ಚಿಟ್ಟಾಣಿ ಸಪ್ತಾಹ: ಕಲಾವಿದ ಪುರಸ್ಕಾರ


Team Udayavani, Oct 27, 2017, 2:17 PM IST

27-35.jpg

ಉಡುಪಿಯ ಚಿಟ್ಟಾಣಿ ಅಭಿಮಾನಿ ಬಳಗ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಆಯೋಜಿಸಿರುವ ಚಿಟ್ಟಾಣಿ ಯಕ್ಷಗಾನ ಸಪ್ತಾಹ 2017ರ ಸಮಾರೋಪ ಸಮಾರಂಭದಲ್ಲಿ ಅಕ್ಟೋಬರ್‌ 28, 2017ರಂದು ಪೇಜಾವರ ಮಠದ ಉಭಯ ಶ್ರೀಪಾದರ ದಿವ್ಯೋಪಸ್ಥಿತಿಯಲ್ಲಿ ಅತಿಥಿ ಗಣ್ಯರ ಸಮಕ್ಷ ಪ್ರಶಸ್ತಿ ಸ್ವೀಕರಿಸಲಿರುವ ಈರ್ವರು ಕಲಾವಿದರ ಪರಿಚಯ ಇಲ್ಲಿದೆ.

ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ 
ಶಿರಳಗಿ ಭಾಸ್ಕರ ಜೋಶಿ ಯಕ್ಷಗಾನದ ಪ್ರಸಿದ್ಧ ಸ್ತ್ರೀವೇಷಧಾರಿ ಭಾಸ್ಕರ ಜೋಶಿ ಯವರು ನಾರಾಯಣ ಜೋಶಿ- ಗಂಗಾ ದಂಪತಿಯ ಪುತ್ರರಾಗಿ 1956ರಲ್ಲಿ ಜನಿಸಿದರು. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಶಿರಳಗಿ ಇವರ ಹುಟ್ಟೂರು. ಎಸ್‌ಎಸ್‌ಎಲ್‌ಸಿಯವರೆಗೆ ಶಾಲಾಶಿಕ್ಷಣ ಪುರೈಸಿದ ಬಳಿಕ ಯಕ್ಷಗಾನದತ್ತ ಆಕರ್ಷಿತರಾಗಿ ಅದನ್ನೇ ವೃತ್ತಿಯಾಗಿ ಸ್ವೀಕರಿಸಿ ನಾಲ್ಕೂವರೆ ದಶಕಗಳಿಂದ ಕಲಾಸೇವೆ ಗೈಯುತ್ತಿದ್ದಾರೆ. ಹೊಸ್ತೋಟ ಮಂಜುನಾಥ ಭಾಗವತರಲ್ಲಿ ಯಕ್ಷಗಾನದ ಆರಂಭಿಕ ಪಾಠಗಳನ್ನು ಕಲಿತು ಕೆರೆಮನೆ ಗಜಾನನ ಹೆಗಡೆ, ಕೊಳಗಿ ಅನಂತ ಹೆಗಡೆಯವರ ಗರಡಿಯಲ್ಲಿ ಪಳಗಿದರು. ಕೋಟ ಶಿವರಾಮ ಕಾರಂತರ ಯಕ್ಷರಂಗ ತಂಡ ಸೇರಿ ತಮ್ಮ ಕಲಾವ್ಯಕ್ತಿತ್ವವನ್ನು ಬೆಳೆಸಿಕೊಂಡರು.

ಇಡಗುಂಜಿ, ಸಾಲಿಗ್ರಾಮ, ಅಮೃತೇಶ್ವರಿ, ಪೆರ್ಡೂರು, ಶಿರಸಿ ಪಂಚಲಿಂಗ, ಶಿರಸಿ ಮಾರಿಕಾಂಬಾ, ಬಚ್ಚಗಾರು ಮೇಳಗಳಲ್ಲಿ ತಿರುಗಾಟ ಮಾಡಿರುತ್ತಾರೆ. ಯಕ್ಷರಂಗ ತಂಡದಲ್ಲಿ ಎಂಟು ವರ್ಷ ಇದ್ದು ದೇಶದ, ಜಗತ್ತಿನ ಅನ್ಯಾನ್ಯ ಪ್ರದೇಶಗಳಲ್ಲಿ ಕಲಾಪ್ರತಿಭೆ ತೋರಿಸಿದ್ದಾರೆ. ಭುವನಗಿರಿ ಭುವನೇಶ್ವರಿ ಯಕ್ಷಗಾನ ಮಂಡಳಿ ಸ್ಥಾಪಿಸಿ ಮೂರು ವರ್ಷ ಕಾಲಮಿತಿ ಪ್ರದರ್ಶನ ನೀಡಿದ್ದಾರೆ.

ವೇಷಕ್ಕೊಪ್ಪುವ ಆಳಂಗ, ಸುಮಧುರ ಶಾರೀರ, ಲಾಲಿತ್ಯಪೂರ್ಣ ಕುಣಿತ, ಭಾವಪೂರ್ಣ ಅಭಿನಯಗಳಿಂದ ಪೌರಾಣಿಕ ಸ್ತ್ರೀಪಾತ್ರಗಳನ್ನು ಅನನ್ಯವಾಗಿ ಕಟ್ಟಿಕೊಟ್ಟವರು. ದಾಕ್ಷಾಯಿಣಿ, ಅಂಬೆ, ಸುಭದ್ರೆ, ಪ್ರಭಾವತಿ, ನಾಗಶ್ರೀ, ಚಿತ್ರಾವತಿ, ದ್ರೌಪದಿ, ವಿಷಯೆ ಮೊದಲಾದ ಪಾತ್ರಗಳು ಕಲಾರಸಿಕರ ಮನ ಗೆದ್ದಿವೆ. ಕೃಷ್ಣ, ವಲಲ ಭೀಮ, ರಾವಣ, ರುಕಾ¾ಂಗದ ಮೊದಲಾದ ಪುರುಷಪಾತ್ರಗಳಲ್ಲೂ ಕಲಾಪ್ರೌಢಿಮೆ ಮೆರೆದಿದ್ದಾರೆ.

ಪ್ರಜ್ಞಾ ಯಕ್ಷಗಾನ ಕಲಾವೃಂದ ಸಂಘಟನೆಯಲ್ಲಿ ಈಗಲೂ ಸಕ್ರಿಯರು. ಸೊಂದಾ ಸ್ವರ್ಣದಲ್ಲಿ ತರಬೇತಿ ಶಿಬಿರಗಳನ್ನು ನಡೆಸಿ ಎಳೆಯರಿಗೆ ತರಬೇತಿ ನೀಡುತ್ತಿದ್ದಾರೆ. ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರು.

ಟಿ.ವಿ ರಾವ್‌ ಪ್ರಶಸ್ತಿ – ಕೃಷ್ಣಕುಮಾರ್‌ ರಾವ್‌ ಮಟ್ಟು
ಕೃಷ್ಣಕುಮಾರ್‌ ಮಟ್ಟು ಅಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರು. ಹವ್ಯಾಸಿ ಯಕ್ಷಗಾನ ಕಲಾವಿದ. 1955ರಲ್ಲಿ ಜನಿಸಿದ ಇವರು ಪ್ರಾಥಮಿಕ -ಮಾಧ್ಯಮಿಕ ಶಿಕ್ಷಣವನ್ನು ಕಟಪಾಡಿಯಲ್ಲಿ ಪೂರೈಸಿದರು. ಕುಂಜಾರು ಗಿರಿ ಮತ್ತು ಉದ್ಯಾವರ ಶಾಲೆಗಳಲ್ಲಿ ಶಿಕ್ಷಕರಾಗಿ 39 ವರ್ಷ ಹಲವು ವಿದ್ಯಾರ್ಥಿಗಳಿಗೆ ಜ್ಞಾನಧಾರೆ ಎರೆದರು. 

ಯಕ್ಷಗಾನ ಅವರಿಗೆ ಪ್ರವೃತ್ತಿ. ಲಕ್ಷ್ಮೀನಾರಾಯಣ ರಾವ್‌ ಮಟ್ಟು ಅವರು ಅವರ ಈ ಆಸಕ್ತಿಗೆ ಪ್ರೇರಕರು. ಆರಂಭದಲ್ಲಿ ಯಕ್ಷಗಾನ ಹಿಮ್ಮೇಳವಾದನ ಅಭ್ಯಾಸ ಮಾಡಿದರು. ಗುರು ಬನ್ನಂಜೆ ಸಂಜೀವ ಸುವರ್ಣರಲ್ಲಿ ಹೆಜ್ಜೆಗಾರಿಕೆ ಕಲಿತುಕೊಂಡರು. ಟಿ.ವಿ. ರಾವ್‌ ನೇತೃತ್ವದ ಮಟ್ಟು ವಿಷ್ಣುಮೂರ್ತಿ ಯಕ್ಷಗಾನ ಸಂಘ, ಕಟಪಾಡಿ ಮಂಜುಳಾ ಯಕ್ಷಗಾನ ಸಂಘಗಳಲ್ಲಿ ಖಾಯಂ ಸದಸ್ಯರು. ಹಿಮ್ಮೇಳವಾದಕರಾಗಿ, ವೇಷಧಾರಿಯಾಗಿ, ಅರ್ಥ ಧಾರಿಯಾಗಿ ಹಲವು ಪ್ರದರ್ಶನಗಳಲ್ಲಿ ಭಾಗಿ ಯಾಗಿದ್ದಾರೆ. ಅಲ್ಲಿಯ ಹಿರಿಯ ಕಲಾವಿದರ ಒಡ ನಾಟದಲ್ಲಿ ಕಲೆಯ ಕಸುಬುಗಾರಿಕೆ ಬೆಳೆಸಿಕೊಂಡಿದ್ದಾರೆ. ಶ್ರೀ ಶಾರದಾ ಹವ್ಯಾಸಿ ಯಕ್ಷಗಾನ ಕಲಾ ಸಂಘದಲ್ಲಿ ಪ್ರಧಾನ ವೇಷ ಧಾರಿಯಾಗಿ ಹಲವು ಮುಖ್ಯಪಾತ್ರಗಳನ್ನು ನಿರ್ವಹಿಸಿದ್ದಾರೆ.

ಕುಂಜಾರುಗಿರಿ, ಕಟಪಾಡಿ, ಅದಮಾರುಗಳಲ್ಲಿ ಯಕ್ಷಗಾನ ತರಬೇತಿ ನೀಡಿ ಮಕ್ಕಳಿಂದ ಹಾಗೂ ಮಹಿಳೆ ಯರಿಂದ ಯಕ್ಷಗಾನ ಮಾಡಿಸಿದ್ದಾರೆ. ಯಕ್ಷಗಾನದ ಎಲ್ಲ ಅಂಗಗಳ ಪರಿಚಯವಿರುವ ಇವರು ಟಿ.ವಿ. ರಾವ್‌ ಅವರ ಆತ್ಮೀಯರಲ್ಲಿ ಓರ್ವರಾಗಿದ್ದರು.

ನಾರಾಯಣ ಎಂ. ಹೆಗಡೆ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.