CONNECT WITH US  

ಶುಭನುಡಿ

ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

ಮನಸಿನಲ್ಲಿರುವ ಹೆದರಿಕೆಗಳ ದಾರಿ ಬಿಟ್ಟು, ಹೃದಯದಲ್ಲಿನ ಕನಸು ತೋರಿಸಿದ ದಾರಿಯಲ್ಲಿ ಮುನ್ನಡೆಯಿರಿ.
 

ನಿತ್ಯವೂ ಜೀವನವನ್ನು ಬದಲಿಸುವಂಥ ಅವಕಾಶಗಳು ಎದುರಾಗುತ್ತಿರುತ್ತವೆ, ಅವನ್ನು ಬಳಸಿಕೊಳ್ಳುವ ತಯ್ನಾರಿ-ಸಾಮರ್ಥ್ಯ ನಮ್ಮಲ್ಲಿ ಇರಬೇಕು.

ಜನರನ್ನು ಮೆಚ್ಚಿಸಲು ನಿರಂತರ ಪ್ರಯತ್ನಿಸುವವರಿಗೇ ದುಗುಡ, ಒತ್ತಡ, ಖನ್ನತೆ ಕಾಡುತ್ತದೆ.

ಜೀವನದಲ್ಲಿ ಗೆಲ್ಲಲು ಸುಲಭ ಹಾದಿಗಳು ಇಲ್ಲ. ಪರಿಶ್ರಮವೇ ಯಶಸ್ಸಿನ ಗುಟ್ಟು.

ಜೀವನ ಎಂಬುದು ರೇಖಾಚಿತ್ರ ಇದ್ದಂತೆ. ಆದರೆ ಅಳಿಸಿ, ತಿದ್ದಲು ರಬ್ಬರ್‌ ಇರುವುದಿಲ್ಲ.

ಯಶಸ್ಸಿಗೆ ಅನೇಕ ತ್ಯಾಗಗಳನ್ನು ಮಾಡಬೇಕಾಗುತ್ತದೆ. ಆದರೆ ಆ ತ್ಯಾಗಗಳು ನಿಮ್ಮ ಕುಟುಂಬದವರಿಗೆ ಹಾನಿಮಾಡದಂತೆ ಇರಬೇಕು.

ಶಿಕ್ಷಣವು ಜೀವನದ ತಯಾರಿಯಲ್ಲ.ಶಿಕ್ಷಣವೇ ಜೀವನ.
 

ನಮ್ಮ ಯೋಜನೆಗಳ ಬಗ್ಗೆ ಹೆಚ್ಚು ಮಾತನಾಡಬಾರದು. ನಡೆಯಿಂದ ಸಂತೃಪ್ತಿ ಸಿಗಬೇಕೇ ಹೊರತು,ನುಡಿಯಿಂದಲ್ಲ.

ಒಂದು ವಿಷಯದ ಬಗ್ಗೆ ಅತಿಯಾಗಿ ಆಲೋಚಿಸಿದರೆ ಅದನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ.
 

ಗೆಲ್ಲುವ ಛಲ ಅಧಿಕವಿದ್ದವನಿಗೆ ಸೋಲಿನ ನೋವು ಹೆಚ್ಚು ಬಾಧಿಸುವುದಿಲ್ಲ.

ನಿಮ್ಮ ದಿನವು ಪರಿಸ್ಥಿತಿಯ ಉತ್ಪನ್ನವಾಗಬಾರದು, ನಿಮ್ಮ ನಿರ್ಣಯಗಳ ಉತ್ಪನ್ನವಾಗಬೇಕು.

ಸಾಗರ ದಾಟಲು ಬಯಸುವವನು ದೋಣಿಯೇರಬೇಕು, ತೀರದಲ್ಲಿ ನಿಂತು ಕನಸು ಕಂಡರೆ ಆಗದು.

ನಿಮಗೆ ಅತಿ ಹೆಚ್ಚು ಸವಾಲುಗಳು ಎದುರಾಗುತ್ತಿವೆ ಎಂದರೆ ನೀವು ಸರಿಯಾದ ದಾರಿಯಲ್ಲಿ ಸಾಗುತ್ತಿದ್ದೀರಿ ಎಂದರ್ಥ.

ಇನ್ನೊಬ್ಬರಂತಾಗಲು ಪ್ರಯತ್ನಿಸದಿರಿ. ಅದೆಂದಿಗೂ ಸಾಧ್ಯವಿಲ್ಲ. ನಿನ್ನೆಗಿಂತ ಇಂದಿಗೆ ಉತ್ತಮರಾಗಲು ಬಯಸಿ.

ನಿಮ್ಮ ಪ್ರಯತ್ನ ಅತ್ಯುತ್ತಮವಾಗಿರಲಿ. ಇಂದು ಬಿತ್ತಿದ್ದನ್ನೇ ನಾಳೆ ಬೆಳೆಯುತ್ತೀರಿ.

ಯಶಸ್ಸು ಪಡೆಯಲು ಕಷ್ಟಕರ ಹಾದಿಯಲ್ಲೇ ಸಾಗಬೇಕಿಲ್ಲ. ಶಾರ್ಟ್‌ಕಟ್‌ ಎನ್ನುವುದು ಯಾವಾಗಲೂ ಕೆಟ್ಟದಲ್ಲ.

ಒಬ್ಬನೇ ಬೆಳಕಿನಲ್ಲಿ ನಡೆಯುವುದಕ್ಕಿಂತ, ನಂಬಿದವರ ಜೊತೆ ಕತ್ತಲಲ್ಲಿ ಕೈಹಿಡಿದು ನಡೆಯುವುದು ಉತ್ತಮ.

ಭೂತಕಾಲವನ್ನು ಬದಲಿಸಲು ಸಾಧ್ಯವಿಲ್ಲ. ಆದರೆ ಅದು ಕಲಿಸಿದ ಪಾಠವನ್ನು ಭವಿಷ್ಯ ರೂಪಿಸಲು ಬಳಸಬಹುದು.

ಪ್ರೀತಿಯೇ ಪರಮೋಚ್ಚ ಗುಣವಾಗಲಿ. ನಿಮ್ಮ ಸುತ್ತಲಿರುವವರಿಗೆ ಪ್ರೀತಿ ಹಂಚಿ.

ಮುಜುಗರವಾಗಬಹುದು ಎಂಬ ಹಿಂಜರಿಕೆಯೇ ಅನೇಕ ಸಂಭಾವ್ಯ ಸಾಧನೆಗಳಿಗೆ ಸಮಾಧಿ ಕಟ್ಟಿಬಿಡುತ್ತದೆ. 

Back to Top