CONNECT WITH US  

ತತ್ವಜ್ಞಾನಿ ಪಚ್ಚನ ಹೊಸ ನೀತಿ ಬೋಧೆ

ಅಗರಬತ್ತಿಯಲ್ಲಿ ಎರಡು ವಿಧ ಒಂದು ದೇವರಿಗಾಗಿ ಒಂದು ಸೊಳ್ಳೆಗಾಗಿ ವಿಪರ್ಯಾಸ ಅಂದರೆ ದೇವರು ಬರೋದಿಲ್ಲ ಸೊಳ್ಳೆ ಹೋಗೋದಿಲ್ಲ

ಮೇಷ್ಟ್ರು: ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?
ಮರಿಪಚ್ಚ: ಯಾಕಾಗಲ್ಲ ಮೇಷ್ಟ್ರೆ? ಮೊದಲು ನೆಟ್ಟಗಿದ್ದ ನಮ್ಮಜ್ಜ ಈಗ ಬಾಗಿದ್ದಾರೆ!

ಮೇಷ್ಟ್ರು: ನಿಮ್ಮ ಮಗ ಗಣಿತದಲ್ಲಿ 25, ವಿಜ್ಞಾನದಲ್ಲಿ 24,ಸಮಾಜದಲ್ಲಿ 26... ಟೋಟಲ್‌ 75 ಅಂಕ ಗಳಿಸಿದ್ದಾನೆ...
ಪಚ್ಚ: ಟೋಟಲ್‌ನಲ್ಲಿ 75 ತೆಗೆದಿದ್ದಾ ನಲ್ಲ, ಖುಷಿಯಾಯ್ತು ಮೇಷ್ಟ್ರೆ!

ಗುಂಡ: ನಾವು ಗಂಡ ಹೆಂಡ್ತಿ ಬೆಳಗ್ಗೆ ಒಟ್ಟಿಗೇ ವಾಕಿಂಗ್‌ ಹೋಗ್ತೀವಿ..
ಪಚ್ಚ: ನಾವು ಹೋಗಲ್ಲ, ಬೆಳಗ್ಗೆ ಬೆಳಗ್ಗೆ ಮನೆ ಜಗಳ ಬೀದಿಗೆ ಬರುತ್ತೆ!

ಪಚ್ಚನ ಹೆಂಡತಿ ರಸ್ತೆಗೆ ಓಡೋಡಿ ಬಂದು ಬಸ್‌ ನಿಲ್ಲಿಸಿದ್ಲು 
ಡ್ರೈವರ್‌: ಯಾಕೆ ಏನಾಯ್ತು..? ಬಸ್ಸಲ್ಲಿ ಬರ್ತೀರಾ..?
ಪಚ್ಚನ ಹೆಂಡತಿ: ಇಲ್ಲಾರೀ.. ಮಗು ಅಳ್ತಾ ಇದೆ ಒಂದ್ಸಲ ಪೋಂ.. ಪೋಂ.. ಹಾರನ್‌...

ಪಚ್ಚನ ಹೆಂಡತಿ: ನೀವು ಕಳ್ಳತನಕ್ಕೆ ಹೋಗೋವಾಗ ನಾನೂ ಬರ್ತೀನಿ..
ಪಚ್ಚ: ಯಾಕೇ?
ಪಚ್ಚನ ಹೆಂಡತಿ: ಕಳವು ಮಾಡಿ ತಂದ ಒಡವೆ, ಸೀರೆ ಡಿಸೈನು ಒಂಚೂರೂ ಚೆನ್ನಾಗಿಲ್ಲ!

ಪಚ್ಚ: ಯಾಕೋ ಅಳ್ತಾ ಇದ್ದೀಯಾ..? ಇಷ್ಟೊಂದು..
ಮರಿಪಚ್ಚ: 100 ರೂ. ಕೊಟ್ರೆ ಹೇಳ್ತೀನಿ...
ಪಚ್ಚ: ತಗೋ ನೂರು ರೂ..ಏನಾಯ್ತು ಹೇಳು..
ಮರಿಪಚ್ಚ: ಇದೇ ನೂರು ರೂ.ಗೇ ಅಳ್ತಾ ಇದ್ದಿದ್ದು! 

ಪಚ್ಚ ಕರೆಂಟಾಫೀಸಿಗೆ ಫೋನ್‌ ಮಾಡಿ: ಹಲೋ, ಸಾರ್‌..ಕರೆಂಟು ಎಷ್ಟೊತ್ತಿಗೆ ಬರುತ್ತೆ..?
ಕರೆಂಟಾಫೀಸು ಮಂದಿ: ಇಲ್ಲೂ ತುಂಬಾ ಕತ್ತಲೆ.. ಗಡಿಯಾರ ಕಾಣ್ತಿಲ್ಲ ಸಾರ್‌!

ಗುಂಡ: ಮದ್ವೆ ಮೆರವಣಿಗೆ ವೇಳೆ ಮದುಮಗನನ್ನೇಕೆ ಕುದುರೆ ಮೇಲೆ ಕೂರಿಸ್ತಾರೆ?
ಪಚ್ಚ: ಓಡಿ ಹೋಗಲು ಆತನಿಗೆ ಅದೇ ಲಾಸ್ಟ್‌ ಚಾನ್ಸ್‌!

ಕಂಪನಿಯೊಂದರ ಎಚ್‌.ಆರ್‌.ಮ್ಯಾನೇಜರ್‌ ಪಚ್ಚನಿಗೆ ಫೋನ್‌ ಮಾಡಿದರು.
ಮ್ಯಾನೇಜರ್‌: ನಿಮಗೆ ಜೀವನದಲ್ಲಿ ಚೇಂಜ್‌ ಬೇಕೆನಿಸಿದೆಯೇ?
ಪಚ್ಚ: ಹೌದು ಬೇಕು. ನನ್ನ ಹತ್ರ 2000 ರೂ. ನೋಟ್‌ ಇದೆ. ತಕ್ಷಣ ಕಾಲ್‌...

ಗುಂಡ: ನಿನ್ನತ್ರ ಮೊಬೈಲ್‌ ಇಲ್ಲ, ಟೀವಿ ಇಲ್ಲ, ಪೇಪರ್‌ ತರ್ಸಲ್ಲ.. ಮತ್ತೆ ಸುದ್ದಿ ಹೇಗೆ ತಿಳ್ಕೋತೀಯಾ?
ಪಚ್ಚ: ಹೆಂಡ್ತಿ ಇದ್ದಾಳಲ್ಲ..?!

ಪಚ್ಚ: ಇದೇನೇ ಲೆಟರು? ಲವ್ವರ್‌ ಜತೆ ಮನೆ ಬಿಟ್ಟು ಹೋಗ್ತಿದೀಯಾ? ಹೋಗು,ಮದುವೆ ಖರ್ಚು ಉಳೀತು...
ಮಗಳು: ಇದು ನಂದಲ್ಲ, ಅಮ್ಮ ಕೊಟ್ಟದ್ದು!

ಸಂದರ್ಶನದಲ್ಲಿ...
ಅಧಿಕಾರಿ: ಬಿಡುವಿನ ವೇಳೆ ನೀವೇನು ಮಾಡುತ್ತೀರಿ?
ಪಚ್ಚ: ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡುತ್ತೇನೆ!

ಜಡ್ಜ್: ಸ್ನೇಹಿತನ ಒಂದು ಕೆನ್ನೆಗೆ ಹೊಡೆದಿದ್ದಕ್ಕೆ ನಿನಗೆ 1000 ರೂ.ದಂಡ ವಿಧಿಸಲಾಗಿದೆ.
ಪಚ್ಚ: ಇನ್ನೊಂದು ಕೆನ್ನೆಗೆ ಹೊಡೆದು ಬಿಡ್ತೀನಿ ಸ್ವಾಮಿ. ನನ್ನ ಹತ್ರ 2000 ರೂ., ನೋಟಿದೆ. ಚಿಲ್ಲರೆ ಇಲ್ಲ!

ಗುಂಡ: ನೀವು ಗಂಡ ಹೆಂಡ್ತಿ ಜಗಳ ಆಡ್ತಿಲ್ವಲ್ಲ.. ಈ ಸುಖಿ  ಸಂಸಾರದ ಗುಟ್ಟೇನು?
ಪಚ್ಚ: ಹೆಂಡ್ತಿಗೆ ಸ್ಮಾರ್ಟ್‌ ಫೋನ್‌ ಕೊಟ್ಟು, ವಾಟ್ಸಪ್‌ಗೆ ಸೇರಿಸಿದ್ದೀನಿ.ಅದ್ರಲ್ಲೇ ಬ್ಯುಸಿಯಾಗಿರ್ತಾಳೆ!

ಪಚ್ಚ: ನಂಗೆ 20 ಜನ ಮಕ್ಕಳು...
ಗುಂಡ: ಫ್ಯಾಮಿಲಿ ಪ್ಲಾನಿಂಗ್‌ನವ್ರು ಬರ್ಲಿಲ್ವಾ?
ಪಚ್ಚ: ಬಂದಿದ್ರು. ಅಂಗನವಾಡಿ ಅಂತ ತಿಳ್ಕೊಂಡು ವಾಪಸ್‌ ಹೋದ್ರು!

ಮೇಷ್ಟ್ರು: ಶಂಕುಸ್ಥಾಪನೆ ಅಂದರೇನು?
ಮರಿಪಚ್ಚ: ಒಳ್ಳೆ ಕೆಲ್ಸಕ್ಕೆ ದೊಡ್ಡವ್ರು ಬಂದು "ಕಲ್ಲು ಹಾಕೋದು'!

ವಾಟ್ಸಪ್‌ನಲ್ಲಿ..
ಪಚ್ಚ: ಲೋ.. ಜೋಕ್‌ ಕಳ್ಸು..
ಗುಂಡ: ನಾನು ಗರ್ಲ್ಫ್ರೆಂಡ್‌ ಜೊತೆ ಬ್ಯುಸಿ ಇದ್ದೀನಿ..
ಪಚ್ಚ: ಸೂಪರ್‌ ಚೆನ್ನಾಗಿದೆ.. ಹೀಗೆ ಇನ್ನೊಂದು ಕಳ್ಸು !

ಪಚ್ಚ  ಫಿಟ್‌ನೆಸ್‌ ಸೆಂಟರ್‌ ಇಟ್ಟಿದ್ದ..
ಹೆಂಗಸು: ನಾನು ಯುವತಿಯಂತೆ ಕಾಣಬೇಕಾದ್ರೆ ಏನು ಮಾಡ್ಬೇಕು?
ಪಚ್ಚ: ಸದಾ ಮುದುಕಿಯರ ಮಧ್ಯೆಯೇ ಕಾಣಿಸಿಕೊಳ್ಳಿ!

ಮರಿಪಚ್ಚ: ಅಪ್ಪಾ ನಾನಿನ್ನು ಶಾಲೆಗೆ ಹೋಗಲ್ಲ.. ಕೆಲ್ಸಕ್ಕೆ ಹೋಗ್ತೀನಿ..
ಪಚ್ಚ: ಬರೀ ಎರಡನೇ  ಕ್ಲಾಸು ಕಲ್ತಿದ್ದೀಯ ಏನು ಕೆಲ್ಸ ಮಾಡ್ತೀಯಾ?
ಮರಿಪಚ್ಚ: 1ನೇ ಕ್ಲಾಸು ಮಕ್ಕಳಿಗೆ ಟ್ಯೂಷನ್‌ ಕೊಡ್ತೀನಿ...

Back to Top