CONNECT WITH US  

ಐದು ವರ್ಷದಲ್ಲಿ ರಾಜ್ಯ ಬಾಲ್ಯವಿವಾಹ ಮುಕ್ತವಾಗಬೇಕು: ಸಿಎಂ

-ಮುಕ್ತ... ಮುಕ್ತ... ಮುಕ್ತ... ಮುಕ್ತ...ಮುಕ್ತ...

ಈ ಬಾರಿ ಗಣರಾಜ್ಯೋತ್ಸವದಲ್ಲಿ 23 ಸ್ತಬ್ಧಚಿತ್ರ.

-ಇದನ್ನ ನೋಡಿದವರು...

ಕೇಂದ್ರ ಸರ್ಕಾರಿ ನೌಕರರ ಆಸ್ತಿ ವಿವರ ಸಲ್ಲಿಕೆ ಗಡುವು ವಿಸ್ತರಣೆ

-ಆಸ್ತಿ ಮಾಡಿಕೊಂಡು ಆಮೇಲೆ ವಿವರ ಸಲ್ಲಿಸಲಿ ಅಂತ ಟೈಂ ಕೊಟ್ಟಿರಬೇಕು!

ಅಂತೂ ಸಿಧು ಕಾಂಗ್ರೆಸ್‌ಗೆ

-ಇಲ್ಲೂ ಸಿಕ್ಸರ್‌...

ನಮ್ಮವರಿಗೆ ಹೇಗೆ ಲಂಚ ತಿನ್ನಬೇಕೆಂದೇ ಗೊತ್ತಿಲ್ಲ: ಪಂಕಜಾ ಮುಂಡೆ.

-ಚಿಕ್ಕಿ ಹಗರಣದಲ್ಲಿ ಚಿಕ್ಕಿ ತಿಂದಷ್ಟೇ ಸುಲಭ ಅಂತಿದ್ದಾರಾ..?

ವಿಮಾನದಲ್ಲಿ ಗಲಾಟೆ ಮಾಡಿದ್ರೆ ಬೀಳುತ್ತೆ ಬೇಡಿ!

-...

ಕಾಣಿಕೆ ಪಡೆದು ಶ್ಯಾಮ್‌ ಭಟ್‌ ನೇಮಕ: ಶೆಟ್ಟರ ಆರೋಪ

-ಪೂಜೆ ಮಾಡಿಸ್ಕೊಂಡಿದ್ರಾ..?

ಬಿಕಾಂನಲ್ಲಿ ಗಣಿತ, ಭೌತಶಾಸ್ತ್ರ ಓದಿದ ಶಾಸಕರು

-ಆರ್ಟ್ಸ್ ನಲ್ಲಿ ಎಲೆಕ್ಟ್ರಾನಿಕ್ಸ್‌ ಓದಿದವ್ರೂ...

ಧ್ವಜ ಹಾರಿಸೋದಕ್ಕೆ ಮಂತ್ರಿ ಸ್ಥಾನ ಸೀಮಿತ: ಬಸವರಾಜ ರಾಯರೆಡ್ಡಿ

-ಭಿನ್ನಮತದ ಧ್ವಜಾನಾ? ಯಾವ ಧ್ವಜ ಅನ್ನೋದು ಇಂಪಾರ್ಟೆಂಟು

ಡಿಸೆಂಬರ್‌ ನಂತರವೂ ಜನರಿಗೆ ಬೇಕಾದಷ್ಟು ನಗದು ಸಿಗದು.

-...

ಜಿಎಸ್‌ಟಿ ಜಾರಿ ಜುಲೈಗೆ ಮುಂದೂಡಿಕೆ ಸಾಧ್ಯತೆ.

-ಬೇಡ.. ಹೋಗ್ಲಿ ಬಿಡಿ, ಮುಂದಿನ ಸರ್ಕಾರವೇ ಮಾಡ್ಲಿ!

ನೋಟು ರದ್ದತಿ ಬಗ್ಗೆ ಮೋದಿ ಪತ್ನಿ ಖುಷ್‌.

- ಮನಮೋಹನ ಸಿಂಗ್‌ ಎಲ್ಪಿಜಿ ಬೆಲೆ ಜಾಸ್ತಿ...

ನೋಟು ಸರಬರಾಜು ಮಾಡಿ, ಇಲ್ಲವೇ ಉತ್ತರಪ್ರದೇಶ ಚುನಾವಣೆ ಮುಂದೂಡಿ: ಬಿಜೆಪಿಗೆ ಆರೆಸ್ಸೆಸ್‌ ಸಂದೇಶ
* ಅಪ-ನಗದೀಕರಣ ವರ್ಸಸ್‌ ರಾಜಕಾರಣ!

ಖಾತೆಗೆ ದಿಢೀರ್‌ 2 ಲಕ್ಷ ತುಂಬಿದವರಿಗೆ ಸಂಕಷ್ಟ.
*  ...

ಹೊಸ ನೋಟುಗಳು ಬಿಡುಗಡೆ ಆಗುವಾಗ ಕಣ್ಣಿಡಲು ಆರ್‌ಬಿಐ ಸೂಚನೆ

-ನೋಟಿನ ಮೇಲಿರಲಿ ನೋಟ!

ಬಡವರ ವಿರುದ್ಧ ಮೋದಿ ಯುದ್ಧ: ರಾಹುಲ್‌ ವಾಗ್ಧಾಳಿ

-ಮೋದಿ ವಿರುದ್ಧ ರಾಹುಲ್‌ ಕ್ರುದ್ಧ!

...

ನನಗೆ ಸಾಡೇಸಾತಿ ಶನಿ ಕಾಟ: ಅಸ್ನೋಟಿಕರ್‌

-ರಾಜಕೀಯದಲ್ಲಿ ಯಾವಾಗ್ಲೂ ಹೀಂಗೇ!

ವರ ಬ್ಯುಸಿ, ಆತನ ಪರವಾಗಿ ಆತನ ತಂಗಿ ತಾಳಿ ಕಟ್ಟಿದ್ಲು!

-ದಾಂಪತ್ಯವೂ ಹಿಂಗೇ ಆದ್ರೆ ಕಷ್ಟ ಕಣ್ರೀ!

...

ನಿಷೇಧಿತ ನೋಟನ್ನು ಡಿ.30ರೊಳಗೇ ಖಾತೆಗೆ ಹಾಕ್ಬಿಡಿ, ಗಡುವು ವಿಸ್ತರಿಸಲ್ಲ.

-ಖಾತೆಯನ್ನೇ ನಿಷೇಧಿಸಲಾಗಿದ್ದರೆ!

ನಗದುರಹಿತ ಆರ್ಥಿಕತೆ ಕಾರ್ಯಸೂಚಿ ಸಿದ್ಧಪಡಿಸಲು ಉಪಸಮಿತಿ.

-ಮುನಿಸಿಕೊಂಡ...

ಮನೆಮನೆಗೆ ತೆರಳಿ ಮಹಿಳೆಯರಿಗೆ ಅರಿಷಿನ ಕುಂಕುಮ ನೀಡಿ ರಾಯಚೂರು ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನ.

-ಜತೆಗೊಂದು ಹಳೇನೋಟು ಕೊಟ್ಟ ಸುದ್ದಿ ಬಂದಿಲ್ಲಪ್ಪ.

ಚಾಯ್‌ವಾಲಾಗೆ ಅಂಗಡಿ ಉದ್ಘಾಟಿಸುವ ಅವಕಾಶ...

ಹೆದ್ದಾರಿಗಳಲ್ಲಿ ಡಿ.2ರವರೆಗೆ ಟೋಲ್‌ ಇಲ್ಲ.

- ಟೋಲೇ ಇಲ್ಲಾ, ಹೆದ್ದಾರಿಯಲ್ಲಿ ಸಾಗುವಾಗ...ಎಂದು ಹಾಡುತ್ತಾ ಓಡಾಡಬಹುದು!

ಪ್ರತಿಪಕ್ಷ ಮುಖಂಡರ ಕೈ ಕುಲುಕಿ ಮಾತನಾಡಿಸಿದ ಮೋದಿ

- ಆಮೇಲೆ ಕೈ...

ನಿಗಮ, ಮಂಡಳಿ ಅಧ್ಯಕ್ಷರಿಗೆ ಕೆಂಪು ಗೂಟದ ಕಾರು ಇಲ್ಲ.

-ಅದೇ ಇಲ್ಲ ಅಂದ್ಮೇಲೆ ಆ ಹುದ್ದೆಯಾದ್ರೂ ಯಾಕೆ ಅಂದ್ರಂತೆ ಶಾಸಕರು!

ಶೀಘ್ರದಲ್ಲೇ ಜಯಲಲಿತಾ ಆಸ್ಪತ್ರೆಯಿಂದ ಬಿಡುಗಡೆ.

- ಕಾವೇರಿ...

ಪುನರ್ಜನ್ಮ ಪಡೆದಿದ್ದೇನೆ: ಜಯಲಲಿತಾ

-ಪುನರ್ಜನ್ಮ ಪಡೆದ ನೋಟೂ ಬಂದಿದೆ!

ಶೀಲಾ ದೀಕ್ಷಿತ್‌ ಅಳಿಯ ಬೆಂಗಳೂರಿನಲ್ಲಿ ಬಂಧನ

-ಅಳಿಯನಿಗೆ ಮಾವನ ಮನೆ ಆತಿಥ್ಯ

ಸಾವಿನ ಸುದ್ದಿಗೆ ನೈಸ್‌...

ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅವಕಾಶ. ಸುಪ್ರೀಂಗೆ ಕೇರಳ ಸರ್ಕಾರ ಪ್ರಮಾಣಪತ್ರ.

- ಶಬರಿ ಹೆಣ್ಣು ಅನ್ನೋದು ಸರ್ಕಾರಕ್ಕೆ ಖಾತ್ರಿಯಾಗಿರಬೇಕು!

ಅಸ್ವಸ್ಥ ತಾಯಿ-ಮಗಳಿಗೆ ವಿಐಪಿ ಸೀಟು...

ಎನ್‌ಡಿಟೀವಿ ಸುದ್ದಿವಾಹಿನಿಗೆ ಒಂದು ದಿನದ ಮಟ್ಟಿಗೆ ಕೇಂದ್ರದಿಂದ ನಿಷೇಧ.

-ಅಂತೂ ಟೀವಿಯೋರಿಗೂ ಒಂದ್‌ ದಿನ ರಜೆ ಸಿಕ್ತು!

ಸಿದ್ಧು ತುಘಲಕ್‌ ಥರ ವರ್ತಿಸ್ತಿದ್ದಾರೆ ಅಂದ್ರು ಶ್ರೀನಿವಾಸ ಪ್ರಸಾದ್...

ಬೆಡ್‌ರೂಂ, ಡೈನಿಂಗ್‌ ರೂಂ, ಅಡುಗೆಮನೆಗೂ ನುಸುಳುತ್ತಿದೆ: ತರೂರ್‌ ಅಸಮಾಧಾನ

-ಅವಿವಾಹಿತ ಅಭ್ಯಾಸಗಳು!

ಏ ದಿಲ್‌ ಹೈ ಮುಷ್ಕಿಲ್‌ 100 ಕೋಟಿ ಕ್ಲಬ್‌ ಗೆ

- ದಿಲ್‌ ಮುಷ್ಕಿಲ್‌ ಆದ್ರೂ ಕಾಸು...

ಕಮಲ ಹಾಸನ್‌-ಗೌತಮಿ ಲಿವಿಂಗ್‌ ಟುಗೆದರ್‌ ಸಂಬಂಧ ಅಂತ್ಯ

- ದಶಾವತಾರಂನಲ್ಲಿ ಮೂರು ಅವತಾರ ಮುಗೀತು!

ರಿಯಲ್‌ ಎಸ್ಟೇಟ್‌ ಕಾಯ್ದೆ ಜಾರಿ. ಮನೆ ಹಸ್ತಾಂತರ ವಿಳಂಬವಾದರೆ ಖರೀದಿದಾರರಿಗೆ ಬಿಲ್ಡರ್‌ ಶೇ.10...

ಕೇರಳದಲ್ಲಿ ಹೆಚ್ಚು ಬೀದಿನಾಯಿಗಳನ್ನು ಕೊಂದವರಿಗೆ ಚಿನ್ನದ ನಾಣ್ಯ

- ದೀಪಾವಳಿ ಬಂಪರ್‌ ಆಫ‌ರ್‌ ಎನ್ನಬಹುದೇ!?

ಜನವರಿಯಲ್ಲಿ ಒಂದೇ ರಾಕೆಟ್‌ ಬಳಸಿ 84 ಉಪಗ್ರಹ ಉಡಾವಣೆಗೆ ಇಸ್ರೋ ಸಿದ್ಧತೆ

...

ಕೇಂದ್ರ ಸಚಿವ ಸಂಪುಟ ಸಭೆಗೆ ಮೊಬೈಲ್‌ ಫೋನ್‌ ನಿಷೇಧ.

-ಹಾಗಾದ್ರೆ ಮೀಟಿಂಗ್‌ ಮುಗಿದ ಮೇಲೆ ಮೋದಿ ಜತೆ ಮಂತ್ರಿಗಳು ಸೆಲ್ಫಿ ತಗೊಳ್ಳೋದು ಹೇಗೆ? 

ಸಿಎಂ ಇಬ್ರಾಹಿಂ ವಿರುದ್ಧ ಸಿಎಂ ಸಿದ್ದರಾಮಯ್ಯ...

Back to Top