ಢಾಣಕಶಿರೂರಲ್ಲಿ ಕೋವಿಡ್ 19 ಢಣ ಢಣ


Team Udayavani, May 7, 2020, 2:06 PM IST

ಢಾಣಕಶಿರೂರಲ್ಲಿ ಕೋವಿಡ್ 19 ಢಣ ಢಣ

ಬಾಗಲಕೋಟೆ: ಕೇವಲ 250 ಕುಟುಂಬಗಳಿರುವ ಗ್ರಾಮ ಢಾಣಕಶಿರೂರ. ರಾಜ್ಯದಲ್ಲೇ ಅತಿ ಹೆಚ್ಚು ಜನ ಕೋವಿಡ್ 19  ಸೋಂಕಿತರು ಈ ಗ್ರಾಮದಲ್ಲಿ ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಗ್ರಾಮದಲ್ಲೇ ಬರೋಬ್ಬರಿ 13 ಜನರಿಗೆ ಈ ಮಹಾಮಾರಿ ವ್ಯಾಪಿಸಿಕೊಂಡಿದೆ. ಬುಧವಾರ ಒಂದೇ ದಿನ ಈ ಹಳ್ಳಿಯಲ್ಲಿ 12 ಜನರಿಗೆ ಸೋಂಕು ಖಚಿತಪಟ್ಟಿದೆ.

ಸೀಮಂತ ಕಾರ್ಯ ತಂದ ಸಂಕಷ್ಟ!: ಗ್ರಾಮಕ್ಕೆ ಈ ಸೋಂಕು ಹೇಗೆ ಬಂತು ಎಂಬುದು ಇನ್ನೂ ನಿಗೂಢವಾಗಿದೆ. ಏ. 27ರಂದು ಚಿಕ್ಕ ಸೀಮಂತ ಕಾರ್ಯ ಮಾಡಿಕೊಂಡು, ಮನೆಯ ಅಕ್ಕ-ಪಕ್ಕದ ಮನೆಯವರಿಂದ ಉಡಿ ತುಂಬಿಕೊಂಡು, ತವರು ಮನೆ ಸೇರಿದ್ದ 23 ವರ್ಷದ ಆ ಮಹಿಳೆಗೆ, ಜ್ವರ ಕಾಣಿಸಿಕೊಂಡಿತ್ತು. ರೋಣ ಪಟ್ಟಣದ ವಾರ್ಡ್‌ನಂ.20ರ ಕೃಷ್ಣಾಪುರ ಏರಿಯಾದಲ್ಲಿರುವ ತವರು ಮನೆಯಿಂದ ಆಸ್ಪತ್ರೆಗೆ ಹೋಗಿದ್ದಳು. ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಿಂದ ಮಹಿಳೆಯ ಗಂಟಲು ದ್ರವ ಮಾದರಿ ಕಳುಹಿಸಿದ್ದು, ಕೋವಿಡ್ 19   ಖಚಿತಪಟ್ಟಿತ್ತು.

ಹುಬ್ಬಳ್ಳಿಯಲ್ಲಿ ತಮ್ಮೂರ ಸೊಸೆಗೆ ಕೋವಿಡ್ 19  ಇದೆ ಎಂಬುದು ಗೊತ್ತಾಗಿದ್ದೇ ತಡ, ಇತ್ತ ಢಾಣಕಶಿರೂರ ಗ್ರಾಮಸ್ಥರ ಎದೆ ಢವ ಢವ ಎಂದು ಹೊಡೆದುಕೊಳ್ಳುತ್ತಿತ್ತು. ಆ ಮಹಿಳೆಯ ಪತಿ, ಅತ್ತೆ-ಮಾವ ಸಹಿತ ಒಟ್ಟು 9 ಜನ ಸೇರಿದಂತೆ ಅವರೊಂದಿಗೆ ಸಂಪರ್ಕಕ್ಕೆ ಬಂದಿದ್ದ 112 ಜನರ ಗಂಟಲು ಮಾದರಿ ಪಡೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಮಹಿಳೆಯ ಮನೆಯ ಎಲ್ಲ ಸದಸ್ಯರ ವರದಿಯೂ ನೆಗೆಟಿವ್‌ ಬಂದಿವೆ. ವಿಚಿತ್ರವೆಂದರೆ, ಆ ಮಹಿಳೆಗೆ ಉಡಿ ತುಂಬಿ-ಸೀಮಂತ ಕಾರ್ಯ ನಡೆಸಿಕೊಟ್ಟಿದ್ದ ಪಕ್ಕದ ಮನೆಯ ಮೂರು ಕುಟುಂಬದ 12 ಜನರಿಗೆ ಸೋಂಕು ಖಚಿತಪಟ್ಟಿದೆ.

ಹೇಗೆ ಬಂತು?: ಮೊದಲು ಮಹಿಳೆಗೆ ಸೋಂಕು ತಗುಲಿತ್ತೇ ಇಲ್ಲವೇ ಬಾಗಲಕೋಟೆಯ ವೃದ್ಧನ ಪ್ರಕರಣದಲ್ಲಾದಂತೆ ಬುಧವಾರ ಖಚಿತಪಟ್ಟ 12 ಜನರಲ್ಲೇ ಯಾರಿಗಾದರೂ ಸೋಂಕು ಮೊದಲೇ ಇತ್ತಾ ಎಂಬುದು ನಿಗೂಢವಾಗಿದೆ. ಗರ್ಭಿಣಿಯ ತವರು ಮನೆ ಹಾಗೂ ಗಂಡನ ಮನೆಯವರಲ್ಲಿ ಸೋಂಕು ಕಾಣಿಸಿಕೊಂಡಿಲ್ಲ. ಹಾಗಾದರೆ, ಮಹಿಳೆಗೆ ಹೇಗೆ ಬಂತು ಎಂಬುದು ಈಗ ಇಡೀ ಗ್ರಾಮಸ್ಥರಿಗೆ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ.

ರಾಜ್ಯದ ಮೊದಲ ಗ್ರಾಮ: ಕೋವಿಡ್ 19  ಸೋಂಕಿತರು ಅತಿಹೆಚ್ಚು ಸಂಖ್ಯೆಯಲ್ಲಿ ಪತ್ತೆಯಾದ ಹಳ್ಳಿಗಳಲ್ಲಿ ಢಾಣಕಶಿರೂರ ಗ್ರಾಮ ಮೊದಲ ಸ್ಥಾನದಲ್ಲಿದೆ. ನಗರ-ಪಟ್ಟಣಗಳಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಆದರೆ, ಗ್ರಾಮೀಣ ಭಾಗದಲ್ಲಿ ಈ ಮಹಾಮಾರಿ ಪತ್ತೆಯಾಗಿರಲಿಲ್ಲ. ಬಾಗಲಕೋಟೆ ಜಿಲ್ಲೆಯಲ್ಲಂತೂ ಹಳ್ಳಿಗಳಲ್ಲಿ ಕಂಡು ಬಂದಿರಲಿಲ್ಲ. ಮುಧೋಳದ ಮುಗಳಖೋಡದ ಒಬ್ಬ ಯುವಕನಿಗೆ ಸೋಂಕು ಪತ್ತೆಯಾಗಿತ್ತಾದರೂ ಆತ ಮುಧೋಳದ ಮದರಸಾದಲ್ಲಿ ಗುಜರಾತ ಧರ್ಮ ಪ್ರಚಾರಕನೊಂದಿಗೆ ಸಂಪರ್ಕದಲ್ಲಿದ್ದಾಗ ಪತ್ತೆಯಾಗಿತ್ತು.

ಢಾಣಕಶಿರೂರದಲ್ಲಿ ಬುಧವಾರ 12 ಜನರಿಗೆ ಸೋಂಕು ಪತ್ತೆಯಾಗಿದೆ. ಮೇ 3ರಂದು ಪಿ-607 ಮಹಿಳೆಯಿಂದ ಇದು ವಿಸ್ತರಣೆಯಾಗಿದ್ದು, ಇಡೀ ಗ್ರಾಮದಲ್ಲಿ ಸೀಲ್‌ಡೌನ್‌ ಮಾಡಿ, ಜನರಿಗೆ ಅಗತ್ಯವಸ್ತುಗಳನ್ನು ಮನೆ ಮನೆಗೆ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಗ್ರಾಮಕ್ಕೆ ಸೋಂಕು ಹೇಗೆ ಬಂತು ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಕ್ಯಾ.ಡಾ| ರಾಜೇಂದ್ರ, ಜಿಲ್ಲಾಧಿಕಾರಿ

ಢಾಣಕಶಿರೂರದಲ್ಲಿ 13 ಹಾಗೂಬಾದಾಮಿ ಪಟ್ಟಣದ ಚಾಲುಕ್ಯ ನಗರದಲ್ಲಿ 1 ಸೇರಿ ಒಟ್ಟು 14 ಜನರಿಗೆ ಸೋಂಕು ಬಂದಿದೆ. ಹೀಗಾಗಿ ಇಡೀ ಕ್ಷೇತ್ರದ ನಗರ-ಪಟ್ಟಣ, ಹಳ್ಳಿಗಳಲ್ಲಿ ಕಟ್ಟೆಚ್ಚರ ವಹಿಸಲು ಕ್ಷೇತ್ರದ ಶಾಸಕರೂ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಹಿರಿಯ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ನಿರ್ದೇಶನ ನೀಡಿದ್ದಾರೆ. ಢಾಣಕಶಿರೂರ ಜನರಿಗೆ ಅಗತ್ಯ ವಸ್ತುಗಳ ತೊಂದರೆ ಆಗದಂತೆ ಅಕ್ಕಿ, ಗೋಧಿ ಹಿಟ್ಟು, ಅಡುಗೆ ಎಣ್ಣೆ, ಈರುಳ್ಳಿ, ರವೆ, ಚಹಾಪುಡಿ ಸಹಿತ ಅಗತ್ಯ ವಸ್ತುಗಳನ್ನು 300 ಕುಟುಂಬಗಳಿಗೆ ಆಗುವಷ್ಟು ಪೂರೈಸಲಾಗಿದೆ. –ಹೊಳೆಬಸು ಶೆಟ್ಟರ, ಸಿದ್ದರಾಮಯ್ಯ ಅಭಿಮಾನಿ ಬಳಗದ ಮುಖಂಡ

 

-ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

ಪಕ್ಷ ವಿರೋಧಿ ಚಟುವಟಿಕೆ: 4 ಮಂದಿ ಬಿಜೆಪಿ ಪದಾಧಿಕಾರಿಗಳಿಗೆ ಶಿಸ್ತು ಕ್ರಮದ ನೋಟಿಸ್

Udupi: ಪಕ್ಷ ವಿರೋಧಿ ಚಟುವಟಿಕೆ… 4 ಮಂದಿ ಬಿಜೆಪಿ ಪದಾಧಿಕಾರಿಗಳಿಗೆ ಶಿಸ್ತು ಕ್ರಮದ ನೋಟಿಸ್

3-uppunda

Uppunda: ಆಕಸ್ಮಿಕವಾಗಿ ನದಿಗೆ ಕಾಲು ಜಾರಿ ಬಿದ್ದು ವ್ಯಕ್ತಿ ಮೃತ್ಯು

2-shivamogga

Shivamogga: ಸಮಾಜ ಕಲ್ಯಾಣ ಇಲಾಖೆ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ ಆರಗ

17

Road Mishap: ಅಮೆರಿಕದಲ್ಲಿ ರಸ್ತೆ ಅಪಘಾತ; ತೆಲಂಗಾಣ ಮೂಲದ ಯುವತಿ ಸ್ಥಳದಲ್ಲೇ ಸಾವು

Panaji: ಯಾವುದೇ ಆಂಗ್ಲ ಪ್ರಾಥಮಿಕ ಶಾಲೆಗೆ ಅವಕಾಶ ನೀಡಬಾರದು… ಕೊಂಕಣಿ ಭಾಷಾ ಮಂಡಳಿ ಆಗ್ರಹ

Panaji: ಯಾವುದೇ ಆಂಗ್ಲ ಪ್ರಾಥಮಿಕ ಶಾಲೆಗೆ ಅವಕಾಶ ನೀಡಬಾರದು… ಕೊಂಕಣಿ ಭಾಷಾ ಮಂಡಳಿ ಆಗ್ರಹ

1-kalburgi

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣ;ನಾಗೇಂದ್ರ ವಜಾಕ್ಕೆ ಬಿಜೆಪಿ ಆಗ್ರಹ

Sringeri: ದೇವರ ದರ್ಶನಕ್ಕೆಂದು ಬೆಂಗಳೂರಿನಿಂದ ಬಂದಿದ್ದ ಪೊಲೀಸ್ ಪೇದೆ ಮೇಲೆ ಹಲ್ಲೆ

Sringeri: ದೇವರ ದರ್ಶನಕ್ಕೆಂದು ಬೆಂಗಳೂರಿನಿಂದ ಬಂದಿದ್ದ ಪೊಲೀಸ್ ಪೇದೆ ಮೇಲೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kರಾಷ್ಟ್ರಪತಿ ಆಳ್ವಿಕೆಗೆ ಅವಕಾಶ ಮಾಡಿಕೊಡಬೇಡಿ : ಮಾಜಿ ಡಿಸಿಎಂ ಈಶ್ವರಪ್ಪ

ರಾಷ್ಟ್ರಪತಿ ಆಳ್ವಿಕೆಗೆ ಅವಕಾಶ ಮಾಡಿಕೊಡಬೇಡಿ : ಮಾಜಿ ಡಿಸಿಎಂ ಈಶ್ವರಪ್ಪ

Rayanna Brigade ಪುನಾರಂಭಕ್ಕೆ ಚಿಂತನೆ; ಕೆ.ಎಸ್‌. ಈಶ್ವರಪ್ಪ

Rayanna Brigade ಪುನಾರಂಭಕ್ಕೆ ಚಿಂತನೆ; ಕೆ.ಎಸ್‌. ಈಶ್ವರಪ್ಪ

Jamakhandi ಐಬಿಯಲ್ಲಿ ಪಾರ್ಟಿ: ಐವರು ಅಧಿಕಾರಿಗಳ ಅಮಾನತು

Jamakhandi ಐಬಿಯಲ್ಲಿ ಪಾರ್ಟಿ: ಐವರು ಅಧಿಕಾರಿಗಳ ಅಮಾನತು

Sheep Farming: ಸಹಕಾರ ರಂಗಕ್ಕೂ ಸೈ… ಕೃಷಿ ರಂಗಕ್ಕೂ ಜೈ!

Sheep Farming: ಸಹಕಾರ ರಂಗಕ್ಕೂ ಸೈ… ಕೃಷಿ ರಂಗಕ್ಕೂ ಜೈ!

`ಹವಾ ಮೆಂಟೇನ್’ಗೆ ನಕಲಿ ಐಬಿ ವೇಷ ; ಪೊಲೀಸರ ಅತಿಥಿಯಾದ ಯುವಕ

Fake ID Card; `ಹವಾ ಮೆಂಟೇನ್’ಗೆ ನಕಲಿ ಐಬಿ ವೇಷ ; ಪೊಲೀಸರ ಅತಿಥಿಯಾದ ಯುವಕ

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

ಪಕ್ಷ ವಿರೋಧಿ ಚಟುವಟಿಕೆ: 4 ಮಂದಿ ಬಿಜೆಪಿ ಪದಾಧಿಕಾರಿಗಳಿಗೆ ಶಿಸ್ತು ಕ್ರಮದ ನೋಟಿಸ್

Udupi: ಪಕ್ಷ ವಿರೋಧಿ ಚಟುವಟಿಕೆ… 4 ಮಂದಿ ಬಿಜೆಪಿ ಪದಾಧಿಕಾರಿಗಳಿಗೆ ಶಿಸ್ತು ಕ್ರಮದ ನೋಟಿಸ್

3-uppunda

Uppunda: ಆಕಸ್ಮಿಕವಾಗಿ ನದಿಗೆ ಕಾಲು ಜಾರಿ ಬಿದ್ದು ವ್ಯಕ್ತಿ ಮೃತ್ಯು

18

ಅಪರಾಧ ಪ್ರಕರಣ ಬೇಧಿಸುವಲ್ಲಿ ಫಾರೆನ್ಸಿಕ್ ಸೈನ್ಸ್ ಪಾತ್ರ ಪ್ರಮುಖ: ಡಾ.ವಿನೋದ್ ನಾಯಕ

2-shivamogga

Shivamogga: ಸಮಾಜ ಕಲ್ಯಾಣ ಇಲಾಖೆ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ ಆರಗ

17

Road Mishap: ಅಮೆರಿಕದಲ್ಲಿ ರಸ್ತೆ ಅಪಘಾತ; ತೆಲಂಗಾಣ ಮೂಲದ ಯುವತಿ ಸ್ಥಳದಲ್ಲೇ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.