ಮಾರ್ಗನ್ ಕೈಗೆ ಪೆಟ್ಟು
Team Udayavani, May 26, 2019, 9:40 AM IST
ಲಂಡನ್: ವಿಶ್ವಕಪ್ನ ನೆಚ್ಚಿನ ತಂಡವಾಗಿರುವ ಇಂಗ್ಲೆಂಡಿಗೆ ಆಘಾತವೊಂದು ಎದುರಾಗಿದೆ. ನಾಯಕ ಇಯಾನ್ ಮಾರ್ಗನ್ ಅಭ್ಯಾಸದ ವೇಳೆ ಕೈಗೆ ಪೆಟ್ಟು ಮಾಡಿಕೊಂಡಿದ್ದಾರೆ. ಹೀಗಾಗಿ ಅವರು ಶನಿವಾರ ಆಸ್ಟ್ರೇಲಿಯ ಎದುರಿನ ಅಭ್ಯಾಸ ಪಂದ್ಯದಿಂದ ದೂರ ಉಳಿದರು.
ಈ ಕುರಿತು ಪ್ರತಿಕ್ರಿಯಿಸಿದ ಮಾರ್ಗನ್, “ಇದೊಂದು ಸಣ್ಣ ಗಾಯ, ಹೀಗಾಗಿ ಅಭ್ಯಾಸ ಪಂದ್ಯದಲ್ಲಿ ಆಡಲು ಸಾಧ್ಯವಾಗುತ್ತಿಲ್ಲ. ಮುಂದಿ ನ ಪಂದ್ಯಗಳಿಗೆ ಲಭ್ಯವಾಗಲಿದ್ದೇನೆ’ ಎಂದಿದ್ದಾರೆ.