ವಿಶ್ವಕಪ್ ನಲ್ಲಿ ಹೆಚ್ಚು ಸಿಕ್ಸ್ ಬಾರಿಸಿದವರು ಯಾರು ಗೊತ್ತಾ ?


Team Udayavani, Jun 29, 2019, 3:16 PM IST

dhoni

ಲಂಡನ್: ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಕ್ರಿಕೆಟ್ ಈಗಾಗಲೇ ದೊಡ್ಡ ದೊಡ್ಡ ಪಂದ್ಯಗಳನ್ನು ಕಂಡಿದೆ. ಮೊದಲ ಕೆಲವು ಪಂದ್ಯಗಳು ಬ್ಯಾಟ್ಸಮನ್ ಗಳ ಮೇಲಾಟಕ್ಕೆ ಸಾಕ್ಷಿಯಾದರೆ, ನಂತರದ ಕೆಲವು ಪಂದ್ಯಗಳು ಬೌಲರ್ ಗಳ ಅತ್ಯುತ್ತಮ ಪ್ರದರ್ಶನಕ್ಕೆ ಸಾಕ್ಷಿಯಾಗಿವೆ.

ಶುಕ್ರವಾರದ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ನಡುವಿನ ಪಂದ್ಯದ ನಂತರ ಯಾರು ಹೆಚ್ಚು ಸಿಕ್ಸರ್ ಬಾರಿಸಿದವರ ಪಟ್ಟಿಯಲ್ಲಿದ್ದಾರೆ, ಯಾರು ಉತ್ತಮ ಬೌಲಿಂಗ್ ನಡೆಸಿದ್ದಾರೆ ನೋಡೋಣ.

ಅತೀ ಹೆಚ್ಚು ಸಿಕ್ಸ್
ಅಫ್ಘಾನಿಸ್ಥಾನ ವಿರುದ್ಧ ಹೊಡಿಬಡಿ ಪ್ರದರ್ಶನ ನೀಡಿದ ಇಂಗ್ಲೆಡ್ ಕಪ್ತಾನ ಇಯಾನ್ ಮೋರ್ಗನ್ ಈ ವಿಶ್ವಕಪ್ ನಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದವರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಮೋರ್ಗನ್ ಆರು ಇನ್ನಿಂಗ್ಸ್ ಗಳಲ್ಲಿ ಒಟ್ಟು 22 ಸಿಕ್ಸ್ ಬಾರಿಸಿದ್ದು, ಅಫ್ಘಾನ್ ವಿರುದ್ಧ ಒಂದೇ ಪಂದ್ಯದಲ್ಲಿ 17 ಸಿಕ್ಸ್ ಬಾರಿಸಿದ್ದರು. ಆಸೀಸ್ ನಾಯಕ ಆರೋನ್ ಫಿಂಚ್ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಅವರು 18 ಸಿಕ್ಸ್ ಬಾರಿಸಿದ್ದಾರೆ. 10 ಸಿಕ್ಸ್ ಬಾರಿಸಿರುವ ಕ್ರಿಸ್ ಗೇಲ್ ಮೂರನೇ ಸ್ಥಾನದಲ್ಲಿದ್ದರೆ, ಭಾರತೀಯ ರೋಹಿತ್ ಶರ್ಮಾ ಏಳು ಸಿಕ್ಸ್ ಬಾರಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಅತೀ ಹೆಚ್ಚು ಬೌಂಡರಿ
ಈ ಕೂಟದಲ್ಲಿ ಅತೀ ಹೆಚ್ಚು ಫೋರ್ ಬಾರಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ಬಾಂಗ್ಲಾದೇಶದ ಆಲ್ ರೌಂಡರ್ ಶಕೀಬ್ ಅಲ್ ಹಸನ್. ಅವರು ಆರು ಪಂದ್ಯಗಳಲ್ಲಿ 48 ಬೌಂಡರಿ ಬಾರಿಸಿದ್ದಾರೆ. ಅಸೀಸ್ ಆರಂಭಿಕರಾದ ಡೇವಿಡ್ ವಾರ್ನರ್ ಮತ್ತು ಆರೋನ್ ಫಿಂಚ್ ತಲಾ 46 ಬೌಂಡರಿ ಬಾರಿಸಿ ನಂತರದೆರಡು ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ ಈ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದು 31 ಬೌಂಡರಿ ಬಾರಿಸಿದ್ದಾರೆ.

ಅತ್ಯುತ್ತಮ ಬ್ಯಾಟಿಂಗ್ ಸರಾಸರಿ
ಕಿವೀಸ್ ನಾಯಕ ಕೇನ್ ವಿಲಿಯುಮ್ಸನ್ ಈ ಸರಣಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. ಐದು ಇನ್ನಿಂಗ್ಸ್ ಗಳಲ್ಲಿ 414 ರನ್ ಗಳಿಸಿರುವ ಕೇನ್ ಬ್ಯಾಟಿಂಗ್ ಸರಾಸರಿ 128.0. ಎರಡನೇ ಸ್ಥಾನದಲ್ಲಿರುವ ಶಕೀಬ್ ಬ್ಯಾಟಿಂಗ್ ಸರಾಸರಿ 95.30. ಭಾರತದ ರೋಹಿತ್ ಶರ್ಮಾ ಕೂಡಾ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು ಅವರು 84.50 ಸರಾಸರಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ಅತ್ಯುತ್ತಮ ಬೌಲಿಂಗ್ ಸ್ಟ್ರೈಕ್ ರೇಟ್
ಇನ್ನು ಬೌಲರ್ ಗಳ ವಿಷಯಕ್ಕೆ ಬರುವುದಾದರೆ ಸತತ ಎರಡು ಪಂದ್ಯಗಳಲ್ಲಿ ನಾಲ್ಕು ವಿಕೆಟ್ ಕಿತ್ತ, ವಿಶ್ವಕಪ್ ಹ್ಯಾಟ್ರಿಕ್ ವೀರ ಮೊಹಮ್ಮದ್ ಶಮಿ ಈ ಕೂಟದಲ್ಲಿ ಅತ್ಯುತ್ತಮ ಬೌಲಿಂಗ್ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಶಮಿ ಸ್ಟ್ರೈಕ್ ರೇಟ್ 12.12. ಎರಡನೇ ಸ್ಥಾನದಲ್ಲಿರುವ ಆಸೀಸ್ ವೇಗಿ ಜೇಸನ್ ಬೆಹ್ರಾಂಡಫ್ 19ರ ಸ್ಟ್ರೈಕ್ ರೇಟ್ ನಲ್ಲಿ ಬೌಲಿಂಗ್ ನಡೆಸಿದ್ದಾರೆ. ಅಸಿಸ್ ಘಾತಕ ವೇಗಿ ಮಿಚೆಲ್ ಸ್ಟಾರ್ಕ್ ಏಳು ಪಂದ್ಯಗಳಲ್ಲಿ 20.42ರ ಬೌಲಿಂಗ್ ಸ್ಟ್ರೈಕ್ ರೇಟ್ ಹೊಂದಿದ್ದಾರೆ.

ಟಾಪ್ ನ್ಯೂಸ್

H. D. Kumaraswamy: ಸಂಸದನಾಗಿದ್ದಾಗಲೇ ನನಗೆ ಸಿಗದ ಪ್ರಜ್ವಲ್‌ ಈಗ ಸಿಗುತ್ತಾರಾ?; ಎಚ್‌ಡಿಕೆ

H. D. Kumaraswamy: ಸಂಸದನಾಗಿದ್ದಾಗಲೇ ನನಗೆ ಸಿಗದ ಪ್ರಜ್ವಲ್‌ ಈಗ ಸಿಗುತ್ತಾರಾ?; ಎಚ್‌ಡಿಕೆ

22

Politics: ಗೃಹ ಸಚಿವರು ಕೂಡಲೇ ರಾಜೀನಾಮೆ ಕೊಡಲಿ: ಅಶ್ವತ್ಥನಾರಾಯಣ 

India alliance: ದಕ್ಷಿಣ ಭಾರತದಲ್ಲಿ ಇಂಡಿಯಾ ಮೈತ್ರಿಕೂಟ ಕ್ಲೀನ್‌ ಸ್ವೀಪ್‌; ಡಿಕೆಶಿ

India alliance: ದಕ್ಷಿಣ ಭಾರತದಲ್ಲಿ ಇಂಡಿಯಾ ಮೈತ್ರಿಕೂಟ ಕ್ಲೀನ್‌ ಸ್ವೀಪ್‌; ಡಿಕೆಶಿ

Politics: ರಘುಪತಿ ಭಟ್ಟರ ಜತೆ ಮುಖಂಡರು ಮಾತನಾಡುತ್ತಾರೆ; ಬಿ. ವೈ. ರಾಘವೇಂದ್ರ

Politics: ರಘುಪತಿ ಭಟ್ಟರ ಜತೆ ಮುಖಂಡರು ಮಾತನಾಡುತ್ತಾರೆ; ಬಿ. ವೈ. ರಾಘವೇಂದ್ರ

1-qwewqewqe

Kejriwal ನಿವಾಸದಲ್ಲಿ ಹಲ್ಲೆ; ಕೊನೆಗೂ ದೂರು ದಾಖಲಿಸಿದ ಸ್ವಾತಿ ಮಲಿವಾಲ್

train-track

Belagavi: ರೈಲಿನಲ್ಲಿ ಮುಸುಕುಧಾರಿಯಿಂದ ಚಾಕು ಇರಿತ: ವ್ಯಕ್ತಿ ಸಾವು,ಇಬ್ಬರಿಗೆ ಗಾಯ !

Revanna 2

Holenarasipur case; ರೇವಣ್ಣ ಅವರಿಗೆ ಒಂದು ದಿನದ ರಿಲೀಫ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

31

Italian Open 2024: ಬೋಪಣ್ಣ ಜೋಡಿಗೆ ಸೋಲು

Theft Case: ಮನೆಯಿಂದ ಚಿನ್ನಾಭರಣ ಕಳವು

Theft Case: ಮನೆಯಿಂದ ಚಿನ್ನಾಭರಣ ಕಳವು

Manipal: ಗಾಂಜಾ ಸೇವನೆ: 6 ಮಂದಿ ವಶಕ್ಕೆ

Manipal: ಗಾಂಜಾ ಸೇವನೆ: 6 ಮಂದಿ ವಶಕ್ಕೆ

H. D. Kumaraswamy: ಸಂಸದನಾಗಿದ್ದಾಗಲೇ ನನಗೆ ಸಿಗದ ಪ್ರಜ್ವಲ್‌ ಈಗ ಸಿಗುತ್ತಾರಾ?; ಎಚ್‌ಡಿಕೆ

H. D. Kumaraswamy: ಸಂಸದನಾಗಿದ್ದಾಗಲೇ ನನಗೆ ಸಿಗದ ಪ್ರಜ್ವಲ್‌ ಈಗ ಸಿಗುತ್ತಾರಾ?; ಎಚ್‌ಡಿಕೆ

22

Politics: ಗೃಹ ಸಚಿವರು ಕೂಡಲೇ ರಾಜೀನಾಮೆ ಕೊಡಲಿ: ಅಶ್ವತ್ಥನಾರಾಯಣ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.