ಎ.ಕೆ. ವಿಜಯ್‌ಗೆ ರಂಗಚಾವಡಿ ಪ್ರಶಸ್ತಿ 


Team Udayavani, Nov 16, 2018, 6:00 AM IST

15.jpg

ರಂಗಭೂಮಿ ಮತ್ತು ಸಿನಿಮಾದ ಖ್ಯಾತ ಸಂಗೀತ ನಿರ್ದೇಶಕ ಎ.ಕೆ. ವಿಜಯ್‌ ಅವರಿಗೆ ಈ ಬಾರಿಯ ರಂಗಚಾವಡಿ ಪ್ರಶಸ್ತಿ ಘೋಷಿಸಲಾಗಿದ್ದು, ನ. 18ರಂದು ಸುರತ್ಕಲ್ಲಿನ ಬಂಟರ ಭವನದಲ್ಲಿ ಜರಗಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. 

ಎ.ಕೆ. ವಿಜಯ್‌ ಕೇಂದ್ರ ಸರಕಾರಿ ಉದ್ಯೋಗದಲ್ಲಿದ್ದು ನಿವೃತ್ತರಾಗಿರುವವರು. ಕೋಕಿಲಾ ಹೆಸರಿನಲ್ಲಿ ಖ್ಯಾತರಾಗಿರುವ ವಿಜಯ್‌ ಎಳವೆಯಿಂದಲೇ ಕಲಾಸಕ್ತಿ ಹೊಂದಿದ್ದು, ಅದನ್ನು ತನ್ನ ಉದ್ಯೋಗದ ನಡುವೆಯೂ ಬೆಳೆಸಿಕೊಂಡು ಇಂದು ಈ ಮಟ್ಟಕ್ಕೆ ಬೆಳೆದವರು. ಬಾಲ್ಯದಿಂದಲೇ ಹಿರಿಯರೊಂದಿಗೆ ಭಜನೆ ಕಾರ್ಯಕ್ರಮ ನೀಡುತ್ತಿದ್ದ ಅವರು ಹಾರ್ಮೋನಿಯಂ ನುಡಿಸಲು ಕಲಿತುಕೊಂಡರು. ಬಳಿಕ ಸಿನಿಮಾ ಹಾಗೂ ನಾಟಕದ ಹಾಡುಗಳತ್ತ ಗಮನ ಹರಿಸಿ ಅಲ್ಲಿ ಬೆಳವಣಿಗೆ ಕಂಡವರು. 

1976ರಲ್ಲಿ ಇವರು ಸಂಗೀತ ಕ್ಷೇತ್ರಕ್ಕೆ ಕಾಲಿರಿಸಿದರು. ತುಳು ರಂಗಭೂಮಿಯ ಖ್ಯಾತನಾಮರಾಗಿರುವ ಮಚ್ಚೇಂದ್ರನಾಥ ಪಾಂಡೇಶ್ವರ, ಕೆ. ಎನ್‌. ಟೇಲರ್‌, ಕೆ.ಬಿ. ಭಂಡಾರಿ, ರಾಂ ಕಿರೋಡಿಯನ್‌, ಸೀತಾರಾಮ ಕುಲಾಲ್‌, ಮೊಹಿದಿನಬ್ಬ, ಇಬ್ರಾಹಿಂ ತಣ್ಣೀರುಬಾವಿ, ಡಾ| ಸಂಜೀವ ದಂಡಕೇರಿ, ರಮಾನಂದ ಚೂರ್ಯ, ಕಾಸರಗೋಡು ಚಿನ್ನಾ, ಮುಂಬಯಿ ಕಲಾಜಗತ್ತಿನ ತೋನ್ಸೆ ವಿಜಯ ಕುಮಾರ್‌ ಶೆಟ್ಟಿ. ದೇವದಾಸ್‌ ಕಾಪಿಕಾಡ್‌, ವಿಜಯಕುಮಾರ್‌ ಕೊಡಿಯಾಲ್‌ಬೈಲ್‌ ಮುಂತಾದ ಘಟಾನುಘಟಿಗಳೊಂದಿಗೆ ಕೆಲಸ ಮಾಡಿದ ಅನುಭವಿ. ಹಿರಿಯರಿಂದ ಕಿರಿಯರ ವರೆಗಿನ ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಇವರು ಪ್ರಸ್ತುತ ರಂಗ ಪರಿಕರ ಸಂಬಂಧಿ ವ್ಯವಹಾರವನ್ನೂ ಮಾಡುತ್ತಿದ್ದಾರೆ. 

ತುಳು ಚಿತ್ರರಂಗದಲ್ಲಿ ದಾಖಲೆ ಬರೆದಿರುವ ಒರಿಯರ್ದೊರಿ ಅಸಲ್‌ ಸಿನಿಮಾಕ್ಕೆ ಸಂಗೀತ ನಿರ್ದೇಶನ ನೀಡಿರುವ ಇವರು, ಅದಕ್ಕಾಗಿ ಬೆಸ್ಟ್‌ ಮ್ಯೂಸಿಕ್‌ ಅವಾರ್ಡ್‌ ಕೂಡ ಪಡೆದುಕೊಂಡಿದ್ದಾರೆ. ಬಳಿಕ ಮದಿಮೆ, ಬಣ್ಣಬಣ್ಣದ ಬದುಕು ಮುಂತಾದ ಸಿನಿಮಾಗಳಿಗೂ ಸಂಗೀತ ನೀಡಿ ಗಮನ ಸೆಳೆದಿದ್ದಾರೆ. ಇವರು ನಿರ್ದೇಶನ ನೀಡಿರುವ ಹಲವಾರು ಹಾಡುಗಳಿಗೆ ಖ್ಯಾತ ಗಾಯಕರು ದನಿಯಾಗಿದ್ದು, ಅವುಗಳಲ್ಲಿ ಕೆಲವುಗಳಿಗೆ ಪ್ರಶಸ್ತಿಯೂ ಸಿಕ್ಕಿರುವುದು ಇವರ ಪ್ರತಿಭೆಯನ್ನು ಎತ್ತಿ ತೋರಿಸುತ್ತದೆ. ಇವರು ನಿರ್ದೇಶಿಸಿದ್ದ ಹಾಡುಗಳನ್ನು ಹಾಡಿ ಎಸ್‌.ಪಿ. ಬಾಲಸುಬ್ರಹ್ಮಣ್ಯಂ, ಉದಿತ್‌ ನಾರಾಯಣ್‌, ಸೋನು ನಿಗಂ ಮುಂತಾದವರಿಗೆ ಬೆಸ್ಟ್‌ ಸಿಂಗರ್‌ ಪ್ರಶಸ್ತಿಯೂ ಸಿಕ್ಕಿದೆ. 

ಪುತ್ತಿಗೆ ಪದ್ಮನಾಭ ರೈ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.