆ ಲೈಕ್‌ ಒತ್ತುತ್ತಾಳೆ? ಯಾವುದಕ್ಕೆ ಕಮೆಂಟ್‌ ಹಾಕ್ತಾಳೆ? ಏನಂತ ಕಮೆಂಟ್‌ ಹಾಕ್ತಾಳೆ? ಯಾರ ಕಮೆಂಟ್‌ಗಳಿಗೆ ರಿಪ್ಲೆ„ ಮಾಡ್ತಾಳೆ? ಯಾರು ಫೇಸ್‌ಬುಕ್ಕಲ್ಲಿ ಲೈವ್‌ ಆಗಿದ್ದಾಗ ಅವಳೂ ಲಾಗಿನ್‌ ಆಗ್ತಾಳೆ? ಯಾರಿಗೆ ಮೆಸೇಜ್‌ ಮಾಡ್ತಾಳೆ? ಇವೆಲ್ಲಾ ಕೆಲಸಗಳನ್ನು ಮಾಡೋ ಸಾವಿರಾರು ಜನ ನಮ್ಮ ನಡುವಿದ್ದಾರೆ. ಇಂಥವರು “ನೀವು ಅವರಿಗೆ ಮೆಸೇಜ್‌ ಮಾಡ್ತೀರಾ, ನಂಗ್ಯಾಕೆ ಮಾಡೋದಿಲ್ಲ??!’, “ಇವರಿಗೆ ಮಾಡ್ತೀರಂತೆ?’, “ನಾನು ನಿಮ್ಗೆ ಲೈಕ್‌ ಅಗೋದಿಲ್ವಾ?’ ಅಂತೆಲ್ಲಾ ಏನೇನೋ ತೀರಾ ರೇಜಿಗೆ ಹುಟ್ಟಿಸುವಷ್ಟು, ಅಸಹ್ಯ ಅನ್ನಿಸುವಷ್ಟು ಥರಾವರಿ ಪ್ರಶ್ನೆಗಳನ್ನು ಕೇಳ್ತಾರೆ. ಅಂಥವರನ್ನೆಲ್ಲಾ ಒಂದೋ, ಎರಡೋ ಸಾರಿ ಬ್ಲಾಕ್‌ ಮಾಡಿದ್ರೂ ಪದೇಪದೆ ಬೇರೆ ಬೇರೆ ಅಕೌಂಟಲ್ಲಿ, ಗೊತ್ತೇ ಆಗದಂತೆ ನಮ್ಮ ಪ್ರೊಫೈಲ್‌ಗೆ ಇಣುಕಿ ಬಿಟ್ಟಿರುತ್ತಾರೆ. ಜೀವ ಹಿಂಡುತ್ತಿರುತ್ತಾರೆ.

ಅವಳು ವಾಟ್ಸಾಪ್‌ನಲ್ಲಿ ಯಾವ ಪ್ರೊಫೈಲ್‌ ಫೋಟೋ ಹಾಕಿದ್ದಾಳೆ? ಯಾಕೆ ಆ ಫೋಟೋ ಹಾಕಿದ್ದಾಳೆ? ಅವಳ ಸ್ಟೇಟಸ್‌ ಏನಿದೆ? ಅದರ ಹಿನ್ನೆಲೆ ಏನು? ಅವಳು ಎಷ್ಟೊತ್ತಿಗೆ ಅನ್‌ಲೈನಲ್ಲಿರ್ತಾಳೆ? ಯಾರಿಗೆ ಮೆಸೇಜು ಮಾಡುತ್ತಿದ್ದಾಳೆ? ಹೀಗೆ ಸ್ನೇಹ, ಸಂಬಂಧ, ಗುರುತು ಏನೂ ಇಲ್ಲದಿದ್ದರೂ ನಮ್ಗೆ ಅವರಿಗೆ ಏನೂ ಲಿಂಕೇ ಇಲ್ಲದಿದ್ದರೂ ಇದನ್ನೆಲ್ಲಾ ವಿಚಾರಿಸುತ್ತಾ ಚರ್ಚೆಗಿಳಿದುಬಿಡುವ ಭೂಪರ ಸಂಖ್ಯೆ ಇಂದು ಹೆಚ್ಚಾಗುತ್ತಿದೆ. ಈ ಕೆಟಗರಿಯವರು ಜೊಲ್ಲು ಸುರಿಸುತ್ತಾ ತಮ್ಮ ಚಪಲ ತೀರಿಸಿಕೊಳ್ಳಲು ಯಾವೋಳಾದ್ರೂ ಸಿಕ್ತಾಳೇನೋ ಅಂತ ಸದಾ ಕಾಯುತ್ತಿರುತ್ತಾರೆ.

ಇವತ್ತು ಯಾರನ್ನೂ ಬಿಟ್ಟುಕೊಡೋಕೇ ಆಗದ, ಹಳೇ ನಂಬಿಕೆ ಮತ್ತಿವತ್ತಿನ ಪ್ರಸ್ತುತತೆಯನ್ನು ಬೇಡ ಅನ್ನಲೂ ಆಗದ, ಒಂದೆಡೆ ಅಧುನಿಕ, ಇನ್ನೊಂದೆಡೆ ಮಾರ್ಯಾದೆ ಅನ್ನೋ ಚಿತ್ರ ಸಂಕಟದ ಸ್ಥಿತಿಯ ನನ್ನಂಥ ಹೆಣ್ಮಕ್ಕಳು ಅಫೀಸಿನ ಕೆಲಸ, ಮನೆಗೆಲಸ ಅದೂ ಇದು ಅಂತ ನೂರಾರು ವೈಯಕ್ತಿಕ ಮತ್ತು ವೃತ್ತಿಯ ಜಂಜಾಟಗಳ ನಡುವೆ ಮನಸ್ಸಿಗೊಂದು ರಿಲ್ಯಾಕ್ಸ್‌ ಸಿಗಲಿ, ಹಳೆಯ ಫ್ರೆಂಡ್‌ಗಳದ್ದೆಲ್ಲಾ ಕಾಂಟ್ಯಾಕ್ಟ್ಗಳಿರಲಿ, ನನ್ನದೂ ಅಂತ ಒಂದು ಐಡೆಂಟಿಟಿ ಇರಲಿ, ನನ್ನ ನಡುವೆಯೂ ಎಲ್ರೂ ಇರಲಿ ಅಂತ ಹೇಳ್ಳೋ ಮನಸ್ಸಿನ ತೀರಾ ಸಹಜ ಆಸೆಗಳಿಂದ ಫೇಸ್‌ಬುಕ್‌, ವಾಟ್ಸಾéಪ್‌ ಮೊದಲಾದವುಗಳ ಅಕೌಂಟನ್ನು ಇಟ್ಟುಕೊಂಡಿದ್ದೇವೆ. ಆದರೆ, ಇವತ್ತು ನಮ್ಮ ಮತ್ತಷ್ಟು ಹೊಸ ತರದ ಗೋಳುಗಳಿಗೆ ಕಾರಣವಾಗುತ್ತಿದೆ. ಸಂಬಂಧಿಕರು, ಸಹೋದ್ಯೋಗಿಗಳು, ಪರಿಚಿತರು ನಮ್ಮ ಸ್ನೇಹವಲಯಗಳಲ್ಲಿ ಇರಲೇಬಾರದಿತ್ತು ಅಂತಲೂ ಒಮ್ಮೊಮ್ಮೆ ಅನ್ನಿಸೋದಿದೆ.

ನಿಮಿಷಕ್ಕೊಮ್ಮೆ ಹಾಕಿದ ಡ್ರೆಸೊÕà, ಉಟ್ಟ ಸೀರೆಯೋ ಸರಿಪಡಿಸಿಕೊಳ್ತಾ ಎದೆಗೂಡು ಕಾಣಿಸದಂತೆ ಇಣುಕು ದೃಷ್ಟಿ ತಪ್ಪಿಸಿಕೊಳ್ಳುವ ಸರ್ಕಸ್ಸುಗಳ ನಡುವೆ ತುಂಬಾ ಸೂಕ್ಷ್ಮವಾಗಿ ಬದುಕಬೇಕಾಗಿರುವವರು ನಾವು. ಬಸ್ಸಿನಲ್ಲಿ ನಮ್ಮ ಪಕ್ಕವೇ ಕುಳಿತು, ಮೈ ಸ್ಪರ್ಶಿಸಿ ಮನರಂಜನೆ ತೆಗೆದುಕೊಳ್ಳುವವರಿಗೆ ಹೆಣ್ಣಿನ ಕಷ್ಟಗಳು ಅರಿವಾಗೋಲ್ಲ. ಇಷ್ಟೆಲ್ಲದರ ನಡುವೆ ಆರೋಪಗಳು ಬೇರೆ; “ಪ್ರತೀ ಹೆಣ್ಣು ತನ್ನ ಯಶಸ್ಸಿಗೆ ತನ್ನನ್ನೇ ಬಂಡವಾಳ ಮಾಡಿಕೊಳ್ತಾಳೆ, ಹೆಣ್ಣು ಸಕ್ಸಸ್‌ ಆಗೋದೇ ಹೆಣ್ಣು ಎನ್ನುವ ಕಾರಣಕ್ಕೆ’ ಅಂತ ಯಾವಾಗ್ಲೂ ಅನ್ಕೊಳ್ಳೋರು, “ನಿಮಗೇನ್ರಿ, ಯಾರು ಬೇಕಾದ್ರೂ ಹೆಲ್ಪ್ ಮಾಡ್ತಾರೆ’ ಅಂತ ಹೇಳಿ ಯಾವತ್ತಿಗೂ ಹೆಣ್ಣೊಬ್ಬಳ ಯಶಸ್ಸಿನ ಕ್ರೆಡಿಟ್ಟನ್ನು ಬೇರೊಬ್ಬರಿಗೆ ವರ್ಗಾಯಿಸುತ್ತಲೇ ಇರುತ್ತಾರೆ.

ನಿಜಕ್ಕೂ ಕೆಲವು ಗಂಡಸರಿಗೆ ಬೇಕಾಗಿರೋದು ಏನು? ಮನಸ್ಸು ಅನ್ನೋದು ಅವರಿಗೆ ಇರೋದೇ ಇಲ್ವಾ? ಅಷ್ಟಕ್ಕೂ ಇಂಥವರಿಗೆಲ್ಲಾ ಮನೇಲಿ ಅಕ್ಕ ತಂಗಿ ಇರೋದಿಲ್ವಾ? ಹೋಗಲಿ ಗೆಳತಿನೂ ಇರೋದಿಲ್ವಾ? ಅವರ ತಂಗಿಗೋ, ಅಕ್ಕಂಗೋ, ಗೆಳತಿಗೋ ಈ ರೀತಿಯ ಕೆಟ್ಟ ಅನುಭವಗಲಾಗಿದ್ರೆ ಸುಮ್ನೆ ಇರ್ತಾ ಇದ್ರಾ? ಏನೇನೋ ಮಾಡೋವಾಗ ಅವರುಗಳ ಮನಸ್ಸಲ್ಲಿ ಪ್ರಶ್ನೆ ಬರೋದೇ ಇಲ್ವಾ? ನೀನೇ ಹೇಳು, ನಮೂY ಅವರಂತೆಯೇ ಮನಸ್ಸಿದೆ ಅಂತ ಅವರಿಗೆಲ್ಲಾ ಯಾಕೆ ಅರ್ಥವಾಗೋದಿಲ್ವೋ? ನಮ್ಗೆ ಭಾವನೆಗಳೇ ಇಲ್ವೇನೋ?

ನಮ್ಮ ಈ ಎಲ್ಲಾ ಸಂಕಟಗಳು ನಿನ್ನ ಗಣಿತದ ಯಾವ ಪ್ರಾಬ್ಲಿಮ್‌ಗಳಲ್ಲಿ, ಕೆಮಿಸ್ಟ್ರಿಯ ಯಾವ ರಿಯಾಕ್ಷನ್‌ಗಳಲ್ಲಿ, ಪಿಸಿಕ್ಸಿನ ಯಾವ ಈಕ್ವೇಷನ್‌ಗಳಲ್ಲಿ, ಬಯಾಲಜಿಯ ಯಾವ ಅಂಗಾಂಶಗಳಲ್ಲಿದೆ? ಸುಮ್ಮನೆ ಅದುಮಿಟ್ಟುಕೊಂಡು ಸಹಿಸಿಕೊಳ್ಳಬೇಕಾದ ಇವುಗಳಿಗೆಲ್ಲಾ ಯಾವ ಪ್ರೊಫೆಸರನ ಡಾಕ್ಟರೇಟ್‌ ಉತ್ತರ ಕೊಡಬಲ್ಲದು? ಇದನ್ನೆಲ್ಲಾ ಹಿಂಸೆಯ ಯಾವ ವರ್ಗಕ್ಕೆ ಸೇರಿಸೋಣ? ಎಂದು ಹಸಿಹಸಿ ಸತ್ಯಗಳನ್ನು ಪುಟ್ಟಿ ಅಕ್ಕ ಬಿಚ್ಚಿಡುತ್ತಿದ್ದರೆ ಅವಳ ಮಾತುಗಳಿಗೆ ಉತ್ತರಿಸಲು ನನ್ನಲ್ಲಿ ಪದಗಳೇ ಇರಲಿಲ್ಲ.
– – –
ಗೆಳೆಯರೇ, ಇದನ್ನು ಗಮನಿಸಿ…
– ಹುಡುಗಿ ಸಲುಗೆ ಕೊಡ್ತಾಳೆ ನಿಜ. ಆದರೆ, ಅದು ಸ್ವೇಚ್ಛಾಚಾರವಲ್ಲ.
– ಆಕೆಗೆ ಸಾಧನೆಯ ಶಿಖರ ಏರೋದು ಗೊತ್ತು. ಅದಕ್ಕೆ ಆಕೆಯ ಶ್ರಮದ ಮೆಟ್ಟಿಲು ಸಾಕು. ನಮ್ಮ ಅನುಕಂಪದ ಏಣಿ ಬೇಡ.
– ಹೆಣ್ಣನ್ನು ಟೀಕಿಸುವ ಮುನ್ನ, ನಮ್ಮ ಅಕ್ಕ, ತಂಗಿ, ಗೆಳತಿಯರನ್ನು ಕಣ್ಮುಂದೆ ತಂದುಕೊಳ್ಳೋಣ.
– ಹೆಣ್ಣನ್ನು ಅವಳು ಹಾಗೆ, ಹೀಗೆ ಅಂತ ಸಾರ್ವಜನಿಕವಾಗಿ ಅಂದಾಜಿಸುವ ಪ್ರವೃತ್ತಿ ಬೇಡ.
– ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯವಾಗಿ ಹುಡುಗಿಯರ ಪ್ರೊಫೈಲ್‌ ಇಣುಕುವುದು, ಅವರ ಬಗ್ಗೆ ಇನ್ನಿಲ್ಲದಂತೆ ತಲೆಕೆಡಿಸಿಕೊಳ್ಳೋದು ಸಭ್ಯ ಲಕ್ಷಣವಲ್ಲ.

– ನಾಗರಾಜ ಕೂವೆ

ಟಾಪ್ ನ್ಯೂಸ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.