ದೇಹದಾನ – ಸತ್ತವರಿಲ್ಲಿ ಚಿರಂಜೀವಿಗಳು


Team Udayavani, Feb 24, 2018, 2:14 PM IST

11.jpg

ಅಮ್ಮ ಮರಣಹೊಂದಿದಾಗ ಅಪ್ಪನ ನೆನಪಾಯಿತು. ಹದಿನಾಲ್ಕು ದಿನಗಳ ನಂತರ ಮನೆಯವರೆಲ್ಲಾ ನೇರ ಹೊರಟದ್ದು ದೇಹದಾನ ಮಾಡಿದ ಆಸ್ಪತ್ರೆಗೆ.  ಅಮ್ಮನ ನೆನಪು ಇನ್ನೂ ಮಾಸದ ಹೊತ್ತಲ್ಲಿ, ಅದೇ ಆಸ್ಪತ್ರೆಯಲ್ಲಿ ಎಂಬಾಮಿಂಗ್‌ ಮಾಡಿ ಮಲಗಿಸಿದ್ದ ಅಪ್ಪನ ದೇಹವೂ ಕಾಣಿಸಿತು, ಆನಂತರ ಏನೇನಾಯಿತು ಎಂಬುದನ್ನು ಜಿ.ಎನ್‌. ಅಶೋಕವರ್ಧನ ವಿವರವಾಗಿ ಹೇಳಿದ್ದಾರೆ…

ಜನವರಿ ಜನನದ ದಿನ, ಹಳೆವರ್ಷದ ವಿದಾಯದ ಗಲಾಟೆಯೋ ಹೊಸ ವರ್ಷದ ಶುಭಾಶಯದ ಕರೆಯೋ ಎಂಬ ಗೊಂದಲದಲ್ಲೇ ಬೆಳಗ್ಗಿನ ನಾಲ್ಕು ಗಂಟೆಯ ಚರವಾಣಿ ಕರೆ ಸ್ವೀಕರಿಸಿದೆ. ಮೈಸೂರಿನ ತಮ್ಮ ಚುಟುಕಿನಲ್ಲಿ ಹೇಳಿದ “ಅಮ್ಮ ಹೋದಳು’!. ಆಕೆ, ಸುಮಾರು ಹತ್ತು ವರ್ಷಗಳ ಹಿಂದೆ ಗತಿಸಿದ ನಮ್ಮ ತಂದೆಯಷ್ಟೇ ನಿಷ್ಠೆಯಿಂದ, ತನ್ನ ದೇಹದಾನವನ್ನು ಬರೆದುಕೊಟ್ಟಿದ್ದಳು, ನಾವು – ಮಕ್ಕಳು, ಅಮ್ಮನ ಇಚ್ಛೆಯನ್ನು ನಡೆಸಿಕೊಟ್ಟೆವು. 

ಸಂಬಂಧಗಳು ಚೇತನ ಇರುವವರೆಗೆ ಮಾತ್ರ, ಎನ್ನುವುದು ವಾಸ್ತವ. ಆದರೆ ಜೊತೆಗೇ ಕಾಡುವ ನೆನಪಿನ ಚಿತ್ರವನ್ನು ಪೂರ್ತಿ ತೆಗೆದು ಹಾಕುವಂತಿಲ್ಲವಲ್ಲ. ತಾಯಿಯನ್ನು ಕಳಿಸಿಕೊಟ್ಟ ಹದಿನಾಲ್ಕನೇ ದಿನಕ್ಕೆ (14-1-2018), ಸುಮಾರು ಹತ್ತು ವರ್ಷಕ್ಕೂ ಮೊದಲೇ ಹೋದ ತಂದೆಯನ್ನು ಯಾಕೆ ನೋಡಿ ಬರಬಾರದು ಅಂತನ್ನಿಸಿತು!  ಹೌದು, ನನ್ನ ತಂದೆಯನ್ನು ಮೂರ್ತರೂಪದಲ್ಲಿ ನೋಡುವ ಅನುಕೂಲವನ್ನು ಮೈಸೂರಿನ ಜೆ.ಎಸ್‌.ಎಸ್‌. ಮೆಡಿಕಲ್‌ ಕಾಲೇಜಿನ ಅನಾಟಮಿ ವಸ್ತು ಸಂಗ್ರಹಾಲಯ, ಅಂದಿನಿಂದ ಇಂದಿನವರೆಗೂ ಮಾಡುತ್ತಲೇ ಇದೆ. ತಂದೆಯೂ ಮೊದಲೇ ಕ್ರಮಕೈಗೊಂಡಂತೆ, ವೈದ್ಯ-ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆಗೊದಗುವಂತೆ, ಅಂದೇ ಅವರ ದೇಹದಾನವನ್ನು ನಾವು ಮಾಡಿದ್ದೆವು.ಆಗ ಅಲ್ಲಿನ ವಿಭಾಗದ ಗಣ್ಯರಾದ ಡಾ| ಶ್ಯಾಮಸುಂದರ್‌ ಈ ದೇಹವನ್ನು ಮಾತ್ರ ನೇರ ಕಲಿಕೆಗೆ ಬಳಸುವುದಿಲ್ಲ. ಎಂಬಾಮಿಂಗ್‌ ಮಾಡಿ (ಮಮ್ಮಿ ಕ್ರಿಯೆಯ ಆಧುನಿಕ ರೂಪ) ಪ್ರದರ್ಶನಕ್ಕಿಡುತ್ತೇವೆ. ಜಿ.ಟಿ. ನಾರಾಯಣ ರಾವ್‌ ದೊಡ್ಡ ಹೆಸರು. ಇವರ ಆದರ್ಶ ಇನ್ನಷ್ಟು ಮಂದಿಗೆ ದೇಹದಾನ ಕ್ರಿಯೆಗೆ ಪ್ರೇರಕವಾಗುತ್ತದೆ…. ಎಂದಿದ್ದರು. 

ಮೆಡಿಕಲ್‌ ಕಾಲೇಜಿಗೆ ಸಂಜೆ ಹೋಗಿದ್ದೆವು . ಪ್ರದರ್ಶನಾಲಯದೊಳಗೆ ಮೂರ್ನಾಲ್ಕು ಒಣ ಪಾರದರ್ಶಕ ಕನ್ನಡಿ ಗೂಡುಗಳಲ್ಲಿ ಕೆಲವು ಇಡಿಯ ಮಾನವ ದೇಹಗಳನ್ನು ಇಟ್ಟಿದ್ದರು. ಅವುಗಳಲ್ಲಿ ನಡುವೆ ಮುಖ ಮತ್ತು ಪಾದವನ್ನಷ್ಟು ಮುಕ್ತವಾಗಿಟ್ಟು, ಬಿಳಿಯ ಬಟ್ಟೆ ಹೊದೆದು, ಇದೇ ಈಗ ಬಂದು ಮಲಗಿ¨ªಾರೋ ಎಂಬ ಕಳೆಯಲ್ಲಿ ಒರಗಿತ್ತು ತಂದೆಯ ಶವ!  ಹಿಂದಿನ ಗೋಡೆಯಲ್ಲಿ ದೇಹದಾನದ ಮಹತ್ವವನ್ನು ಹೇಳುವ ಬರಹ, ಮೇಲೆ ಹಾರಹಾಕಿ ಅಲಂಕರಿಸಿದ ತಂದೆಯ ಒಂದು ಜೀವನ ಕಾಲದ ಫೋಟೋ ಮತ್ತು ಹತ್ತು ವರ್ಷಗಳ ಹಿಂದಿನ ಮರಣವಾರ್ತೆ ಘೋಷಿಸಿದ ಒಂದು ಪತ್ರಿಕಾ ಕತ್ತರಿಕೆಯಷ್ಟೇ ನಿಜ ಸಾರುತ್ತಿತ್ತು. ಇತರ ಶವಗಳು ಸಿಕ್ಕ ಸಂಸ್ಕಾರದ ಮಿತಿಯÇÉೋ ಕಾಲದ ಮಹಿಮೆಯÇÉೋ ತುಸು ಮುಕ್ಕಾಗಿದ್ದುವು, ಬಣ್ಣ ಮಾಸಿತ್ತು.

ವಾಸ್ತವದಲ್ಲಿ ನನ್ನ ತಂದೆ-ತಾಯಿಯರು ವೈದಿಕ ಸಂಸ್ಕಾರಗಳು ಮತ್ತು ಸಾಂಪ್ರದಾಯಿಕ ಆಚರಣೆಗಳು ಇರುವ ಕುಟುಂಬಗಳಿಂದಲೇ ಬಂದವರು. ಆದರೆ ತಂದೆ ಆಧುನಿಕ ಕಲಿಕೆ (ಎಂ.ಎ ಗಣಿತ) ಮತ್ತು ವೃತ್ತಿ ಜೀವನದಲ್ಲಿ (ಅಧ್ಯಾಪಕ) ತನ್ನ ವೈಚಾರಿಕ ನೆಲೆಯನ್ನು ಸ್ಫ‌ುಟಗೊಳಿಸಿಕೊಂಡರು. ಹಾಗೆ ಕೇಳಿ ಬಂದವರಿಗೆ ಅವರು ಬೋಧಿಸಿದ್ದು, ಬರೆದದ್ದು ಮತ್ತು ಎಲ್ಲಕ್ಕೂ ಮುಖ್ಯವಾಗಿ ಅಂತರಂಗ ಬಹಿರಂಗಗಳಲ್ಲಿ ಎರಡಿಲ್ಲದಂತೆ ಬಾಳಿದ್ದು ವೈಜ್ಞಾನಿಕ ಮನೋಧರ್ಮದಲ್ಲೇ .

ತಾಯಿ ಕೇವಲ ಆತ್ಮ ಸಂತೋಷಕ್ಕಾಗಿ ತಮ್ಮದೇ ಪೂಜೆ, ಪಾರಾಯಣಗಳನ್ನು ಉಳಿಸಿಕೊಂಡಿದ್ದರು. ಅವಕ್ಕೆ ಶುಭಾಶುಭಗಳ, ಶಾಸ್ತ್ರಾಶಾಸ್ತ್ರಗಳ ಬಾಧೆಯಾಗಲೀ ಮಧ್ಯವರ್ತಿಯನ್ನು (ಪುರೋಹಿತರು) ಬಯಸುವ ಔಪಚಾರಿಕತೆಗಳಾಗಲೀ ಇರಲಿಲ್ಲ. ತಂದೆ ಈಕೆಯ ಭಾವನೆಯನ್ನು ಗೌರವಿಸಿದಷ್ಟೇ ಆಕೆ ತಂದೆಗೆ ಅನುಕೂಲೆಯೂ ಆಗಿದ್ದರು. ಸಹಜವಾಗಿ ಇಬ್ಬರೂ ದೇಹದಾನದ ನಿರ್ಧಾರ ಮಾಡಿದ್ದರು, ಜಗದ್ಗುರು ಶ್ರೀಶಿವರಾತ್ರೀಶ್ವರ (ಜೆ.ಎಸ್‌.ಎಸ್‌) ವೈದ್ಯಕೀಯ ಕಾಲೇಜಿನವರ ವ್ಯವಸ್ಥೆಗೆ (ನಿಶುÏಲ್ಕ) ಒಪ್ಪಿಸಿಕೊಂಡರು. 

ಹಿರಿಯರ ವಿಯೋಗದೊಡನೆ ಇತರರು ಯಾವುದೇ ನಿತ್ಯ ಚಹರೆಗಳನ್ನು ಬದಲಿಸುವುದಾಗಲೀ (ಮುಂಡನ, ಕರಿಮಣಿ, ಕುಂಕುಮಾದಿ ವರ್ಜನ) ಮತೀಯ ನಂಬಿಕೆಗಳ ಉತ್ತರಕ್ರಿಯಾದಿಗಳನ್ನು ನಡೆಸುವುದನ್ನಾಗಲೀ ತಂದೆ ಸ್ಪಷ್ಟವಾಗಿ ನಿರಾಕರಿಸಿದ್ದರು. ಇದನ್ನು ತಂದೆ ಹೋದ ಕಾಲಕ್ಕೂ (ತಾಯಿಯೂ ಸೇರಿದಂತೆ) ಈಚೆಗೂ ಮಕ್ಕಳು ಮೂವರೂ ಒಪ್ಪಿ ನಡೆಸಿದೆವು. ನಿಜದಲ್ಲಿ ಉತ್ತರಕ್ರಿಯಾದಿಗಳ ಮೂಲ ಆಶಯವಾದರೂ ಪಂಚಭೂತಾತ್ಮಕವಾದ ಶರೀರವನ್ನು ಮತ್ತೆ ಅವುಗಳÇÉೇ ಲೀನಗೊಳಿಸುವ ಕ್ರಿಯೆ. ಆಕಸ್ಮಿಕಗಳಲ್ಲಿ (ಪ್ರವಾಹ, ಅಗ್ನಿಕಾಂಡ ಇತ್ಯಾದಿ) ಪೂರ್ಣ ಮರೆಯಾದ ದೇಹಗಳಿಗೆ ಈ “ಮರಳಿ ಸೇರಿಸುವಿಕೆಯ ಕ್ರಿಯೆಗಳು ಅಪ್ರಸ್ತುತವೇ ಆಗುತ್ತವೆ. ದಾನಗಳಲ್ಲಿ ಶ್ರೇಷ್ಟವಾದ ದೇಹ-ದಾನವನ್ನೇ ಮಾಡಿದ ಮೇಲೆ ಇನ್ನೇನು ಮಾಡಿದರೂ ಅಪರಿಪೂರ್ಣವೇ ಆಗುತ್ತದೆ ಎನ್ನುವುದು ನಮ್ಮ ಮನಸ್ಸಮಾಧಾನಕ್ಕೆ ಆಧಾರ. 

ಜೆ.ಎಸ್‌.ಎಸ್‌. ಕಾಲೇಜಿನ ವಿಸ್ತಾರ ಪ್ರದರ್ಶನಾಲಯದೊಳಗೆ, ಉಳಿದಂತೆ ಚಿತ್ರ, ಅನ್ಯ ಮಾಧ್ಯಮಗಳ ಮಾದರಿಗಳು, ಗಾಜಿನ ಭರಣಿಗಳೊಳಗೆ ರಾಸಾಯನಿಕ ದ್ರಾವಣಗಳಲ್ಲಿ ಮುಳುಗಿಸಿಟ್ಟ ಮನುಷ್ಯ ದೇಹದ ಹಲವು ಬಿಡಿಭಾಗಗಳನ್ನೂ ಕಾಣಬಹುದು. ಅÇÉೆಲ್ಲ ಜತೆಗೇ ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಪ್ರಕರಣಗಳ ವಿವರಗಳನ್ನೂ ಕಾಣಿಸಿ¨ªಾರೆ. 

ಸೀತೆ – ನನ್ನ ಓರ್ವ ಚಿಕ್ಕಮ್ಮ, ಮೊದಲು ಸ್ವಲ್ಪ ಮಾನಸಿಕ ತಡೆಯಲ್ಲಿ ಬರಲೊಪ್ಪದಿದ್ದರೂ ಮತ್ತೆ ನಮ್ಮ ಒತ್ತಾಯಕ್ಕೇ ಈ ಪ್ರದರ್ಶನ ನೋಡಲು ಬಂದಿದ್ದಳು. ಆಕೆ ಕೊನೆಯಲ್ಲಿ ಧನ್ಯತೆಯ ಉದ್ಗಾರ ತೆಗೆದಾಗ ನಮ್ಮೆಲ್ಲರ ಸಮಾಧಾನಕ್ಕೆ ಬಲ ಬಂತು. ಥಳುಕಿನ ಮಾಲ…, ಜಾತ್ರೆ, ಮೇಳಗಳ ಪ್ರಪಂಚದÇÉೇ ಕಳೆದು ಹೋಗುವ ಮಂದಿ ಈ ಪ್ರದರ್ಶನಗಳನ್ನು ನೋಡಬೇಕು ಎನ್ನುವುದು ಅವರ ಭಾವವಾಗಿತ್ತು!

– ಜಿ.ಎನ್‌.ಅಶೋಕವರ್ಧನ, ಮಂಗಳೂರು

ಟಾಪ್ ನ್ಯೂಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

15

UV Fusion: ಜೀವನವನ್ನು ಪ್ರೀತಿಸೋಣ

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.