ಮಿಸ್‌ ಯೂ ಸೀನಿಯರ್

Team Udayavani, Apr 27, 2018, 6:00 AM IST

316.jpg

ಅಂದು ಕಾಲೇಜಿನ ಮೊದಲ ದಿನ. ಪಿಯುಸಿ ಮುಗಿಸಿ ಅನೇಕ ಕನಸುಗಳನ್ನು ಹೊತ್ತು ಪದವಿ ಕಾಲೇಜಿಗೆ ಕಾಲಿಟ್ಟಿದ್ದೆ. ಕಾಲೇಜಿನ ಎಂಟ್ರ್ಯಾನ್ಸ್‌  ಹೊಕ್ಕಾಗ ಕ್ಲಾಸ್‌ಎಲ್ಲಿದೆ ಎಂದು ಗೊತ್ತಾಗಲಿಲ್ಲ. ನೋಟೀಸ್‌ ಬೋರ್ಡ್‌ ನಲ್ಲಿ ತರಗತಿಯ ವೇಳಾಪಟ್ಟಿ ಹಾಕಿದ್ದರೂ, ಅದು ನನಗೆ ಅರ್ಥವಾಗುತ್ತಿರಲಿಲ್ಲ. ಏನು ಮಾಡುವುದೆಂದು ತೋಚದೆ ಪೆಚ್ಚುಮೋರೆ ಹಾಕಿ ನಾನು ಅಲ್ಲಿಯೇ ನಿಂತುಕೊಂಡೆ. ಅಷ್ಟರಲ್ಲಿ ಯಾರೋ “ಎಕ್ಸ್‌ಕ್ಯೂಸ್‌ ಮಿ’ ಎಂದು ಕರೆದಂತಾಯಿತು. ಯಾರೆಂದು ತಿರುಗಿ ನೋಡಿದೆ, ಅಪರಿಚಿತ ಮುಖ. “”ಫ‌ರ್ಸ್‌r ಇಯರಾ?” ಎಂದು ಆ ವ್ಯಕ್ತಿ ಪ್ರಶ್ನಿಸಿದ. ನಾನು ಏನು ಮಾತನಾಡಬೇಕೆಂಬುದು ತಿಳಿಯದೆ, “ಹೌದು’ ಎಂದು ತಲೆ ಅಲ್ಲಾಡಿಸಿದೆ. “”ಯಾವ ಕಾಂಬಿನೇಷನ್‌” ಅಂತ ಕೇಳಿದ. “”ಜರ್ನಲಿಸಂ, ಇಂಗ್ಲಿಷ್‌, ಸೈಕಾಲಜಿ” ಎಂದೆ. “”ನಿಮಗೆ ಫ‌ಸ್ಟ್‌ ಪೀರಿಯಡ್‌ ಜರ್ನಲಿಸಂ, ಕ್ಲಾಸ್‌ರೂಂ ನಂ 0.26” ಎಂದ. “”ಅದು ಎಲ್ಲಿದೆ?” ಎಂದು ನಾನು ಕೇಳಿದೆ. “”ಬಾ ನಾನು ತೋರಿಸುತ್ತೇನೆ” ಎಂದು ಕ್ಲಾಸ್‌ರೂಮ್‌ವರೆಗೆ ಕರೆದುಕೊಂಡ ಹೋದ. “”ನಾನು ಗುರುರಾಜ್‌, ಸೆಕೆಂಡ್‌ ಇಯರ್‌” ಎಂದು ಕೈ ಕುಲುಕಿದ. ನಾನು ನಡುಗಿಕೊಂಡೇ “ಪ್ರಜ್ಞಾ’ ಎಂದು ಮೆಲುದನಿಯಲ್ಲಿ ಹೇಳಿ, ಕ್ಲಾಸಿನ ಒಳಹೊಕ್ಕೆ. ಆ ಸೀನಿಯರ್‌ಗೆ ಥಾಂಕ್ಸ್‌ ಹೇಳಬೇಕಿತ್ತು ಎಂದು ಬೆಂಚಿನಲ್ಲಿ ಕುಳಿತ ಮೇಲೆ ಹೊಳೆಯಿತು. ಅಷ್ಟರಲ್ಲಿ ಆತ ಅಲ್ಲಿಂದ ತೆರಳಿದ್ದ.

ಮರುದಿನ ಕಾಲೇಜಿಗೆ ಆಗಮಿಸಿದಾಗ ವೇಳಾಪಟ್ಟಿ ನೋಡುವುದು ಅಷ್ಟೊಂದು ಕಷ್ಟವೆನಿಸಲಿಲ್ಲ. ಕ್ಲಾಸ್‌ರೂಮ್‌ ಬಳಿ ಹೋಗುತ್ತಿದ್ದಾಗ ಮತ್ತೆ ಆ ಸೀನಿಯರ್‌ ಎದುರಾದ. “”ಹೇಗಾಯಿತು ಕ್ಲಾಸ್‌ಗಳು” ಎಂದು ಕೇಳಿದ, “”ಚೆನ್ನಾಗಿತ್ತು” ಅಂದೆ. ದಿನಗಳು ಕಳೆದಂತೆ ಅವನು ನನಗೆ ಹತ್ತಿರವಾದ. ಇನ್ನೂ ಅನೇಕ ಸೀನಿಯರ್ಗಳು ಮನಸ್ಸಿಗೆ ಆತ್ಮೀಯವಾದರು.
ಟೀಚರಕ್ಕ !

ಹೀಗೇ ದಿನಗಳು ಕಳೆದವು. ಸೆಮಿಸ್ಟರ್‌ ಪರೀಕ್ಷೆ ಬಂತು. ಐಚ್ಛಿಕ ಇಂಗ್ಲಿಷ್‌ ವಿಷಯ ತುಸು ಕಷ್ಟವಿತ್ತು. ಅದರಲ್ಲಿನ ಪದ್ಯಗಳು ಅರ್ಥವಾಗುತ್ತಿರಲಿಲ್ಲ. ಏನು ಮಾಡಬೇಕೆಂದು ತಿಳಿಯದೆ, ಹಾಸ್ಟೆಲ್‌ನಲ್ಲಿ ಸೀನಿಯರ್‌ ಲಾವಣ್ಯಕ್ಕನ ರೂಮ್‌ ಹೊಕ್ಕೆ. ನನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಅವರು ಪದ್ಯಗಳನ್ನು ಚೆನ್ನಾಗಿ ಅರ್ಥ ಮಾಡಿಸಿದರು. ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಕೂಡ ಸಿಕು¤. ಮುಂದಿನ ಸೆಮಿಸ್ಟರ್‌ಗಳಲ್ಲೂ ಅವರೊಂದಿಗೆ ತೆರಳಿ ಪಾಠ ಹೇಳಿಸುತ್ತಿದ್ದೆ. ನನಗೆ ಲಾವಣ್ಯಕ್ಕ ಟೀಚರಕ್ಕ ಆದರು.

ಫೆಸ್ಟ್‌ಗಳು
ಸೀನಿಯರ್ಗಳೊಂದಿಗೆ ಸಂಭ್ರಮದ ಕ್ಷಣಗಳನ್ನು ಕಳೆದದ್ದು ವಿವಿಧ ಅಂತರ್‌ಕಾಲೇಜು ಫೆಸ್ಟ್‌ಗಳಲ್ಲಿ. ಕೆಲವೊಮ್ಮೆ ಸ್ಪರ್ಧಾ ಸಮಯ ಹತ್ತಿರವಾಗುತ್ತಿದ್ದಂತೆ ಧೈರ್ಯ ಕಳೆದುಕೊಳ್ಳುತ್ತಿದೆ. ಅಂತಹ ಸಂದರ್ಭದಲ್ಲಿ ನಿನ್ನಿಂದ ಸಾಧ್ಯವಾಗುತ್ತದೆ ಎಂದು ಪ್ರೇರೇಪಿಸುತ್ತಿದ್ದರು, ನೆಚ್ಚಿನ ಸೀನಿಯರ್ಗಳು.

ಪ್ರತಿ ಹೆಜ್ಜೆಯಲ್ಲೂ ನಮ್ಮೊಂದಿಗೆ ಇದ್ದ ಸೀನಿಯರ್ಗಳ ಬಗ್ಗೆ ಎಷ್ಟು ಬರೆದರೂ ಸಾಲದು. ಎರಡು ವರ್ಷಗಳ ಕಾಲ ಅವರೊಂದಿಗೆ ಕಳೆದ ಸಿಹಿಯ ಕ್ಷಣಗಳು ನೆನಪಾಗುತ್ತಿದೆ. ಅವರು ಆಡುತ್ತಿದ್ದ ಪ್ರೀತಿಯ ಮಾತುಗಳು, ನೀಡುತ್ತಿದ್ದ ಸಲಹೆ-ಸೂಚನೆಗಳು, ಕೆಲವೊಮ್ಮೆ ಕಾಲೆಳೆದು ಮಾಡುತ್ತಿದ್ದ ತರಲೆಗಳನ್ನು ನೆನೆಸಿಕೊಂಡರೆ ಮುಖದಲ್ಲಿ ಮಂದಹಾಸ ಮೂಡುತ್ತದೆ. ಸೀನಿಯರ್ಗಳಿಲ್ಲದ ಮುಂದಿನ ದಿನಗಳನ್ನು ಊಹಿಸಲು ಕೂಡ ಸಾಧ್ಯವಾಗುತ್ತಿಲ್ಲ. ಅಷ್ಟರ ಮಟ್ಟಿಗೆ ಅವರನ್ನು ಹಚ್ಚಿಕೊಂಡಿದ್ದೆ. ಅವರು ನಿರ್ವಹಿಸಿದ ಜವಾಬ್ದಾರಿಯನ್ನು ಅಷ್ಟೇ ಸಮರ್ಥವಾಗಿ ನಿಭಾಯಿಸುವ ಹೊಣೆಗಾರಿಕೆ ಈಗ ನಮ್ಮ ಹೆಗಲ ಮೇಲಿದೆ. ನೀವು ನಡೆದ ಹಾದಿಯಲ್ಲಿ ಮುಂದೆ ಸಾಗಲು ಪ್ರಯತ್ನಿಸುತ್ತೇವೆ. ನಿಮ್ಮ ಮಾತುಗಳನ್ನು ಸದಾ ನೆನಪಿನಲ್ಲಿಟ್ಟುಕೊಂಡು ಅದರಂತೆ ನಡೆಯುತ್ತೇವೆ. ಮುಂದಿನ ವರ್ಷ ನಿಮ್ಮನ್ನು ಖಂಡಿತವಾಗಿಯೂ ಮಿಸ್‌ ಮಾಡಿಕೊಳ್ಳುತ್ತೇವೆ.
ಮಿಸ್‌ಯೂ ಸೀನಿಯರ್ .

ಪ್ರಜ್ಞಾ ಹೆಬ್ಟಾರ್‌ ಎಸ್‌ಡಿಎಂ ಕಾಲೇಜು, ಉಜಿರೆ

ಟಾಪ್ ನ್ಯೂಸ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.