ಭಗವಾನ್‌ ಯೇಸುಕ್ರಿಸ್ತರ ಜನನದ ಹಬ್ಬ ಕ್ರಿಸ್ಮಸ್‌

Team Udayavani, Dec 25, 2019, 1:58 AM IST

Jesus-Christ-730

ಕ್ರೈಸ್ತರು ಆಚರಿಸುವ ಹಬ್ಬಗಳಲ್ಲಿ ಯೇಸು ಕ್ರಿಸ್ತರ ಜನನ ಮತ್ತು
ಪುನರುತ್ಥಾನದ ಹಬ್ಬಗಳು ಪ್ರಮುಖ. ಈ ಎರಡೂ ಹಬ್ಬಗಳನ್ನು ಜಗತ್ತಿನಾದ್ಯಂತದ ಕ್ರೈಸ್ತರು ಹೆಚ್ಚು ಶ್ರದ್ಧೆ ಮತ್ತು ಭಕ್ತಿಯಿಂದ ಆಚರಿಸುತ್ತಾರೆ. ಯೇಸು ಕ್ರಿಸ್ತರ ಜನನದ ಹಬ್ಬದ ಆಚರಣೆಯೇ ಕ್ರಿಸ್ಮಸ್‌. ಇದನ್ನು ಡಿ. 25 ರಂದು ಆಚರಿಸುತ್ತಾರೆ. ಯೇಸು ಕ್ರಿಸ್ತರ ಪುನರುತ್ಥಾನದ ಹಬ್ಬ ಈಸ್ಟರ್‌. ಇದನ್ನು ಸಾಮಾನ್ಯವಾಗಿ ಮಾರ್ಚ್‌ ಕೊನೆಯ ವಾರ ಅಥವಾ ಎಪ್ರಿಲ್‌ ಮೊದಲ ವಾರದಲ್ಲಿ ಆಚರಿಸಲಾಗುತ್ತಿದೆ. ಈ ಹಬ್ಬಕ್ಕೆ ನಿಗದಿತ ದಿನಾಂಕ ಇರುವುದಿಲ್ಲ. ಪ್ರತಿ ವರ್ಷ ಹದಿನೈದು ದಿನ ಆಚೀಚೆ ಆಗುತ್ತದೆ. ಆದರೆ, ರವಿವಾರ ದಿನವೇ ಈಸ್ಟರ್‌ ಆಚರಣೆ ನಡೆಯುತ್ತದೆ.

ಕ್ರಿಸ್ಮಸ್‌ ಹಬ್ಬವನ್ನು ಹೆಚ್ಚು ಅದ್ದೂರಿಯಾಗಿ ಆಚರಿಸುತ್ತಾರೆ. ಈ ಹಬ್ಬ ಬಂತೆಂದರೆ ಎಲ್ಲೆಲ್ಲೂ ಸಡಗರ ಸಂಭ್ರಮದ ವಾತಾವರಣ ಮನೆ ಮಾಡುತ್ತ‌¤ದೆ. ಹೊಸ ಉಡುಗೆ ತೊಡುಗೆಗಳ ಖರೀದಿ, ಕ್ರಿಸ್ಮಸ್‌ ಕೇಕ್‌ ಮತ್ತು ಇತರ ವಿವಿಧ ವಿಶೇಷ ತಿಂಡಿಗಳ (ಕುಸ್ವಾರ್‌) ತಯಾರಿ, ಗೋದಲಿ ನಿರ್ಮಾಣ, ಕ್ರಿಸ್‌ಮಸ್‌ ಟ್ರೀ, ಸಾಂತಾಕ್ಲೊಸ್‌ ಇತ್ಯಾದಿಗಳು ಈ ಹಬ್ಬದ ಬಾಹ್ಯ ಸಡಗರ, ಸಂಭ್ರಮದ ಸಂಕೇತ.

ಧಾರ್ಮಿಕ ಅಥವಾ ಆಧ್ಯಾತ್ಮಿಕ ಆಚರಣೆಯು ಕ್ರಿಸ್ಮಸ್‌ನ ಮತ್ತೂಂದು ಹಾಗೂ ಅತ್ಯಂತ ಮಹತ್ವದ ಭಾಗವೂ ಆಗಿದೆ. ಕ್ರೈಸ್ತ ಧರ್ಮಸಭೆ ಯೇಸುಕ್ರಿಸ್ತರ ಜನನದ ಹಬ್ಬ ಆಚರಣೆಗೆ 4 ವಾರಗಳ ಅಧ್ಯಾತ್ಮಿಕ ಸಿದ್ಧೆತೆಯನ್ನು ಮಾಡಿಕೊಳ್ಳುತ್ತಿದೆ. ಈ ಪೂರ್ವಭಾವಿ ಅಧ್ಯಾತ್ಮಿಕ ಸಿದ್ಧೆತೆಯ ಕಾಲವನ್ನು ‘ಆಡ್ವೆಂಟ್‌’ ಎಂದು ಕರೆಯುತ್ತಾರೆ.

ಲ್ಯಾಟಿನ್‌ ಭಾಷೆಯ ‘ಆದ್ವೆಂತುಸ್‌’ ಎಂಬ ಪದದಿಂದ ಇದು ಬಂದಿದೆ. ಅಂದರೆ ಆಗಮನ ಎಂದರ್ಥ. ಈ ಸಮಯದಲ್ಲಿ ಕ್ರೈಸ್ತರು ಯೇಸು ಕ್ರಿಸ್ತರ ಆಗಮನವನ್ನು ನಿರೀಕ್ಷಿಸುತ್ತ ಆದಕ್ಕಾಗಿ ಪ್ರಾರ್ಥನೆ ಸಲ್ಲಿಸಿ ಧ್ಯಾನ ಮಾಡಿ ಏಕಚಿತ್ತದಿಂದ ಸಿದ್ಧತೆಯನ್ನು ಮಾಡಿಕೊಳ್ಳುತ್ತಾರೆ.

‘ಯೇಸು ಕ್ರಿಸ್ತ ದೇವರ ಪುತ್ರ ಹಾಗೂ ಮಾನವ ಕುಲದ ಪಾಪ ವಿಮೋಚನೆಗಾಗಿ ಅವರನ್ನು ದೇವರೇ ಕಳುಹಿಸಿದರು. ಯೇಸು ಕ್ರಿಸ್ತರ ಆಗಮನದ ಬಗ್ಗೆ ದೇವರು ಪ್ರವಾದಿಗಳ ಮುಖಾಂತರ ಸುಮಾರು 600 ವರ್ಷಗಳ ಮೊದಲೇ ಪ್ರಕಟ ಪಡಿಸಿದ್ದರು’ ಎನ್ನುವುದು ಕ್ರೈಸ್ತರ ನಂಬಿಕೆ. ಈ ಹಿನ್ನೆಲೆಯಲ್ಲಿ ವಿಮೋಚಕರೊಬ್ಬರು ಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ಜನರು ಕಾಯುತ್ತಿದ್ದರು. ಅದರಂತೆ ಮರಿಯ ಎಂಬ ಯುವತಿಯ ಗರ್ಭದಲ್ಲಿ ಪವಿತ್ರಾತ್ಮನ ವರಗಳ ಕೃಪೆಯಿಂದ ಅವತರಿಸಿ ಯೇಸು ಜನಿಸಿದರು’ ಎಂಬ ಉಲ್ಲೇಖ ಕ್ರೈಸ್ತರ ಧರ್ಮ ಗ್ರಂಥ ಬೈಬಲ್‌ನಲ್ಲಿದೆ.

ಜನನದ ಹಿನ್ನೆಲೆ: ಇಸ್ರೇಲ್‌ ದೇಶದ ರಾಜಧಾನಿ ಜೆರುಸಲೆಂ ನಗರದ ದಕ್ಷಿಣ ಭಾಗದ ಪ್ಯಾಲೆಸ್ತೀನ್‌ನ ಬೆತ್ಲೆಸೇಮ್‌ ಯೇಸು ಕ್ರಿಸ್ತರ ಜನನ ಸ್ಥಳ. ಯೇಸು ಕ್ರಿಸ್ತರ ತಂದೆ ಜೋಸೆಫ್‌ ಅವರು ಜನಗಣತಿಯ ಸಂದರ್ಭದಲ್ಲಿ ತನ್ನ ಹೆಸರನ್ನು ನೋಂದಣಿ ಮಾಡಿಕೊಳ್ಳಲು ಬೆತ್ಲೆಹೇಮಿಗೆ ತುಂಬು ಗರ್ಭಿಣಿಯಾದ ಮಡದಿ ಮರಿಯಳ ಜತೆ ಹೋಗುತ್ತಾರೆ. ಅಲ್ಲಿ ಮರಿಯಳಿಗೆ ಹೆರಿಗೆಯ ಬೇನೆ ಕಾಣಿಸಿಕೊಳ್ಳುತ್ತದೆ. ಆದರೆ ಹೆರಿಗೆಗೆ ಜಾಗವಿರಲಿಲ್ಲ, ಜನಗಣತಿಗಾಗಿ ಬಂದ ಜನರಿಂದ ಬೆತ್ಲೆಹೇಮ್‌ ತುಂಬಿತ್ತು. ಬಂದವರೆಲ್ಲ ತಮ್ಮ ಬಂಧು ಬಾಂಧವರ, ಮಿತ್ರರ ಮನೆಗಳಲ್ಲಿ ಆಶ್ರಯ ಪಡೆದಿದ್ದರು.

ಅತಿಥಿಗಳಿದ್ದ ಛತ್ರಗಳು ಭರ್ತಿಯಾಗಿದ್ದವು. ಜೋಸೆಫ್‌ ಅವರಿಗೆ ಹೇಳಿ ಕೇಳಿ ಆ ಊರಲ್ಲಿ ಯಾರೂ ನೆಂಟರಿರಲಿಲ್ಲ. ಗೆಳೆಯರಂತೂ ಇರಲೇ ಇಲ್ಲ. ಬೇರೆ ದಾರಿಯಿಲ್ಲದೆ ಜೋಸೆಫ್‌ ಗರ್ಭಿಣಿ ಮರಿಯಳ ಜತೆ ಜಾನುವಾರುಗಳ ಹಟ್ಟಿಯಲ್ಲಿ ಆಶ್ರಯ ಪಡೆಯಬೇಕಾಯಿತು.
ಮರಿಯ ಅವರು ಹಟ್ಟಿಯಲ್ಲಿಯೇ (ಗೋದಲಿ) ಯೇಸು ಕ್ರಿಸ್ತರಿಗೆ ಜನ್ಮ ನೀಡಿದರು. ಹುಲ್ಲಿನ ಹಾಸಿಗೆ ಯೇಸು ಕಂದನ ಮೃದುವಾದ ದೇಹಕ್ಕೆ ಬೆಚ್ಚನೆಯ ರಕ್ಷಣೆಯನ್ನು ನೀಡಿತು. ಹರುಕು ಮುರುಕು ಚಿಂದಿ ಬಟ್ಟೆಯೇ ಬಾಲ ಯೇಸುವಿನ ಮೈ ಮುಚ್ಚುವ ದಿವ್ಯ ವಸ್ತ್ರವಾಯಿತು. ಮುದ್ದು ಮಗುವಿನ ಮುಖದ ದಿವ್ಯಕಳೆಯೇ ಹಟ್ಟಿಯ ಗೋದಲಿಯಲ್ಲಿ ಬೆಳಕಾಯಿತು ಎಂಬುದಾಗಿ ಬೈಬಲ್‌ ತಿಳಿಸುತ್ತದೆ.

ಜಾನುವಾರುಗಳ ಹಟ್ಟಿಯಲ್ಲಿ ಯೇಸು ಕ್ರಿಸ್ತರು ಜನಿಸಿದರು ಎಂಬುದರ ಸಂಕೇತವಾಗಿ ಕ್ರಿಸ್ಮಸ್‌ ಸಂದರ್ಭದಲ್ಲಿ ಕ್ರೈಸ್ತರು ತಮ್ಮ ಮನೆಗಳಲ್ಲಿ ಮತ್ತು ಚರ್ಚ್‌ಗಳಲ್ಲಿ ಗೋದಲಿಯನ್ನು ನಿರ್ಮಿಸುತ್ತಾರೆ. ಗೋದಲಿಗಳಿಗೆ ಗ್ರಾಮೀಣ ವಾತಾವರಣದ ಹಿನ್ನೆಲೆಯನ್ನು ಒದಗಿಸಿ ಆಕರ್ಷಕವಾಗಿ ರಚನೆ ಮಾಡುತ್ತಾರೆ. ಬಹುತೇಕ ಚರ್ಚ್‌ಗಳಲ್ಲಿ ಗೋದಲಿ ನಿರ್ಮಾಣಕ್ಕೆ ಸಂಬಂಧಿಸಿ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನವನ್ನು ವಿತರಿಸುತ್ತಾರೆ.

ಸಂಭ್ರಮಕ್ಕೆ ಕಳೆ ನೀಡುವ ಇತರ ಸಂಗತಿಗಳು ಕ್ರಿಸ್ಮಸ್‌ ಸಂಭ್ರಮದಲ್ಲಿ ಹಲವು ವಿಷಯಗಳು, ಕ್ರಿಸ್ಮಸ್‌ನ ಸಡಗರವನ್ನು ಇಮ್ಮಡಿಗೊಳಿಸುತ್ತವೆ. ಗೋದಲಿಯ ಜತೆಗೆ ಕ್ರಿಸ್ಮಸ್‌ ಶುಭಾಶಯ ವಿನಿಮಯ ಮಾಡಿಕೊಳ್ಳಲು ಕ್ರಿಸ್ಮಸ್‌ ಗ್ರೀಟಿಂಗ್‌ ಕಾರ್ಡುಗಳು, ಸಂತಸವನ್ನು ಪರರಲ್ಲಿ ಹಂಚಿಕೊಳ್ಳಲು ಕ್ರಿಸ್ಮಸ್‌ ವಿಶೇಷ ತಿಂಡಿ ತಿನಿಸುಗಳಾದ ಕುಸ್ವಾರ್‌ ಹಂಚುವಿಕೆ, ಎಲ್ಲೆಲ್ಲೂ ಮಿನುಗುವ ನಕ್ಷತ್ರಗಳ ಸಾಲು, ಕ್ರಿಸ್ಮಸ್‌ ಟ್ರೀ ಹಾಗೂ ಪ್ರತಿಯೊಂದು ಕ್ರಿಸ್ಮಸ್‌ ಕಾರ್ಯಕ್ರಮದಲ್ಲಿ ಆನಂದದಿಂದ ಹೆಜ್ಜೆ ಹಾಕುತ್ತಾ, ಎಲ್ಲರನ್ನು ಪ್ರತ್ಯೇಕವಾಗಿ ಪುಟಾಣಿಗಳನ್ನು ಮನರಂಜಿಸುವ, ‘ಸಾಂತಾಕ್ಲೊಸ್‌’ – ಇವೆಲ್ಲವೂ ಕಣ್ಣಿಗೆ ಹಬ್ಬವನ್ನು ನೀಡುತ್ತವೆ.

ಆಚರಣೆ ಹೇಗೆ?
ಯೇಸು ಕ್ರಿಸ್ತರು ಡಿ. 25 ರಂದು ಜನಿಸಿದರು ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಕ್ರಿಸ್ಮಸ್‌ ಹಬ್ಬದ ಮುಂಚಿನ ದಿನ ಡಿ. 24 ರಂದು ರಾತ್ರಿ ಚರ್ಚ್‌ಗಳಲ್ಲಿ ವಿಶೇಷ ಸಂಭ್ರಮದ ಬಲಿ ಪೂಜೆ ನಡೆಯುತ್ತದೆ. ಬಳಿಕ ಹಬ್ಬದ ಶುಭಾಶಯ ವಿನಿಮಯ, ಸಾಂತಾಕ್ಲೊಸ್‌ ವೇಷಧಾರಿಯಿಂದ ಮನರಂಜನೆ, ಸಂಘ ಸಂಸ್ಥೆಗಳಿಂದ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. ಡಿ. 25 ರಂದು ಚರ್ಚ್‌ಗಳಲ್ಲಿ ಬಲಿ ಪೂಜೆ ಹಾಗೂ ಬಳಿಕ ಮಧ್ಯಾಹ್ನ ಹಬ್ಬದ ಸವಿಯೂಟ ಇರುತ್ತದೆ.

ಚರ್ಚ್‌ಗಳಿಗೆ ಬೆಳಕಿನ ರಂಗು
ಕ್ರಿಸ್ಮಸ್‌ ಸಂದರ್ಭದಲ್ಲಿ ಚರ್ಚ್‌ ಮತ್ತು ಕ್ರೈಸ್ತ ಪ್ರಾರ್ಥನಾ ಮಂದಿರ ಕಟ್ಟಡಗಳನ್ನು ಹೊಸತಾಗಿ ಬಣ್ಣ ಬಳಿದು ಆಕರ್ಷಕ ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗುತ್ತದೆ. ರಾತ್ರಿ ವೇಳೆ ಬೆಳಕಿನಿಂದ ಜಗ ಮಗಿಸುತ್ತಿರುತ್ತವೆ. ಕ್ರಿಸ್ಮಸ್‌ ತಿಂಡಿಗಳ ವ್ಯಾಪಾರ ಮಳಿಗೆಗಳು ಕೂಡ ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತವೆ. ಕೆಲವೊಂದು ಹೊಟೇಲ್‌ಗ‌ಳನ್ನೂ ವಿದ್ಯುತ್‌ ದೀಪಗಳಿಂದ ಅಲಂಕರಿಸಿ ವಿಶೇಷ ತಿಂಡಿ ತಿನಿಸುಗಳನ್ನು ಮತ್ತು ಆಹಾರಗಳನ್ನು ಉಣ ಬಡಿಸುವ ವ್ಯವಸ್ಥೆ ಮಾಡಲಾಗುತ್ತದೆ.

— ಹಿಲರಿ ಕ್ರಾಸ್ತಾ

ಟಾಪ್ ನ್ಯೂಸ್

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

16

Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್‌ ಮೈಂಡ್; ಗೋಲ್ಡಿ ಬ್ರಾರ್‌ ಶೂಟೌಟ್ – ವರದಿ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.