ಸಿಮ್‌ಪಲ್ಲಾಗ್‌ ಒಂದ್‌ ಮೆಸೇಜ್‌ ಸ್ಟೋರಿ

Team Udayavani, Nov 7, 2017, 11:37 AM IST

simpalag-ondh.jpg

ನನ್ನ ಮಾತನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಅವರ್ಯಾರೂ ಇರಲಿಲ್ಲ. ಸುಮಾರು 2 ತಿಂಗಳುಗಳ ಕಾಲ ಅಣ್ಣಂದಿರು ನನ್ನ ಬಳಿ ಮಾತಾಡಲಿಲ್ಲ. ನಾನು ಅವರ ನೆನಪಿನಲ್ಲಿ ಅತ್ತಿದ್ದೇ ಅತ್ತಿದ್ದು. ಊಟ ಸೇರಲಿಲ್ಲ, ನೆಮ್ಮದಿಯೂ ಇರಲಿಲ್ಲ. ನಾನು ಸಿಮ್‌ ಕಾರ್ಡು ತೆಗೆದುಕೊಳ್ಳದಿದ್ದರೇ ಚೆನ್ನಾಗಿತ್ತು ಎನ್ನಿಸಿಬಿಟ್ಟಿತ್ತು… 

ಡಿಗ್ರಿ ಮುಗಿಯುವವರೆಗೂ ನಾನು ಮೊಬೈಲ್‌ ಕೈಲಿ ಹಿಡಿದವಳೇ ಅಲ್ಲ. ಗೆಳತಿಯರ ಕೈಗಳಲ್ಲಿ ಮೊಬೈಲು ನೋಡಿದಾಗಲೆಲ್ಲಾ ನನಗೆ ನಮ್ಮ ಅಣ್ಣಂದಿರ ಮೇಲೆ ತುಂಬಾ ಕೋಪ ಬರುತ್ತಿತ್ತು. ನನಗೆ ಮೊಬೈಲ್‌ ಸಿಗದೇ ಇರಲು ಅವರೇ ಕಾರಣಕರ್ತರು. ಓದೋ ಹುಡುಗೀರು ಮೊಬೈಲ್‌ ಬಳಸಿದ್ರೆ ಕೆಟ್ಟು ಹೋಗುತ್ತಾರೆ ಅನ್ನೋದು ಅವರ ಅಭಿಪ್ರಾಯವಾಗಿತ್ತು. 

ಅದಕ್ಕೇ ಒಂದು ದಿನ ಉಪಾಯ ಮಾಡಿದೆ. ಗೆಳತಿಯ ಮೊಬೈಲು ಕೇಳಿ ಪಡೆದು ನನ್ನದೇ ಸಿಮ್‌ ಹಾಕಿ ಬಳಸೋದು ಅಂತ. ಮನೆಯವರಿಗೆ ಗೊತ್ತಾಗದಂತೆ ಸಿಮ್‌ಕಾರ್ಡ್‌ ತಗೊಂಡಿದ್ದೂ ಆಯ್ತು, ಎಸ್ಸೆಮ್ಮೆಸ್‌ಗಳಲ್ಲಿ ಮುಳುಗಿ ಎದ್ದಿದ್ದೂ ಆಯ್ತು. ಹೀಗೇ ನಡೆಯಿತು ತುಂಬಾ ದಿನ. ಪರೀಕ್ಷೆ ಕಳೆದು ರಜಾದಿನಗಳು ಪ್ರಾರಂಭವಾಗಿದ್ದ ದಿನಗಳವು. ಬೇಜಾರು ಕಳೆಯಲೆಂದು ಸ್ನೇಹಿತನನ್ನು ಮಾತಾಡಿಸಿಕೊಂಡು ಬರೋಣವೆಂದು ಅವನ ಮನೆಗೆ ಹೊರಟೆ.

ಹೊರಟವಳು ಸಿಮ್‌ ಕಾರ್ಡನ್ನು ಮನೆಯಲ್ಲೇ ಬಿಟ್ಟು ಬಂದಿದ್ದೆ. ವಾಪಸ್‌ ಹಿಂದಿರುವಾಗ ನನ್ನ ಸಿಮ್‌ ಕಾರ್ಡ್‌ ಮನೆಯಲ್ಲಿ ಯಾರಿಗೂ ಸಿಕ್ಕದಿರಲಪ್ಪಾ ಎಂದು ದೇವರಲ್ಲಿ ಪ್ರಾರ್ಥಿಸಿಕೊಂಡೇ ಕಾಲಿಟ್ಟಿದ್ದೆ. ಆದರೆ, ಏನು ಆಗಬಾರದೆಂದುಕೊಂಡಿದ್ದೆನೋ, ಅದಾಗಿ ಹೋಗಿತ್ತು. ಅಣ್ಣನಿಗೆ ನನ್ನ ಸಿಮ್‌ ಕಾರ್ಡ್‌ ಸಿಕ್ಕಿಬಿಟ್ಟಿತ್ತು! ಅಣ್ಣ ನನ್ನ ಸಿಮ್‌ ಕಾರ್ಡನ್ನು ತನ್ನ ಮೊಬೈಲಿಗೆ ಹಾಕಿ ನೋಡಿದಾಗ ಒಂದು ಶಾಕಿಂಗ್‌ ಕಾದಿತ್ತು.

“ಐ ಲವ್‌ ಯೂ’ ಎಂದು ಬರೆದ ಎಸ್ಸೆಮ್ಮೆಸ್‌ ಕಂಡು ಅವನು ಕುಸಿದುಹೋಗಿದ್ದ. ನಮ್ಮಣ್ಣ ಯಾವತ್ತೂ ಅತ್ತವನೇ ಅಲ್ಲ. ಆದರೆ, ಆ ದಿನ ಎಸ್ಸೆಮ್ಮೆಸ್‌ ನೋಡಿ ಅತ್ತುಬಿಟ್ಟ. ನಾನು ಮನೆಗೆ ಬಂದಾಗ ಅವನ ಕಣ್ಣಲ್ಲಿ ನೀರಿತ್ತು. ಅವರಿಗೆ ನನ್ನ ಸಿಮ್‌ ಸಿಕ್ಕಿರಬಹುದೆಂಬ ಅನುಮಾನ ನನ್ನಲ್ಲಿ ಸುಳಿಯಿತು. ಅಣ್ಣನನ್ನು ಮಾತಾಡಿಸಲು ತುಂಬಾ ಭಯ ಆಯ್ತು. ನನ್ನನ್ನು ನೋಡಿದ ತಕ್ಷಣ “ಆ ಎಸ್ಸೆಮ್ಮೆಸ್‌ ಕಳಿಸಿದ ಹುಡುಗ ಯಾರು?

ಯಾರನ್ನ ಇಷ್ಟಪಡ್ತಿದ್ದೀಯಾ?’ ಒಂದೇ ಸಮನೆ ಪ್ರಶ್ನೆಗಳ ಮಳೆ ಸುರಿಸಿದ. ನನ್ನ ಉತ್ತರಕ್ಕೂ ಕಾಯದೆ “ಅದರ ಅವಶ್ಯಕತೆಯಾದರೂ ಏನಿತ್ತು? ಕದ್ದು ಮುಚ್ಚಿ ಮೊಬೈಲ್‌ ಯೂಸ್‌ ಮಾಡೋ ಧೈರ್ಯ ಎಲ್ಲಿಂದ ಬಂತು?’ ಎನ್ನುತ್ತಾ ಬೈಯಲು ಶುರುಮಾಡಿದ. ನಾನು ಮೂಲೆಯಲ್ಲಿ ಮುದುರಿ ಕುಳಿತ ಬೆಕ್ಕಿನಂತೆ ತಲೆತಗ್ಗಿಸಿ ನಿಂತೆ. ಅವನು ಸುಮ್ಮನಾದ ಮೇಲೆ ಮೆತ್ತನೆ ಸ್ವರದಲ್ಲಿ ಹೇಳಿದೆ, “ಆ ಎಸ್ಸೆಮ್ಮೆಸ್‌ ಕಳಿಸಿದ್ದು ಯಾರು ಅಂತ ನಿಜವಾಗ್ಲೂ ನಂಗೊತ್ತಿಲ್ಲ’. ನನ್ನ ಮಾತನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಅವರ್ಯಾರೂ ಇರಲಿಲ್ಲ.

ಸುಮಾರು 2 ತಿಂಗಳುಗಳ ಕಾಲ ಅಣ್ಣಂದಿರು ನನ್ನ ಬಳಿ ಮಾತಾಡಲಿಲ್ಲ. ನಾನು ಅವರ ನೆನಪಿನಲ್ಲಿ ಅತ್ತಿದ್ದೇ ಅತ್ತಿದ್ದು. ಊಟ ಸೇರಲಿಲ್ಲ, ನೆಮ್ಮದಿಯೂ ಇರಲಿಲ್ಲ. ನಾನು ಸಿಮ್‌ ಕಾರ್ಡು ತೆಗೆದುಕೊಳ್ಳದಿದ್ದರೇ ಚೆನ್ನಾಗಿತ್ತು ಎನ್ನಿಸಿಬಿಟ್ಟಿತ್ತು. ಅದೊಂದು ದಿನ ಅಣ್ಣಂದಿರು ಸೀರೆಯನ್ನು ಉಡುಗೊರೆಯಾಗಿ ಕೊಟ್ಟು ನಗುನಗುತ್ತಾ ಮಾತಾಡಿಸಿ ಕ್ಷಮೆಯಾಚಿಸಿದರು. ಬಹುಶಃ ಅವರಿಗೂ ಅಷ್ಟೊತ್ತಿಗಾಗಲೇ ನಾನು ಹೇಳಿದ್ದು ನಿಜವೆಂದು ತಿಳಿದುಹೋಗಿರಬಹುದು. ಆ ದಿನವನ್ನು ನಾನು ಜನ್ಮದಲ್ಲಿ ಮರೆಯೋದಿಲ್ಲ. ಅದು ರಕ್ಷಾಬಂಧನದ ದಿನ ಅನ್ನೋದು ಕಾಕತಾಳೀಯ!

* ನಿರ್ಮಲ ಟಿ. ಲಕ್ಕಿಹಳ್ಳಿ, ಹೊಸದುರ್ಗ

ಟಾಪ್ ನ್ಯೂಸ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ

Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.