ನಮ್ಮ ಕಾಲೇಜಿನ ಮ್ಯಾಗಜೀನ್‌

Team Udayavani, Dec 7, 2018, 6:00 AM IST

d-63.jpg

ಶಿಖರ ಎಂದಾಕ್ಷಣ ನಿಮಗೆ ಗುಡ್ಡವೋ, ಬೆಟ್ಟವೋ, ಇನ್ಯಾವುದೋ ನೆನಪಾಗಬಹುದು. ಆದರೆ, “ಶಿಖರ’ ಎಂದರೆ ನಮ್ಮ ಕಾಲೇಜಿನ ಮ್ಯಾಗಜೀನ್‌. ಮೊದಮೊದಲು ನನಗೆ ಮ್ಯಾಗಜೀನ್‌ ಅಂದ್ರೆ ಏನೆಂದೇ ಗೊತ್ತಿರಲಿಲ್ಲ. ನಾನು ಡಿಗ್ರಿ ಕಾಲೇಜಿಗೆ ಬಂದಾಗ ಗೊತ್ತಾಯಿತು- ಮ್ಯಾಗಜೀನ್‌ ಎಲ್ಲಾ ಕಾಲೇಜಿನಲ್ಲೂ ಇರುತ್ತದೆ ಅಂತ. ಅಲ್ಲದೆ ಅದರಲ್ಲಿ ಅಂತರ್‌ಕಾಲೇಜು ಮಟ್ಟದ ಸ್ಪರ್ಧೆ ಕೂಡ ಇದೆ ಅಂತ. ಮೊದಲು ಕಾಲೇಜಿಗೆ ಬಂದಾಗ ನಮಗೆ “ಶಿಖರ’ ಕೊಟ್ಟರು. ಅದರಲ್ಲಿ ಅದೇ ಕಾಲೇಜಿನ ಅದೆಷ್ಟೋ ವಿದ್ಯಾರ್ಥಿಗಳು ಬರೆದ ಲೇಖನ, ಕಥೆ-ಕವನಗಳನ್ನು ಓದಿದೆ. ನನಗೂ ಏನಾದರೂ ಬರೆಯಬೇಕು ಅಂತ ಅನಿಸಿತ್ತು. ಅದುವರೆಗೂ ನನಗೆ ಕಥೆ-ಕವನಗಳ ಬಗ್ಗೆ ಎಬಿಸಿಡೀನೂ ಗೊತ್ತಿರಲಿಲ್ಲ. ಅಂತೂ ನಾನು ನನ್ನದೇ ರೀತಿಯಲ್ಲಿ ಕೆಲವು ಕಥೆ-ಕವನಗಳನ್ನು ಬರೆದು ನಮ್ಮ ಸರ್‌ಗೆ ಕೊಟ್ಟೆ. ಅವರು, “ಚೆನ್ನಾಗಿದೆ’ ಅಂದರು. ಮೊದಲನೆಯ ಸಲ ಅಲ್ಲವೆ, ಬರೆದಿರುವುದು! ಆವತ್ತಿನಿಂದ ಸಾಹಿತ್ಯದ ಬಗ್ಗೆ ತುಂಬಾ ಆಸಕ್ತಿ ಬಂತು. ಕಥೆ-ಕವನ-ಲೇಖನಗಳ ಬಗ್ಗೆ ತುಂಬ ಆಸಕ್ತಿ ಬಂತು. ಅವುಗಳ ಬಗ್ಗೆ ಕೇಳಿದ್ದೆ. ಆದರೆ, ನಾನೇ ಸ್ವತಃ ಅದನ್ನು ಬರೆದು ಕೊಟ್ಟಾಗ ನನಗದು ಹೊಸ ಅನುಭವ. ಕಾಲೇಜಿನಲ್ಲಿ ಮ್ಯಾಗಜೀನ್‌ ಇರುವುದು ವಿದ್ಯಾರ್ಥಿಗಳಿಗೆ ತುಂಬಾ ಉಪಯೋಗ. ಅವರಲ್ಲಿ ಇರುವ ಟ್ಯಾಲೆಂಟ್‌ ಹೊರ ಹಾಕುವುದಕ್ಕೆ ಇದೊಂದು ಅದ್ಭುತ ವೇದಿಕೆ. ಮಾತ್ರವಲ್ಲದೆ ಈ ವರ್ಷವೂ ನಮ್ಮ ಕಾಲೇಜಿನ ಮ್ಯಾಗಜೀನ್‌ “ಶಿಖರ’ ಅಂತರ್‌ ಕಾಲೇಜು ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಮೂರು ವರ್ಷಗಳಿಂದ ಹ್ಯಾಟ್ರಿಕ್‌ ಸಾಧನೆ ಮಾಡಿರುವುದು ತುಂಬ ಖುಷಿ ಕೊಟ್ಟಿದೆ. ಹೀಗೆ ನೋಡಿದರೆ “ಶಿಖರ’ ಒಂದು ಅನುಭವ ಮುಕುರವೇ ಸರಿ.

ಐಶ್ವರ್ಯ ಕೋಟೇಶ್ವರ
ಡಾ. ಬಿ. ಬಿ.  ಹೆಗ್ಡೆ ಪ್ರಥಮ ದರ್ಜೆ ಕಾಲೇಜು,  ಕುಂದಾಪುರ

ಟಾಪ್ ನ್ಯೂಸ್

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ

ಈಶ್ವರ ಖಂಡ್ರೆ

ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ

ಈಶ್ವರ ಖಂಡ್ರೆ

ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.