India-Bangla: 3 ಪ್ರಮುಖ ಯೋಜನೆಗಳಿಗೆ ಜಂಟಿ ಚಾಲನೆ

Team Udayavani, Nov 1, 2023, 9:48 PM IST

modi hasina

ನವದೆಹಲಿ: ಭಾರತ-ಬಾಂಗ್ಲಾ ನಡುವಿನ ಸಂಬಂಧ ವೃದ್ಧಿಗೊಳಿಸುವ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳ ನಡುವಿನ ಮೂರು ಪ್ರಮುಖ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ಬುಧವಾರ ಜಂಟಿಯಾಗಿ ಚಾಲನೆ ನೀಡಿದ್ದಾರೆ.

ತ್ರಿಪುರಾದ ನಿಶ್ಚಿತಾಪುರದಿಂದ ಬಾಂಗ್ಲಾದ ಗಂಗಾಸಾಗರ್‌ಗೆ ಸಂಪರ್ಕ ಒದಗಿಸುವ ರೈಲ್ವೆ ಮಾರ್ಗವೂ ಸೇರಿದಂತೆ ಸಂಪರ್ಕ ಹಾಗೂ ಇಂಧನ ಸಹಕಾರಕ್ಕೆ ಪೂರಕವಾದ ಯೋಜನೆಗಳನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ಉಭಯ ಪ್ರಧಾನಿಗಳು ಉದ್ಘಾಟಿಸಿದರು.

ಈ ಕುರಿತು ಮಾತನಾಡಿದ ಮೋದಿ, ಭಾರತ-ಬಾಂಗ್ಲಾದ ನಡುವಿನ ಸಹಕಾರಕ್ಕೆ ಈ ಕ್ಷಣಗಳು ಸಾಕ್ಷಿಯಾಗಿವೆ. ಹಲವು ದಶಕಗಳಿಂದಲೂ ಸಾಧ್ಯವಾಗದಂಥ ಅಭಿವೃದ್ಧಿಯನ್ನು 9 ವರ್ಷಗಳಲ್ಲಿ ಜಂಟಿಯಾಗಿ ನಾವು ಪೂರ್ಣಗೊಳಿಸಿದ್ದೇವೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಇದೇ ವೇಳೆ ಉಭಯ ರಾಷ್ಟ್ರಗಳ ನಡುವಿನ ಮೂಲಸೌಕರ್ಯ ಅಭಿವೃದ್ಧಿ ಸಹಯೋಗವನ್ನು ಯೋಜನೆಗಳು ಬಲಪಡಿಸುತ್ತವೆ ಎಂದು ಬಾಂಗ್ಲಾದೇಶ ಪ್ರಧಾನಿ ಶೇಖ್‌ ಹಸೀನಾ ಹೇಳಿದ್ದಾರೆ.

ಯಾವ ಯೋಜನೆ?
ಅಗರ್ತಲಾ -ಅಖೌರಾ ಗಡಿಯಾಚೆಗಿನ ರೈಲು ಸಂಪರ್ಕ
ಈಶಾನ್ಯರಾಜ್ಯಗಳನ್ನು ಬಾಂಗ್ಲಾದೇಶದೊಂದಿಗೆ ಸಂಪರ್ಕಿಸುವ ಮೊದಲ ರೈಲು ಯೋಜನೆ. 12.24 ಕಿ.ಮೀ. ವ್ಯಾಪ್ತಿಯ ಈ ಯೋಜನೆ ಗಡಿಯಾಚೆಗಿನ ವ್ಯಾಪಾರ ಉತ್ತೇಜನಕ್ಕೆ ಅನುಕೂಲ

ಖುಲ್ನಾ-ಮೊಂಗ್ಲಾ ಬಂದರು ರೈಲುಮಾರ್ಗ
ಮೊಂಗ್ಲಾ ಬಂದರನ್ನು ಹಾಗೂ ಖುಲ್ನಾದಲ್ಲಿ ಅಸ್ತಿತ್ವದಲ್ಲಿರುವ ರೈಲು ಜಾಲದ ನಡುವೆ ಸಂಪರ್ಕಿಸುವ 65 ಕಿ.ಮೀ.ವ್ಯಾಪ್ತಿಯ ಬ್ರಾಡ್‌ಗೆಜ್‌ ಮಾರ್ಗ.

ಮೈತ್ರೀ ಸೂಪರ್‌ ಥರ್ಮಲ್‌ ಪವರ್‌ಪ್ಲಾಂಟ್‌ ಯೂನಿಟ್‌-2
ಮೈತ್ರೀ ಯೂನಿಟ್‌-2 ಭಾರತ-ಬಾಂಗ್ಲಾ ಜತೆಗೂಡಿ ಸ್ಥಾಪಿಸಿರುವ ವಿದ್ಯುತ್‌ ಉತ್ಪಾದನಾ ಸ್ಥಾವರ. 1,320 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾಡುವ ಸಾಮರ್ಥ್ಯ ಅದಕ್ಕೆ ಇದೆ.

392. 52 ಕೋಟಿ ರೂ.- ಭಾರತ ಬಾಂಗ್ಲಾಕ್ಕೆ ನೀಡಿದ ನೆರವು.

ಟಾಪ್ ನ್ಯೂಸ್

“ಅನ್ಯ ರಾಜ್ಯಕ್ಕೆ ಹೂಡಿಕೆ: ಕಾಂಗ್ರೆಸ್‌ ದುರಾಡಳಿತ’; ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿ

“ಅನ್ಯ ರಾಜ್ಯಕ್ಕೆ ಹೂಡಿಕೆ: ಕಾಂಗ್ರೆಸ್‌ ದುರಾಡಳಿತ’; ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿ

1-qweqwewqe

Cyclone ; ಪಶ್ಚಿಮ ಬಂಗಾಳದಲ್ಲಿ ರೆಡ್ ಅಲರ್ಟ್: ಭಾನುವಾರ ರಾತ್ರಿ ಅಪ್ಪಳಿಸಲಿರುವ ಚಂಡಮಾರುತ

`ಹವಾ ಮೆಂಟೇನ್’ಗೆ ನಕಲಿ ಐಬಿ ವೇಷ ; ಪೊಲೀಸರ ಅತಿಥಿಯಾದ ಯುವಕ

Fake ID Card; `ಹವಾ ಮೆಂಟೇನ್’ಗೆ ನಕಲಿ ಐಬಿ ವೇಷ ; ಪೊಲೀಸರ ಅತಿಥಿಯಾದ ಯುವಕ

Elephant Survey ನಾಗರಹೊಳೆ ಉದ್ಯಾನವನದಲ್ಲಿ 2ನೇ ದಿನದ ಆನೆ ಗಣತಿ ಯಶಸ್ವಿ

Elephant Survey ನಾಗರಹೊಳೆ ಉದ್ಯಾನವನದಲ್ಲಿ 2ನೇ ದಿನದ ಆನೆ ಗಣತಿ ಯಶಸ್ವಿ

D. K. Shivakumar ಅಪಪ್ರಚಾರ ಮಾಡುವವರಿಗೆ ನಾಚಿಕೆಯಾಗಬೇಕು

D. K. Shivakumar ಅಪಪ್ರಚಾರ ಮಾಡುವವರಿಗೆ ನಾಚಿಕೆಯಾಗಬೇಕು

ISREL

Rafah ಕಾರ್ಯಾಚರಣೆ ಅಂತ್ಯಗೊಳಿಸಲು ಇಸ್ರೇಲ್‌ಗೆ ಯುಎನ್ ನ್ಯಾಯಾಲಯದ ಆದೇಶ

Vatal Nagaraj ಕರ್ನಾಟಕ-ತಮಿಳುನಾಡು ಸರ್ಕಾರ ಬೀಗರು

Vatal Nagaraj ಕರ್ನಾಟಕ-ತಮಿಳುನಾಡು ಸರ್ಕಾರ ಬೀಗರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwewqe

Cyclone ; ಪಶ್ಚಿಮ ಬಂಗಾಳದಲ್ಲಿ ರೆಡ್ ಅಲರ್ಟ್: ಭಾನುವಾರ ರಾತ್ರಿ ಅಪ್ಪಳಿಸಲಿರುವ ಚಂಡಮಾರುತ

1-medha-Patkar

V K Saxena ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಕೇಸ್: ಮೇಧಾ ಪಾಟ್ಕರ್ ದೋಷಿ

Prajwal Revanna

MEA action; ಪ್ರಜ್ವಲ್ ಗೆ ಶೋಕಾಸ್ ನೋಟಿಸ್ ಕಳುಹಿಸಿದ ವಿದೇಶಾಂಗ ಸಚಿವಾಲಯ

Anwarul Azim Anwar; ಹನಿ ಟ್ರ್ಯಾಪ್ ಮಾಡಿ ಬಾಂಗ್ಲಾ ಸಂಸದನ ಹತ್ಯೆ; ಢಾಕಾದಲ್ಲಿ ಮಹಿಳೆ ಬಂಧನ

Anwarul Azim Anwar; ಹನಿ ಟ್ರ್ಯಾಪ್ ಮಾಡಿ ಬಾಂಗ್ಲಾ ಸಂಸದನ ಹತ್ಯೆ; ಢಾಕಾದಲ್ಲಿ ಮಹಿಳೆ ಬಂಧನ

10km ದೂರದಲ್ಲಿರುವ ಪ್ರವಾಸಿತಾಣಕ್ಕೆ ಕರೆದೊಯ್ಯಲಿಲ್ಲವೆಂದು ಆತ್ಮಹತ್ಯೆಗೆ ಶರಣಾದ ಬಾಲಕಿ

10km ದೂರದಲ್ಲಿರುವ ಪ್ರವಾಸಿತಾಣಕ್ಕೆ ಕರೆದೊಯ್ಯಲಿಲ್ಲವೆಂದು ನೇಣಿಗೆ ಶರಣಾದ 10 ವರ್ಷದ ಬಾಲಕಿ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

“ಅನ್ಯ ರಾಜ್ಯಕ್ಕೆ ಹೂಡಿಕೆ: ಕಾಂಗ್ರೆಸ್‌ ದುರಾಡಳಿತ’; ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿ

“ಅನ್ಯ ರಾಜ್ಯಕ್ಕೆ ಹೂಡಿಕೆ: ಕಾಂಗ್ರೆಸ್‌ ದುರಾಡಳಿತ’; ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿ

1-qweqwewqe

Cyclone ; ಪಶ್ಚಿಮ ಬಂಗಾಳದಲ್ಲಿ ರೆಡ್ ಅಲರ್ಟ್: ಭಾನುವಾರ ರಾತ್ರಿ ಅಪ್ಪಳಿಸಲಿರುವ ಚಂಡಮಾರುತ

`ಹವಾ ಮೆಂಟೇನ್’ಗೆ ನಕಲಿ ಐಬಿ ವೇಷ ; ಪೊಲೀಸರ ಅತಿಥಿಯಾದ ಯುವಕ

Fake ID Card; `ಹವಾ ಮೆಂಟೇನ್’ಗೆ ನಕಲಿ ಐಬಿ ವೇಷ ; ಪೊಲೀಸರ ಅತಿಥಿಯಾದ ಯುವಕ

Elephant Survey ನಾಗರಹೊಳೆ ಉದ್ಯಾನವನದಲ್ಲಿ 2ನೇ ದಿನದ ಆನೆ ಗಣತಿ ಯಶಸ್ವಿ

Elephant Survey ನಾಗರಹೊಳೆ ಉದ್ಯಾನವನದಲ್ಲಿ 2ನೇ ದಿನದ ಆನೆ ಗಣತಿ ಯಶಸ್ವಿ

D. K. Shivakumar ಅಪಪ್ರಚಾರ ಮಾಡುವವರಿಗೆ ನಾಚಿಕೆಯಾಗಬೇಕು

D. K. Shivakumar ಅಪಪ್ರಚಾರ ಮಾಡುವವರಿಗೆ ನಾಚಿಕೆಯಾಗಬೇಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.