50 ವರ್ಷ ಬಾಳಿಕೆ ಬರುವ ಖಾಲಿಯೇ ಆಗದ ಬ್ಯಾಟರಿ!
ಚೀನದಿಂದ ಪರಮಾಣು ಆಧರಿತ ಬ್ಯಾಟರಿ
Team Udayavani, Jan 16, 2024, 5:55 AM IST
ಬೀಜಿಂಗ್/ನವದೆಹಲಿ: ನಿತ್ಯ ಚಾರ್ಜ್ ಮಾಡಿ ಮೊಬೈಲ್ ಬಳಸುವುದು ಸಾಮಾ ನ್ಯ ವಾಗಿದೆ. ಕೆಲವೊಮ್ಮೆ ಬ್ಯಾಟರಿ ಡೌನ್ ಆಗುವುದು, ಚಾರ್ಜ್ ತೀರಾ ಕಡಿಮೆಯಾಗುವುದರಿಂದ ಕಿರಿಕಿರಿ ಉಂಟಾ ಗುತ್ತದೆ. ಈ ಸಮಸ್ಯೆಗೆ ಪರಿಹಾರ ನೀಡಲು ಚೀನಾದ ಕಂಪನಿಯೊಂದು ಬರೋಬ್ಬರಿ 50 ವರ್ಷ ಬಾಳಿಕೆ ಬರುವಂತಹ ಚಿಕ್ಕದಾದ ಬ್ಯಾಟರಿಯನ್ನು ತಯಾರಿಸುತ್ತಿದೆ.
ಬೀಜಿಂಗ್ ಮೂಲದ ಬೆಟಾವೊಲ್ಟ್ ಕಂಪನಿಯು, ಒಂದು ನ್ಯಾಣಕ್ಕಿಂತ ಚಿಕ್ಕದಾದ ಬ್ಯಾಟರಿಯನ್ನು ತಯಾರಿ ಸು ತ್ತಿದ್ದು, ಈ ಪರಮಾಣು ಬ್ಯಾಟರಿಯ ವಿಕಿರಣಗಳು ಮಾನವನ ದೇಹಕ್ಕೆ ಯಾವುದೇ ಹಾನಿ ಉಂಟು ಮಾಡುವುದಿಲ್ಲ ಹಾಗೂ ಪೇಸ್ಮೇಕರ್ಗಳಂತಹ ವೈದ್ಯಕೀಯ ಸಾಧನಗಳಲ್ಲಿ ಇದನ್ನು ಬಳಸಬಹುದು. ಪರಮಾಣು ಶಕ್ತಿಯ ಮಿನಿಯೇಟರೈಸೇಶನ್ ಬಳಸಿಕೊಂಡು ತಯಾರಿಸುತ್ತಿರುವ ವಿಶ್ವದ ಮೊದಲ ಬ್ಯಾಟರಿಯಾಗಿದೆ. ಮುಂದಿನ ಪೀಳಿಗೆ ಗಾಗಿ ಇದನ್ನು ಆವಿಷ್ಕರಿಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.
ನ್ಯೂಕ್ಲಿಯರ್ ಬ್ಯಾಟರಿಯು ಪ್ರಸ್ತುತ 3 ವೋಲ್ಟ್ಗಳಲ್ಲಿ 100 ಮೈಕ್ರೋವ್ಯಾಟ್ಶಕ್ತಿಯನ್ನು ಉತ್ಪಾದಿಸುತ್ತದೆ. 2025ರ ವೇಳೆಗೆ 1-ವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ ಹೊಂದಲಾಗಿದೆ. ಬ್ಯಾಟರಿ 60 ಡಿ.ಸೆ. ನಿಂದ 120 ಡಿ.ಸೆ.ತಾಪ ಮಾನ ದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Google Map Follow ಮಾಡಿ ಹೊಳೆಗೆ ಧುಮುಕಿದ ಕಾರು… ಅದೃಷ್ಟವಶಾತ್ ಪ್ರವಾಸಿಗರು ಪಾರು
Alert: ದೇವರನಾಡಿನಲ್ಲಿ ಮಳೆಯ ಅಬ್ಬರಕ್ಕೆ 11 ಮೃತ್ಯು , 7 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
Cops Suspended: ಪೋರ್ಶೆ ಕಾರು ಅಪಘಾತ ಪ್ರಕರಣ: ಕರ್ತವ್ಯಲೋಪ ಎಸಗಿದ ಪೊಲೀಸರಿಬ್ಬರ ಅಮಾನತು
Lok Sabha Polls: ನವದೆಹಲಿ, ಹರಿಯಾಣ ಸೇರಿದಂತೆ 8 ರಾಜ್ಯಗಳಲ್ಲಿ 6ನೇ ಹಂತದ ಮತದಾನ ಆರಂಭ
Bengaluru ಸ್ಫೋಟ: ವಿದೇಶಿ ಮಧ್ಯವರ್ತಿ ಬಂಧನ