Penalty: ಮೊಬೈಲ್‌ನಲ್ಲಿನ ದೋಷ ಸರಿಪಡಿಸಲು ಹಿಂದೇಟು


Team Udayavani, Oct 3, 2023, 12:38 PM IST

tdy-9

ಬೆಂಗಳೂರು: ಖರೀದಿಯ ವಾರಂಟಿ ಅವಧಿಯೊಳಗೆ ಮೊಬೈಲ್‌ನಲ್ಲಿ ಕಾಣಿಸಿಕೊಂಡ ದೋಷ ಸರಿಪಡಿಸಲು ಹಿಂದೇಟು ಹಾಕಿದ ಪ್ರತಿಷ್ಠಿತ ಮೊಬೈಲ್‌ ಕಂಪನಿಗೆ ನಗರ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ 30,000 ರೂ. ದಂಡ ವಿಧಿಸಿದೆ ಆದೇಶ ಹೊರಡಿಸಿದೆ.

ಬೆಂಗಳೂರಿನ ನಗರ ನಿವಾಸಿಯೊಬ್ಬರು 2021ರ ಅ.29ರಂದು ಪ್ರತಿಷ್ಠಿತ ಕಂಪನಿಯ ಫೋನ್‌ ಖರೀದಿಸಿದ್ದರು. 2022ರ ಆ.18ರಂದು ಮೊಬೈಲ್‌ ಸ್ಪೀಕರ್‌ ಹಾಗೂ ಬ್ಯಾಟರಿ ದೋಷ ಕಾಣಿಸಿಕೊಂಡಿದೆ. ಈ ವೇಳೆ ಇಂದಿರ ನಗರ ಮೊಬೈಲ್‌ ಕೇರ್‌ಗೆ ಸರ್ವಿಸ್‌ ನೀಡಲಾಗಿತ್ತು. ಈ ವೇಳೆ ಸೆಂಟರ್‌ ನವರು ಬ್ಯಾಟರಿ ಹಾಗೂ ಸ್ಟೀಕರ್‌ನಲ್ಲಿ ದೋಷವಿದ್ದು, 7ದಿನಗಳ ಒಳಗೆ ಸರಿಪಡಿಸುವುದಾಗಿ ಭರವಸೆ ನೀಡಿದ್ದರು.

ಹೆಚ್ಚುವರಿ ಹಣಕ್ಕೆ ಬೇಡಿಕೆ: 2022 ಆ.25ರಂದು ಮೊಬೈಲ್‌ ತೆಗೆದುಕೊಂಡು ಹೋಗುವಂತೆ ಕರೆ ಮಾಡಿದ್ದರು. ಇದಾದ 5 ದಿನದೊಳಗೆ ಸಮಸ್ಯೆ ಮರುಕಳಿಸಿದೆ. ತಕ್ಷಣ ದೂರುದಾರರು ಫೋನ್‌ ಹಿಂದಿರುಗಿಸಿದ್ದಾರೆ. ಕೆಲ ದಿನಗಳ ಬಳಿಕ ಸರ್ವೀಸ್‌ ಕೇರ್‌ ನವರು ಫೋನ್‌ ಮೆಷ್‌ನಲ್ಲಿ ದೂಳು ಮತ್ತು ಅಂಟು ಅಂಟಿಕೊಂಡಿದ್ದು, ಇದರಿಂದಾಗಿ ವಾರಂಟಿ ಬಳಕೆ ಮಾಡಲಾಗದು. ಸರಿಪಡಿಸಲು ಹೆಚ್ಚುವರಿ ಹಣ ನೀಡುವಂತೆ ತಿಳಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ದೂರುದಾರರು, ಈ ಹಿಂದೆ ಸ್ಪೀಕರ್‌ ಬದಲಾಯಿಸಿರುವುದಾಗಿ ಕರೆ ಮಾಡಿ ತಿಳಿಸಿದ್ದರು. ಆದರೆ, ಇದೀಗ ವಾರಂಟಿ ಬಳಕೆ ಮಾಡುವುದಕ್ಕೆ ಸಾಧ್ಯವಿಲ್ಲ ಎನ್ನಲಾಗುತ್ತಿದೆ ಎಂದು ತಿಳಿಸಿ ಮೊಬೈಲ್‌ ಅನ್ನು ಸರ್ವಿಸ್‌ ಸೆಂಟರ್‌ನವರಿಗೆ ಹಿಂದಿರುಗಿಸಿದ್ದರು. ನಂತರ ಮೊಬೈಲ್‌ ಕಂಪನಿಯನ್ನು ಹಲವು ಬಾರಿ ಸಂಪರ್ಕಿಸಿದ್ದಾರೆ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಇದರಿಂದ ಬೇಸರಗೊಂಡು ದೂರುದಾರ ಗ್ರಾಹಕರ ಪರಿಹಾರ ವೇದಿಕೆಯಲ್ಲಿ ದೂರು ದಾಖಲಿಸಿದ್ದರು.

ಎರಡು ಕಡೆಯ ವಾದ -ಪ್ರತಿವಾದ ಆಲಿಸಿದ ಆಯೋಗದ ಅಧ್ಯಕ್ಷೆ ಎಂ.ಶೋಭಾ ನೇತೃತ್ವದ ವಿಚಾರಣಾ ಪೀಠ ಪ್ರತಿಷ್ಠಿತ ಮೊಬೈಲ್‌ ಸರ್ವೀಸ್‌ ಕೇಂದ್ರದವರು ಮೊದಲ ಬಾರಿಯೇ ದೂಳು ಮತ್ತು ಅಂಟು ಇರುವುದನ್ನು ಗಮನಿಸಿ, ವಾರಂಟಿಯಲ್ಲಿ ಸರಿ ಪಡಿಸಲು ಸಾಧ್ಯವಿಲ್ಲ ಎನ್ನುವುದಾಗಿ ಸ್ಪಷ್ಟವಾಗಿ ತಿಳಿಸಬಹುದಾಗಿತ್ತು. ಆದರೆ, ಒಮ್ಮೆ ಸರಿಪಡಿಸಲಾಗಿದೆ ಎನ್ನುವುದಾಗಿ ತಿಳಿಸಿ, ಮತ್ತೆ ಸಮಸ್ಯೆ ಕುರಿತು ವಿವರಿಸಿದ್ದಾರೆ. ಜತೆಗೆ ಅವರ ತಪ್ಪನ್ನು ಮುಚ್ಚಿ ಹಾಕಿಕೊಳ್ಳಲು ದೂರುದಾರರ ಮೇಲೆ ಹೊರೆ ವರ್ಗಾಯಿಸಲು ಪ್ರಯತ್ನ ಮಾಡಿದ್ದಾರೆ. ಇದು ಕಾನೂನು ಬಾಹಿರ ವ್ಯವಹಾರವಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.

ಮೊಬೈಲ್‌ ಇಲ್ಲದೇ ದೂರುದಾರರು ಅನುಭವಿಸಿರುವ ಆರ್ಥಿಕ ನಷ್ಟ ಪರಿಹಾರವಾಗಿ 20,000 ರೂ. ಹಾಗೂ ಕಾನೂನು ಹೋರಾಟದ ವೆಚ್ಚವಾಗಿ 10,000 ಸೇರಿ ಒಟ್ಟು 30 ಸಾವಿರ ರೂ. ನೀಡಬೇಕು. ಜತೆಗೆ ಮೊಬೈಲ್‌ನ ಸಂಪೂರ್ಣ ವೆಚ್ಚ 79,900 ರೂ. ಹಿಂದಿರುಗಿಸಬೇಕು ಎಂದು ಆದೇಶ ಹೊರಡಿಸಿದೆ.

 

ಟಾಪ್ ನ್ಯೂಸ್

Elon Musk ನಾನೊಬ್ಬ ಏಲಿಯನ್‌ ಶೀಘ್ರವೇ ಸಾಕ್ಷಿ ನೀಡುತ್ತೇನೆ

Elon Musk ನಾನೊಬ್ಬ ಏಲಿಯನ್‌ ಶೀಘ್ರವೇ ಸಾಕ್ಷಿ ನೀಡುತ್ತೇನೆ

US ಕರಡಿ ಮಾಂಸ ತಿಂದ ಕುಟುಂಬ ಸದಸ್ಯರ ಮೆದುಳಿನಲ್ಲಿ ಹುಳ!

US ಕರಡಿ ಮಾಂಸ ತಿಂದ ಕುಟುಂಬ ಸದಸ್ಯರ ಮೆದುಳಿನಲ್ಲಿ ಹುಳ!

13

Tragic: ಗುಜರಾತ್‌ ಗೇಮಿಂಗ್‌ ಜೋನ್‌ ನಲ್ಲಿ ಬೆಂಕಿ ಅವಘಡ: ಕನಿಷ್ಠ 20 ಮಂದಿ ಸಜೀವ ದಹನ

Bihar Rally ಮುಸ್ಲಿಮರ ಮುಂದೆ ಇಂಡಿಯಾ ಕೂಟ ಮುಜ್ರಾ ನೃತ್ಯ: ಪ್ರಧಾನಿ ಮೋದಿ

Bihar Rally ಮುಸ್ಲಿಮರ ಮುಂದೆ ಇಂಡಿಯಾ ಕೂಟ ಮುಜ್ರಾ ನೃತ್ಯ: ಪ್ರಧಾನಿ ಮೋದಿ

Lok Sabha Elections: ಬಿಜೆಪಿಗೆ 240-270 ಕ್ಷೇತ್ರಗಳಲ್ಲಿ ಜಯ: ಯೋಗೇಂದ್ರ ಯಾದವ್‌

Lok Sabha Elections: ಬಿಜೆಪಿಗೆ 240-270 ಕ್ಷೇತ್ರಗಳಲ್ಲಿ ಜಯ: ಯೋಗೇಂದ್ರ ಯಾದವ್‌

11

ಎಸ್‌ಐಟಿ ಉಲ್ಲೇಖೀಸಿರುವ ಕಾನೂನುಬದ್ಧ ನಿಯಮಗಳು ಸಿಎಂ ಗಮನಕ್ಕೆ ಬಂದಿಲ್ಲವೇ?‌: ಎಚ್‌ಡಿಕೆ

16 ಹಾಕಿ ಆಟಗಾರರ ಸಾವಿಗೆ ಕಾರಣನಾಗಿದ್ದ ಭಾರತೀಯನ ಗಡಿಪಾರು

16 ಹಾಕಿ ಆಟಗಾರರ ಸಾವಿಗೆ ಕಾರಣನಾಗಿದ್ದ ಭಾರತೀಯನ ಗಡಿಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru Rave Party; 86 ಜನರು ಡ್ರಗ್ ಸೇವೆನೆ ಮಾಡಿರುವುದು ರಕ್ತ ಪರೀಕ್ಷಯಲ್ಲಿ ದೃಢ

Bengaluru Rave Party; 86 ಜನರು ಡ್ರಗ್ ಸೇವೆನೆ ಮಾಡಿರುವುದು ರಕ್ತ ಪರೀಕ್ಷಯಲ್ಲಿ ದೃಢ

ಕೈಗಾರಿಕೆಗೆಂದು ಅಭಿವೃದ್ಧಿಪಡಿಸಿದ ಜಾಗದಲ್ಲಿ ನೂರಾರು ದೊಡ್ಡ ಗಿಡ ನೆಟ್ಟ ಅನಾಮಿಕರು!

ಕೈಗಾರಿಕೆಗೆಂದು ಅಭಿವೃದ್ಧಿಪಡಿಸಿದ ಜಾಗದಲ್ಲಿ ನೂರಾರು ದೊಡ್ಡ ಗಿಡ ನೆಟ್ಟ ಅನಾಮಿಕರು!

8

Bengaluru Road: ಮಳೆ ನಿಂತ ನಂತರ ರಸ್ತೆ ಗುಂಡಿ ದುರಸ್ತಿ  ಶುರು 

7

ಹೊಯ್ಸಳ ಪೊಲೀಸರನ್ನು ಕಳ್ಳ ಕಳ್ಳ ಎಂದು ಬೆನ್ನಟ್ಟಿದ ಸಾರ್ವಜನಿಕರು!

6

Bengaluru: 13 ವರ್ಷದ ಅಪ್ರಾಪ್ತ ಸಹೋದರನಿಂದಲೇ 3 ತಿಂಗಳ ಗರ್ಭಿಣಿಯಾದ ತಂಗಿ!

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Elon Musk ನಾನೊಬ್ಬ ಏಲಿಯನ್‌ ಶೀಘ್ರವೇ ಸಾಕ್ಷಿ ನೀಡುತ್ತೇನೆ

Elon Musk ನಾನೊಬ್ಬ ಏಲಿಯನ್‌ ಶೀಘ್ರವೇ ಸಾಕ್ಷಿ ನೀಡುತ್ತೇನೆ

19

Sullia: ವಾಹನಗಳಿಗೆ ಕಾರು ಢಿಕ್ಕಿ; ಹಾನಿ

17

Belthangady: ಅಪಘಾತದ ಗಾಯಾಳು ಯುವಕ ಸಾವು

Manipal: ಪಾರ್ಟ್‌ಟೈಮ್‌ ಜಾಬ್‌ ಲಿಂಕ್‌ 10.83 ಲಕ್ಷ ರೂ ಕಳೆದುಕೊಂಡ ವಿದ್ಯಾರ್ಥಿ

Manipal: ಪಾರ್ಟ್‌ಟೈಮ್‌ ಜಾಬ್‌ ಲಿಂಕ್‌ 10.83 ಲಕ್ಷ ರೂ ಕಳೆದುಕೊಂಡ ವಿದ್ಯಾರ್ಥಿ

Udupi: ಎದೆ ನೋವಿನಿಂದ ವ್ಯಕ್ತಿ ಸಾವು

Udupi: ಎದೆ ನೋವಿನಿಂದ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.