ಮಳೆ: ಪಾಕ್‌-ಬಾಂಗ್ಲಾ ಪಂದ್ಯ ರದ್ದು

Team Udayavani, May 27, 2019, 6:00 AM IST

ಕಾರ್ಡಿಫ್: ಕಾರ್ಡಿಫ್ ನಲ್ಲಿ ಸುರಿದ ಭಾರೀ ಮಳೆಯಿಂದ ಪಾಕಿಸ್ಥಾನ-ಬಾಂಗ್ಲಾದೇಶ ನಡುವಿನ ರವಿವಾರದ ವಿಶ್ವಕಪ್‌ ಅಭ್ಯಾಸ ಪಂದ್ಯ ಒಂದೂ ಎಸೆತ ಕಾಣದೆ ರದ್ದುಗೊಂಡಿದೆ. ಟಾಸ್‌ ಕೂಡ ಹಾರಿಸಲಾಗಲಿಲ್ಲ. ಇದರಿಂದ ಎರಡೂ ತಂಡಗಳ ಅಭ್ಯಾಸ ಹಾಗೂ ವಿಶ್ವಕಪ್‌ ತಯಾರಿಗೆ ಭಾರೀ ಹಿನ್ನಡೆಯಾಗಿದೆ.

ಪಾಕಿಸ್ಥಾನ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ಥಾನದ ವಿರುದ್ಧ 3 ವಿಕೆಟ್‌ಗಳಿಂದ ಸೋತಿತ್ತು. ಬಾಂಗ್ಲಾದೇಶಕ್ಕೆ ಇದು ಮೊದಲ ಅಭ್ಯಾಸ ಪಂದ್ಯವಾಗಿತ್ತು. ಬಾಂಗ್ಲಾ ತಂಡವಿನ್ನು ಮಂಗಳವಾರ ಭಾರತವನ್ನು ಎದುರಿಸಲಿದೆ.

ಸೋಮವಾರದ ಪಂದ್ಯಗಳು ಇಂಗ್ಲೆಂಡ್‌-ಅಫ್ಘಾನಿಸ್ಥಾನ ಹಾಗೂ ಆಸ್ಟ್ರೇಲಿಯ-ಶ್ರೀಲಂಕಾ ನಡುವೆ ಸಾಗಲಿವೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ