• ಕಪ್ಪ

  ಕೊಡಲೇಬೇಕು ಕೋಟಿಗಟ್ಟಲೆ ಕಪ್ಪುಹಣ ಹೈಕಮಾಂಡಿಗೆ ಕಪ್ಪ ಹಣ ಕಪ್ಪಾದರೇನು ಸಿಎಂ ಕುರ್ಚಿ ಕಪ್ಪಾ? -ಎಚ್‌.ಡುಂಡಿರಾಜ್‌  

 • ವಿನಂತಿ

  ಸಿಎಂ ಹೇಳುವುದೂ ಅದೇ ಪಿಎಂ ಹೇಳುವುದೂ ಅದೇ ಏನು ಬೇಕಾದರೂ ಬೈರಿ ಎಷ್ಟು ಬೇಕಾದರೂ ಬೈರಿ ದಯವಿಟ್ಟು ನೋಡಬೇಡಿ ಇನ್ನೊಬ್ಬರ ಡೈರಿ   – ಎಚ್‌.ಡುಂಡಿರಾಜ್‌

 • ವರ 

  ಘೋರ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದ ಈಶ್ವರ ಕೇಳಿದ ಪಾರ್ವತಿಯ ಹತ್ತಿರ ಏನು ಬೇಕು ವರ? ಅವಳು ಹೇಳಿದಳು ನಾನು ವಧು ನೀನೇ ವರ!   – ಎಚ್‌. ಡುಂಡಿರಾಜ್‌

 • ಅಲ್ಲಿ-ಇಲ್ಲಿ

  ಅಲ್ಲಿ ಕುರ್ಚಿಗಾಗಿ ಹೊಡೆದಾಟ ಹರಿದ ಅಂಗಿ, ಜಾರಿದ ಲುಂಗಿ ಥೂ ಅಸಹ್ಯ, ಹೇಸಿಗೆ ಇಲ್ಲಿ  ಸದ್ದುಗದ್ದಲಲ್ಲದೆ ಅಧಿಕಾರ ಹಸ್ತಾಂತರ ಆಗಿದೆ ಚಳಿಗಾಲ ಮರೆಯಾಗಿ ಕಾಲಿಡುತ್ತಿದೆ ಬೇಸಿಗೆ! – ಎಚ್‌. ಡುಂಡಿರಾಜ್‌

 • ಕಪ್ಪ

  ಪ್ರಚಾರ ಪಡೆಯಲು ಬಾಯಿಗೆ ಬಂದ ಹಾಗೆ ಆರೋಪ ಮಾಡಬಾರದು ಯಾರೂ ಹೈಕಮಾಂಡಿಗೆ ಕಪ್ಪಕೊಡುವುದಿಲ್ಲ ಡೈರಿಯಲ್ಲಿ ಬರೆದು! – ಎಚ್‌. ಡುಂಡಿರಾಜ್‌

 • ಹರಾಜಕೀಯ

  ವರ್ಷಕ್ಕೊಮ್ಮೆ ಐಪಿಎಲ್‌ ಆಟಗಾರರ ಹರಾಜು. ದಿನವೂ ಇರುತ್ತದೆ ಹಗರಣದ ಸುದ್ದಿ ಆರೋಪ ಪ್ರತ್ಯಾರೋಪ ರಾಜಕಾರಣಿಗಳ ಮಾನ ಹರಾಜು! – ಎಚ್‌. ಡುಂಡಿರಾಜ್‌

 • ರಾಜಕಾರಣ

  ನಿನ್ನೆ ಜಗಳ ಇಂದು ರಾಜಿ ನಾಳೆ ಪುನಃ ಕಲಹ ಒಡೆಯುವುದೂ ಅದೇ ಜೋಡಿಸುವುದೂ ಅದೇ ಅಧಿಕಾರದ ದಾಹ!   – ಎಚ್‌. ಡುಂಡಿರಾಜ್‌

 • ಕಾರಣ

  ಜ್ಯೋತಿಷಿಗಳ ಪ್ರಕಾರ ಇಸ್ರೋ ಯಶಸ್ಸಿಗೆ ಕಾರಣ ಅತ್ಯಂತ ಸರಳ ತುಂಬಾ ಚೆನ್ನಾಗಿತ್ತು ವಿಜ್ಞಾನಿಗಳ ಮತ್ತು ಎಲ್ಲ 104 ಉಪಗ್ರಹಗಳ ಗ್ರಹಬಲ! – ಎಚ್‌. ಡುಂಡಿರಾಜ್‌

 • ಒಡೆದು ಆಳು 

  ಈಗಲೂ ಇದೆ ಆಂಗ್ಲರು ಕಲಿಸಿದ ಒಡೆದು ಆಳುವ ಧೋರಣೆ ಇತ್ತೀಚಿನ ಉದಾಹರಣೆ ಕಸ ವಿಂಗಡನೆ! – ಎಚ್‌. ಡುಂಡಿರಾಜ್‌

 • ಶಶಿಕಲಾ

    ಬಯಸಿದ್ದು ಸಿಎಂ ಹುದ್ದೆ ಸಿಕ್ಕಿದ್ದು ಜೈಲು ರಾಗಿಮುದ್ದೆ ಕೊನೆಗೂ ಕಣ್ತೆರೆದ ಲಾ (Law) ಸೋತಳು ಶಶಿಕಲಾ ಇನ್ನಾದರೂ ಸುಮ್ಮನಿರುತ್ತಾಳಾ ಜಯಲಲಿತಾಳ ಬೆನ್ನು ಹತ್ತಿದ ಬೇತಾಳ? – ಎಚ್‌. ಡುಂಡಿರಾಜ್‌

 • ಸಮರ್ಥನೆ 

  ದುಡ್ಡೇ ದೊಡ್ಡಪ್ಪ ಅರ್ಹತೆ ಚಿಕ್ಕಪ್ಪ ಹುದ್ದೆ ಬೇಕಾದ್ರೆ ಕೊಡಲೇ ಬೇಕಪ್ಪ ಎಲ್ರೂ ಕೊಡ್ತಾರೆ ಹೈಕಮಾಂಡಿಗೆ ಕಪ್ಪ ಅದೇನ್‌ ತಪ್ಪಾ? ತಪ್ಪು ಅನ್ನೋನೆ ಬೆಪ್ಪ! – ಎಚ್‌. ಡುಂಡಿರಾಜ್‌

 • ಕೆಂಗುಲಾಬಿ

  ಅರಳಿ ನಿಂತಿದೆ ಅಲ್ಲಿ ಮೂಡಣದ ಗಿಡದಲ್ಲಿ ಪ್ರೀತಿಯ ಸಂಕೇತವಾಗಿ ಪ್ರತಿದಿನವೂ ದೇವರು ನೀಡುವ ಗುಲಾಬಿ ಹೂ! – ಎಚ್‌. ಡುಂಡಿರಾಜ್‌

 • ನಿಷ್ಠಾಂತರ

  ಮುಂಜಾನೆ ಈ ಕಡೆ ಸಂಜೆ ಆ ಕಡೆ ದನ ಇದ್ದಲ್ಲಿ ಕರು ಧನ ಇದ್ದಲ್ಲಿ ಶಾಸ ಕರು! – ಎಚ್‌. ಡುಂಡಿರಾಜ್‌

 • ಕೋಟ್‌ 

  ಉತ್ತಮ ಮಾತುಗಾರರು ಭಾಷಣದಲ್ಲಿ ಬಳಸುವರು ಅಲ್ಲಲ್ಲಿ ಒಳ್ಳೆಯ ಕೋಟ್‌ ಮಾತೇ ಆಡದವರು ಏನು ಮಾಡುವರು? ಧರಿಸುವರು ರೈನ್‌ಕೋಟ್‌! – ಎಚ್‌. ಡುಂಡಿರಾಜ್‌

 • ಕಾಳಗ 

  ತಮಿಳುನಾಡಲ್ಲಿ ಸದಾ ಒಂದಲ್ಲಾ ಒಂದು ಬಿಕ್ಕಟ್ಟು ಮುಗಿಯಿತು ಜಲ್ಲಿಕಟ್ಟು ಶುರುವಾಯಿತು ಕುರ್ಚಿ ಫೈಟು! – ಎಚ್‌. ಡುಂಡಿರಾಜ್‌

 • ಸದನದಲ್ಲಿ 

  ಹಾಳುಬಿದ್ದ ಹೊಲದಂತೆ ಖಾಲಿ ಖಾಲಿ ಕುರ್ಚಿಗಳು ಬರದ ಬಗ್ಗೆ ಚರ್ಚಿಸಲು ಬರಲಿಲ್ಲ ಶಾಸಕರು ದನದ ಕೆಚ್ಚಲಲ್ಲಿ ಹಾಲು ಇದ್ದರಷ್ಟೇ ಬರುತ್ತದೆ ಕರು! – ಎಚ್‌. ಡುಂಡಿರಾಜ್‌

 • ವ್ಯತ್ಯಾಸ

  ಲೋಕಸಭೆಯಿರಲಿ ವಿಧಾನಸಭೆಯಿರಲಿ ತಾಳ್ಮೆಯಿಂದ ಮಾತಾಡುವವ ಜಂಟಲ್‌ ಮ್ಯಾನ್‌ ಜೋರಾಗಿ ಒದರುವವ ಗಂಟಲ್‌ ಮ್ಯಾನ್‌! – ಎಚ್‌.  ಡುಂಡಿರಾಜ್‌

 • ಶಶಿಕಲಾ ನಟರಾಜನ್‌

  ಜಯಲಲಿತಾಳ ಹಾಗೆ ಈಕೆ ನಟಿಯಲ್ಲ  ನಿಜ ಆದರೂ ಪರವಾಗಿಲ್ಲ ಗಂಡ ನಟರಾಜ! -ಎಚ್‌. ಡುಂಡಿರಾಜ್‌

 • ಶಶಿಕಲಾ

  ಜಯಲಲಿತಾ ಉತ್ತಮ ಕಲಾವಿದೆ ಅವಳ ಉತ್ತರಾಧಿಕಾರಿ ಹೆಸರಲ್ಲಿ “ಕಲಾ’ ಇದೆ!  – ಎಚ್‌. ಡುಂಡಿರಾಜ್‌

 • ಆಯ್ಕೆ (ಹನಿಗಾರಿಕೆ)

  ಅವರು ಹೇಳಿದರು ಸಾಹಿತ್ಯದಲ್ಲಿ ಎಡವೂ ಬೇಡ, ಬಲವೂ ಬೇಡ ಆರಿಸಿಕೊಳ್ಳಿ ನಡುವಿನ ದಾರಿಯನ್ನು ಕೆಲವು ಸಾಹಿತಿಗಳಿಗೆ ಸದಾ ನಡುವಿನ ಮೇಲೆಯೇ ಕಣ್ಣು! – ಎಚ್‌. ಡುಂಡಿರಾಜ್‌

ಹೊಸ ಸೇರ್ಪಡೆ