25 ವರ್ಷದಿಂದ ಉಚಿತ ಯೋಗ ಶಿಕ್ಷಣ ನೀಡುತ್ತಿರುವ ರಮಾ


Team Udayavani, Jun 21, 2023, 2:46 PM IST

25 ವರ್ಷದಿಂದ ಉಚಿತ ಯೋಗ ಶಿಕ್ಷಣ ನೀಡುತ್ತಿರುವ ರಮಾ

ವಿಜಯಪುರ: ಯೋಗ ಮಾಡಿದರೆ ಅನಾರೋಗ್ಯ ದೂರ ಎಂಬ ಮಾತಿದೆ. ಇಲ್ಲೊಬ್ಬ ಸಾಧಕಿಯೊಬ್ಬರು ಸುಮಾರು 25 ವರ್ಷಗಳಿಂದಲೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉಚಿತವಾಗಿ ಯೋಗ ಶಿಕ್ಷಣವನ್ನು ಹೇಳಿ ಕೊಡುತ್ತಿದ್ದು ಪ್ರಶಂಸೆಗೂ ಪಾತ್ರ ವಾಗಿದ್ದಾರೆ.

ನಗರದ 11ನೇ ವಾರ್ಡ್‌ನ ಧರ್ಮ ರಾಯ ಸ್ವಾಮಿ ದೇವಾಲಯ ರ ಸ್ತೆ ನಿವಾಸಿ ರಮಾ ನಟರಾಜ್ ಯೋಗ  ‌ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸುಮಾರು 62 ವರ್ಷ ವಯಸ್ಸಿನವರಾ ಗಿರುವ ಇವರು, ಈಗಲೂ ಲವ ಲವಿಕೆಯಿಂದ ಯೋಗಾಭ್ಯಾಸದ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ.

“ಯೋಗಾಭ್ಯಾಸ ಮಾಡಿದಷ್ಟೂ ಉತ್ತಮ ಆರೋಗ್ಯ ಲಭಿಸುತ್ತದೆ. ಧ್ಯಾನದಿಂದ ಮನಃ ಶಾಂತಿಯೂ ಸಿಗಲಿದೆ’ ಎನ್ನುವ ಯೋಗ ಶಿಕ್ಷಕಿ ರಮಕ್ಕ, ಮನೋ ನಿಯಂತ್ರಣ, ಇಂದ್ರಿಯ ನಿಗ್ರಹ, ಅಧಿಕ ಕಾರ್ಯೋತ್ಸಾಹ ಮೊದಲಾದ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬಹುದು ಎನ್ನುತ್ತಾರೆ.

ಗವಿಯಲ್ಲಿ ವಾಸ: ಸಿದ್ಧರಬೆಟ್ಟದಲ್ಲಿ 5 ದಿನ ಕಚ್ಚಾ ಆಹಾರದ ಸೇವನೆ, ಗವಿಯಲ್ಲಿ ವಾಸ, ತಣ್ಣೀರಿನ ಸ್ನಾನ, 5 ದಿನ ಸಂಪೂರ್ಣ ಮೌನಾಚರಣೆ ಹೀಗೆ ಪಡೆದ ಶಿಕ್ಷಣವನ್ನು ಬೇರೆ ಬೇರೆ ಊರುಗಳಿಗೆ ಹೋಗಿ ಶಿಕ್ಷಣ ನೀಡುತ್ತಾರೆ. ಈ ವೇಳೆ, ಊರಿನ ಮುಖಂಡರು, ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಪ್ರಯಾಣ ಭತ್ಯೆ ಮತ್ತು ಪ್ರಸಾದದ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಮುಖ್ಯ ಕೇಂದ್ರ ತುಮಕೂರಿನಲ್ಲಿ 50 ವರ್ಷದಿಂದ ಇದ್ದು ಶ್ರೀ ರಾಮಸ್ವಾಮಿ ಅಣ್ಣನವರು ಸಾವಿರಾರು ಜನರನ್ನು ಯೋಗ ಶಿಕ್ಷಕರನ್ನಾಗಿ ತಯಾರು ಮಾಡಿದ್ದಾರೆ. ಹಾಗೆಯೇ ಬಿಕೆಎಸ್‌ ಅಯ್ಯಂಗಾರ್‌ ಅವರು ನಮಗೆ 2 ಬಾರಿ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಶಿಬಿರ ತೆಗೆದುಕೊಂಡಿದ್ದರು. ಯೋಗದಲ್ಲಿ ಸಾಧನೆ ಮಾಡಿದ ಓಂಕಾರ್‌, ಮುರಳೀಧರ್‌, ರಾಘವೇಂದ್ರ ಶೆಣೈ ಇವರೊಂದಿಗೆ ಯೋಗ ಶಿಬಿರಗಳಲ್ಲಿ ಭಾಗವಹಿಸುವುದು ನಿಜಕ್ಕೂ ಉತ್ತಮ ಅನುಭವ ಹಾಗೂ ನಮಗೆ ಮತ್ತಷ್ಟು ಉತ್ತೇಜನ ನೀಡುತ್ತದೆ ಎಂದು ತಿಳಿಸಿದ್ದಾರೆ.

ಯೋಗ ಶಿಕ್ಷ ಕರಾಗಲು ಬಯಸಿದರೆ ಮಾರ್ಗದರ್ಶನವನ್ನೂ ನೀಡುತ್ತಾರೆ : ಯೋಗ ಶಿಕ್ಷಕಿಯಾಗಿ ರಾಯಚೂರು, ದಾವಣಗೆರೆ, ತುಮಕೂರು, ಮೈಸೂರು, ಹುಬ್ಬಳ್ಳಿ, ದೇವನಹಳ್ಳಿ, ದೊಡ್ಡಬಳ್ಳಾಪುರ ಹೀಗೆ ಸುಮಾರು 20 ಜಿಲ್ಲೆ ಸೇರಿ ತಾಲೂ ಕುಗಳಲ್ಲಿಯೂ ಯೋಗ ಶಿಕ್ಷಕಿಯಾಗಿ ರಮಕ್ಕ ಉಚಿತ ಸೇವೆ ಸಲ್ಲಿಸಿದ್ದಾರೆ. ಸನ್ಮಾನ, ಅಭಿನಂದನೆ ಸೇರಿ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. ಶ್ರೀ ಪತಂಜಲಿ ಯೋಗ ಶಿಕ್ಷಣ ವತಿಯಿಂದ ನೀಡುವ ಯೋಗ ಶಿಕ್ಷಣ ಉಚಿತವಾಗಿ ಇರುವು ದರಿಂದ ವಿಜಯಪುರದಲ್ಲಿ 25 ವರ್ಷ ದಿಂದಲೂ ಸರ್ಕಾರಿ ಮಾದರಿ ಬಾಲಕಿ ಯರ ಶಾಲೆಯಲ್ಲಿ ಯೋಗಾಭ್ಯಾಸಕ್ಕೆ ಸ್ಥಳಾವಕಾಶ ನೀಡಿದ್ದಾರೆ. ಯೋಗಾ ಭ್ಯಾಸಕ್ಕೆ ಬರುವವರು ಶಿಕ್ಷಕರಾಗಲು ಬಯಸಿದರೆ ಅವರಿಗೆ ಪ್ರಾಂತ ಪ್ರಶಿಕ್ಷಣ ನೀಡಿ ಮುಂದಿನ ಹಂತ ಪೂರೈಸಿಕೊಳ್ಳಲು ಮಾರ್ಗದರ್ಶನವನ್ನೂ ನೀಡುತ್ತಾರೆ.

ಯೋಗ ಶಿಕ್ಷಣವನ್ನು ಹೀಗಳೆಯದಿರಿ… : ಯೋಗ ಶಿಕ್ಷಣ ಸಾಂಪ್ರದಾಯಿಕ ಶಿಕ್ಷಣವೆಂಬ ಕಾರಣದಿಂದ ಅನೇಕರು ಹೀಗಳೆ ಯುವುದು ಉಂಟು. ಆದರೆ, ಯೋಗದ ಮಹತ್ವ ಅರಿತ ಅನೇಕ ದೇಶಗಳು ಯೋಗ ಶಿಕ್ಷಣವನ್ನು ತಮ್ಮ ನೆಲದಲ್ಲಿ ಅಳವಡಿಸಿಕೊಂಡಿವೆ. ಇಂದು ಭಾರತ ಅನೇಕ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಯೋಗ ಶಿಕ್ಷಣವನ್ನು ಕಡ್ಡಾಯಗೊಳಿಸಿದೆ. ಯೋಗಾಭ್ಯಾಸ ಮಾಡಿದರೆ, ಇಡೀ ದೇಶ ಎದುರಿಸುತ್ತಿರುವ ಅನೇಕ ನೈತಿಕ ಸವಾಲುಗಳನ್ನು ಎದುರಿಸಲು ಸಾಧ್ಯವೆಂದು ಯೋಗ ಶಿಕ್ಷಕಿ ರಮಾ ನಟರಾಜ್‌ ತಿಳಿಸಿದ್ದಾರೆ.

ಟಾಪ್ ನ್ಯೂಸ್

1-cy

Cyclone Remal ಅಪಾರ ಹಾನಿ ; ಪ.ಬಂಗಾಲದಲ್ಲಿ 6, ಬಾಂಗ್ಲಾದಲ್ಲಿ 7 ಸಾವು

1-murali

ಕೇರಳದಲ್ಲೂ ದಿಲ್ಲಿ ಮಾದರಿ ಮದ್ಯ ಹಗರಣ: ಸಿಬಿಐ ತನಿಖೆಗೆ ಸಚಿವ ಮುರಳೀಧರನ್‌ ಆಗ್ರಹ

1-sm

Delhi; ಬಿಭವ್‌ ಬಿಡುಗಡೆಯಾದರೆ ಅಪಾಯ: ಸಂಸದೆ ಸ್ವಾತಿ ಮಲಿವಾಲ್‌

ಶಾಸಕರ ಮನೆಗೆ ಮೊದಲು ಮೂರೇ ಸಿಬಂದಿ ಕಳಿಸಿದ್ದೆವು: ಪೊಲೀಸ್‌ ಅಧೀಕ್ಷಕ ರಿಷ್ಯಂತ್‌

ಶಾಸಕರ ಮನೆಗೆ ಮೊದಲು ಮೂರೇ ಸಿಬಂದಿ ಕಳಿಸಿದ್ದೆವು: ಪೊಲೀಸ್‌ ಅಧೀಕ್ಷಕ ರಿಷ್ಯಂತ್‌

1-qeewqewqewe

Naxal ಬೆದರಿಕೆ; ಪದ್ಮಶ್ರೀ ವಾಪಸ್‌: ನಾಟಿ ವೈದ್ಯ ಹೇಳಿಕೆ

Sullia ಹಲಸಿನ ಹಣ್ಣು ಕೊಯ್ಯುವಾಗ ದಂಪತಿಗೆ ವಿದ್ಯುದಾಘಾತ

Sullia ಹಲಸಿನ ಹಣ್ಣು ಕೊಯ್ಯುವಾಗ ದಂಪತಿಗೆ ವಿದ್ಯುದಾಘಾತ

1-reaa

I.N.D.I.A. ಸಭೆ; ಜೂ.1ರಂದು ಫ‌ಲಿತಾಂಶ ಬಳಿಕದ ಕಾರ್ಯತಂತ್ರ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Wheeling: ಬೆಂಗಳೂರು ಹುಡುಗರಿಗೆ ವ್ಹೀಲಿಂಗ್‌ ಅಡ್ಡೆಯಾದ ಹೆದ್ದಾರಿ!

Wheeling: ಬೆಂಗಳೂರು ಹುಡುಗರಿಗೆ ವ್ಹೀಲಿಂಗ್‌ ಅಡ್ಡೆಯಾದ ಹೆದ್ದಾರಿ!

12

Jackfruit: ಹಲಸಿನ ಹಣ್ಣಿನ ಬೆಲೆ ದುಬಾರಿ, ರೈತರ ಸಂತಸ

Flyover ಮಧ್ಯೆ ಸಿಲುಕಿ ನೇತಾಡಿದ ಕೆಎಸ್ಸಾರ್ಟಿಸಿ ಬಸ್‌

Flyover ಮಧ್ಯೆ ಸಿಲುಕಿ ನೇತಾಡಿದ ಕೆಎಸ್ಸಾರ್ಟಿಸಿ ಬಸ್‌

5-

Doddaballapura: ಹೇಮಂತ್ ಗೌಡ ಹತ್ಯೆ ಪ್ರಕರಣ: ಗುಂಡು ಹಾರಿಸಿ ಆರೋಪಿಯ ಬಂಧನ

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

1-cy

Cyclone Remal ಅಪಾರ ಹಾನಿ ; ಪ.ಬಂಗಾಲದಲ್ಲಿ 6, ಬಾಂಗ್ಲಾದಲ್ಲಿ 7 ಸಾವು

1-murali

ಕೇರಳದಲ್ಲೂ ದಿಲ್ಲಿ ಮಾದರಿ ಮದ್ಯ ಹಗರಣ: ಸಿಬಿಐ ತನಿಖೆಗೆ ಸಚಿವ ಮುರಳೀಧರನ್‌ ಆಗ್ರಹ

sensex

76,000 ಅಂಕ ತಲುಪಿದ್ದ ಬಿಎಸ್‌ಇ ಸೂಚ್ಯಂಕ: 23,000ಕ್ಕೇರಿ ಕುಸಿದ ನಿಫ್ಟಿ

arrested

Ranchi;ಮದ್ಯ ಕೊಡದ್ದಕ್ಕೆ ಗುಂಡಿಕ್ಕಿ ಡಿಜೆಯ ಹತ್ಯೆ: ಆರೋಪಿ ಪೊಲೀಸರ ವಶಕ್ಕೆ

1-sm

Delhi; ಬಿಭವ್‌ ಬಿಡುಗಡೆಯಾದರೆ ಅಪಾಯ: ಸಂಸದೆ ಸ್ವಾತಿ ಮಲಿವಾಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.