ಮಹಿಳಾ ಸ್ವಾತಂತ್ರ್ಯಕ್ಕೆ ಮುನ್ನುಡಿ ಬರೆದ ಅಣ್ಣ

Team Udayavani, Mar 28, 2017, 3:17 PM IST

hub7.jpg

ಧಾರವಾಡ: ಇಂದು ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿ ಇಷ್ಟು ಎತ್ತರಕ್ಕೆ ಬೆಳೆಯಲು ಮೊದಲು ಪ್ರೇರಣೆಯಾಗಿದ್ದು 12ನೇ ಶತಮಾನದ ಶರಣ ವಿಶ್ವಗುರು ಬಸವಣ್ಣನವರು ಎಂದು ಅಕ್ಕ ಪ್ರಶಸ್ತಿ ಪುರಸ್ಕೃತ ಪ್ರೇಮಕ್ಕಾ ಬಿಂಕದಕಟ್ಟಿ ಹೇಳಿದರು. ಇಲ್ಲಿನ ಅಕ್ಕನ ಬಳಗದಲ್ಲಿ  ಸಚಿವ ವಿನಯ ಕುಲಕರ್ಣಿ ಅವರ ತಾಯಿ ಸುವರ್ಣಮ್ಮ ಕುಲಕರ್ಣಿ ಸ್ಮರಣಾರ್ಥ ಆಯೋಜಿಸಿದ್ದ ದತ್ತಿ ಕಾರ್ಯಕ್ರಮದಲ್ಲಿ ಅಕ್ಕ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. 

ಮಹಿಳೆಯರು ನಾಲ್ಕು ಗೋಡೆಗಳ ಧ್ಯೆ ಕಾಲ ಕಳೆದು ಜೀವನ ತ್ಯಜಿಸುವಂತಹ ಘಟನೆಗಳು ಶತಮಾನಗಳ ಹಿಂದೆ ನಡೆಯುತ್ತಿದ್ದವು. ಆ ಸಂದರ್ಭದಲ್ಲಿ ವಿಶ್ವಗುರು ಬಸವಣ್ಣನವರು ಮಹಿಳೆಯರ ನೋವುಗಳನ್ನು ಕಣ್ಣಾರೆ ಕಂಡು ಪುರುಷರಿಗಷ್ಟೇ ಯಾಕೆ ಸ್ತ್ರೀಯರಿಗೂ ಸ್ವಾತಂತ್ರ ಸಿಗಬೇಕು ಎಂದರು. 

ಸ್ತ್ರೀ ಸ್ವಾತಂತ್ರ್ಯ ಕೊಡಿಸಿದ ಕಾರಣ ಇಂದು ಮಹಿಳೆಯರು ಅನೇಕ ಕ್ಷೇತ್ರದಲ್ಲಿ ಹೆಜ್ಜೆಯನ್ನಿಡುತ್ತಿದ್ದಾರೆ. ಮಹಿಳೆ ಆಧುನಿಕ ಯುಗದಲ್ಲಿ ಧರ್ಮದ ಹಾದಿ ಬಿಟ್ಟು ವೈಚಾರಿಕತೆ ಹಾಗೂ ವೈಜ್ಞಾನಿಕ ಹಾದಿಯಲ್ಲಿ ನಡೆಯಬೇಕು. ಮೂಢ ನಂಬಿಕೆಯಂತಹ ಕಟ್ಟುಪಾಡುಗಳನ್ನು ಮುರಿದು ಮಹಿಳೆ ಶಿಕ್ಷಣ ಪಡೆದು,ಶರಣರ ಕಾಲದಿಂದಲೂ ಮಹಿಳೆಯ ಸಬಲೀಕರಣ, ಮಹಿಳಾ ಹಕ್ಕುಗಳ ಕುರಿತು ಚರ್ಚೆಗಳು ನಡೆಯುತ್ತಿವೆಯೇ ಹೊರತು ಅನುಷ್ಠಾನಗಳಾಗುತ್ತಿಲ್ಲ ಎಂದರು. 

ಜಿಲ್ಲಾಧಿಕಾರಿ ಡಾ| ಎಸ್‌. ಬಿ.ಬೊಮ್ಮನಹಳ್ಳಿ ಮಾತನಾಡಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಉತ್ತಮ ಸಾಧನೆ ಮಾಡಿದ್ದರೂ ಇನ್ನೂ ಅನೇಕ ಮಹಿಳೆಯರಿಗೆ ಪ್ರಶಸ್ತಿ ಮತ್ತು ಗೌರವಗಳು ಸಿಗುತ್ತಿಲ್ಲ. ಮಹಿಳಾ ಸಬಲೀಕರಣ ತುಂಬಾ ಬಹಳ ಪ್ರಾಮುಖ್ಯತೆ ಪಡೆಯುತ್ತಿದ್ದು ಸರಕಾರದ ಜೊತೆಗೆ ಸಂಘ-ಸಂಸ್ಥೆಗಳು ಮಹಿಳೆಯರಿಗೆ ಮಾರ್ಗದರ್ಶನ ಮಾಡಬೇಕಿದೆ ಎಂದರು. 

ವೈಶುದೀಪ ಫೌಂಡೇಶನ್‌ ಕಾರ್ಯದರ್ಶಿ ಶಿವಲೀಲಾ ವಿನಯ ಕುಲಕರ್ಣಿ ಮಾತನಾಡಿ, ಯಾವುದೇ ಉತ್ತಮ ಕಾರ್ಯ ಮಾಡುವಾಗ ಸಾಕಷ್ಟು ವಿರೋಧ ಬರುವುದು ಸಹಜ. ಅವೆಲ್ಲವನ್ನು ಮೀರಿ ಮಹಿಳೆ ಸಮಾಜದಲ್ಲಿ ಸಾಧನೆ ಮಾಡಲು ಮುಂದಾಗಬೇಕು. ಮಹಿಳೆ ಸಮಾಜ ಸುಧಾರಕಿಯಾಗಿ ಸಾಕಷ್ಟು ಕೆಲಸ ಮಾಡಿ ಮಹಿಳಾ ಸಾಧಕಿಯರಾಗಬೇಕು ಎಂದರು. 

ಅಕ್ಕನ ಬಳಗದ ಅಧ್ಯಕ್ಷೆ ಭಾರತಿದೇವಿ ರಾಜಗುರು ಅಧ್ಯಕ್ಷತೆ ವಹಿಸಿದ್ದರು. ಕುಸಮಾ ಓತಗೇರಿ, ಭಾಗ್ಯವತಿ ನಡಕಟ್ಟಿ, ಶಶಿಕಲಾ ಬಸವರಡ್ಡಿ, ಮುಕ್ತಾ ಸವಡಿ ಉಪಸ್ಥಿತರಿದ್ದರು. ಗೌರಾ ಹಾಲಭಾವಿ ನಿರೂಪಿಸಿದರು. ಸುನಂದಾ ಗುಡ್ಡದ ವಂದಿಸಿದರು.  

ಟಾಪ್ ನ್ಯೂಸ್

ಮೂರೂ ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

ಮೂರೂ ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

ಕಾಂಗ್ರೆಸ್ ಸದಸ್ಯತ್ವವೇ ಇಲ್ಲದಿದ್ದರೂ ಉಚ್ಛಾಟನೆ ಮಾಡಿದ್ದಾರೆ: ಲೋಕೇಶ್ ತಾಳಿಕಟ್ಟೆ

Congress ಸದಸ್ಯತ್ವವೇ ಇಲ್ಲದಿದ್ದರೂ ಉಚ್ಛಾಟನೆ ಮಾಡಿದ್ದಾರೆ: ಲೋಕೇಶ್ ತಾಳಿಕಟ್ಟೆ

Form 17c:  ಚುನಾವಣ ಆಯೋಗಕ್ಕೆ ನಿರ್ದೇಶನ ನೀಡಲು ಸುಪ್ರೀಂ ನಕಾರ, ಆದೇಶದಲ್ಲೇನಿದೆ?

Form 17c:  ಚುನಾವಣ ಆಯೋಗಕ್ಕೆ ನಿರ್ದೇಶನ ನೀಡಲು ಸುಪ್ರೀಂ ನಕಾರ, ಆದೇಶದಲ್ಲೇನಿದೆ?

Vijayanagara: ದಶಕಗಳ ನಂತರ ಹುಲಿಕೆರೆ ಕೆರೆಗೆ ನೀರು… ಗ್ರಾಮಸ್ಥರಿಂದ ಗಂಗಾ ಪೂಜೆ

Vijayanagara: ದಶಕಗಳ ಬಳಿಕ ಹುಲಿಕೆರೆ ಕೆರೆಗೆ ನೀರು… ಗ್ರಾಮಸ್ಥರಿಂದ ಗಂಗಾ ಪೂಜೆ

Cannes 2024: Mysore’s Chidananda S Naik won the best short film award

Cannes 2024: ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ ಪಡೆದ ಮೈಸೂರಿನ ಚಿದಾನಂದ ಎಸ್ ನಾಯಕ್

Lok Sabha Election 2024: 6ನೇ ಹಂತದ ಪ್ರಚಾರ ಅಂತ್ಯ, 25ರಂದು 58 ಕ್ಷೇತ್ರಗಳಲ್ಲಿ ಚುನಾವಣೆ

Lok Sabha Election 2024: 6ನೇ ಹಂತದ ಪ್ರಚಾರ ಅಂತ್ಯ, 25ರಂದು 58 ಕ್ಷೇತ್ರಗಳಲ್ಲಿ ಚುನಾವಣೆ

ಪ್ರಹ್ಲಾದ ಜೋಶಿ

Bellary; ಆಂತರಿಕ ಬೇಗುದಿಯಿಂದ ಸರ್ಕಾರ ಬಿದ್ದರೆ ನಾವು ಹೊಣೆಯಲ್ಲ: ಪ್ರಹ್ಲಾದ ಜೋಶಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

heavy rain in Dharwad

Dharwad ಜಿಲ್ಲೆಯಲ್ಲಿ ಮುಂದುವರೆದ ವರುಣನ ಆರ್ಭಟ: ಮನೆಗಳಿಗೆ ನುಗ್ಗಿದ ನೀರು

Hubli; Anjali case accused Girish is in CID custody for eight days

Hubli; ಅಂಜಲಿ ಹಂತಕ ಗಿರೀಶ್ ಎಂಟು ದಿನ ಸಿಐಡಿ ವಶಕ್ಕೆ

Dharwad: ದರೋಡೆಕೋರರನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದ ಲೇಡಿ ಪಿಎಸ್ಐ

Dharwad: ದರೋಡೆಕೋರರನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದ ಲೇಡಿ ಪಿಎಸ್ಐ

2A ಮೀಸಲಾತಿ ಕೊರಿ ಮತ್ತೆ ಪಂಚಮಸಾಲಿ ಹೋರಾಟ: ಬಸವ ಜಯಮೃತ್ಯುಂಜಯ ಶ್ರೀ‌

2A ಮೀಸಲಾತಿ ಕೋರಿ ಮತ್ತೆ ಪಂಚಮಸಾಲಿ ಹೋರಾಟ: ಬಸವ ಜಯಮೃತ್ಯುಂಜಯ ಶ್ರೀ‌

Hubli; ಜಾನುವಾರು ಮೇಯಿಸಲು ಹೋಗಿದ್ದ ಯುವಕ ಸಿಡಿಲು ಬಡಿದು ಸಾವು

Hubli; ಜಾನುವಾರು ಮೇಯಿಸಲು ಹೋಗಿದ್ದ ಯುವಕ ಸಿಡಿಲು ಬಡಿದು ಸಾವು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

ಮೂರೂ ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

ಮೂರೂ ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

ಕಾಂಗ್ರೆಸ್ ಸದಸ್ಯತ್ವವೇ ಇಲ್ಲದಿದ್ದರೂ ಉಚ್ಛಾಟನೆ ಮಾಡಿದ್ದಾರೆ: ಲೋಕೇಶ್ ತಾಳಿಕಟ್ಟೆ

Congress ಸದಸ್ಯತ್ವವೇ ಇಲ್ಲದಿದ್ದರೂ ಉಚ್ಛಾಟನೆ ಮಾಡಿದ್ದಾರೆ: ಲೋಕೇಶ್ ತಾಳಿಕಟ್ಟೆ

Form 17c:  ಚುನಾವಣ ಆಯೋಗಕ್ಕೆ ನಿರ್ದೇಶನ ನೀಡಲು ಸುಪ್ರೀಂ ನಕಾರ, ಆದೇಶದಲ್ಲೇನಿದೆ?

Form 17c:  ಚುನಾವಣ ಆಯೋಗಕ್ಕೆ ನಿರ್ದೇಶನ ನೀಡಲು ಸುಪ್ರೀಂ ನಕಾರ, ಆದೇಶದಲ್ಲೇನಿದೆ?

Vijayanagara: ದಶಕಗಳ ನಂತರ ಹುಲಿಕೆರೆ ಕೆರೆಗೆ ನೀರು… ಗ್ರಾಮಸ್ಥರಿಂದ ಗಂಗಾ ಪೂಜೆ

Vijayanagara: ದಶಕಗಳ ಬಳಿಕ ಹುಲಿಕೆರೆ ಕೆರೆಗೆ ನೀರು… ಗ್ರಾಮಸ್ಥರಿಂದ ಗಂಗಾ ಪೂಜೆ

Cannes 2024: Mysore’s Chidananda S Naik won the best short film award

Cannes 2024: ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ ಪಡೆದ ಮೈಸೂರಿನ ಚಿದಾನಂದ ಎಸ್ ನಾಯಕ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.