ಆರಕ್ಷಕ ಆಗಬೇಕಾ? ಅಲರ್ಟ್‌ ಪ್ಲೀಸ್‌…


Team Udayavani, Jul 31, 2018, 6:00 AM IST

6.jpg

ಗಡಿ ಭದ್ರತಾ ಪಡೆ, ಕೇಂದ್ರೀಯ ರಿಸರ್ವ್‌ ಪೊಲೀಸ್‌, ಇಂಡೋ-ಟಿಬೆಟ್‌ ಬಾರ್ಡರ್‌ ಪೊಲೀಸ್‌, ಅಸ್ಸಾಂ ರೈಫ‌ಲ್ಸ್‌, ಕೇಂದ್ರ ಕೈಗಾರಿಕಾ ಭದ್ರತಾ ಪಡೆ…ಈ ಹೆಸರುಗಳನ್ನೆಲ್ಲ ಆಗಾಗ್ಗೆ ಪತ್ರಿಕೆಗಳಲ್ಲಿ ಓದಿರುತ್ತೀರಿ ತಾನೇ? ದೇಶದ ಗಡಿ ರಕ್ಷಣೆಯಲ್ಲಿ ಮಿಲಿಟರಿ ಪಡೆಯಂತೆಯೇ ಶ್ರಮಿಸುವ ಪೊಲೀಸರು ಈ ಮೇಲೆ ಹೆಸರಿಸಿದ ಇಲಾಖೆಗಳಲ್ಲಿ ಇರುತ್ತಾರೆ. ಗಡಿ ಭಾಗದ ಸಂರಕ್ಷಣೆ, ಶತ್ರುಗಳು ಉಗ್ರರ ಕುರಿತು ಮಾಹಿತಿ ಸಂಗ್ರಹಣೆಯಂಥ ಮಹತ್ವದ ಜವಾಬ್ದಾರಿ ಇವರಿಗಿರುತ್ತದೆ. ಎಸ್‌ಎಸ್‌ಎಫ್, ಎನ್‌ಐಎ, ಎಆರ್‌, ಬಿಎಸ್‌ಎಫ್, ಸಿಪಿಎಸ್‌ಎಫ್, ಸಿಆರ್‌ಪಿಎಫ್ ಎಂದೆಲ್ಲಾ ಶಾರ್ಟ್‌ ನೇಮ್‌ಗಳಿಂದ ಗುರುತಿಸಲ್ಪಡುವ ಈ ಭದ್ರತಾ ಪಡೆಗಳು, ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆಯ ವಿವಿಧ ಇಲಾಖೆಯಲ್ಲಿ 54,953 ಕಾನ್‌ಸ್ಟೆಬಲ್‌ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 

1965ರ ಭಾರತ- ಪಾಕಿಸ್ತಾನ ಯುದ್ಧದ ನಂತರ, ಗಡಿಭಾಗದ ರಕ್ಷಣೆಗೆ ಮುಂದಾದ ಭಾರತ ಸರ್ಕಾರ, ಗಡಿಭಾಗದಲ್ಲಿ ಉಂಟಾಗುವ ಸಮಸ್ಯೆಗಳ ನಿರ್ವಹಣೆಗೆ ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆಯನ್ನು ರಚಿಸಿತು. ಇದರ ಜವಾಬ್ದಾರಿಯನ್ನು, ಗೃಹ ವ್ಯವಹಾರಗಳ ಸಚಿವಾಲಯಕ್ಕೆ ನೀಡಲಾಯಿತು. ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆಯಲ್ಲಿ ಏಳು ರೀತಿಯ ರಕ್ಷಣಾ ಪಡೆಗಳನ್ನು ಇದರ ವ್ಯಾಪ್ತಿಗೆ ತರಲಾಯಿತು. ಜತೆಗೆ ಇದಕ್ಕೆ ಪ್ರತ್ಯೇಕ ಕೇಡರ್‌ನ ಅಧಿಕಾರಿಗಳಿದ್ದು, ಭಾರತೀಯ ಪೊಲೀಸ್‌ ಸೇವೆಯು ಇವರನ್ನು ನಿಯಂತ್ರಿಸುವ ಜವಾಬ್ದಾರಿ ಹೊಂದಿದೆ.
ಪ್ರಸ್ತುತ ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆಯ ಏಳು ರಕ್ಷಣಾ ಪಡೆಗಳಿಗೂ ಸಿಬ್ಬಂದಿ ಆಯ್ಕೆ ಆಯೋಗ(ಎಸ್‌ಎಸ್‌ಸಿ)ವು ರಾಷ್ಟ್ರಾದ್ಯಂತ 54,953 ಪೊಲೀಸ್‌ ಕಾನ್ಸ್‌ಸ್ಟೇಬಲ್‌ ಹುದ್ದೆಗೆ ಆವಕಾಶಕಲ್ಪಿಸಿದೆ.


ಈ ಹುದ್ದೆಗಳನ್ನು ಎಸ್ಸಿ ಎಸ್ಟಿ ಮೀಸಲಾತಿಗೆ ಅನುಗುಣವಾಗಿ ವಿಭಾಗ ಮಾಡಲಾಗಿದೆ.

ವಯೋಮಿತಿ, ವಿದ್ಯಾರ್ಹತೆ
ಪೊಲೀಸ್‌ ಕಾನ್‌ಸ್ಟೆಬಲ್‌ ಹುದ್ದೆ ಹೊಂದಲು ಆ.1ಕ್ಕೆ ಅನುಗುಣವಾಗಿ ಸಾಮಾನ್ಯ ಅಭ್ಯರ್ಥಿಯು ಕನಿಷ್ಠ 18- 23 ವರ್ಷ ವಯೋಮಿತಿ ಹೊಂದಿರಬೇಕು. ಪರಿಶಿಷ್ಟರಿಗೆ 5 ವರ್ಷ, ಬುಡಕಟ್ಟು, ನಿವೃತ್ತ ಯೋಧರಿಗೆ 3 ವರ್ಷ ವಯೋಮಿತಿಯಲ್ಲಿ ಸಡಿಲಿಕೆಯಿದೆ. ಪ್ರಸ್ತುತ, ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆ ಕಾನ್‌ಸ್ಟೆಬಲ್‌ ಹುದ್ದೆಗೆ ಎಸ್ಸೆಸ್ಸೆಲ್ಸಿ, ತತ್ಸಮಾನ ಓದು ಸಾಕು. ಜೊತೆಗೆ ಸಹಿಷ್ಣುತೆ ಪರೀಕ್ಷೆ ನಡೆಸಲಾಗುತ್ತದೆ.  ಕಾನ್‌ಸ್ಟೆಬಲ್‌ ಹುದ್ದೆಗೆ ಆಯ್ಕೆಯಾಗುವ ಸಿಬ್ಬಂದಿಗೆ  21,700- 69,000 ರೂ.ವರೆಗೆ ವೇತನ ಮತ್ತು ಎಫ್.ಡಿ ವ್ಯವಸ್ಥೆಯನ್ನು ಕಲ್ಪಿಸಲಾಗುವುದು.

ಅಭ್ಯರ್ಥಿಗಳ ಆಯ್ಕೆ ಹೇಗೆ?
ಅಭ್ಯರ್ಥಿಗಳನ್ನು ಕಂಪ್ಯೂಟರ್‌ ಸಂಬಂಧಿತ ಪರೀಕ್ಷೆ, ದೈಹಿಕ ಸಹಿಷ್ಣುತೆ ಪರೀಕ್ಷೆ, ವೈದ್ಯಕೀಯ ಪರೀಕ್ಷೆಗಳ ಮೂಲಕ ನಡೆಸಲಾಗುತ್ತದೆ.
ಗಣಕ ಸಂಬಂಧಿತ ಪರೀಕ್ಷೆಯಲ್ಲಿ ಒಂದೊಂದು ವಿಭಾಗಕ್ಕೂ 25 ಅಂಕಗಳು ಇರುತ್ತವೆ. ಪರೀಕ್ಷೆಯ ಕಾಲಾವಧಿ ಒಂದು ಗಂಟೆ. ಒಟ್ಟು ನೂರು ಅಂಕಕ್ಕೆ ಪರೀಕ್ಷೆ ನಡೆಯುತ್ತದೆ. ಇದರಲ್ಲಿ ಸಾಮಾನ್ಯ ಜ್ಞಾನ ಮತ್ತು ಮಾನಸಿಕ ಸಾಮರ್ಥ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿರುತ್ತವೆ. ದೈಹಿಕ ಸಹಿಷ್ಣುತೆ ಪರೀಕ್ಷೆಯಲ್ಲಿ 20 ನಿಮಿಷಕ್ಕೆ 5 ಕಿ.ಮೀ. ಓಟ, ಮಹಿಳಾ ಅಭ್ಯರ್ಥಿಗೆ ಎಂಟೂವರೆ ನಿಮಿಷಕ್ಕೆ 1.6 ಕಿ.ಮೀ. ಓಟ, ಇದರಲ್ಲಿ ಅರ್ಹರಾದವರಿಗೆ ದೇಹದಾಡ್ಯì ಪರೀಕ್ಷೆ (ಪುರುಷರಿಗೆ ಎತ್ತರ-170 ಸೆಂ.ಮೀ., ಮಹಿಳೆಯರಿಗೆ ಎತ್ತರ 157 ಸೆಂ.ಮೀ. ಪುರುಷರಿಗೆ ಮಾತ್ರ 80/5 ಸೆಂ.ಮೀ. ದೇಹದ ಸುತ್ತಳತೆ)
ಸಹಿಷ್ಣುತೆ, ದೇಹದಾಡ್ಯì ಪರೀಕ್ಷೆ ಜತೆಗೆ ಶ್ರವಣಶಕ್ತಿ ಮತ್ತು ದೃಷ್ಟಿದೋಷಕ್ಕೆ ಸಂಬಂಧಿಸಿದ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಪರೀಕ್ಷೆಗಳಿಗೆ ಮುಂಚಿತವಾಗಿ ಅಗತ್ಯ ದಾಖಲೆ ಪರಿಶೀಲನೆ ನಡೆಯುತ್ತದೆ.

ಅರ್ಜಿ ಸಲ್ಲಿಕೆ ಹೇಗೆ?
ಕಾನ್ಸ್‌ಟೇಬಲ್‌ ಹುದ್ದೆಗೆ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಮೊದಲು ತಮ್ಮ ಸಹಿ, ಭಾವಚಿತ್ರ, ಎಸ್ಸೆಸ್ಸೆಲ್ಸಿ ಅಂಕಪಟ್ಟಿ ಸೇರಿದಂತೆ ಅಗತ್ಯ ದಾಖಲೆಗಳ ಛಾಯಾಪ್ರತಿಯನ್ನು ಒಂದು ಫೋಲ್ಡರ್‌ನಲ್ಲಿ ಸಂಗ್ರಹಿಸಿಟ್ಟುಕೊಳ್ಳುವುದು ಒಳಿತು. ಅಧಿಕೃತ https://ssc.nic.in/ಜಾಲತಾಣದ ಮೂಲಕ ಅರ್ಜಿ ಪಡೆಯಬೇಕು. ಈಗಾಗಲೇ ರಿಜಿಸ್ಟರ್‌ ನಂಬರ್‌ ಪಡೆದಿದ್ದರೆ, ಅದನ್ನು ಬಳಸಿ ಮತ್ತೆ ಜಾಲತಾಣ ಪ್ರವೇಶಿಸಿ ತಾವು ಬಯಸುವ ಹುದ್ದೆ, ಮತ್ತು ಅದಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಂಗ್ರಸಿರುವ ದಾಖಲೆಗಳನ್ನು ಲಗತ್ತಿಸಬೇಕು. ಬಳಿಕ ಚಲನ್‌ ಪಡೆದು, ಎಸ್‌ಬಿಐ ಅಥವಾ ಸ್ಥಳೀಯ ಅಂಚೆ ಕಚೇರಿಯಲ್ಲಿ ಶುಲ್ಕ ಪಾವತಿಸಬೇಕು. 2 ದಿನಗಳ ಬಳಿಕ ಮತ್ತೆ ಜಾಲತಾಣ ಪ್ರವೇಶಿಸಿ ಅರ್ಜಿಯನ್ನು ಡೌನ್‌ಲೌಡ್‌ ಮಾಡಿಕೊಳ್ಳುವುದು. ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆ ಕಾನ್‌ಸ್ಟೆಬಲ್‌ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಆ.20 ಕೊನೆದಿನವಾಗಿದೆ. ಅರ್ಜಿ ಶುಲ್ಕವೆಂದು 100 ರೂ.ಗಳನ್ನು ನಿಗದಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಗೆ goo.gl/1tDgXa  ಸಂಪರ್ಕಿಸಿ

ಟಾಪ್ ನ್ಯೂಸ್

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.