ಅಂದದ ಮೊಗಕೆ ಚೆಂದದ ಮೂಗುತಿಗಳು


Team Udayavani, Mar 30, 2018, 7:30 AM IST

16.jpg

1 ಫ್ಲೋರಲ್‌ ಕ್ಲಿಪ್‌ (ನೋಸ್‌ ರಿಂಗಿನ ಮೇಲೆ): ತೆಳುವಾದ ರಿಂಗುಗಳ ಮೇಲೆ ಫ್ಲೋರಲ್‌ ಡ್ರಾಪ್ಲೆಟ್ಟುಗಳು ಇದ್ದು ತೆಳುವಾದ ಪರ್ಲ್ ಚೈನ್‌ ಅನ್ನು ಒಳಗೊಂಡಿರುತ್ತವೆ. ಹರಳುಗಳನ್ನು ಹೂವುಗಳ ಮಾದರಿಯಲ್ಲಿ ಜೋಡಿಸಲಾಗಿರುತ್ತದೆ. ಇವುಗಳು ಪ್ರಸ್ಸೇಬಲ್ ಮತ್ತು ಮೂಗಿನ ರಂಧ್ರದಲ್ಲಿ ಫಿಕ್ಸ್ ಆಗುವಂತಹ ಬಗೆಗಳು ಎರಡೂ ರೀತಿಯಲ್ಲಿ ದೊರೆಯುತ್ತವೆ. 

2 ಮಹರಾಷ್ಟ್ರೀ ನತ್ತುಗಳು:  ಮಹಾರಾಷ್ಟ್ರದ ಸಾಂಪ್ರದಾಯಿಕ ಮೂಗುತಿಗಳು ಇವಾಗಿದ್ದು ಪರ್ಲುಗಳು ಮತ್ತು ಸ್ಟೋನುಗಳಿಂದ ಅಲಂಕೃತಗೊಂಡಿರುತ್ತವೆ. ಸಾಂಪ್ರದಾಯಿಕ ಉಡುಪುಗಳೊಂದಿಗೆ ಈ ಬಗೆಯ ನತ್ತುಗಳು ಆಕರ್ಷಕವಾದ ಲುಕ್ಕನ್ನು ನೀಡುತ್ತವೆ. ಕೇವಲ ಸಾಂಪ್ರದಾಯಿಕ ಉಡುಪುಗಳಿಗಷ್ಟೇ ಸೀಮಿತವಾಗಿರದ ಈ ನತ್ತುಗಳು ಇಂಡೋ ವೆಸ್ಟರ್ನ್ ಫ್ಯೂಷನ್‌ ದಿರಿಸುಗಳೊಂದಿಗೂ ಕೂಡ ಧರಿಸಬಹುದು. ಲೆಹೆಂಗಾ, ಗಾಗ್ರಾಗಳೊಂದಿಗೆ ಈ ಬಗೆಯ ನತ್ತುಗಳನ್ನು ಧರಿಸಬಹುದಾಗಿದೆ. ರೇಷ್ಮೆ ಸೀರೆಗಳೊಂದಿಗೆ ನತ್ತುಗಳು ಅತ್ಯುತ್ತಮವಾದ ಕಾಂಬಿನೇಷನ್‌ ಆಗಿದೆ. 
 
3 ಕುಂದನ್‌ ನೋಸ್‌ ರಿಂಗುಗಳು: ಕುಂದನ್‌ ಹಾರಗಳು, ಕುಂದನ್‌ ಕಿವಿಯಾಭರಣಗಳು ಮತ್ತು ಕುಂದನ್‌ ಹೇರ್‌ ಜ್ಯುವೆಲ್ಲರಿಗಳನ್ನು ಧರಿಸಿದಾಗ ಮ್ಯಾಚ್‌ ಆಗುವಂತೆ ಕುಂದನ್‌ ನೋಸ್‌ ರಿಂಗುಗಳನ್ನು ಧರಿಸಬಹುದು. ಕುಂದನ್ನುಗಳಿಂದ ಅಲಂಕೃತಗೊಂಡ ಈ ಬಗೆಯ ನೋಸ್‌ ರಿಂಗುಗಳು ನಿಮ್ಮ ಬ್ರೈಡಲ್ ಲುಕ್ಕನ್ನು ಗ್ರ್ಯಾಂಡ್‌ ಆಗಿಸುತ್ತವೆ. ಗೋಲ್ಡ್ ಪ್ಲೇಟೆಡ್‌ ರಿಂಗುಗಳು ಬ್ರೈಡಲ್ ದಿರಿಸನ್ನು ಸುಂದರಗೊಳಿಸುತ್ತವೆ. ಡ್ರಮ್ಯಾಟಿಕ್‌ ಲುಕ್ಕನ್ನು ಕೊಡುವ ಇವುಗಳು ಮದುವಣಗಿತ್ತಿಯ ಅಂದವನ್ನು ಹೆಚ್ಚಿಸುತ್ತವೆ.

4 ಓವರ್‌ ಸೈಸ್ಡ್ (ದೊಡ್ಡದಾದ) ನೋಸ್‌ ರಿಂಗುಗಳು: ಹೆಸರೇ ಹೇಳುವಂತೆ ಸ್ವಲ್ಪ ಗಾತ್ರದಲ್ಲಿ ದೊಡ್ಡದಾದ ರಿಂಗುಗಳಿವಾಗಿದ್ದು ತೆಳುವಾದ ಸ್ಟ್ರಿಂಗ್‌ ರಿಂಗಿನೊಡನೆ ಸೇರಿರುತ್ತವೆ. ರಿಂಗುಗಳ ಗಾತ್ರವೇ ಇವುಗಳ ವಿಶೇಷತೆಯಾಗಿರುತ್ತದೆ. ಇವುಗಳು ಗೋಲ್ಡ್ ಪ್ಲೇಟೆಡ್‌ ಮತ್ತು ಬ್ಲ್ಯಾಕ್‌ ಮೆಟಲ್ಲುಗಳಲ್ಲಿಯೂ ದೊರೆಯುತ್ತವೆ. ಬ್ರೈಡಲ್ ವೇರುಗಳಿಗೆ ಹೇಳಿಮಾಡಿಸಿದಂತಿರುತ್ತವೆ.
  
5 ಕುಂದನ್‌ ನತ್ತು (ಚೈನ್‌ ಇಲ್ಲದೆ): ಇವುಗಳನ್ನು ಬ್ರೈಡಲ್ ದಿರಿಸುಗಳೊಂದಿಗೆ, ಫ್ಯೂಷನ್‌ವೇರುಗಳೊಂದಿಗೆ ಮತ್ತು ಸೆಮಿ-ಕ್ಯಾಷುವಲ್ವೇರುಗಳೊಂದಿಗೂ ಬಹಳ ಚೆನ್ನಾಗಿ ಹೊಂದುತ್ತವೆ. ಕುಂದನ್ನುಗಳಿಂದ ಆವೃತವಾದ ನತ್ತುಗಳು ದೊರೆಯುತ್ತವೆ. ಸೆಲೆಬ್ರಟಿಗಳಿಂದ ಕೂಡ ಈ ಬಗೆಯ ಫ್ಯಾಷನ್‌ ಅನುಸರಿಸುವುದನ್ನು ಕಾಣಬಹುದಾಗಿದೆ. 
   
6 ಗೋಲ್ಡ್ ಬ್ರೈಡಲ್ ನೋಸ್‌ ರಿಂಗುಗಳು: ಇಮಿಟೇಶನ್‌ ಗೋಲ್ಡ್ ರಿಂಗುಗಳಷ್ಟೇ ಅಲ್ಲದೆ ಗೋಲ್ಡ್ ನೋಸ್‌ ರಿಂಗುಗಳು ದೊರೆಯುತ್ತವೆ. ಸುಂದರವಾದ ಡಿಸೈನುಗಳಲ್ಲಿ ತಯಾರಾಗುವ ಇವುಗಳು ಗೋಲ್ಡ್ ಆಭರಣಗಳೊಂದಿಗೆ ಮ್ಯಾಚ್‌ ಮಾಡಿಕೊಂಡು ಧರಿಸಬಹುದು. ಇವುಗಳು ಹಲವು ಅಳತೆಗಳ ರಿಂಗುಗಳಲ್ಲಿ ದೊರೆಯುತ್ತವೆ. ವಿದ್‌ ಚೈನ್‌ ಮತ್ತು ವಿದೌಟ್ ಚೈನ್‌ ಎರಡೂ ಬಗೆಗಳಲ್ಲಿಯೂ ದೊರೆಯುತ್ತವೆ. 

9 ಕಲರ್ಡ್‌ ಸ್ಟೋನ್ಸ್ ಮತ್ತು ಹ್ಯಾಂಗಿಂಗ್‌ ಪರ್ಲುಗಳು: ರಿಂಗುಗಳಲ್ಲಿ ಬಣ್ಣಬಣ್ಣದ ಸ್ಟೋನುಗಳನ್ನು ಬಳಸಿ ಅದರೊಂದಿಗೆ ಪರ್ಲುಗಳನ್ನು ಹ್ಯಾಂಗ್‌ ಮಾಡಲಾಗಿರುತ್ತದೆ. ಇವುಗಳಲ್ಲಿ ಹಲವು ಕಲರ್‌ ಆಯ್ಕೆಗಳಿರುವುದರಿಂದ ನಿಮ್ಮ ಲೆಹೆಂಗಾ ಅಥವಾ ಸೀರೆಗಳಿಗೆ ಮ್ಯಾಚ್‌ ಆಗುವಂತಹ ನೋಸ್‌ ರಿಂಗುಗಳನ್ನು ಧರಿಸಬಹುದು. ಸ್ವಲ್ಪ ಸಿಂಪಲ್ ಎನಿಸುವಂತಿದ್ದರೂ ಕೂಡ ಎಲಿಗ್ಯಾಂಟ್ ಲುಕ್ಕನ್ನು ನೀಡುತ್ತವೆ. 

10 ಲೇಯರ್ಡ್‌ ಮಲ್ಟಿಪಲ್ ಚೈನ್‌ ರಿಂಗುಗಳು: ಹೆಸರೇ ಹೇಳುವಂತೆ ಈ ಬಗೆಯ ರಿಂಗುಗಳಿಗೆ ಮಲ್ಟಿಪಲ್ ಚೈನುಗಳಿರುತ್ತವೆ. ಬಹಳ ಗ್ರ್ಯಾಂಡ್‌ ಲುಕ್ಕನ್ನು ನೀಡುವ ಇವುಗಳು ಮದುಮಗಳ ಮೂಗುತಿಯಾಗಿ ಬಳಸಲು ಬಹಳ ಸೂಕ್ತವಾಗಿರುತ್ತವೆ. ಭರ್ಜರಿ ರೇಷ್ಮೆ ಸೀರೆಗಳೊಂದಿಗೆ ಇವುಗಳನ್ನು ಧರಿಸುವುದು ಸೂಕ್ತವೆನಿಸುತ್ತದೆ.

11 ಟೈನಿ ಬ್ರೈಡಲ್ ನೋಸ್‌ ರಿಂಗುಗಳು: ದೊಡ್ಡ ಗಾತ್ರದ ನೋಸ್‌ ರಿಂಗುಗಳನ್ನು ಧರಿಸಲು ಇಚ್ಛಿಸದವರು ಈ ಬಗೆಯ ಆಭರಣಗಳನ್ನು ಧರಿಸಬಹುದು. ರಿಂಗುಗಳು ಚಿಕ್ಕದಾಗಿದ್ದರೂ ಹರಳುಗಳಿಂದ ಅಲಂಕೃತಗೊಂಡಿರುತ್ತವೆ. ಅದರೊಟ್ಟಿಗೆ ಪರ್ಲ್ ಎನಶ್‌ ಚೈನನ್ನು ಬಳಸಲಾಗಿರುತ್ತದೆ. ಇವುಗಳು ರಿಸೆಪ್ಷನ್‌, ಪಾರ್ಟಿಗಳಿಗೆ ಹೆಚ್ಚು ಸೂಕ್ತವೆನಿಸುತ್ತವೆ. ಫ್ಯೂಷನ್‌ವೇರುಗಳಾದ ಕ್ರಾಪ್‌ಟಾಪ್‌ ಲಾಂಗ್‌ ಸ್ಕರ್ಟುಗಳೊಂದಿಗೆ ಅಥವ ಲಾಂಗ್‌ ಗೌನುಗಳೊಂದಿಗೆ ಬಹಳ ಸುಂದರವಾದ ಮತ್ತು ಸ್ಟೈಲಿಶ್‌ ಲುಕ್ಕನ್ನು ನೀಡುತ್ತವೆ.
  
12 ಹೂಪ್‌ ರಿಂಗುಗಳು: ಇವುಗಳಲ್ಲಿ ರಿಂಗುಗಳು ಚಿಕ್ಕದಾಗಿದ್ದು ಚೈನ್‌ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿರುತ್ತದೆ. ಚೈನುಗಳಲ್ಲಿ  ಡ್ರಾಪ್ಲೆಟ್ಟುಗಳನ್ನು ಹೊಂದಿರುತ್ತವೆ. ರಿಂಗುಗಳು ಚಿಕ್ಕವಾಗಿದ್ದರೂ ಕೂಡ ಕೆನ್ನೆ ಸರಪಳಿ ಗ್ರ್ಯಾಂಡ್‌ ಇರುವುದರಿಂದ ಗ್ರ್ಯಾಂಡ್‌ ಲುಕ್ಕಿಗೆ ಕಡಿಮೆಯಾಗುವುದಿಲ್ಲ. ಅದ್ದೂರಿ ಸೀರೆಗಳೊಂದಿಗೆ ಬಹಳ ಚೆನ್ನಾಗಿ ಒಪ್ಪುತ್ತವೆ.

13 ಜೋಧಾ-ಅಕ್ಬರ್‌ ನೋಸ್‌ ರಿಂಗುಗಳು: ಜೋಧಾ ಅಕ್ಬರ್‌ ಸಿನೆಮಾದಲ್ಲಿ ಐಶ್ವರ್ಯ ಧರಿಸಿದ ಮೂಗುತಿಗೆ ಹೋಲುವುದರಿಂದ ಇವುಗಳನ್ನು ಈ ಹೆಸರಿನಿಂದ ಕರೆಯಲಾಗುತ್ತದೆ. ಇವುಗಳು ತೆಳುವಾದ ಮತ್ತು ದೊಡ್ಡ ಗಾತ್ರದ ರಿಂಗನ್ನು ಹೊಂದಿದ್ದು ಅದಕ್ಕೆ ಕುಂದನ್‌ ಹೂವಿರುತ್ತದೆ. ಮತ್ತು ತೆಳುವಾದ ಚೈನನ್ನು ಹೊಂದಿರುತ್ತವೆ. ನೋಡಲು ಗ್ರ್ಯಾಂಡ್‌ ಇರದಿದ್ದರೂ ಸ್ಟೈಲಿಶ್‌ ಆದ ಲುಕ್ಕನ್ನು ಕೊಡುತ್ತವೆ. ಅಗಲ ಮುಖದವರಿಗೆ ಹೆಚ್ಚು ಸೂಕ್ತವೆನಿಸುತ್ತದೆ.

14 ಕಲರ್ಡ್‌ ಹೂಪ್‌ ರಿಂಗುಗಳು: ಇವುಗಳು ಕಲರ್ಡ್‌ ಬಡ್ಸುಗಳಿಂದ ತಯಾರಾಗುವಂತದ್ದು. ಹೂಪ್‌ ರಿಂಗುಗಳ ಒಂದು ಕಡೆಯಲ್ಲಿ ಬಣ್ಣದ ನೀಡ್ಸುಗಳನ್ನು ಪೋಣಿಸಲಾಗಿರುತ್ತದೆ. ಇವುಗಳನ್ನು ನೀವು ಧರಿಸುವ ದಿರಿಸಿಗೆ ಪರ್ಫೆಕ್ಟ್ ಮ್ಯಾಚಿಂಗ್‌ ಮಾಡಿಕೊಂಡು ಬಳಸಬಹುದು.

15 ಥಿನ್‌ ಹೂಪ್‌ ರಿಂಗುಗಳು: ಇವುಗಳು ತೆಳುವಾದ ಹೂಪ್‌ ರಿಂಗುಗಳನ್ನು ಹೊಂದಿದ್ದು ಯಾವುದೇ ಕುಂದನ್‌ ಅಥವಾ ಬೀಡ್ಸುಗಳಿರುವುದಿಲ್ಲ. ಅದಕ್ಕೆ ತೆಳುವಾದ ಚೈನನ್ನು ಬಳಸಲಾಗಿರುತ್ತದೆ. ಇವುಗಳನ್ನು ಫ್ಯೂಷನ್‌ವೇರುಗಳೊಂದಿಗೂ ಹಾಗೂ ಮದುಮಗಳ ಮೂಗುತಿಯಾಗಿಯೂ ಬಳಸಬಹುದಾಗಿದೆ.  ಸಿಂಪಲ್ ಮತ್ತು ಟ್ರೆಂಡಿ ಲುಕ್ಕನ್ನು ನೀಡುತ್ತವೆ.

 ಈ ಮೇಲಿನವುಗಳು ಬ್ರೈಡಲ್ ಮೂಗುತಿಗಳಾದರೆ ಇನ್ನೂ ಅನೇಕ ಬಗೆಯ ಫ‌ಂಕ್ಷನ್‌ವೇರ್‌ ನೋಸ್‌ ರಿಂಗುಗಳೂ ಕೂಡ ದೊರೆಯುತ್ತವೆ. ದಿರಿಸಿಗೆ ಮತ್ತು ಸಂದರ್ಭಗಳಿಗೆ ಹೊಂದುವಂತಹ ನೋಸ್‌ ರಿಂಗುಗಳ ಧರಿಸುವಿಕೆಯಿಂದ ಹೊಸ ಸ್ಟೈಲ್ ಸ್ಟೇಟ್ಮೆಂಟನ್ನು ಸೃಷ್ಟಿಸುವುದು ಸಾಧ್ಯವಾಗಿದೆ. ಮದುವೆಯ ಇತರೆ ಕಾರ್ಯಕ್ರಮಗಳಾದ ಮೆಹಂದಿ ಅಥವಾ ಸಂಗೀತಕ್ಕೆಂದೇ ವಿಶೇಷವಾದ ಹೂವಿನ ಮಾದರಿಯ ನೋಸ್‌ ರಿಂಗುಗಳೂ ಕೂಡ ದೊರೆಯುತ್ತವೆ. ಬಂಜಾರನ್ನರ ಆಭರಣಗಳಿಂದ ಪ್ರೇರಿತವಾದ ನೋಸ್‌ ರಿಂಗುಗಳೂ ಕೂಡ ಲಭಿಸುತ್ತವೆ. ಬೋಹೋ ಮಾದರಿಯ ನೋಸ್‌ ರಿಂಗುಗಳು ಹೀಗೆ ಹತ್ತು ಹಲವು ಮಾದರಿಯ ನೋಸ್‌ ರಿಂಗುಗಳು ಇಂಡೋ ವೆಸ್ಟರ್ನ್ ಫ್ಯೂಷನ್‌ ದಿರಿಸುಗಳಿಗೆ ಬಹಳ ಚೆನ್ನಾಗಿ ಒಪ್ಪುತ್ತವೆ. 

ಪ್ರಭಾ ಭಟ್‌

ಟಾಪ್ ನ್ಯೂಸ್

22

Gurucharan Singh: ನಾಪತ್ತೆಯಾಗಿದ್ದ ಕಿರುತೆರೆ ನಟ ಮನೆಗೆ ವಾಪಾಸ್; ಹೋಗಿದ್ದೆಲ್ಲಿಗೆ?

Vijayapura:ತತ್ಕಾಲ ಪೋಡಿಗೆ 47ಸಾವಿರ ಲಂಚ: ಲೋಕಾಯುಕ್ತರ ಬಲೆಗೆ ಬಿದ್ದ ಸರ್ವೇಯರ್,ಮಧ್ಯವರ್ತಿ

Vijayapura:ತತ್ಕಾಲ ಪೋಡಿಗೆ 47ಸಾವಿರ ಲಂಚ: ಲೋಕಾಯುಕ್ತರ ಬಲೆಗೆ ಬಿದ್ದ ಸರ್ವೇಯರ್,ಮಧ್ಯವರ್ತಿ

crime

Ramanagara: ತಂದೆಯಿಂದಲೇ ಮಗನ ಕೊಲೆ.!

Bus Carrying Devotees Catches Fire In Haryana

Nuh; ಹೊತ್ತಿ ಉರಿದ ಮಥುರಾ ಭಕ್ತರಿದ್ದ ಬಸ್; ಎಂಟು ಮಂದಿ ಸಾವು

ಕಾಶಿಯಲ್ಲಿ ಕಾಲು ಸಂಕ- ಬಟ್ಟೆ ಒಗೆಯುವ ಕಲ್ಲಾಗಿದೆ ಕೆಳದಿ ಸಾಮ್ರಾಜ್ಯದ ಶಾಸನ

ಅವ್ಯವಸ್ಥೆ… ಕಾಶಿಯಲ್ಲಿ ಕಾಲು ಸಂಕ- ಬಟ್ಟೆ ಒಗೆಯುವ ಕಲ್ಲಾಗಿದೆ ಕೆಳದಿ ಸಾಮ್ರಾಜ್ಯದ ಶಾಸನ

PU ಕಂಪ್ಯೂಟರ್‌ ಸೈನ್ಸ್‌, ಸೈಕಾಲಜಿಗೂ ಎನ್‌ಸಿಇಆರ್‌ಟಿ ಪಠ್ಯ

PU ಕಂಪ್ಯೂಟರ್‌ ಸೈನ್ಸ್‌, ಸೈಕಾಲಜಿಗೂ ಎನ್‌ಸಿಇಆರ್‌ಟಿ ಪಠ್ಯ

ಕೇರಳದಲ್ಲಿ 2 ವಾರದಲ್ಲಿ 2 ಲಕ್ಷ ಮಂದಿಗೆ ಸಾಂಕ್ರಾಮಿಕ ರೋಗ; 10 ಸಾವು

ಕೇರಳದಲ್ಲಿ 2 ವಾರದಲ್ಲಿ 2 ಲಕ್ಷ ಮಂದಿಗೆ ಸಾಂಕ್ರಾಮಿಕ ರೋಗ; 10 ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

22

Gurucharan Singh: ನಾಪತ್ತೆಯಾಗಿದ್ದ ಕಿರುತೆರೆ ನಟ ಮನೆಗೆ ವಾಪಾಸ್; ಹೋಗಿದ್ದೆಲ್ಲಿಗೆ?

Vijayapura:ತತ್ಕಾಲ ಪೋಡಿಗೆ 47ಸಾವಿರ ಲಂಚ: ಲೋಕಾಯುಕ್ತರ ಬಲೆಗೆ ಬಿದ್ದ ಸರ್ವೇಯರ್,ಮಧ್ಯವರ್ತಿ

Vijayapura:ತತ್ಕಾಲ ಪೋಡಿಗೆ 47ಸಾವಿರ ಲಂಚ: ಲೋಕಾಯುಕ್ತರ ಬಲೆಗೆ ಬಿದ್ದ ಸರ್ವೇಯರ್,ಮಧ್ಯವರ್ತಿ

crime

Ramanagara: ತಂದೆಯಿಂದಲೇ ಮಗನ ಕೊಲೆ.!

Bus Carrying Devotees Catches Fire In Haryana

Nuh; ಹೊತ್ತಿ ಉರಿದ ಮಥುರಾ ಭಕ್ತರಿದ್ದ ಬಸ್; ಎಂಟು ಮಂದಿ ಸಾವು

ಕಾಶಿಯಲ್ಲಿ ಕಾಲು ಸಂಕ- ಬಟ್ಟೆ ಒಗೆಯುವ ಕಲ್ಲಾಗಿದೆ ಕೆಳದಿ ಸಾಮ್ರಾಜ್ಯದ ಶಾಸನ

ಅವ್ಯವಸ್ಥೆ… ಕಾಶಿಯಲ್ಲಿ ಕಾಲು ಸಂಕ- ಬಟ್ಟೆ ಒಗೆಯುವ ಕಲ್ಲಾಗಿದೆ ಕೆಳದಿ ಸಾಮ್ರಾಜ್ಯದ ಶಾಸನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.