ಯುವತಿಯರ ಜತೆ ಫೋಟೋ: ಟ್ರೋಲ್ ಆದ ರವಿಶಾಸ್ತ್ರಿ
Team Udayavani, Jun 6, 2019, 6:00 AM IST
ಲಂಡನ್: ಭಾರತ ಕ್ರಿಕೆಟ್ ತಂಡದ ಕೋಚ್ ರವಿಶಾಸ್ತ್ರಿ ಸೋಷಿಯಲ್ ಮೀಡಿಯಾದಲ್ಲಿ ಅತೀ ಹೆಚ್ಚು ಟ್ರೋಲ್ ಆಗುತ್ತಿರುವವರ ಪೈಕಿ ಒಬ್ಬರು. ಇಂಥ ಟ್ರೋಲ್ಗಳಿಗೆ ಹೇಗೆ ಎದಿರೇಟು ನೀಡಬೇಕೆನ್ನುವುದು ಶಾಸ್ತ್ರಿಗೆ ಗೊತ್ತು. ಇದೀಗ ಟ್ವಿಟರ್ನಲ್ಲಿ ಹಂಚಿಕೊಂಡು ಒಂದು ಫೋಟೊ ಒಂದರಿಂದ ಶಾಸ್ತ್ರಿಇನ್ನೊಮ್ಮೆ ಟ್ರೋಲ್ಗೆ ಗುರಿಯಾಗಿದ್ದಾರೆ.
ಇಬ್ಬರು ಲಲನೆಯರ ಜತೆಗಿದ್ದ ಫೋಟೊವನ್ನು ಶಾಸ್ತ್ರಿ ತಮ್ಮ ಟ್ವೀಟ್ರ್ನಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೊಗೆ ಮೊದಲು ಪ್ರತಿಕ್ರಿಯೆ ನೀಡಿದವರು ಆಸ್ಟ್ರೇಲಿಯದ ಪತ್ರಕರ್ತ ಡೆನಿಸ್ ಫ್ರೀಡ್ಮ್ಯಾನ್.
“ಭಾರತದ ವಿಶ್ವಕಪ್ ತಯಾರಿ ಭರ್ಜರಿಯಾಗಿಯೇ ನಡೆಯುತ್ತಿದೆ’ ಎಂದು ಅವರು ಈ ಫೋಟೊಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. “ವಿಶ್ವಕಪ್ಗೆ ರವಿಶಾಸ್ತ್ರಿ ಚಿಯರ್ ಲೀಡರ್ ಸಿದ್ಧಪಡಿಸುತ್ತಿದ್ದಾರೆ’ ಎಂದು ಕೆಲವು ಆಸೀಸ್ ಅಭಿಮಾನಿಗಳು ಅಪಹಾಸ್ಯ ಮಾಡಿದ್ದಾರೆ. “ನಿಮ್ಮಂತೆ ನಾವು ಚೆಂಡು ವಿರೂಪ ಮಾಡಿಲ್ಲ’ ಎನ್ನುವ ಮೂಲಕ ಭಾರತೀಯ ಅಭಿಮಾನಿಗಳು ಆಸೀಸ್ ಕ್ರಿಕೆಟ್ ಅಭಿಮಾನಿಗಳಿಗೆ, ಪತ್ರಕರ್ತನಿಗೆ ತಕ್ಕ ಉತ್ತರ ನೀಡಿದ್ದಾರೆ.