ದರುಶನಕೆ “ದಾರ’!


Team Udayavani, Nov 22, 2017, 11:07 AM IST

22-26.jpg

ಉಡುಗೆಗಳಿಗೆ ಹೊಂದುವಂತಹ ರೇಷ್ಮೆ ದಾರದ ಆಭರಣಗಳನ್ನು ನೋಡಲು ಎರಡು ಕಣ್ಣುಗಳು ಸಾಲದು. ಇದು ಸೀರೆ, ಜೀನ್ಸ್‌, ಚೂಡಿ, ಸ್ಕರ್ಟ್‌ ಬಹುತೇಕ ಉಡುಗೆಗಳ ಜೊತೆ ಮ್ಯಾಚ್‌ ಆಗುತ್ತದೆ. ವಯಸ್ಸಿನ ಮಿತಿಯಿಲ್ಲದೆ ಚಿಕ್ಕವರಾದಿಯಾಗಿ ವಯಸ್ಕ ಮಹಿಳೆಯರೂ ಈ ಆಭರಣಗಳನ್ನು ಧರಿಸುತ್ತಿದ್ದಾರೆ…

ರೇಷ್ಮೆಯು ಫ್ಯಾಷನ್‌ ಲೋಕದಲ್ಲಿ ತನ್ನದೇ ಆಕರ್ಷಣೆಯಿದೆ. ರೇಷ್ಮೆಯ ನೂಲುಗಳು, ಅನಾದಿಕಾಲದಿಂದಲೂ ಸೌಂದರ್ಯದ ರಾಯಭಾರಿಗಳಾಗಿವೆ. ರೇಷ್ಮೆ ಎಂದಾಕ್ಷಣ ಐಷಾರಾಮಿ ಭಾವನೆ ನಮ್ಮ ಮನಸ್ಸಿನಲ್ಲಿ ಮೂಡುತ್ತದೆ. ಆದರೆ, ಆ ನೂಲಿನ ಜಾದೂ ಕೇವಲ ಸೀರೆಗಷ್ಟೇ ಸೀಮಿತವಾದುದಲ್ಲ.

ಇಂದು ಈ ರೇಷ್ಮೆ ನೂಲುಗಳಿಂದ ಆಭರಣಗಳನ್ನು ತಯಾರಿಸುತ್ತಿರುವುದು ವಿಶೇಷ. ಈ ಆಭರಣಗಳು “ಗ್ರ್ಯಾಂಡ್‌ ಲುಕ್‌’ ನೀಡುತ್ತವೆ. ಈಗೀಗ ಬಂಗಾರದ ಆಭರಣಗಳಿಗೆ ಪರ್ಯಾಯವಾಗಿ ಉಡುಪುಗಳಿಗೆ ಹೊಂದಾಣಿಕೆಯಾಗುವ ರೇಷ್ಮೆಯ ಆಭರಣಗಳನ್ನು ಕೊಳ್ಳುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ.

ಈ ಕಾರಣಕ್ಕಾಗಿ ರೇಷ್ಮೆಯಿಂದ ಸರ, ಬಳೆ, ಇಯರ್‌ ರಿಂಗ್‌, ಬ್ರೇಸ್‌ಲೆಟ್‌ಗಳನ್ನು ತಯಾರಿಸುತ್ತಿದ್ದಾರೆ. ಉಡುಗೆಗಳಿಗೆ ಹೊಂದುವಂಥ ರೇಷ್ಮೆ ದಾರದ ಆಭರಣಗಳನ್ನು ನೋಡಲು ಎರಡು ಕಣ್ಣುಗಳು ಸಾಲದು. ಇದು ಸೀರೆ, ಜೀನ್ಸ್‌, ಚೂಡಿ, ಸ್ಕರ್ಟ್‌ ಬಹುತೇಕ ಉಡುಗೆಗಳ ಜೊತೆ ಮ್ಯಾಚ್‌ ಆಗುತ್ತದೆ. ವಯಸ್ಸಿನ ಮಿತಿಯಿಲ್ಲದೆ ಚಿಕ್ಕವರಾದಿಯಾಗಿ ವಯಸ್ಕ ಮಹಿಳೆಯರೂ ಈ ಆಭರಣಗಳನ್ನು ಧರಿಸುತ್ತಿದ್ದಾರೆ. ದಿನ ಬಳಕೆಗೊಂದೇ ಅಲ್ಲದೇ ಸಮಾರಂಭ ಹಾಗೂ ಮದುವೆಗಳಲ್ಲಿ ಜನಪ್ರಿಯವಾಗುತ್ತಿದೆ. 

ಸ್ಟೋನ್‌ಚೈನ್‌ ಹಾಕುವುದರಿಂದ ಈ ಸರಗಳು ಇನ್ನಷ್ಟು ಗ್ರಾಡ್‌ ಆಗಿ ಕಾಣುವುದು. ಈ ಸರದ ಪದಕಗಳಿಗೆ ಕುಂದನ್‌, ಬಾಲ್‌ಚೈನ್‌ಗಳನ್ನು ಹಾಕಿರುತ್ತಾರೆ. ಈ ದಾರದ ಸರಗಳು ಸಾಂಪ್ರದಾಯಿಕ ಉಡುಗೆಗಳ ಜೊತೆ ತೊಟ್ಟರೆ ಮತ್ತಷ್ಟು ಮೆರುಗನ್ನು ನೀಡುತ್ತದೆ.

ಸರಳ ಸುಂದರ ಬಳೆಗಳು
ರೇಷ್ಮೆ ದಾರದ ಬಳೆಗಳು ನೋಡಲು ಸರಳವಾದರೂ ಅಂದವಾಗಿ ಕಾಣುತ್ತದೆ. ಇದಕ್ಕೆ ರೇಷ್ಮೆ ದಾರಗಳ ಜೊತೆಗೆ ಬಾಲ್‌ಚೈನ್‌ಗಳನ್ನು ವಕ್ರವಾಗಿ ಸುತ್ತುವುದರಿಂದ ನೋಡಲು ಸುಂದರವಾಗಿ ಕಾಣುತ್ತದೆ. ಇವನ್ನು ದಿನನಿತ್ಯ ಬಳಸಬಹುದಾಗಿದೆ.

ಕಣ್ಮನ ಸೆಳೆವ ಇಯರ್‌ ರಿಂಗ್ಸ್‌
ಇದಕ್ಕೆ ಬಾಲ್‌ಚೈನ್‌ಗಳಿಗಿಂತ ಸ್ಟೋನ್‌ಗಳು, ಕ್ರಿಸ್ಟಲ್‌ಗ‌ಳು, ಹಾಫ್ ಪರ್ಲ್ಗಳು ಮೊದಲಾದವುಗಳನ್ನು ರೇಷ್ಮೆ ದಾರಗಳ ಜೊತೆ ಪೋಣಿಸುತ್ತಾರೆ. ಕಿವಿ ಓಲೆಗಳಲ್ಲಿರುವ ನಾನಾ ವಿಧದಲ್ಲಿನ ಜುಮುಕಿ ಮತ್ತು ಸ್ಟ್ರಡ್‌ಗಳನ್ನು ರೇಷ್ಮೆ ದಾರಗಳಿಂದ ಮಾಡಿರುತ್ತಾರೆ. ಇದರಿಂದ ಮಾಡಿದ ಜುಮುಕಿಗಳಿಗೆ ಬೇಡಿಕೆ ಹೆಚ್ಚಾಗುತ್ತಿವೆ. ಇದು ಮದುವೆ ಹಾಗೂ ಸಮಾರಂಭಗಳಲ್ಲಿ ಅತಿಶಯವಾಗದಂಥ ಲುಕ್‌ ನೀಡುತ್ತದೆ. 

ಅತ್ಯಾಕರ್ಷಕ ಬ್ರೇಸ್‌ಲೆಟ್ಸ್‌
ರೇಷ್ಮೆ ನೂಲಿನಿಂದ ತಯಾರಿಸಿದ ಬ್ರೇಸ್‌ಲೆಟ್‌ಗಳಿಗೆ ಮಣಿಗಳನ್ನು ಹಾಕುವುದರಿಂದ ನೋಡಲು ಅತ್ಯಾಕರ್ಷಕವಾಗಿ ಕಾಣಿಸುತ್ತದೆ. ಈ ಮಣಿಗಳನ್ನು ವುಡನ್‌ ಬೀಡ್ಸ್‌ಗಳಿಂದ ತಯಾರಿಸುತ್ತಾರೆ. ಇದು ನೋಡಲು ಅದ್ದೂರಿಯಾಗಿ ಕಾಣುತ್ತದೆ. ಇತ್ತೀಚೆಗೆ ಬಂದ ಈ ಆಭರಣಗಳು ಅತಿ ಕಡಿಮೆ ಅವಧಿಯಲ್ಲಿ ಜನಪ್ರಿಯವಾಗಿದೆ. ಸೆಲೆಬ್ರಿಟಿಯರೂ ಇವಕ್ಕೆ ಮನಸೋತಿದ್ದಾರೆ. ಪ್ರಶಸ್ತಿ ಸಮಾರಂಭಗಳಲ್ಲಿ, ಕಾರ್ಯಕ್ರಮಗಳಲ್ಲಿ ರೇಷ್ಮೆ ನೂಲಿನ ಆಭರಣಗಳನ್ನು ಧರಿಸಿ ಮಿಂಚುತ್ತಿದ್ದಾರೆ. 

ಇದನ್ನು ಸ್ವತಃ ಮನೆಯಲ್ಲಿಯೇ ಸುಲಭವಾಗಿ  ಕಡಿಮೆ ಸಮಯದಲ್ಲಿ ತಯಾರಿಸಿಕೊಳ್ಳಬಹುದು. ಇವೆಲ್ಲದರ ಜೊತೆಗೆ ಅಣ್ಣ ತಂಗಿಯರ ಬಾಂಧವ್ಯವನ್ನು ಬೆಸೆಯುವ ರಾಖೀ ಮಾಡಲೂ ಈ ದಾರಗಳನ್ನು ಬಳಸಲಾಗುತ್ತಿದೆ. ರೇಷ್ಮೆ ನೂಲಿನಿಂದ ತಯಾರಿಸಿದ ರಾಖೀಗಳು ನೋಡಲು ತುಂಬಾ ಮುದ್ದು ಮುದ್ದು. 

ನಿಧಿ ಹೆಗಡೆ, ಕಾಗೇರಿ 

ಟಾಪ್ ನ್ಯೂಸ್

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.