ಸೈನಾ ಬಯೋಪಿಕ್‌ಗೆ ಪರಿಣಿತಿ

Team Udayavani, Mar 22, 2019, 12:30 AM IST

parineeti-chopra.jpg

ಸದ್ಯ ಬಾಲಿವುಡ್‌ನ‌ಲ್ಲಿ ಬಯೋಪಿಕ್‌ ಸಿನಿಮಾಗಳ ಟ್ರೆಂಡ್‌ ಸಾಕಷ್ಟು ಜನಪ್ರಿಯತೆ ಪಡೆಯುತ್ತಿದೆ. ಒಂದರ ಹಿಂದೊಂದು ಬಯೋಪಿಕ್‌ ಸಿನಿಮಾಗಳು ತೆರೆಗೆ ಬರುತ್ತಿವೆ. ಈಗ ಈ ಸಿನಿಮಾಗಳ ಸಾಲಿಗೆ ಖ್ಯಾತ ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹವಾಲ್‌ ಜೀವನದ ಕಥೆಯೂ ಸೇರಿಕೊಳ್ಳುತ್ತಿದೆ.

ಹೌದು, ಇಲ್ಲಿಯವರೆಗೆ ಸ್ಟೇಡಿಯಂನಲ್ಲಿ, ಬ್ಯಾಡ್ಮಿಂಟನ್‌ ಕೋರ್ಟ್‌ನಲ್ಲಿ ಕ್ರೀಡಾಪ್ರೇಮಿಗಳನ್ನು ಮನ ರಂಜಿಸಿದ್ದ ಸೈನಾ ನೆಹವಾಲ್‌ ಬಯೋಪಿಕ್‌ ತೆರೆಗೆ ಬರೋದಕ್ಕೆ ವೇದಿಕೆ ರೆಡಿಯಾಗಿದೆ. ಅಂದ ಹಾಗೆ, ಈ ಬಯೋಪಿಕ್‌ನಲ್ಲಿ ಸೈನಾ ಪಾತ್ರವನ್ನು ಯಾರು ಮಾಡುತ್ತಾರೆ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಕೊನೆಗೆ ಚಿತ್ರತಂಡ ಸೈನಾ ಪಾತ್ರಕ್ಕೆ ಬಾಲಿವುಡ್‌ ನಟಿ ಶ್ರದ್ಧಾ ಕಪೂರ್‌ ಅವರನ್ನು ಆಯ್ಕೆ ಮಾಡಿಕೊಂಡಿತ್ತು. ಚಿತ್ರಕ್ಕಾಗಿ ಶ್ರದ್ಧಾ ಮೂರ್‍ನಾಲ್ಕು ತಿಂಗಳುಗಳಿಂದ ಸಾಕಷ್ಟು ತಯಾರಿ ಕೂಡ ನಡೆಸಿಕೊಂಡಿದ್ದರು. ಜೊತೆಗೆ ಚಿತ್ರದ ಫ‌ಸ್ಟ್‌ ಲುಕ್‌ ಕೂಡ ರಿವೀಲ್‌ ಆಗಿತ್ತು. ಸೈನಾ ಪಾತ್ರಕ್ಕೆ ಜೀವ ತುಂಬಿದ್ದ ಶ್ರದ್ಧಾ ಲುಕ್‌ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿತ್ತು. ಇನ್ನೇನು ಈ ಚಿತ್ರದ ಚಿತ್ರೀಕರಣ ಶುರುವಾಗಬೇಕು ಎನ್ನುವಷ್ಟರಲ್ಲಿ ಶ್ರದ್ಧಾ ಕಪೂರ್‌ ಚಿತ್ರ ದಿಂದ ಹೊರ ನಡೆದಿದ್ದು, ಅವರ ಜಾಗಕ್ಕೆ ಪರಿಣಿತಿ ಚೋಪ್ರಾ ಆಗಮನವಾಗಿರುವ ಸುದ್ದಿ ಹೊರಬಿದ್ದಿದೆ.

ಸೈನಾ ಬಯೋಪಿಕ್‌ನಿಂದ ಶ್ರದ್ಧಾ ಹೊರನಡೆಯಲು ಕಾರಣ ಅವರ ಅನಾರೋಗ್ಯದ ಸಮಸ್ಯೆ ಎನ್ನುತ್ತದೆ ಚಿತ್ರತಂಡ. ಶ್ರದ್ಧಾ ಕಳೆದ ಕೆಲ ದಿನಗಳಿಂದ ಡೆಂಗ್ಯು ಜ್ವರದಿಂದ ಬಳಲುತ್ತಿದ್ದು, ವೈದ್ಯರು ಕೂಡ ಕೆಲಕಾಲ ವಿಶ್ರಾಂತಿಗೆ ಸೂಚಿಸಿದ್ದಾರೆ. ಹಾಗಾಗಿ, ಚಿತ್ರ ದಿಂದ ಹೊರಬಂದಿರುವುದಾಗಿ ಹೇಳಲಾಗುತ್ತಿದೆ. ಆದರೆ, ಬಾಲಿವುಡ್‌ ಮೂಲಗಳು ಮಾತ್ರ ಶ್ರದ್ಧಾ ಚಿತ್ರದಿಂದ ಹೊರಬರಲು ಅಸಲಿ ಕಾರಣವೇ ಬೇರೆಯೇ ಇದೆ ಎನ್ನುತ್ತಿವೆ. ಶ್ರದ್ಧಾ ಬಳಿ ಈಗಾಗಲೇ ಸಾಲು ಸಾಲು ಸಿನಿಮಾಗಳಿವೆ. ಚಿಚೋì ಸಿನಿಮಾದಲ್ಲಿ ಅಭಿನಯಿಸುತ್ತಿರುವ ಶ್ರದ್ಧಾ ಈ ಸಿನಿಮಾವನ್ನು ಮಾರ್ಚ್‌ ಕೊನೆಯಲ್ಲಿ ಮುಗಿಸಬೇಕಿದೆ. ಇನ್ನೂ ಮುಂದಿನ ತಿಂಗಳಿನಿಂದಲೇ ಸ್ಟ್ರೀಟ್‌ ಡಾನ್ಸರ್‌ 3ಡಿ ಸಿನಿಮಾ ಪ್ರಾರಂಭಿಸಬೇಕಿದೆ. ಇದರ ಜೊತೆಗೆ ತೆಲುಗಿನ ಸಾಹೋ ಸಿನಿಮಾ ಕೂಡ ಆಗಸ್ಟ್‌ನಲ್ಲಿ ರಿಲೀಸ್‌ ಪ್ಲಾನ್‌ ಆಗಿದೆ. ಬಾಗಿ-3 ಸಿನಿಮಾ ಸಹ ಲಿಸ್ಟ್‌ನಲ್ಲಿದೆ. ಇವೆಲ್ಲದರ ಜೊತೆಗೆ ಸೈನಾ ನೆಹವಾಲ್‌ ಬಯೋಪಿಕ್‌  ಅನ್ನು ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷಾರಂಭದಲ್ಲಿ ತೆರೆಗೆ ತರುವ ಪ್ಲಾನ್‌ ಅನ್ನು ಚಿತ್ರತಂಡ ಮಾಡಿಕೊಂಡಿತ್ತು. ಆದರೆ, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಶ್ರದ್ಧಾ, ಸೈನಾ ಬಯೋಪಿಕ್‌ನಲ್ಲಿ ಅಭಿನಯಿಸಲು ಸಾಕಷ್ಟು ಸಮಯ ಕೇಳಿದ್ದರಿಂದ ಚಿತ್ರತಂಡ ಅವರ ಜಾಗಕ್ಕೆ ಪರಿಣಿತಿ ಅವರನ್ನು ಕರೆತಂದಿದೆ ಎಂದು ಹೇಳಲಾಗುತ್ತಿದೆ.

ಇವೆಲ್ಲದರ ನಡುವೆ ಸೈನಾ ಪಾತ್ರದಲ್ಲಿ ಮಿಂಚಲು ಪರಿಣಿತಿ ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ. ಚಿತ್ರಕ್ಕಾಗಿ ಪ್ರತಿನಿತ್ಯ ಬ್ಯಾಡ್ಮಿಂಟನ್‌ ಪ್ರಾಕ್ಟೀಸ್‌ ಮಾಡುತ್ತಿರುವ ಪರಿಣಿತಿ, ಸೈನಾ ನೆಹವಾಲ್‌ ಅವರ ಹಾವ-ಭಾವಗಳನ್ನು ಅಧ್ಯಯನ ಮಾಡುತ್ತಿದ್ದಾರಂತೆ. ಈ ಬಗ್ಗೆ ಮಾತನಾಡುವ ಪರಿಣಿತಿ, ಸೈನಾ ಅವರ ಸಾಧನೆ ಈ ತಲೆಮಾರಿನ ಹುಡುಗಿಯರಿಗೆ ಅತ್ಯಂತ ಆದರ್ಶ ಪ್ರಾಯವಾಗಿದ್ದು, ನಾನು ಕೂಡ ಅವರ ಅಭಿಮಾನಿಯಾಗಿ ಅವರ ಆಟವನ್ನು ಆನಂದಿಸಿದ್ದೇನೆ. ಈಗ ಸೈನಾ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಾಕಷ್ಟು ಉತ್ಸುಕಳಾಗಿದ್ದೇನೆ. ಚಿತ್ರದ ಬಗ್ಗೆ ನನಗೂ ಸಾಕಷ್ಟು ನಿರೀಕ್ಷೆ ಇದೆ ಎನ್ನುತ್ತಾರೆ. ಸೈನಾ ನೆಹವಾಲ್‌ ಬಯೋಪಿಕ್‌ಗೆ ಅಮೋಲ್‌ ಗುಪ್ತ ನಿರ್ದೇಶನ ಮಾಡುತ್ತಿದ್ದಾರೆ.

ಒಟ್ಟಾರೆ ತನ್ನ ಸಮಕಾಲಿನ ಕ್ರೀಡಾಪಟುವೊಬ್ಬರ ಪಾತ್ರಕ್ಕೆ ಪರಿಣಿತಿ ಚೋಪ್ರಾ ಎಷ್ಟರ ಮಟ್ಟಿಗೆ ಜೀವ ತುಂಬಲಿದ್ದಾರೆ ಅನ್ನೋದು ಗೊತ್ತಾಗ ಬೇಕಾದರೆ, ಸೈನಾ ನೆಹವಾಲ್‌ ಬಯೋಪಿಕ್‌ ತೆರೆಮೇಲೆ ಬರಬೇಕು.

ಟಾಪ್ ನ್ಯೂಸ್

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.