ಟೂರ್‌ ಒಂದು ದಾರಿ; ಟ್ರಾವೆಲ್‌ ಏಜೆಂಟ್‌ ಆದ್ರೆ ಲೈಫ‌ು ಕ್ಲಿಕ್‌

Team Udayavani, Sep 4, 2018, 6:00 AM IST

6.jpg

ವರ್ಷವಿಡೀ ಆಫೀಸು, ಕೆಲಸ ಅಂತ ದುಡಿದು ಹೈರಾಣಾಗಿದೀನಿ. ಈಗ ದೇಹಕ್ಕೆ, ಮನಸ್ಸಿಗೆ ಸ್ವಲ್ಪ ರೆಸ್ಟ್‌ ಬೇಕು. ಒಂದು ಚಿಕ್ಕ ಮೊತ್ತವಿದೆ. ಅದರಲ್ಲೇ ನಾಲ್ಕೈದು ದಿನ ಟ್ರಿಪ್‌ ಹೋಗಿ ಬರಬೇಕು. ಆದರೆ, ಎಲ್ಲಿಗೆ ಹೋಗಬಹುದು? ಹೇಗೆ ಹೋಗಬಹುದು ಗೊತ್ತಾಗ್ತಾ ಇಲ್ಲ. ಕಡಿಮೆ ದುಡ್ಡು ಇದ್ರೂ ಪ್ಯಾಕೇಜ್‌ ಥರದ ಅನುಕೂಲ ಬಳಸಿಕೊಂಡು ಟೂರ್‌ ಹೋಗಲು ಆಸೆಯಿದೆ. ಆದರೆ, ಮಾರ್ಗದರ್ಶನ ಮಾಡುವವರಿಲ್ಲ..ಹೀಗೆಲ್ಲ ಅನ್ನಿಸಿದರೆ- ಸಂಕೋಚವಿಲ್ಲದೆ ಟ್ರಾವೆಲ್‌ ಏಜೆಂಟರನ್ನು ಭೇಟಿಯಾಗಿ! ಅವರು, ತಮ್ಮ ಏಜೆನ್ಸಿಯ ಮೂಲಕ ಎಲ್ಲ ಬಗೆಯ ವ್ಯವಸ್ಥೆಯನ್ನೂ ಮಾಡಿಕೊಡ್ತಾರೆ. ಇತಿಹಾಸದ ಕುರಿತು ಆಸಕ್ತಿ ಹಾಗೂ ಭಾಷೆ ಕಲಿಯುವ ಹುಮ್ಮಸ್ಸು ಇರುವವರೆಲ್ಲಾ ಟ್ರಾವೆಲ್‌ ಏಜೆಂಟ್‌ ಆಗಬಹುದು…

“ದೇಶ ಸುತ್ತು, ಕೋಶ ಓದು’ ಎಂಬ ಮಾತಿದೆ. ದೇಶ ಸುತ್ತುವುದರಿಂದ ಕೋಶದಲ್ಲಿರುವ ಜೀವನಾನುಭವ ದೊರೆಯುತ್ತದೆ ಎಂಬ ಮಾತು ಸತ್ಯ. ಆದರೆ ದೇಶ ಸುತ್ತುವ ಮೊದಲು ನಾವು ಓಡಾಡಬೇಕಾದ ಸ್ಥಳಗಳ ಕುರಿತು ಚಿಂತಿಸಬೇಕಲ್ಲವೆ? ಜೊತೆಗೆ, ಎಲ್ಲೆಲ್ಲಿಗೆ ಪ್ರವಾಸ ಹೋಗಬಹುದು? ಅಲ್ಲಿ ಎಲ್ಲಿ ಉಳಿದುಕೊಳ್ಳಬಹುದು ಎಂಬ ವಿಷಯವಾಗಿ ಸರಿಯಾದ ಯೋಜನೆಯೂ ಬೇಕು. ಅದನ್ನು ವ್ಯವಸ್ಥೆ ಮಾಡಿಕೊಡಲು ಟೂರ್‌ ಏಜೆನ್ಸಿಗಳಿವೆ.

ಫ್ಯಾಮಿಲಿ ಟೂರ್‌, ಫ್ರೆಂಡ್ಸ್‌ ಟೂರ್‌, ಕಪಲ್‌ ಟೂರ್‌ ಹೀಗೆ ಅನೇಕ ಬಗೆಯ ಟೂರ್‌ ಪ್ಯಾಕೇಜ್‌ಗಳು ಮತ್ತು ಉತ್ತರಭಾರತ, ದಕ್ಷಿಣಭಾರತ, ಮಲೇಷಿಯಾ, ಆಸ್ಟ್ರೇಲಿಯಾ… ಹೀಗೆ ಸ್ಥಳಾಧಾರಿತ ಟೂರ್‌ ಪ್ಯಾಕೇಜ್‌ಗಳೂ ಸಿಗುತ್ತವೆ. 

ಈ ರೀತಿಯ ಹೊಸ ಹೊಸ ಪ್ಯಾಕೇಜ್‌ಗಳನ್ನು ರೂಪಿಸುತ್ತಾ, ಆಯಾ ಪ್ರದೇಶದ ಹೋಟೆಲ್‌, ಲಾಡ್ಜ್ಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಪ್ರವಾಸಿಗರು ಎಲ್ಲೆಲ್ಲಿಗೆ ಹೋಗಬಹುದು. ಸುತ್ತಮುತ್ತಲಿನ ಪ್ರವಾಸಿತಾಣಗಳು ಏನಿವೆ? ಕಡಿಮೆ ಬಜೆಟ್‌ನಲ್ಲಿ ಸುತ್ತುವುದು ಹೇಗೆ? ಮುಂತಾದ ಮಾಹಿತಿಯನ್ನು ಒದಗಿಸುವವರು ಟ್ರಾವೆಲ್‌ ಪ್ಲಾನರ್‌ ಅಥವಾ ಟ್ರಾವೆಲ್‌ ಎಜೆಂಟ್‌ಗಳು ಇವರು ಪ್ರವಾಸಿ ತಾಣಗಳಿಗೆ ತೆರಳಿ, ಅಲ್ಲಿನ ವಾತಾವರಣ, ವಸತಿ ಸೌಲಭ್ಯ, ವಾಹನ ಲಭ್ಯತೆ, ಆಹಾರ ಮುಂತಾದ ಅಗತ್ಯಗಳು ಸರಿ ಇದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸುತ್ತಾರೆ. ಪ್ರಯಾಣಿಸುವವರ ಅಗತ್ಯಕ್ಕನುಗುಣವಾಗಿ ಅನುಕೂಲಗಳನ್ನು ಕಲ್ಪಿಸಿಕೊಡುತ್ತಾರೆ. ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರವಾಸಗಳನ್ನೂ ಇವರು ಆಯೋಜಿಸುತ್ತಾರೆ. ಅಲ್ಲದೆ, ಇವರು ಬಸ್‌, ಟ್ರೆçನ್‌, ವಿಮಾನ ಸಂಸ್ಥೆಗಳ ಮಧ್ಯವರ್ತಿಯಾಗಿಯೂ ಕಾರ್ಯನಿರ್ವಹಿಸುತ್ತಾರೆ.

ವಿದ್ಯಾಭ್ಯಾಸ ಹೇಗೆ?
ಯಾವುದೇ ವಿಷಯದಲ್ಲಿ ಪಿಯುಸಿ ಪೂರೈಸಿದ ಬಳಿಕ ಟ್ರಾವೆಲ್‌ ಟೂರಿಸಮ್‌ ಪದವಿ ಅಭ್ಯಾಸ ಮಾಡಿ ಟ್ರಾವೆಲ್‌ ಏಜೆಂಟ್‌ ಆಗಬಹುದು. ಅಥವಾ ಪದವಿಯಲ್ಲಿ ಟ್ರಾವೆಲ್‌ ಟೂರಿಸಮ್‌/ ಪಬ್ಲಿಕ್‌ ರಿಲೇಷನ್‌ ವಿಷಯ ಅಭ್ಯಾಸ ಮಾಡಿ, ಸ್ನಾತಕೋತ್ತರ ಪದವಿಯಲ್ಲಿ ಮಾಸ್ಟರ್‌ ಆಫ್ ಮ್ಯಾನೇಜ್‌ಮೆಂಟ್‌ ಮಾಡಿಯೂ ಟ್ರಾವೆಲ್‌ ಮ್ಯಾನೇಜರ್‌ ಆಗಬಹುದು. ಐಎಟಿಟಿಎ/ ಯುಎಫ್ಟಿಟಿಎ/ ಎಫ್ಐಎಟಿಟಿಎ ಸರ್ಟಿಫಿಕೇಷನ್‌ ಕೋರ್ಸ್‌ ಮಾಡಿ, ಟ್ರಾವೆಲ್‌ ಎಜೆನ್ಸಿಗಳಲ್ಲಿ ವೃತ್ತಿ ನೈಪುಣ್ಯತೆ ಸಾಧಿಸಿಯೂ ಗುರಿ ಮುಟ್ಟಬಹುದು.

ಏನೇನು ಗೊತ್ತಿರಬೇಕು?
– ದೇಶ ಹಾಗೂ ವಿದೇಶದ ಪ್ರವಾಸಿ ತಾಣಗಳ ಪರಿಚಯ
– ಪ್ರವಾಸಿಗನ ಅವಶ್ಯಕತೆ ಅರಿವು ಮುಖ್ಯ
– ಪ್ರಯಾಣದ ಸಮಯ, ಮಾರ್ಗ, ಯಾತ್ರಿಕರು ಉಳಿದುಕೊಳ್ಳಲು ಹೋಟೆಲ್‌, ಬಾಡಿಗೆಗೆ ಸಿಗುವ ಕಾರ್‌, ಟ್ಯಾಕ್ಸಿಗಳ ಸಂಪರ್ಕ ಸಂಖ್ಯೆ ಇತ್ಯಾದಿಗಳ ಬಗ್ಗೆ ತಿಳಿವಳಿಕೆ. 
– ಸೂಕ್ತ ವಾತಾವರಣ ವ್ಯವಸ್ಥೆ, ಚಿಕಿತ್ಸಾ ಗುಣ ಅಗತ್ಯ 
– ಆಯಾ ಸ್ಥಳದ ಕಲೆ, ಸಂಸ್ಕೃತಿ, ಇತಿಹಾಸ ಕುರಿತು ವಿಶೇಷ ಜ್ಞಾನ
– ನಾನಾ ಭಾಷೆ ಸಂಬಂಧಿ ಅರಿವು. ಉತ್ತಮ ಸಂವಹನಾ ಕೌಶಲ್ಯ

ಅವಕಾಶಗಳು ಎಲ್ಲೆಲ್ಲಿ?
ಸರ್ಕಾರಿ ಪ್ರವಾಸಿ ವಿಭಾಗ
ಟ್ರಾವೆಲ್‌ ಏಜೆನ್ಸಿಗಳು
ಟೂರ್‌ ಆಪರೇಟರ್‌ಗಳು
ಸಿವಿಲ್‌ ಏವಿಯೇಷನ್‌ಗಳು
ರೈಲ್ವೆ ಇಲಾಖೆ
ಕ್ರೂಸ್‌ ಲೈನರ್

ಓದುವುದೆಲ್ಲಿ? 
ಇನ್ಸ್‌ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌, ಕ್ರೈಸ್ಟ್‌ ಕಾಲೇಜು, ಹೊಸೂರು ರಸ್ತೆ, ಬೆಂಗಳೂರು 
ಇಂಟರ್‌ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ ಆಫ್ ಹೋಟೆಲ್‌ ಮ್ಯಾನೇಜ್‌ಮೆಂಟ್‌, ಇಂದಿರಾನಗರ, ಬೆಂಗಳೂರು
ಇಂದಿರಾ ಅಕಾಡೆಮಿ ಡಿಗ್ರಿ ಕಾಲೇಜು, ಕಲ್ಯಾಣನಗರ, ಬೆಂಗಳೂರು
ರೇವಾ ಯೂನಿವರ್ಸಿಟಿ, ಯಲಹಂಕ, ಬೆಂಗಳೂರು
ಸ್ಕೈಬರ್ಡ್‌ ಏವಿಯೇಷನ್‌, ಶಂಕರನಗರ, ಬೆಂಗಳೂರು
ಮೌಂಟ್‌ ಕಾರ್ಮೆಲ್‌ ಕಾಲೇಜು, ಪ್ಯಾಲೇಸ್‌ ರೋಡ್‌, ಬೆಂಗಳೂರು

– ಅನಂತನಾಗ್‌ ಎನ್‌.

ಟಾಪ್ ನ್ಯೂಸ್

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

B.Y. Raghavendra: ಕಾಂಗ್ರೆಸ್‌ನವರ ಬಳಿ ಗ್ಯಾರಂಟಿ ಅಡ್ವಾನ್ಸ್‌ ಹಣ ಕೇಳಿ: ಬಿವೈಆರ್‌

B.Y. Raghavendra: ಕಾಂಗ್ರೆಸ್‌ನವರ ಬಳಿ ಗ್ಯಾರಂಟಿ ಅಡ್ವಾನ್ಸ್‌ ಹಣ ಕೇಳಿ: ಬಿವೈಆರ್‌

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.