ಶ್ರೀಲಂಕಾಕ್ಕೆ ಕಾದಿದೆ ಇಂಗ್ಲೆಂಡ್‌ ಟೆಸ್ಟ್‌


Team Udayavani, Jun 21, 2019, 5:18 AM IST

englan-new

ಲೀಡ್ಸ್‌: ಈಗಾಗಲೇ ಆರನೇ ಸ್ಥಾನಕ್ಕೆ ಕುಸಿದು ತನ್ನ ಸೆಮಿಫೈನಲ್‌ ಸಾಧ್ಯತೆಯನ್ನು ದುರ್ಗಮಗೊಳಿಸಿರುವ ಶ್ರೀಲಂಕಾ ಶುಕ್ರವಾರ ಕಠಿನ ಸವಾಲೊಂದನ್ನು ಎದುರಿಸಲಿದೆ. ಕರುಣರತ್ನೆ ಪಡೆ ಲೀಡ್ಸ್‌ನ ಹೇಡಿಂಗ್ಲೆ ಅಂಗಳದಲ್ಲಿ ಆತಿಥೇಯ ಇಂಗ್ಲೆಂಡನ್ನು ಎದುರಿಸಲಿದೆ. ಇದನ್ನು ಗೆದ್ದರಷ್ಟೇ ಲಂಕಾ ಈ ಕೂಟದಲ್ಲಿ ಮುಂದೆ ಸಾಗಲಿದೆ.

ಇದು ಲೀಡ್ಸ್‌ನಲ್ಲಿ ನಡೆಯುವ ಪ್ರಸಕ್ತ ವಿಶ್ವಕಪ್‌ ಕೂಟದ ಮೊದಲ ಪಂದ್ಯವಾದ್ದರಿಂದ ಇಲ್ಲಿನ ಟ್ರ್ಯಾಕ್‌ ಹೇಗೆ ವರ್ತಿಸೀತು ಎಂದು ಇನ್ನಷ್ಟೇ ತಿಳಿಯಬೇಕಿದೆ.

ಐದರಲ್ಲಿ 4 ಪಂದ್ಯ ಗೆದ್ದಿರುವ ಇಂಗ್ಲೆಂಡ್‌ ಪ್ರಚಂಡ ಪ್ರದರ್ಶನ ಕಾಯ್ದುಕೊಂಡು ಬಂದಿದೆ. ಅಷ್ಟೇನೂ ಬಲಿಷ್ಠವಲ್ಲದ ಲಂಕೆಯನ್ನು ಮಣಿಸುವುದು ಮಾರ್ಗನ್‌ ಪಡೆಗೆ ಭಾರೀ ಸವಾಲಾಗಲಿಕ್ಕಿಲ್ಲ ಎಂಬುದೊಂದು ಲೆಕ್ಕಾಚಾರ.

ಶ್ರೀಲಂಕಾ ಈವರೆಗೆ ಆಡಿದ 5 ಪಂದ್ಯಗಳಲ್ಲಿ ಗೆದ್ದದ್ದು ಒಂದನ್ನು ಮಾತ್ರ. ಎರಡರಲ್ಲಿ ಸೋತಿದ್ದು, ಉಳಿದೆರಡು ಪಂದ್ಯ ಮಳೆಯಿಂದ ರದ್ದಾಗಿದೆ. ಅಫ್ಘಾನ್‌ ವಿರುದ್ಧ ಅಬ್ಬರಿಸಿದ ಆಂಗ್ಲರನ್ನು ತಡೆಯುವುದು ಹೇಗೆ ಎಂಬುದು ಲಂಕೆಯನ್ನು ಆವರಿಸಿರುವ ಚಿಂತೆ.

ಲಂಕಾ ಶೋಚನೀಯ ಆಟ
1996ರ ಚಾಂಪಿಯನ್‌ ಆಗಿರುವ ಶ್ರೀಲಂಕಾ ಅನಂತರದ ಕೆಲವು ಕೂಟಗಳಲ್ಲಿ ಫೈನಲ್‌ ಪ್ರವೇಶಿಸಿದರೂ ಪ್ರಶಸ್ತಿಯನ್ನೆತ್ತಲು ವಿಫ‌ಲವಾಗಿತ್ತು. ಸಂಗಕ್ಕರ, ಜಯವರ್ಧನ ಅವರಂಥ ಘಟಾನುಘಟಿ ಬ್ಯಾಟ್‌ ಮನ್‌ಗಳ ಹೊರತಾಗಿಯೂ ಲಂಕಾ ಫೈನಲ್‌ನಲ್ಲಿ ಎಡವಿತ್ತು. ಈ ಸಲವಂತೂ ತನ್ನ ವಿಶ್ವಕಪ್‌ ಇತಿಹಾಸದಲ್ಲೇ ಅತ್ಯಂತ ದುರ್ಬಲ ತಂಡವನ್ನು ಕಟ್ಟಿಕೊಂಡು ಬಂದಿದೆ. ನಿರೀಕ್ಷೆಯಂತೆ ಶೋಚನೀಯ ಪ್ರದರ್ಶನವನ್ನೇ ನೀಡುತ್ತಿದೆ.

ನ್ಯೂಜಿಲ್ಯಾಂಡ್‌ ವಿರುದ್ಧ ಕೊನೆಯ 5 ವಿಕೆಟ್‌ಗಳನ್ನು 14 ರನ್ನಿಗೆ ಕಳೆದುಕೊಂಡದ್ದು, ಅಫ್ಘಾನ್‌ ವಿರುದ್ಧ 36.5 ಓವರ್‌ಗಳಲ್ಲಿ 201ಕ್ಕೆ ಕುಸಿದದ್ದು, ಇಲ್ಲಿ ಅಂತಿಮ 7 ವಿಕೆಟ್‌ಗಳನ್ನು 36 ರನ್ನಿಗೆ ಉದುರಿಸಿಕೊಂಡದ್ದೆಲ್ಲ ಶ್ರೀಲಂಕಾದ ಕಳಪೆ ಪ್ರದರ್ಶನದ ಕೆಲವು ನಿದರ್ಶನಗಳು. ಇಂಥ ತಂಡ ಜೋಫ‌Å ಆರ್ಚರ್‌, ಮಾರ್ಕ ವುಡ್‌ ದಾಳಿಯನ್ನು ಹೇಗೆ ನಿಭಾಯಿಸೀತೆಂಬುದೇ ದೊಡ್ಡ ಪ್ರಶ್ನೆ.

ಆಂಗ್ಲರ ಭೋರ್ಗರೆತ
ಜಾಸನ್‌ ರಾಯ್‌ ಗೈರಲ್ಲೂ ಇಂಗ್ಲೆಂಡ್‌ ಸಿಡಿಲಬ್ಬರದ ಪ್ರದರ್ಶನ ನೀಡಿದ್ದಕ್ಕೆ ಅಫ್ಘಾನ್‌ ಪಂದ್ಯ ಸಾಕ್ಷಿಯಾಗಿತ್ತು. ನಾಯಕ ಇಯಾನ್‌ ಮಾರ್ಗನ್‌ 17 ಸಿಕ್ಸರ್‌ ಬಾರಿಸಿದ್ದನ್ನು ಕಲ್ಪಿಸಿಕೊಂಡರೇನೇ ಎದುರಾಳಿ ಬೆಚ್ಚಿಬೀಳುವಂಥ ಸನ್ನಿವೇಶ ಸೃಷ್ಟಿಯಾಗಿದೆ. ಈ ಮುಖಾಮುಖೀಯಲ್ಲಿ ಆತಿಥೇಯ ತಂಡ 6ಕ್ಕೆ 397 ರನ್‌ ಸೂರೆಗೈದಿತ್ತು. ಇದಕ್ಕೂ ಮುನ್ನ ಬಾಂಗ್ಲಾದೇಶ ವಿರುದ್ಧ 6ಕ್ಕೆ 386 ರನ್‌ ಪೇರಿಸಿತ್ತು.

ಸಂಭಾವ್ಯ ತಂಡಗಳು
ಶ್ರೀಲಂಕಾ: ದಿಮುತ್‌ ಕರುಣರತ್ನೆ (ನಾಯಕ), ಕುಸಲ್‌ ಪೆರೆರ, ಲಹಿರು ತಿರಿಮನ್ನೆ, ಕುಸಲ್‌ ಮೆಂಡಿಸ್‌, ಏಂಜೆಲೊ ಮ್ಯಾಥ್ಯೂಸ್‌, ಧನಂಜಯ ಡಿ ಸಿಲ್ವ, ತಿಸರ ಪೆರೆರ, ಮಿಲಿಂದ ಸಿರಿವರ್ಧನ/ಸುರಂಗ ಲಕ್ಮಲ್‌, ಇಸುರು ಉದಾನ, ಲಸಿತ ಮಾಲಿಂಗ, ವುವಾನ್‌ ಪ್ರದೀಪ್‌.

ಇಂಗ್ಲೆಂಡ್‌
ಜೇಮ್ಸ್‌ ವಿನ್ಸ್‌, ಜಾನಿ ಬೇರ್‌ಸ್ಟೊ, ಜೋ ರೂಟ್‌, ಇಯಾನ್‌ ಮಾರ್ಗನ್‌ (ನಾಯಕ), ಬೆನ್‌ ಸ್ಟೋಕ್ಸ್‌, ಜಾಸ್‌ ಬಟ್ಲರ್‌, ಮೊಯಿನ್‌ ಅಲಿ, ಲಿಯಮ್‌ ಪ್ಲಂಕೆಟ್‌/ಆದಿಲ್‌ ರಶೀದ್‌, ಕ್ರಿಸ್‌ ವೋಕ್ಸ್‌, ಮಾರ್ಕ್‌ ವುಡ್‌, ಜೋಫ‌Å ಆರ್ಚರ್‌.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.