Sirsi: ಇಲ್ಲಿ‌ ಸ್ಮಶಾನದಲ್ಲೇ‌ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆ!

ಸದ್ಗತಿಯಲ್ಲಿ ನೆಮ್ಮದಿ; ನವ ಸ್ಪರ್ಷದ‌ ರಂಗಧಾಮ!

Team Udayavani, Nov 9, 2023, 1:27 PM IST

7-sirsi

ಶಿರಸಿ: ಸ್ಮಶಾನ ಭೂಮಿಯಲ್ಲೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ನಡೆಸುವ, ರಾಜ್ಯದಲ್ಲೇ ಹೆಸರಾಗಿರುವ ನಗರದ ನೆಮ್ಮದಿ ಕುಟೀರ ಈಗ ಇನ್ನಷ್ಟು ಹೊಸತನಕ್ಕೆ ತೆರೆದುಕೊಂಡಿದೆ. ಸರ್ಕಾರದ ಅನುದಾನ ಮತ್ತು ಸಾರ್ವಜನಿಕರ ದೇಣಿಗೆ ಮೂಲಕ ನೆಮ್ಮದಿ ಆವರಣದಲ್ಲಿ ನಿರ್ಮಿಸಿರುವ ರಂಗಧಾಮದ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ.

ಊರಿಗೆ ಒಪ್ಪಿಸುವ ಹಾಗೂ ಸಹಕರಿಸಿದ ಸರ್ವರನ್ನೂ ಸ್ಮರಿಸುವ ಧನ್ಯವಾದ ಕಾರ್ಯಕ್ರಮ ನ.11ಶನಿವಾರ ಸಂಜೆ 4 ಗಂಟೆಗೆ ನೆಮ್ಮದಿಯ ರಂಗಧಾಮದಲ್ಲಿ ಆಯೋಜಿಸಲಾಗಿದೆ.

ವಿದ್ಯಾನಗರ ರುದ್ರಭೂಮಿ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ವಿ.ಪಿ ಹೆಗಡೆ ವೈಶಾಲಿ ಅವರು ಮಾಹಿತಿ ನೀಡಿ, ಪ್ರತಿ ಬೆಳಗನ್ನೂ ಸಾವಿನ ಸುದ್ದಿಯಿಂದಲೇ ಪ್ರಾರಂಭಿಸುವ ವಿಶಿಷ್ಟ ಸಂಸ್ಥೆ ನಮ್ಮದು. ಸ್ಮಶಾನವೆಂದರೆ ಭಯ ಅಸಹ್ಯಗಳೇ ತುಂಬಿಕೊಂಡಿರುವ ತಾಣವೆಂಬ ಸಿದ್ದ ಕಲ್ಪನೆಯನ್ನು ಹೋಗಲಾಡಿಸುವ ದಿಕ್ಕಿನಲ್ಲಿ ನಮ್ಮ ಪ್ರಯತ್ನವಾಗಿದೆ.

ಅಂತ್ಯಕ್ರಿಯೆಗಷ್ಟೇ ಸೀಮಿತವಾಗದೇ ನಮ್ಮ ಎರಡುವರೆ ಎಕರೆ ಜಾಗವನ್ನು ಎರಡು ವಿಭಾಗವನ್ನಾಗಿ ಮಾಡಿ ಒಂದಕ್ಕೆ ಸದ್ಗತಿ ಮತ್ತೊಂದಕ್ಕೆ ನೆಮ್ಮದಿ ಎಂದು ಹೆಸರಿಟ್ಟಿದ್ದೇವೆ. ನೆಮ್ಮದಿ ವಿಭಾಗದಲ್ಲಿ ಸುಸಜ್ಜಿತ ರಂಗ ಮಂದಿರ ನಿರ್ಮಿಸಬೇಕು ಎಂಬ ಕನಸು ನಮ್ಮದಾಗಿತ್ತು. ಒಂಭತ್ತು ವರ್ಷಗಳ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದ ಉಮಾಶ್ರೀ ರಂಗಮಂದಿರಕ್ಕೆ 60 ಲಕ್ಷ ರೂ. ಬಿಡುಗಡೆಗೊಳಿಸಿದ್ದರು. ಈ ಹಣ ಪಡೆಯುವಲ್ಲಿ ಹಲವು ತೊಡಕುಗಳುಂದ್ಗಿದ್ದರೂ ಅಂತಿಮವಾಗಿ ಬಿಡುಗಡೆಯಾಗಿತ್ತು. ಆದರೆ, ಆ ವೇಳೆ ಕಟ್ಟಡ ನಿರ್ಮಾಣಕ್ಕೆ ಹಾಕಿಕೊಂಡಿದ್ದ ಬಜೆಟ್ ಸಾಕಾಗದೇ ಟಿಎಸ್‌ಎಸ್‌, ಡಾ. ವಿಜಯ ಸಂಕೇಶ್ವರ ಸೇರಿದಂತೆ ಹಲವು ಮಹನೀಯರು ದೇಣಿಗೆ ನೀಡಿದ್ದರಿಂದ ಇಂದು ಸುಸಜ್ಜಿತ ರಂಗಮಂದಿರ ನಿರ್ಮಾಣ ಸಾಧ್ಯವಾಗಿದೆ.

ನೆಮ್ಮದಿ ಕುಟೀರವು ಮರಣಕ್ಕೆ ಮುನ್ನ ಬದುಕಿಗೆ ಹುರುಪು ತುಂಬುವ ಸ್ಥಳ. ನಾಡಿನಲ್ಲೇ ಅತಿ ಹೆಚ್ಚು ಪುಸ್ತಕಗಳು ಲೋಕಾರ್ಪಣೆ ಗೊಂಡ ದಾಖಲೆ ಈ ಕುಟೀರದ ಹೆಮ್ಮೆ ಯಾಗಿದೆ.ಸದ್ಗತಿಯಲ್ಲಿ ಆತಂಕಕ್ಕೆ ಆಸ್ಪದವಿಲ್ಲದ ರೀತಿಯಲ್ಲಿ ಗೌರವ ಪೂರ್ವಕವಾಗಿ ಅಂತ್ಯಕ್ರಿಯೆ ಜರುಗುತ್ತದೆ.ಜಾತಿ,ಮತ, ಬಡವ, ಶ್ರೀಮಂತ ಎಂಬ ಯಾವುದೇ ಭೇದ ಭಾವ ವಿಲ್ಲದೇ ಸಮಾನತೆ ಇಲ್ಲಿ ಅಕ್ಷರಶಃ ಜೀವಂತವಾಗಿದೆ. ದಾನಿಗಳ ಪ್ರತಿನಿಧಿಯಾಗಿ ವಿ ಆರ್ ಎಲ್ ಸಂಸ್ಥೆ ಯ ಚೇರ್ಮನ್ ಆದ ಡಾ. ವಿಜಯ ಸಂಕೇಶ್ವರ ಅವರಿಗೆ ಹಾಗೂ ಪತ್ರಕರ್ತ ಹರಿಪ್ರಕಾಶ ಕೋಣೆಮನೆ ಅವರಿಗೆ ಸನ್ಮಾನ ಆಯೋಜಿಸಲಾಗಿದೆ ಎಂದೂ ಹೇಳಿದರು.

ವಿದ್ಯಾ ನಗರ ರುದ್ರ ಭೂಮಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕಾಶಿನಾಥ್ ಮೂಡಿ, ಸದಸ್ಯ ರಾದ ನಾಗರಾಜ ಗಂಗೊಳ್ಳಿ, ಪಿ ವಿ ಹೆಗಡೆ ಬೆಳ್ಳೇಕೇರಿ ಇದ್ದರು.

-ರಾಘವೇಂದ್ರ ಬೆಟ್ಟಕೊಪ್ಪ

ಟಾಪ್ ನ್ಯೂಸ್

No more going to RTO office for driving license test!

RTO: ಇನ್ನು ಡ್ರೈವಿಂಗ್‌ ಲೈಸೆನ್ಸ್‌ ಟೆಸ್ಟ್‌ಗಾಗಿ ಆರ್‌ಟಿಒ ಕಚೇರಿಗೆ ಹೋಗ್ಬೇಕಿಲ್ಲ!

Puttur ಕಾಳುಮೆಣಸು ಧಾರಣೆ ಏರಿಕೆ ಸಾಧ್ಯತೆ

Puttur ಕಾಳುಮೆಣಸು ಧಾರಣೆ ಏರಿಕೆ ಸಾಧ್ಯತೆ

Thumbe Vented Dam; ತುಂಬಿದ ತುಂಬೆ: ನೀರು ರೇಶನಿಂಗ್‌ ಸ್ಥಗಿತ

Thumbe Vented Dam; ತುಂಬಿದ ತುಂಬೆ: ನೀರು ರೇಶನಿಂಗ್‌ ಸ್ಥಗಿತ

Will Turn power into superpower: Modi

Lucknow; ಶಕ್ತಿಯನ್ನು ಮಹಾಶಕ್ತಿ ಆಗಿ ಪರಿವರ್ತಿಸುವೆ: ಮೋದಿ

Hateful PM Modi should quit politics: Kharge

Election; ದ್ವೇಷ ಕಾರುವ ಪಿಎಂ ಮೋದಿ ರಾಜಕೀಯ ತ್ಯಜಿಸಲಿ: ಖರ್ಗೆ

Editorial; ಶೈಕ್ಷಣಿಕ ಗೊಂದಲಗಳಿಗೆ ಬೇಕಿದೆ ತುರ್ತು ಪರಿಹಾರ

Editorial; ಶೈಕ್ಷಣಿಕ ಗೊಂದಲಗಳಿಗೆ ಬೇಕಿದೆ ತುರ್ತು ಪರಿಹಾರ

GalaxyCI

GalaxEye; ರಾತ್ರಿಯಲ್ಲೂ ಭೂಮಿ ಚಿತ್ರ ಕ್ಲಿಕ್ಕಿಸುವ ಟೆಕ್ನಾಲಜಿ ಪರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-sirsi

Sirsi: ತಂಜಾವೂರಿನಲ್ಲಿ ನಡೆಯುವ ಭಾರತದ ರಾಜವಂಶಸ್ಥರ ಬೈಟಕ್ ಗೆ ಸೋಂದಾ

Gokarna: ಪ್ರವಾಸಿ ಬೋಟ್ ಪಲ್ಟಿ ; 40 ಪ್ರವಾಸಿಗರ ರಕ್ಷಣೆ

Gokarna: ಪ್ರವಾಸಿ ಬೋಟ್ ಪಲ್ಟಿ ; 40 ಪ್ರವಾಸಿಗರ ರಕ್ಷಣೆ

3-sirsi

Sirsi: ಬಾರದ ಹೈನು ಪ್ರೋತ್ಸಾಹ; ಶೀಘ್ರ ಬಿಡುಗಡೆಗೆ ಒತ್ತಾಯ

Minchu

Banavasi ; ಕ್ರಿಕೆಟ್ ಆಡುತ್ತಿದ್ದ ಬಾಲಕ ಸಿಡಿಲಿಗೆ ಬಲಿ

1-wqewqwqe

Bhatkal;ವೆಂಕಟಾಪುರ ನದಿಯಲ್ಲಿ ಮುಳುಗಿ ಇಬ್ಬರು ಮೃತ್ಯು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

No more going to RTO office for driving license test!

RTO: ಇನ್ನು ಡ್ರೈವಿಂಗ್‌ ಲೈಸೆನ್ಸ್‌ ಟೆಸ್ಟ್‌ಗಾಗಿ ಆರ್‌ಟಿಒ ಕಚೇರಿಗೆ ಹೋಗ್ಬೇಕಿಲ್ಲ!

Puttur ಕಾಳುಮೆಣಸು ಧಾರಣೆ ಏರಿಕೆ ಸಾಧ್ಯತೆ

Puttur ಕಾಳುಮೆಣಸು ಧಾರಣೆ ಏರಿಕೆ ಸಾಧ್ಯತೆ

Thumbe Vented Dam; ತುಂಬಿದ ತುಂಬೆ: ನೀರು ರೇಶನಿಂಗ್‌ ಸ್ಥಗಿತ

Thumbe Vented Dam; ತುಂಬಿದ ತುಂಬೆ: ನೀರು ರೇಶನಿಂಗ್‌ ಸ್ಥಗಿತ

Will Turn power into superpower: Modi

Lucknow; ಶಕ್ತಿಯನ್ನು ಮಹಾಶಕ್ತಿ ಆಗಿ ಪರಿವರ್ತಿಸುವೆ: ಮೋದಿ

Hateful PM Modi should quit politics: Kharge

Election; ದ್ವೇಷ ಕಾರುವ ಪಿಎಂ ಮೋದಿ ರಾಜಕೀಯ ತ್ಯಜಿಸಲಿ: ಖರ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.