ಚಳಿಗಾಲದ ಕೊನೆಯ ಚಹಾ


Team Udayavani, Feb 5, 2019, 12:30 AM IST

d-12.jpg

ಚುಮುಚುಮು ಚಳಿಯಲ್ಲಿ ಬೆಚ್ಚಗಿನ ಚಹಾವನ್ನು ಕೈಗಿಡುವ, ತಣ್ಣಗಿನ ಆ ಮನುಷ್ಯನನ್ನು ಕಂಡು ಹೆದರುವವರು ಬಹಳ ಮಂದಿ. ಆತನನ್ನು ಮಾತನಾಡಿಸಲು ಯಾಕೋ ಹಿಂದೇಟು ಹಾಕುತ್ತಾರೆ. ಅವನಲ್ಲಿಯೂ ಮಾತಿಲ್ಲ, ಸುಮ್ಮನೆ ವ್ಯವಹಾರ ಮಾತ್ರ…

ಇಬ್ಬನಿ ದಟ್ಟವಾಗಿ ಆವರಿಸಿದೆ. ಎದುರಿನಲ್ಲಿ ಬರುವವರು ಸ್ಪಷ್ಟವಾಗಿ ಕಾಣಿಸದಷ್ಟು ಗಾಢ ಆವರಣ. ಕಾಣಿಸಬೇಕಾದರೆ ಎದುರಿನಿಂದ ಯಾರಾದರೂ ಬರಲೇಬೇಕು. ಯಾರು ಬರುತ್ತಾರೆ ಹೇಳಿ- ಈ ಚಳಿಗಾಲದಲ್ಲಿ! ಯಾರಿಗೂ ಮನೆಯಿಂದ ಹೊರಬರುವ ಇಚ್ಛೆಯಿಲ್ಲ. ಬಂದರೂ ನಡುಕ ಹುಟ್ಟಿಸುವಂಥ ಚಳಿಯನ್ನು ಸಹಿಸುವವರಾರು?

ಇಂಥ¨ªೊಂದು ಗಳಿಗೆಯಲ್ಲಿ ಮನೆಯಿಂದ ಹೊರಬಂದು ಮಂಜನ್ನು ಸೀಳಿಕೊಂಡು ನಡೆಯುತ್ತಾ ಬರುತ್ತೇನೆ. ಓಣಿಯ ಮೂಲೆಯಲ್ಲಿರುವ ಚಹಾದಂಗಡಿಯ ಮುಂದೆ ಇರುವ ಕಾಲು ಮುರಿದ ಬೆಂಚಿನಲ್ಲಿ ಕುಳಿತುಕೊಳ್ಳುತ್ತೇನೆ. ಚಹಾದಂಗಡಿಯ ತಾತ ಚಹಾದ ಕಪ್ಪನ್ನು ಮುಂದೆ ಚಾಚುತ್ತಾನೆ. ನಾನು ಆ ಚಹಾ ಬಟ್ಟಲನ್ನು ಪಡೆದು, ಗುಟುಕು ಚಹಾ ಹೀರುತ್ತೇನೆ. ಬಿಸಿಯಾದ ಚಹಾ ಹೊಟ್ಟೆಯೊಳಗೆ ಇಳಿಯುತ್ತಿರುವಂತೆ ಹೊಸ ಉತ್ಸಾಹ ಬರುತ್ತದೆ. ಬೆಳಗಿನ ಆ ಚಹಾ ಕುಡಿಯುವ ಸುಖವನ್ನು ಬಲ್ಲವನೇ ಬಲ್ಲ.

ತಾತನ ಬಗ್ಗೆ ಒಂದು ಮಾತು ಹೇಳಲೇಬೇಕು. ಆ ಮನುಷ್ಯ ಯಾವಾಗಲೂ ತಣ್ಣಗೆ. ಬಹಳ ಬಯಕೆಯಿಲ್ಲ, ಪಯಣದ ತವಕವಿಲ್ಲ. ಇದ್ದಲ್ಲಿಯೇ ಸ್ಥಾವರದಂತೆ ಸ್ಥಾಪನೆಯಾಗಿ¨ªಾನೆ. “ಯಾಕೆ ಅಜ್ಜ, ಒಂದೇ ಕಡೆ ಇದ್ದೀರಿ?’ ಎಂದು ಕೇಳಿದರೆ ಸುಮ್ಮನೆ ನಗುತ್ತಾನೆ. ಆ ನಗುವಿನಲ್ಲಿ ಸಾವಿರ ಅರ್ಥಗಳಿವೆ. ಅದನ್ನು ಅರ್ಥಮಾಡಿಕೊಂಡರೆ ಅದೇ ಗುಂಗಿನಲ್ಲಿ ಕಳೆದುಹೋಗುತ್ತೇನೆ.

ತಣ್ಣಗಿನ ಆ ಮನುಷ್ಯನನ್ನು ಕಂಡು ಹೆದರುವವರು ಬಹಳ ಮಂದಿ. ಮಾತನಾಡಿಸಲು ಹಿಂದೇಟು ಹಾಕುತ್ತಾರೆ. ಅವನಲ್ಲಿಯೂ ಮಾತಿಲ್ಲ, ಸುಮ್ಮನೆ ವ್ಯವಹಾರ ಮಾತ್ರ. ಮಾತನಾಡಿಸಬೇಕೆನ್ನಿಸಿದಾಗ ಒಂದು ಬೀಡಿ ಹೊತ್ತಿಸುತ್ತಾನೆ. ಒಲೆಯ ಹೊಗೆ ಮತ್ತು ಬೀಡಿಯ ಹೊಗೆ ಒಂದರೊಡನೊಂದು ಸೇರಿಕೊಂಡು ವಿಚಿತ್ರ ವಿನ್ಯಾಸವನ್ನು ಉಂಟುಮಾಡುತ್ತದೆ. ಒಂದು, ಬೂದಿಯಾಗಲಿರುವುದನ್ನು ಬೆಚ್ಚಗೊಳಿಸಲು ಹೊಮ್ಮಿದ ಹೊಗೆಯಾದರೆ, ಇನ್ನೊಂದು ಬೆಚ್ಚಗಿಡಲೆಂದೇ ಬೂದಿಯಾಗುವಂಥ¨ªಾಗಿರುತ್ತದೆ. ಇದು ಚಳಿಗಾಲದ ಒಂದು ಅನುಭವ.

ಬಿಸಿನೀರಿನ ಸ್ನಾನ ಮಾಡಿದರೆ ಹೊರಗಿನ ದೇಹ ಬಿಸಿಯಾಗುತ್ತದೆ. ಬಿಸಿ ಚಹಾ ಕುಡಿದರೆ ದೇಹದೊಳಗೂ ಬಿಸಿಯಾಗುತ್ತದೆ. ಎರಡನೇ ವಿಧಾನವೇ ಉತ್ತಮ! “ಈ ವರ್ಷ ಚಳಿ ಸ್ವಲ್ಪ ಜಾಸ್ತಿ’ ಎಂದು ಜನ ತಮ್ಮಲ್ಲಿಯೇ ಮಾತನಾಡಿಕೊಳ್ಳುತ್ತಾರೆ. ಅದು ಒಂದು ರೀತಿಯ ಸುಳ್ಳು ಆಪಾದನೆಯೂ ಹೌದು. ಚಳಿ ಎಂದರೆ ಎಲ್ಲರಿಗೂ ಇಷ್ಟವೇ. ಆದರೂ ಚಳಿಗೆ ಬಯ್ಯುವುದು ಒಂದು ವಾಡಿಕೆ.

ಚಳಿಯಾಗಲಿ, ಮಳೆಯಾಗಲಿ, ಸೆಕೆಯಾಗಲಿ- ಪ್ರಕೃತಿಯ ಸೋಜಿಗ. ಅದನ್ನು ಸುಮ್ಮನೆ ಅನುಭವಿಸಬೇಕೇ ಹೊರತು ದೂಷಿಸಿ ಸುಖವಿಲ್ಲ. ಮಾತನಾಡುತ್ತಿರುವಂತೆಯೇ ಚಳಿಗಾಲ ನಿಧಾನವಾಗಿ ಕಳೆದುಹೋಗುತ್ತಿದೆಯಲ್ಲ!
ಚಳಿಗಾಲದ ಕೊನೆಯ ಕಪ್‌ ಚಹಾವನ್ನು ಹೀರಿಬಿಡೋಣವೇ?

ಪ್ರಶಾಂತ್‌ ಎಸ್‌. ಕೆಳಗೂರ್‌

ಟಾಪ್ ನ್ಯೂಸ್

1-eewqewq

UNICEF ಇಂಡಿಯಾಗೆ ಕರೀನಾ ಕಪೂರ್‌ ರಾಯಭಾರಿ

MOdi (3)

Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ

mamata

Sandeshkhali ಪ್ರಕರಣ ಬಿಜೆಪಿಯದ್ದೇ ಪಿತೂರಿ: ಸಿಎಂ ಮಮತಾ ಆಕ್ರೋಶ

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Onion

Onion ರಫ್ತು ನಿಷೇಧ ತೆರವು: ಕಳೆದ ವರ್ಷಕ್ಕಿಂತ ಕಡಿಮೆ ಉತ್ಪಾದನೆ ಸಾಧ್ಯತೆ

1-eewqewq

UNICEF ಇಂಡಿಯಾಗೆ ಕರೀನಾ ಕಪೂರ್‌ ರಾಯಭಾರಿ

MOdi (3)

Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ

mamata

Sandeshkhali ಪ್ರಕರಣ ಬಿಜೆಪಿಯದ್ದೇ ಪಿತೂರಿ: ಸಿಎಂ ಮಮತಾ ಆಕ್ರೋಶ

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.