ಗಾನಲೋಕದಲ್ಲಿ ತೇಲಿಸಿದ ಕಛೇರಿ 

Team Udayavani, Jan 4, 2019, 12:30 AM IST

x-60.jpg

ಸುನಾದ ಸಂಗೀತ ಕಲಾ ಶಾಲೆ ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ಶ್ರೀ ವನದುರ್ಗಾ ದೇವಿ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ ಸುನಾದ ಸಂಗೀತೋತ್ಸವದಲ್ಲಿ ವಿ| ವಿಷ್ಣುದೇವ ನಂಬೂದಿರಿ ಚೆನ್ನೆ ಇವರು ನಡೆಸಿಕೊಟ್ಟ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ಸಂಗೀತ ರಸಿಕರನ್ನು ಗಾನಲೋಕದಲ್ಲಿ ತೇಲಿಸಿತು.

ಆಭೋಗಿ ರಾಗದ (ಎವ್ವರಿ ಭೋದನ )ವರ್ಣದ ಸುಶ್ರಾವ್ಯ ಪ್ರಸ್ತುತಿಯೊಂದಿಗೆ ಕಛೇರಿ ಸಾಂಪ್ರದಾಯಿಕವಾಗಿ ಆರಂಭಗೊಂಡಿತು. ನಂತರ ಗೌಳರಾಗದಲ್ಲಿ ಶ್ರೀ ಮಹಾಗಣಪತಿ ರವತುಮಾಮ್‌ ಮುತ್ತುಸ್ವಾಮಿ ದೀಕ್ಷಿತರ ರಚನೆಯನ್ನು ಹಾಡಿ ಗಣೇಶನನ್ನು ಸ್ತುತಿಸಿ, ಮುಂದೆ ಶುದ್ಧ ಧನ್ಯಾಸಿ ರಾಗದಲ್ಲಿ ಪ್ರಧಾನವಾಗಿ ಸುಬ್ರಹ್ಮಣ್ಯೇನ ಕೃತಿಯನ್ನು ಮನೋಜ್ಞವಾಗಿ ಆಲಾಪನೆ, ನೆರವಲ್‌ ಹಾಗೂ ವೈಶಿಷ್ಟéಪೂರ್ಣ ಸ್ವರ ಪ್ರಸ್ತಾರಗಳಿಂದ ಅಲಂಕರಿಸಿದುದು ರಂಜಿಸಿತು.ಮಧುರವಾದ ವಯೊಲಿನ್‌ ವಾದನ ಹಿತವಾದ ಭಾವ ನೀಡಿತು. ಮೃದಂಗ ವಾದನವೂ ಪೂರಕವಾಗಿತ್ತು. ನಂತರ ನರಸಿಂಹ ಮಾಮವ… ಆರಭಿ ರಾಗದ ಕೃತಿಯನ್ನು ಭಕ್ತಿಪ್ರಧಾನವಾಗಿ ಪ್ರಸ್ತುತಪಡಿಸಿದರು. ಇದಾದ ಮೇಲೆ ಪುರಂದರ ದಾಸರ ರಚನೆ ನಿನ್ನ ನೋಡಿ ಧನ್ಯನಾದೆನೋ… ದೇವರ ನಾಮವನ್ನು ತೋಡಿ ರಾಗದಲ್ಲಿ ಹಾಡಿದ್ದು ಆಕರ್ಷಣೀಯವಾಗಿ ಮೂಡಿ ಬಂತು. ನಂತರ ತ್ಯಾಗರಾಜರ ಕೃತಿ ಮನಮ್ಯಾಲಕಿಂಚರ ನಳಿನಕಾಂತಿ ರಾಗದಲ್ಲಿ ಮೋಹಕವಾದ ಆಲಾಪನೆಯೊಂದಿಗೆ ಮೂಡಿ ಬಂತು. 

 ವಾಗಧೇಶ್ವರಿ ರಾಗದ ಪರಮಾತುಡು ಕೃತಿಯನ್ನು ಪ್ರಧಾನ ರಾಗವಾಗಿ ಆಯ್ದುಕೊಂಡು ಸುದೀರ್ಘ‌ ಆಲಾಪನೆ, ನೆರವಲ್‌,ಸ್ವರ ಪ್ರಸ್ತಾರಗಳಿಂದ ಸವಿಸ್ತಾರವಾಗಿ ಪ್ರಸ್ತುತ ಪಡಿಸಿದ್ದು ವಿ| ವಿಷ್ಣುದೇವರವರ ಪ್ರಬುದ್ಧ ಗಾಯನ ಮತ್ತು ಪಕ್ವತೆಯನ್ನು ಪರಿಚಯಿಸಿತು. ಗಾಯನದ ಭಾವವನ್ನು ಧ್ವನಿಸಿದ ತನಿ ಆವರ್ತನ ವಿ| ಕಾಂಚನ ಈಶ್ವರ ಭಟ್‌ ಅವರ ವಿದ್ವತ್‌ ಚಾತುರ್ಯದಿಂದ ಲಯಬದ್ಧ ಗತಿಯಲ್ಲಿ ಮೂಡಿಬಂದು ಪರಿಣಾಮಕಾರಿಯಾದ ಛಾಪನ್ನುಂಟುಮಾಡಿ ಮೈನವಿರೇಳಿಸಿತು. ವಿ| ಮತ್ತೂರು ಶ್ರೀನಿಧಿಯವರ ವಯೊಲಿನ್‌ ವಾದನವೂ ಮೆಚ್ಚುಗೆ ಪಡೆಯಿತು.

ನಂತರ ದುರ್ಗಾರಾಗದ ಮಂದಮತಿಯು ನಾನು ದೇವರನಾಮವನ್ನು ಶರಣಾಗತಿಯ ಭಾವದಲ್ಲಿ ಹಾಡಿದ್ದು ಸೂಕ್ಷ್ಮ ಸಂವೇದನೆಗಳನ್ನು ನೀಡಿತು.ಅನಂತರ ನೀಲಾಂಬರಿ ರಾಗದಲ್ಲಿ ಕಾಂತ ನೋಡು ಚೆನ್ನು ಮೆಲ್ಲೆ ಸ್ವಾತಿ ತಿರುನಾಳ್‌ ರಚನೆಯನ್ನು ಭಕ್ತಿಭಾವರಸ ತುಂಬಿ ನಿರೂಪಿಸಿದರು. 

ಕೊನೆಯದಾಗಿ ಪುರಂದರದಾಸರ ರಚನೆಯ ದೇವರನಾಮವನ್ನು ಗೋವಿಂದ ನಿನ್ನ ನಾಮವೇ ಚಂದ ಜನ ಸಮ್ಮೊàದಿನಿ ರಾಗದಲ್ಲಿ ಮನೋಹರವಾಗಿ ಹಾಡಿದರು. ಪವಮಾನದೊಂದಿಗೆ ಈ ಭಕ್ತಿರಸ ಭರಿತ ಭಾವಪೂರ್ಣ ಸಂಗೀತ ಕಛೇರಿ ಸಂಪನ್ನಗೊಂಡಿತು. 

ಕಲಾವಿದರು ಎಲ್ಲಾ ಪ್ರಸ್ತುತಿಯಲ್ಲೂ ತಾರಸ್ಥಾಯಿಯಲ್ಲೂ ಮಂದ್ರಸ್ಥಾಯಿಯಲ್ಲೂ ಸ್ವರವನ್ನು ಕಾಯ್ದುಕೊಂಡು ಸುಲಲಿತವಾಗಿ ಲವಲವಿಕೆಯಿಂದ ನಿರರ್ಗಳವಾಗಿ ಹಾಡಿದ್ದು ಶ್ರೋತೃಗಳಲ್ಲಿ ನೆನಪುಳಿಯುವ ಭಾವ- ಸಂಗೀತದಲೆಗಳನ್ನು ಸೃಷ್ಟಿಸಿತು. 

ಮಮತಾ ದೇವ

ಟಾಪ್ ನ್ಯೂಸ್

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

supreem

ಬಂಗಾಲ ಶಿಕ್ಷಕರ ನೇಮಕ ಸಿಬಿಐ ತನಿಖೆಗೆ ಮಾತ್ರ ತಡೆ: ಸುಪ್ರೀಂ ಕೋರ್ಟ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

Exam

NEET; ಕೋಟಾದಲ್ಲಿ ಮತ್ತೊಬ್ಬ ಆಕಾಂಕ್ಷಿ ಆತ್ಮಹತ್ಯೆ: ಇದು 8ನೇ ಪ್ರಕರಣ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.