ಮಳೆಯಲ್ಲಿ  ನಾದ-ನಿನಾದ


Team Udayavani, Sep 7, 2018, 6:00 AM IST

15.jpg

ಮಳೆಯ ಹನಿಗಳ ಧಾರೆ ಆತ್ಮವನ್ನೂ ದ್ರವಿಸುತ್ತದೆ’ ಎಂಬುದೊಂದು ಪ್ರಾಚೀನ ಹೇಳಿಕೆ. ಅಲ್ಲದೆ ಮಳೆಯ ಹನಿಯ ಧಾರೆಯೇ, ಜುಳುಜುಳು ನಾದ-ನಿನಾದವೇ ಪರಮಾನಂದದಾಯಕವಾಗಿದೆ. ಪಾಶ್ಚಾತ್ಯ ಸಂಸ್ಕೃತಿಯೇ ಇರಲಿ, ಪೌರಸ್ತ್ಯ ಸಂಸ್ಕೃತಿಯೇ ಇರಲಿ ಮಳೆಗಾಲ ಮತ್ತು ಸಂಗೀತದ ನಡುವೆ ಸಮ್ಮಿಳಿತವಿದೆ, ಅದೊಂದು ಅನುಸ್ವಾದನೀಯ ಅನುನಯದ ಬಂಧ- ಮಳೆ ಮತ್ತು ಸಂಗೀತದ ಅಂದ, ಆನಂದ !

ಭಾರತೀಯ ಸಂಗೀತ ವೈಭವ ಶಾಸ್ತ್ರೀಯವಿರಲಿ, ಜಾನಪದವಿರಲಿ, ತಣ್ತೀಪದಗಳಿರಲಿ, ಭಕ್ತಿರಸ ಗಾಯನವಿರಲಿ ಮಳೆ ಮತ್ತು ಮಳೆಗಾಲದಲ್ಲಿ ಕಂಡುಕೊಂಡ ರಸಪೂರ್ಣತೆ ಅತಿ ವಿಶಿಷ್ಟ. ಮಳೆಗಾಲದ ಸೌಂದರ್ಯ-ಸಂತೋಷ, ಮಳೆ ಮೋಡಗಳ ಲಾಸ್ಯ-ಲಾಲಿತ್ಯ, ಮಿಂಚು-ಗುಡುಗುಗಳ ಆರ್ಭಟ, ಗರ್ಜನೆಗಳ ಆಟ ಇವೆಲ್ಲವನ್ನೂ ಶಾಸ್ತ್ರೀಯ ಸಂಗೀತದಲ್ಲಿ ಒಂದೊಂದು ಸ್ವರಗಳಲ್ಲಿ ಆಸ್ವಾದಿಸುವಂತೆ ಹಿಡಿದಿಟ್ಟಿದ್ದಾರೆ, ಭಾರತೀಯ ಶಾಸ್ತ್ರೀಯ ಸಂಗೀತ ಕಲಾಕಾರರು. ಅದರಲ್ಲೂ ಹಿಂದೂಸ್ಥಾನಿ ಸಂಗೀತದ ಮೇರು ತಾನಸೇನ್‌ ಹಾಡಿದ “ಮಲ್ಹಾರ್‌’ ಅತೀ ಪ್ರಸಿದ್ಧ. ಮಳೆಗಾಲದ ರಾಗ ವರ್ಷಾಕಾಲವನ್ನು ಆತ್ಮನಲ್ಲಿ ದರ್ಶಿಸುವ, ಚಿತ್ರಿಸುವ, ಸ್ಪರ್ಶಿಸುವ, ಹಾಡಿಪಾಡುವ ಮಳೆ ರಾಗ !

ಮಳೆರಾಗಗಳ ಪಾರಮ್ಯ ಮಧ್ಯಕಾಲೀನ ರಜಪೂತ ರಾಜರ ಸಮಯದಲ್ಲಿ , ಮೊಗಲ್‌ ಸಾಮ್ರಾಟರ ಕಾಲದಲ್ಲಿ ಹಾಗೂ ಅನೇಕ ನವಾಬರ ಕಾಲದಲ್ಲಿ ಹಲವು ಪ್ರಾಂತ್ಯಗಳಲ್ಲಿ , ಪ್ರಾದೇಶಿಕ ರಾಜರ ಆಶ್ರಯದಲ್ಲಿ ವರ್ಧಿಸಿತು. ತಾನಸೇನ ಹೇಳುವಂತೆ “ಮಳೆ ಮೋಡಗಳು ಆಗಸದಲ್ಲಿ ಒಂದೆಡೆ ಮೇಳೈಸುವಾಗ ಉದ್ಭವವಾಗುವ ರಾಗ ಪ್ರತೀಕವೇ- ರಾಗ ಮೇಘ’ ತಾನಸೇನ ರಾಗಮೇಘ, ರಾಗ ಮಲ್ಹಾರ್‌ಗಳಲ್ಲಿ ಪರಿಪೂರ್ಣತೆಯನ್ನು ಸಾಧಿಸಿದ ಅಂದಿನ ಪ್ರಸಿದ್ಧ-ಸಿದ್ಧ ಗಾಯಕ ಎಂದೇ ಹೇಳಬಹುದು. ತನ್ನದೇ ವೈಶಿಷ್ಟéದಿಂದ ಒಡಗೂಡಿದ ಮಿಯಾಂಕೀ ಮಲ್ಹಾರ್‌ ರಾಗವನ್ನು ಹುಟ್ಟುಹಾಕಿದ್ದೂ ತಾನಸೇನ ! ಈ ರಾಗವನ್ನು ಹಾಡುತ್ತಿದ್ದರೆ, ತಾನಸೇನ ರಾಗಧಾರೆಯಲ್ಲಿ ಮುಳುಗೇಳುತ್ತಿದ್ದರೆ, ಕೇಳುಗರಿಗೆ ಸಂಗೀತ ರಸಧಾರೆಯೊಂದಿಗೆ, ಮಳೆಯ ಧಾರೆಯ ಸಿಂಚನದ ಆನಂದವೂ ದೊರೆಯುತ್ತಿತ್ತು.

ಹಾಂ! ಮಳೆರಾಗಗಳಲ್ಲಿ ವೈವಿಧ್ಯತೆ ಮತ್ತು ಪ್ರಸಿದ್ಧಿ ಹೆಚ್ಚಿದ್ದು ಭಾರತೀಯ ಸುವರ್ಣ ಯುಗದಲ್ಲಿ. ಸಂತ ಸೂರದಾಸ ಮಳೆರಾಗ ಸೂರ ಮಲ್ಹಾರ್‌ ಸೃಜಿಸಿದ. ಸೂರದಾಸ ಇಹವನ್ನೇ ಮರೆತು ಕೃಷ್ಣನ ಭಜನೆ ಸಂಕೀರ್ತನೆಯಲ್ಲಿ ತೊಡಗಿರುತ್ತಿದ್ದರೆ, ಸಾಕ್ಷಾತ್‌ ಬಾಲಕೃಷ್ಣನೇ ಕುಳಿತು ಆಸ್ವಾದಿಸುತ್ತಿದ್ದನೆಂಬ ಐತಿಹ್ಯವಿದೆ. ಸೂರದಾಸರ ತಂದೆ, ಅಂದಿನ ಶ್ರೇಷ್ಠ ಸಂಗೀತಗಾರರಲ್ಲೋರ್ವರಾದ ರಾಮದಾಸರೂ ಸಹ ರಾಮದಾಸೀ ಮಲ್ಹಾರ್‌ ಎಂಬ ಮಳೆರಾಗವನ್ನು ಸೃಜಿಸಿ ಹಾಡಿ ರಂಜಿಸುತ್ತಿದ್ದರು.

ಈ ಮುಖ್ಯ ಮಳೆಯ ರಾಗಗಳೊಂದಿಗೆ ಮೇಳೈಸಿ ಜನಮನವನ್ನು ಅಂದಿನಿಂದ ಇಂದಿನವರೆಗೂ ರಂಜಿಸುತ್ತಿರುವ ಇತರ ಮಳೆರಾಗಗಳೆಂದರೆ ಗೌಡ ಮಲ್ಹಾರ್‌, ಮಿಶ್ರಮೇಘ ಮಲ್ಹಾರ್‌, ಧುಲಿಯಾ ಮಲ್ಹಾರ್‌, ಮಧು ಮಲ್ಹಾರ್‌. ಮಲ್‌+ಹರ್‌ ಅಥವಾ ಮಲ+ಹರೀ ಎಂಬ ವುÂತ್ಪತ್ತಿಯೊಂದಿಗೆ ಮಲ್ಹರ್‌ ಶಬ್ದ ಉತ್ಪತ್ತಿಯಾಗಿದೆ. ಮಲ್‌ಹರ್‌ ಅಥವಾ ಮಲಹರೀ ಎಂದರೆ ಅರ್ಥ ಮಲ ಅಥವಾ ಕೊಳೆಯನ್ನು ತೊಳೆಯುವಂಥದ್ದು! 

ಹೌದು, ಮಳೆಯು ಇಳೆಯ ಕೊಳೆಯನ್ನು ತೊಳೆಯುವಂತೆ, ಮಳೆರಾಗ ಮಲ್ಹಾರ್‌ ಮುಂತಾದವು ಮನಸ್ಸಿನ ಕೊಳೆ ನಿವಾರಣೆ ಮಾಡಿ ಚಿತ್ತಶುದ್ಧಿ , ಸಣ್ತೀ ಸಂಶುದ್ಧಿ ಉಂಟುಮಾಡುತ್ತದೆ. ರಾಗ್‌ಮೇಘ, ರಾಗ್‌ ಮಲ್ಹಾರ್‌ ಮುಂತಾದವುಗಳಂತೆ, ರಾಗಮಾಲ ಕೌಂಸ್‌, ರಾಗ್‌ ಸಾರಂಗ್‌ ಹಾಗೂ ಅವುಗಳೊಂದಿಗಿನ ವೈವಿಧ್ಯಮಯ ರಾಗಗಳು ಮಳೆಗಾಲದಲ್ಲಿ ಮನಸ್ಸನ್ನು ಮೀಯಿಸುವ ಇತರ ಮಳೆರಾಗಗಳಾಗಿವೆ.

ಡಾ. ಅನುರಾಧಾ ಕಾಮತ್‌

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.