ಮನಸಿದು ನೆನಪಿನ ಸಂಚಿಕೆ 


Team Udayavani, Aug 21, 2018, 6:00 AM IST

9.jpg

ಕಳೆದು ಹೋದ ನಿನ್ನನ್ನು ಮತ್ತೆ ಪಡೆಯುವಷ್ಟು ಪರಿಶುದ್ಧಳಾಗಿದ್ದೇನೆ. ಒಮ್ಮೆ ನಿನ್ನ ಹೃದಯದ ಮಾತು ಕೇಳು; ಅದು ನನ್ನ ವಿಳಾಸ ಹೇಳುತ್ತದೆ. ಅಲ್ಲೇ ಇದ್ದೇನೆ, ಅಲ್ಲೇ, ನೀ ಬಿಟ್ಟು ಹೋದಲ್ಲೇ!

ಹುಡುಗ,
ಹಗಲಿರುಳುಗಳ ನಡುವಿನಲ್ಲಿ ಯಂತ್ರದಂತೆ ಸಾಗುತ್ತಿದೆ ಬದುಕು, ಯಾವುದರಲ್ಲಿಯೂ ತಲ್ಲೀನಗೊಳ್ಳದೆ ಛಿಧ್ರಗೊಳ್ಳುತ್ತಿರುವ ಹೃದಯದ ಒಡಕು, ಏನೋ ಕಳೆದುಕೊಳ್ಳುತ್ತಿದ್ದೇನೆಂಬ ಅವ್ಯಕ್ತ ಭಯ, ಯಾವ ದಾರಿಯೆಡೆಗೂ ಹೆಜ್ಜೆಯಿಡಲು ಮುಗಿಯದ ಗೊಂದಲದ ಸಮಯ, ನಿರೀಕ್ಷೆ ಎಂಬುದು ಮುಳುಗತೊಡಗಿರುವ ತಳ ಒಡೆದ ದೋಣಿ. ಆದರೂ ಒಂದೇ ಒಂದು ಬಾರಿ ನಿನ್ನ ನೋಡಬೇಕೆಂಬ ಅಪೇಕ್ಷೆಗೆ ಮನಸು ಹಿಡಿಯುತ್ತಿದೆ ಸಾಣಿ. ಅದೆಷ್ಟು ಸಾವಿರ ಸಲ ನಿನ್ನ ಮೊಬೈಲ್‌ಗೆ ಕಾಲ್‌ ಮಾಡಿದ್ದೇನೋ? ಅದೇ ಸಾವಿನಂಥ ಸ್ವರದಲ್ಲಿ, ನನ್ನೆಡೆಗಿನ ನಿನ್ನ ಕೊನೆಯ ಮಾತೇನೋ ಅನ್ನುವ ಹಾಗಿನ ದನಿ.. ಸ್ವಿಚ್‌ಆಫ್.

ಒಂದೇ ಒಂದು ಕಾಲ್‌ ಮಾಡಿ ಮಾತಾಡೋ ಮಾರಾಯ. ಏನಾಯಿತೋ ನಿಂಗೆ. ಇಳಿಸಂಜೆ ಹೊತ್ತಲ್ಲಿ ಹೂ ಮುತ್ತನಿತ್ತು, ನನ್ನ ಮುಂಗುರುಳ ಸರಿಸಿ, “ಎಷ್ಟು ಚಂದವಿದ್ದೀಯೆ? ನಿನ್ನ ಗುಳಿಕೆನ್ನೆಯಲ್ಲಿ ಬಿದ್ದು ಸತ್ತೋಗ್ತಿನಿ ಕಣೆ’ ಎಂದು ಸಿಹಿಯಾಗಿ ನಕ್ಕವನೆ.. ಎಲ್ಲಿ ಹೋದೆಯೋ? ಅಲ್ಲೇಲ್ಲೋ ಮರೆಯಾಗಿ ಕೂತವನೆ, ನಿನ್ನ ಮೌನ ನನ್ನನ್ನು ಕೊಲ್ಲುವ ವಿಷ ಕಣೋ.

ಅನುಕ್ಷಣವೂ ಜೀವ ಹಿಂಡುವ ಒಂಟಿತನದ ಕ್ರೂರತೆ ನಿನಗೆ ಗೊತ್ತಿಲ್ಲ. ಲೋ ಹುಡುಗ, ನೀ ಇಲ್ಲವೆಂಬ ಈ ದುಗುಡದ ಕಡಲ ನಾ ಹೇಗೆ ದಾಟಲೋ? ಒಳಗಿನ ದುಃಖದ ಕುದಿಗೆ ನನ್ನ ಕಣ್ಣ ಹನಿಗಳೇ ಆವಿಯಾಗಿ ಹೋಗಿವೆ. ನೀ ಇಲ್ಲದ ಬದುಕನ್ನು ಅರೆಕ್ಷಣವೂ ಕಲ್ಪಿಸಿಕೊಳ್ಳದ ನಾನು, ನಿನ್ನ ಸುಳಿವೇ ಇಲ್ಲದ ಈ ವಾಸ್ತವವನ್ನು ಹೇಗೆ ಎದುರುಗೊಳ್ಳಲಿ ಹೇಳು? ಹಗಲಿರುಳುಗಳ ಪರಿವೇ ಇಲ್ಲದೇ ನಿನ್ನೊಂದಿಗೆ ಬದುಕನ್ನು ಕಳೆಯುತ್ತೇನೆಂಬ ಸುಂದರ, ಸಾವಿರ ಸ್ವಪ್ನಗಳ ಕಂಡವಳು ನಾನು. ಈಗ ರಂಗು ಕಳೆದುಕೊಂಡ ಬದುಕಿನ ಬಣ್ಣಗಳು ಸುಟ್ಟುಹೋಗಿ, ಬರೀ ಹೊಗೆಯಷ್ಟೇ ಉಳಿದಿದೆ. ಉಸಿರುಗಟ್ಟಿಸುವ ಈ ಅಂತರಾಳದ ತಳಮಳವನ್ನು ಹೇಗೆ ಭರಿಸಲಿ ಹೇಳ್ಳೋ ಹುಡುಗ?

ಇನ್ನೆಲ್ಲು ಕಾಣದ ತಲ್ಲೀನತೆ
ನಿನ್ನಲ್ಲಿ ಕಾಣುತಾ ಹೀಗಾಯಿತೆ
ಕೈಯಿಂದ ಜಾರಿತೇನೋ ನನ್ನಯ ಕತೆ

ನೀನು ನನ್ನ ಬದುಕಿನ ಕತೆಗಾರ. ಬರೆಯ ಬಾರೋ ಒಂದು ಸಾಲನ್ನಾದರೂ, ನಿನಗಾಗೇ ಸದಾ ಕಾಯುತ್ತಲೇ ಉಳಿಯುವ ಹೊರತು, ಮತ್ತೂಂದು ಆಸೆಯಿಲ್ಲ ಮನಸಿಗೆ. ಜಗತ್ತು ನನ್ನನ್ನು ಹುಚ್ಚಿ ಅನ್ನುತ್ತದೆ. ಅದು ಮನಸು ಮಾರಿಕೊಂಡ ಜಗತ್ತಿನ ಲೆಕ್ಕಾಚಾರ. ಅದು ಹೃದಯಹೀನರ ಮುಖವಾಡ ಧರಿಸಿದ ಬದುಕಿನ ವ್ಯಾಪಾರ. ಅದೆಲ್ಲಾ ಯಾವತ್ತೂ ನನ್ನನ್ನು ಸೋಕಲಾರದು ಗೆಳೆಯ.

ಕಳೆದುಹೋದ ನಿನ್ನನ್ನು ಮತ್ತೆ ಪಡೆಯುವಷ್ಟು ಪರಿಶುದ್ಧಳಾಗಿದ್ದೇನೆ. ಒಮ್ಮೆ ನಿನ್ನ ಹೃದಯದ ಮಾತು ಕೇಳು; ಅದು ನನ್ನ ವಿಳಾಸ ಹೇಳುತ್ತದೆ. ಅಲ್ಲೇ ಇದ್ದೇನೆ, ಅಲ್ಲೇ, ನೀ ಬಿಟ್ಟು ಹೋದಲ್ಲೇ!

ನಿನ್ನವಳು
ಅಮ್ಮು ಮಲ್ಲಿಗೆಹಳ್ಳಿ 

ಜೀವ ಮುಳ್ಳೂರು

ಟಾಪ್ ನ್ಯೂಸ್

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.