ರಂಗು ರಂಗಿನ ಮೆಹಂದಿ


Team Udayavani, Jan 20, 2017, 3:45 AM IST

Mehndi.jpg

ಮೆಹಂದಿಯನ್ನು ಗೋರಂಟಿ ಅಥವಾ ಹೆನ್ನಾ ಅಂತಲೂ ಕರೆಯುತ್ತಾರೆ. ತಂಪು ಗುಣ ಹೊಂದಿರುವ ಈ ಗೋರಂಟಿ, ಹಿತ್ತಲಲ್ಲಿ, ಬೇಲಿಯ ಭಾಗದಲ್ಲೋ ಅಂಗಳದ ಆವರಣದಲ್ಲಿಯೋ ಸರ್ವೇಸಾಮಾನ್ಯವಾಗಿ ಕಾಣಸಿಗುವ ಮದರಂಗಿ ಗಿಡ. ಗೋರಂಟಿಯನ್ನು  ಹಿಂದೆ ಮದುವೆ ಸಮಾರಂಭದಲ್ಲಿ ಹೆಣ್ಮಕ್ಕಳು ಹೆಚ್ಚಾಗಿ ಹಚ್ಚಿಕೊಳ್ಳುತ್ತಿದ್ದರು. ಇದನ್ನು ಶುಭ ಸಂಕೇತವೆಂದೂ ನಂಬಲಾಗಿದೆ. ಹಾಗಾಗಿಯೇ ಈಗಲೂ ಮದುವೆ ಸಮಾರಂಭದಲ್ಲಿ ಮದರಂಗಿ ತನ್ನದೇ ಆದ ಮಹತ್ವವನ್ನು ಪಡೆದಿದೆ. ಮದುಮಗಳ ಶೃಂಗಾರ ಮದರಂಗಿ ಅಲಂಕಾರವಿಲ್ಲದೇ ಪೂರ್ಣವಾಗದು. ಇಂದು ಮದುವೆಯಲ್ಲಿ ಹಲವಾರು ಸಂಪ್ರದಾಯದ ಜೊತೆಗೆ ಮೆಹಂದಿ ಸಮಾರಂಭಕ್ಕೆಂದೇ ಒಂದು ದಿನ ಮೀಸಲಾಗಿದೆ !

ಮೊದಲೆಲ್ಲ ಮದರಂಗಿ ಮಾರುಕಟ್ಟೆಯಲ್ಲಿ ದೊರೆಯುತ್ತಿರಲ್ಲಿಲ್ಲ. ಹೆಂಗಳೆಯರು ಗೋರಂಟಿ ಎಲೆಗಳನ್ನು ನುಣ್ಣಗೆ ಅರೆದು ಅದಕ್ಕೆ ಚಹಾದ ಡಿಕಾಕ್ಷನ್‌, ನಿಂಬೆರಸ ಸೇರಿಸಿ ಮದರಂಗಿ ತಯಾರಿಸುತ್ತಿದ್ದರು. ಇಂದಿನಂತೆ ಆಗ ವೈವಿಧ್ಯಮಯ ಚಿತ್ತಾರಗಳೂ ಇರಲಿಲ್ಲ. ಒಂದು ಕಡ್ಡಿಯನ್ನು ಅರೆದ ಮೆಹಂದಿಯಲ್ಲಿ ಅದ್ದಿ ಅಂಗೈ ತುಂಬಾ ಸಣ್ಣ ಸಣ್ಣ ಚುಕ್ಕೆಗಳನ್ನಿಟ್ಟರೆ ಚಿತ್ತಾರ ಪೂರ್ತಿವಾಗುತ್ತಿತ್ತು. ರಾತ್ರೆಯೆಲ್ಲ ಅದನ್ನು ಕೈಗಳಿಗೆ ಹಾಗೆಯೇ ಇರಿಸಿ ಬೆಳಗ್ಗೆಯೇ ತೊಳೆದುಕೊಳ್ಳುವುದು. ಆದರೀಗ ಅಷ್ಟೆಲ್ಲ ಕಷ್ಟಪಡಬೇಕಾಗಿಲ್ಲ. ಮಾರುಕಟ್ಟೆಯಲ್ಲಿ ಕೋನ್‌ಗಳಲ್ಲಿ ಮೆಹಂದಿ ಸಿಗುತ್ತದೆ. ಹಚ್ಚಿಕೊಂಡರೆ ಕೆಲವು ನಿಮಿಷಗಳಲ್ಲೇ ರಂಗು ಮೂಡುತ್ತದೆ!

ಇಂದು ಮೆಹಂದಿಯ ಜಾಗದಲ್ಲಿ ಫ್ಯಾಶನ್‌ ಆಗಿ ಹಲವು ರೀತಿಯ ಟ್ಯಾಟೆೋಗಳು ಬಂದರೂ, ಮೆಹಂದಿ ಸಾಂಪ್ರದಾಯಿಕವಾಗಿಯೂ, ಆಧುನಿಕವಾಗಿಯೂ ಈಗಲೂ ತನ್ನ ಮಹತ್ವವನ್ನು ಉಳಿಸಿಕೊಂಡಿದೆ. ವಿಶೇಷ ದಿನಗಳಲ್ಲಿ ಮಕ್ಕಳಿಂದ ಹಿಡಿದು ಎಲ್ಲ ವಯಸ್ಸಿನ ಮಹಿಳೆಯರೂ ಮೆಹಂದಿ ಹಾಕಿಸಿಕೊಂಡು ಆನಂದಿಸುವುದನ್ನು ಕಾಣುತ್ತೇವೆ.

ಮೆಹಂದಿಯಲ್ಲಿ ಇಂದು ವೈವಿಧ್ಯಮಯ ಚಿತ್ತಾರಗಳು ಮೂಡಿಬಂದಿವೆ. ಹಾಗಾಗಿಯೇ ಮೆಹಂದಿಯ ಸುಂದರ ಚಿತ್ತಾರಕ್ಕೆ ಮರುಳಾಗದವರೇ ಇಲ್ಲ ! ಮೆಹಂದಿಯಲ್ಲಿ ಬ್ರೈಡಲ್‌ ಮೆಹಂದಿ ಡಿಸೈನ್‌, ಇಂಡಿಯನ್‌ ಮೆಹಂದಿ ಡಿಸೈನ್‌, ಅರೇಬಿಕ್‌ ಮೆಹಂದಿ ಡಿಸೈನ್‌, ಮೊಘಲ್‌ ಮೆಹಂದಿ ಡಿಸೈನ್‌- ಹೀಗೆ ಹಲವು ಡಿಸೈನ್‌ಗಳಿವೆ. ಮಲ್ಟಿ ಕಲರ್‌ ಮೆಹಂದಿ ಡಿಸೈನ್‌ ಸಹ ಇದೆ. ಇದು ಫ್ಯಾಶನಬಲ್‌ ಮೆಹಂದಿ.

ಮೆಹಂದಿಯ ಔಷಧೀಯ ಗುಣಗಳು
ಮೆಹಂದಿ ಕೇವಲ ಅಂದಚೆಂದ, ಸೌಂದರ್ಯ ವರ್ಧಿಸುವ ಸೌಂದರ್ಯವರ್ಧಕವಾಗಿ ಮಾತ್ರ ಬಳಸಲಾಗುತ್ತಿಲ್ಲ. ಮೆಹಂದಿ ಗಿಡದ ಎಲೆಗಳಲ್ಲೂ ಹಲವಾರು ಔಷಧೀಯ ಗುಣಗಳಿವೆ. ಮುಖ್ಯವಾಗಿ ಪಿತ್ತಶಾಮಕ, ಶೀತಲಗುಣ ಹೊಂದಿರುವ ಈ ಮೂಲಿಕೆಯು ಕಫ‌ಹರವೂ ಹೌದು. ಇದನ್ನು ತಲೆಯ ಕೂದಲಿಗೆ ಬಣ್ಣವಾಗಿ ಹಚ್ಚಲೂ ಬಳಸುತ್ತಾರೆ. ಗೋರಂಟಿಯನ್ನು ತಲೆಗೆ ಹಚ್ಚಿಕೊಳ್ಳುವುದರಿಂದ ತಲೆಯ ಹೊಟ್ಟು ಹಾಗೂ ಉದುರುವ ಕೂದಲನ್ನು ತಡೆದು, ಕೂದಲು ಸಮೃದ್ಧಿಯಾಗಿ ಬೆಳೆಯಲು ನೆರವಾಗುತ್ತದೆ. ಮನೆಯಲ್ಲೇ ಗೋರಂಟಿಯ ಎಲೆಗಳ ರಸಕ್ಕೆ ಕೊಬ್ಬರಿ ಎಣ್ಣೆ ಬೆರೆಸಿ ಕುದಿಸಿ, ನೀರು ಇಂಗಿದ ಬಳಿಕ ಸೋಸಿ, ಬಾಟಿÉಯಲ್ಲಿ ತುಂಬಿಸಿಟ್ಟು ನಿತ್ಯ ತಲೆಯ ಕೂದಲಿಗೆ ಲೇಪಿಸಿದರೆ ಕೂದಲಿಗೂ ಉತ್ತಮ ಕಂಡೀಷನರ್‌, ಕೂದಲೂ ಸೊಂಪಾಗಿ ಬೆಳೆಯುತ್ತದೆ ಜೊತೆಗೆ ಪಿತ್ತಾಧಿಕ್ಯತೆಯ ತಲೆನೋವು ಶಮನವಾಗುತ್ತದೆ, ನಿದ್ರಾಹೀನತೆಗೂ ಉತ್ತಮ ಮನೆಮದ್ದು. ಮೆಹಂದಿಯನ್ನು ಹಚ್ಚಿದ್ರೆ ಸಾಕಾಗೊಲ್ಲ, ಅದು ಸರಿಯಾಗಿ ಬಣ್ಣ ಬಿಡಬೇಕು. ಎಲ್ಲ ಡಿಸೈನ್‌ ಸರಿಯಾಗಿ ಮೂಡಬೇಕು. ಅದಕ್ಕಾಗಿ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.

ಮೆಹಂದಿ ಹಚ್ಚಿದ ನಂತರ ಅದರ ನಿರ್ವಹಣೆ
.ಮೆಹಂದಿ ಹಚ್ಚಿದ ನಂತರ ಬಟ್ಟೆಗೆ ಮೆಹಂದಿ ತಾಗದಂತೆ ಎಚ್ಚರ ವಹಿಸಬೇಕು.
.ಮೆಹಂದಿ ಹಚ್ಚುವಾಗ ಪಕ್ಕದಲ್ಲಿ ಒಂದು ಕಾಟನ್‌ ಬಟ್ಟೆಯನ್ನು ಇಟ್ಟುಕೊಳ್ಳಬೇಕು. ಡಿಸೈನ್‌ ತಪ್ಪಿದಾಗ ಬಟ್ಟೆಯಿಂದ ಒರೆಸಿ ಮತ್ತೂಮ್ಮೆ ಹಾಕಿಕೊಳ್ಳಲು ಸುಲಭವಾಗುತ್ತದೆ.
.ಮೆಹಂದಿ ಹಚ್ಚಿಕೊಳ್ಳುವ ಮುನ್ನ ಕೈಯಲ್ಲಿರುವ ಎಣ್ಣೆ ಮತ್ತು ಜಿಡ್ಡಿನಂಶ ಹೋಗುವಂತೆ ಕೈಯನ್ನು ಸೋಪಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು.
.ಮೆಹಂದಿ ಹಚ್ಚಿದ ನಂತರ ಕನಿಷ್ಠ ಐದರಿಂದ ಆರು ಗಂಟೆಗಳ ಕಾಲ ಮೆಹಂದಿ ಹಚ್ಚಿ ಹಾಗೆ ಬಿಡಬೇಕು.
.ಮೆಹಂದಿ ವಿನ್ಯಾಸವನ್ನು ಸ್ವಲ್ಪ ದಪ್ಪ ಎಳೆಯಲ್ಲಿ ಹಾಕಿದರೆ ಒಳ್ಳೆಯದು, ಆಗ ಮೆಹಂದಿ ಬೇಗ ಮಾಸುವುದಿಲ್ಲ.
.ಮೆಹಂದಿ ಹಚ್ಚಿಕೊಂಡು ಅದು ಒಣಗುವ ಹಂತಕ್ಕೆ ಬಂದಾಗ ಸಕ್ಕರೆ ಮತ್ತು ಲಿಂಬೆಹಣ್ಣಿನ ರಸವನ್ನು ಸಮನಾಗಿ ಮಿಶ್ರಣ ಮಾಡಿ ಸ್ವಲ್ಪ ಮಟ್ಟಿಗೆ ಬೆಚ್ಚಗೆ ಕಾಯಿಸಿ ಮೆಹಂದಿ ಹಚ್ಚಿದ ಭಾಗಕ್ಕೆ ಚಿಮುಕಿಸಿ. ಅರ್ಧ ಗಂಟೆಗೊಂದು ಸಾರಿ ಈ ರೀತಿ ಮಾಡುತ್ತಿದ್ದರೆ ಮೆಹಂದಿಯ ಬಣ್ಣ ಗಾಢವಾಗುತ್ತದೆ.
.ಮೆಹಂದಿ ಹಚ್ಚಿಕೊಂಡ ನಂತರ ಅದು ಆರಿದ ಮೇಲೆ ಅದನ್ನು ನಿಧಾನವಾಗಿ ಕೆರೆದು ತೆಂಗಿನೆಣ್ಣೆ ಹಚ್ಚಬೇಕು. ಇದರಿಂದ ಕೂಡ ಗಾಢ ವರ್ಣ ಬರುತ್ತದೆ.
.ಮದುಮಗಳಿಗೆ ಮದುವೆ ಒಂದೆರಡು ದಿನ ಮೊದಲೇ ಮೆಹಂದಿ ಹಾಕಿದರೆ ಅದರ ಬಣ್ಣ ತೆಳು ಕಿತ್ತಳೆಯಿಂದ, ಕಡುಕೆಂಪು ಬಣ್ಣಕ್ಕೆ ತಿರುಗುತ್ತದೆ.
.ಮೆಹಂದಿ ಹಚ್ಚಿಕೊಂಡ ನಂತರ ಒಂದು ದಿನದ ಮಟ್ಟಿಗೆ ಮೆಹಂದಿ ಹಾಕಿದ ಭಾಗವನ್ನು ಸೋಪು ಹಾಕಿ ತೊಳೆಯಬಾರದು. 

– ಸ್ವಾತಿ

ಟಾಪ್ ನ್ಯೂಸ್

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.