Udayavni Special

ಮಾನವೀಯತೆಯೇ ಧರ್ಮವಾಗಲಿ

Team Udayavani, Nov 17, 2019, 5:12 AM IST

nn-29

ತೀರ್ಪು ಬಂದ 2ನೇ ದಿನವೇ ಇಸ್ಲಾಂ ಸಮುದಾಯಕ್ಕೆ ಆದರ್ಶಗಳನ್ನು ರೂಪಿಸಿಕೊಟ್ಟ ಮಹಮ್ಮದ್‌ ಪೈಗಂಬರ್‌ರವರ ಜನ್ಮ ದಿನವನ್ನು ಇಡೀ ದೇಶ ಅಭಿಮಾನಪೂರ್ವಕವಾಗಿ ಆಚರಿಸಿದರೆ. ಅತ್ತ ಹಿಂದೂ ಧರ್ಮಕ್ಕೆ ಆದರ್ಶಗಳನ್ನು ಹೇಳಿಕೊಟ್ಟ ಶ್ರೀರಾಮನ ಕುರಿತಾದ ಸಂಭ್ರಮವನ್ನು, ಅಷ್ಟೆ ಸೌಹಾರ್ದ ಮನೋಭಾವದಿಂದ ಸಂಭ್ರಮಿಸಲಾಯಿತು.

ನಮ್ಮ ಧರ್ಮ ಯಾವುದೆಂದರೆ- ಮಾನವಧರ್ಮ ಎನ್ನುವಂತಾಗಬೇಕಿದೆ. ಎಡ ಹಾಗೂ ಬಲ ಸಿದ್ಧಾಂತಗಳಾಚೆಗೆ ನಿನ್ನ ಸಿದ್ಧಾಂತ ಯಾವುದೆಂದರೆ-ಅದು ನನ್ನ ದೇಶದ ಸಂವಿಧಾನ ಹೇಳಿಕೊಡುವ ಸಿದ್ಧಾಂತ ಎನ್ನುವಂಥ ಗುಣ ನಮ್ಮದಾಗಬೇಕಿದೆ!

ನಮ್ಮ ಪೀಳಿಗೆಯ ಸರಿ ಸುಮಾರು ಅರ್ಧಕ್ಕಿಂತ ಹೆಚ್ಚು ಜನರು ರಾಜಕೀಯ ದ್ವೇಷದಾಟದಲ್ಲಿ ಕಿರುಕುಳವನ್ನು ಅನುಭವಿಸುತ್ತಲೇ ಬಂದವರು. ಈ “ಕಿರುಕುಳದ ರಾಜಕೀಯ ಸಿದ್ಧಾಂತ’ವು, ಜಾತಿಯ ಕುಚೇಷ್ಟೆಗಳಿಗೆ, ಧಾರ್ಮಿಕ ದಳ್ಳುರಿಗೆ ಸೇರಿದ್ದು. ಇವೆಲ್ಲವೂ ನಮ್ಮಲ್ಲೇ ಹಲವರನ್ನು ಬಲಿಪಡೆದುಕೊಂಡಾಗಿದೆ. ಈ ವ್ಯವಸ್ಥೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರೆಲ್ಲ ರಾಜಕೀಯ ದಾಸರಾಗಿ ಹೋದರು. ಹಾಗಾಗಿ ಚಿಂತನಶೀಲ, ಚೈತನ್ಯಶೀಲ, ಸಹನಾಶೀಲ ರಾಜಕೀಯ ಎನ್ನುವುದು ಇಂದಿನ ಅನಿವಾರ್ಯ ಗಳಲ್ಲೊಂದು.

ಈ ರಾಜಕಾರಣದ ಕುತಂತ್ರ ಮನೋಭಾವವನ್ನು ಕೋರ್ಟಿನ ಕಟಕಟೆಯಲ್ಲಿ ತಂದು ನಿಲ್ಲಿಸಿದರೆ ನ್ಯಾಯ ದೇವತೆಯೂ ಕೂಡ ಒಂದು ಕ್ಷಣ ಆ ಕುತಂತ್ರದ ಆಳವನ್ನು ಅರಿಯಲಾರಳೇನೋ ಅನಿಸುತ್ತದೆ! ಆದರೆ ಈ ಬಾರಿ ಹಾಗಾಗಲಿಲ್ಲ, ಕಾರಣ ಹಲವು ವರುಷಗಳ ರಾಜಕೀಯ ಕುತಂತ್ರಕ್ಕೆ ನ್ಯಾಯದೇವತೆ ಬ್ರೇಕ್‌ ನೀಡಿದ್ದಾಳೆ. ಗಮನಾರ್ಹ ಸಂಗತಿಯೆಂದರೆ, ಅಯೋಧ್ಯೆ ತೀರ್ಪು ಹೊರಬಿದ್ದ ನಂತರದ ದಿನಗಳಲ್ಲಿ ನಮ್ಮೂರಿನ ಬೀದಿಗಳಲ್ಲಿ ನಾನು ಕಂಡದ್ದು, ಶಾಂತಿ, ಸೌಹಾರ್ದತೆ ಹಾಗೂ ಸಾಮರಸ್ಯದ ನಿರಾಳ ಚಿತ್ರಣಗಳನ್ನು ಮಾತ್ರ!

ವಸುದೈವ ಕುಟುಂಬಕಂ: ರಾಮನೂ ನಮ್ಮವನೇ ರಹೀಮನೂ ನಮ್ಮವನೇ ಎನ್ನುವ ರೀತಿಯಲ್ಲಿ ಇಡೀ ದೇಶ ಒಂದು ಕುಟುಂಬವಾಗಿ ತನ್ನ ಏಕತೆಯ ನಿಲುವನ್ನು ಈ ದಿನಗಳಲ್ಲಿ ಪ್ರದರ್ಶಿಸಿದೆ. ಈ ಏಕತೆಗೆ ರಾಜಕೀಯದ ಕೆಟ್ಟ ದೃಷ್ಟಿ ತಾಗದಿರಲಿ.

ಹಸಿರು ಕೇಸರಿ: ತೀರ್ಪು ಬಂದ ಎರಡನೇ ದಿನವೇ ಇಸ್ಲಾಂ ಸಮುದಾಯಕ್ಕೆ ಆದರ್ಶಗಳನ್ನು ರೂಪಿಸಿಕೊಟ್ಟ ಮಹಮ್ಮದ್‌ ಪೈಗಂಬರ್‌ರವರ ಜನ್ಮ ದಿನವನ್ನು ಇಡೀ ದೇಶ ಅಭಿಮಾನಪೂರ್ವಕವಾಗಿ ಆಚರಿಸಿದರೆ ಅತ್ತ ಹಿಂದೂ ಧರ್ಮಕ್ಕೆ ಆದರ್ಶಗಳನ್ನು ಹೇಳಿಕೊಟ್ಟ ಶ್ರೀರಾಮನ ಕುರಿತಾದ ಸಂಭ್ರಮವನ್ನು, ಅಷ್ಟೆ ಸೌಹಾರ್ದ ಮನೋ ಭಾವದಿಂದ ಸಂಭ್ರಮಿಸಲಾಯಿತು. ರ್ಯಾಲಿಯಲ್ಲಿ ತೊಡಗಿದ್ದ ಇಬ್ಬರು ಯುವಕರ ಬೈಕ್‌ಗಳಿಗೆ ಕಟ್ಟಿದ್ದ ಕೇಸರಿ, ಹಸಿರು ಧ್ವಜಗಳನ್ನು ನೋಡಿ ಮೈ ರೋಮಾಂಚನವೆನಿಸಿತು. ಇದ್ಯಾವುದನ್ನೂ ಸಹಿಸಲಾಗದ ದುಬುìದ್ಧಿಗಳನ್ನು ಪೈಗಂಬರ್‌-ಶ್ರೀರಾಮನ ಆದರ್ಶಗಳು ಆವರಿಸಿಕೊಂಡು, ಮನುಕುಲವೇ ಧರ್ಮ ಎಂಬುದು ಅರಿವಾಗಲಿ.

ಯಾವ ಧರ್ಮ, ಯಾವ ಸಿದ್ಧಾಂತ?: ನಮ್ಮ ಮನೆ ಹಾಗೂ ನಮ್ಮ ಮನಸ್ಸಿನಿಂದಾಚೆ ಬಂದು ನಿಂತಾಗ ನಮ್ಮ ಧರ್ಮ ಯಾವುದೆಂದರೆ- ಮಾನವಧರ್ಮ ಎನ್ನುವಂತಾ ಗಬೇಕಿದೆ. ಎಡ ಹಾಗೂ ಬಲ ಸಿದ್ಧಾಂತಗಳಾಚೆಗೆ ನಿನ್ನ ಸಿದ್ಧಾಂತ ಯಾವುದೆಂದರೆ-ಅದು ನನ್ನ ದೇಶದ ಸಂವಿಧಾನ ಹೇಳಿಕೊಡುವ ಸಿದ್ಧಾಂತ ಎನ್ನುವಂತಾಗಬೇಕಿದೆ. “ಧರ್ಮ’ ಎಂಬುದು ಮತಬೇಟೆಯ ಪ್ರಮುಖ ಅಸ್ತ್ರಗಳಲ್ಲೊಂದು. ಸವೊìಚ್ಚ ನ್ಯಾಯಾಲಯದ ಒಂದು ತೀರ್ಪು ಈ ದೇಶವನ್ನು ಅಂತಹ ಕಪಿಮುಷ್ಟಿಯಿಂದ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಮುಂಬರುವ ರಾಜಕೀಯ ಪಕ್ಷಗಳಿಗೆ ಮತ್ತು ನಾಯಕರುಗಳಿಗೆ ಮಂದಿರ, ಮಸೀದಿ, ಚರ್ಚುಗಳನ್ನು ಹೊರತುಪಡಿಸಿ ಓಟ್‌ ಕೇಳಲು ಉಳಿಯಬೇಕಾದ ವಿಷಯ ಯಾವುದಯ್ಯ ಎಂದರೆ ರಾಷ್ಟ್ರದ ಅಭಿವೃದ್ಧಿ ಮಾತ್ರ ಎನ್ನುವಂತಾಗಬೇಕು.

ನಮ್ಮೆಲ್ಲರ ದುರ್ದೈವ ನೋಡಿ, ನಮಗೆ ಸುಂದರವಾದ ಬದುಕು ರೂಪಿಸಿಕೊಟ್ಟು, ದಾಸ್ಯದಿಂದಾಚೆ ಕರೆತಂದು ಸ್ವತಂತ್ರವಾಗಿ ಜೀವಿಸಲು ಅನುವು ಮಾಡಿಕೊಟ್ಟ ಹೋರಾಟ ಗಾರರನ್ನೂ ಕೂಡ ಈ ರಾಜಕೀಯ ಸಿದ್ಧಾಂತಗಳು ಬೀದಿಗೆ ತಂದು ನಿಲ್ಲಿಸುತ್ತಿವೆ. ಆ ಕ್ಷಣಕ್ಕೆ ಅವರಿಗೆ ತೋಚಿದ ಹಾಗೆ ಅವರೆಲ್ಲ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದಿದ್ದಾರೆ. ಆದರೆ ಇವತ್ತಿನ ನಮ್ಮ ನಮ್ಮ ಆಲೋಚನೆಗಳಿಗೆ ಅವರ ಹೋರಾಟದ ಪರಿ ಸರಿ ಎನಿಸುತ್ತಿಲ್ಲ ಎಂಬ ಕಾರಣಕ್ಕೆ ಸಾವರ್ಕರ್‌ ಅವರನ್ನು ಸ್ವಾತಂತ್ರ್ಯ ಹೋರಾಟಗಾರನಲ್ಲ ಎಂದರೆ ಹೇಗೆ? ಟಿಪ್ಪು ಶಹೀದ್‌ ಅಲ್ಲ ಎಂದು ದೂರಿದರೆ ಹೇಗೆ? ಅದೆಷ್ಟೋ ಬಾರಿ ಈ ಯಾವ ಆಲೋಚನೆಗಳೂ ನಮ್ಮವಲ್ಲ ಎಂದೂ ನಿಮಗೂ ಅನಿಸಿದ್ದಿರಬಹುದು. ಹೌದು, ಅವ್ಯಾವೂ ನಮ್ಮಲ್ಲಿ ಜನ್ಮ ತಳಿದವುಗಳಲ್ಲ. ಬದಲಾಗಿ ಈ ರಾಜ ಕೀಯ ವ್ಯವಸ್ಥೆ ನಮ್ಮೊಳಗೆ ಬಲವಂತ ದಿಂದ ತುರುಕಿದ್ದು ಅಷ್ಟೆ. ಸಮೂಹ ಸನ್ನಿಗೆ ಒಳಗಾಗದೇ ಪ್ರಬುದ್ಧ ನಡತೆಯನ್ನು ನಾವು ಪ್ರದರ್ಶಿಸಬೇಕಿದೆ. ಆಗ ಮಾತ್ರ, “”ಸಿಲುಕದಿರೈ ಮತವೆಂಬ ಮೋಹಜ್ಞಾನಕ್ಕೆ/ ಮತಿಯಿಂದ ದುಡಿಯಿರೈ ಲೋಕ ಹಿತಕೆ/ ಆ ಮತದ ಈ ಮತದ ಹಳೆ ಮತದ ಸಹವಾಸ ಸಾಕಿನ್ನು ಸೇರಿರೈ ಮನುಜ ಮತಕೆ/ ಓ ಬನ್ನಿ ಸೋದರರೇ, ವಿಶ್ವ ಪಥಕೆ” ಎಂಬ ಕುವೆಂಪು ಅವರ ಮಾತುಗಳು ಜೀವಂತವಾಗುತ್ತವೆ!

– ಉಮರ್‌ ಫಾರೂಕ್‌ ಮೀರಾನಾಯಕ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ರಾಜ್ಯದಲ್ಲಿ ಭೀಕರ ಮಳೆ, ಪ್ರವಾಹ ಭೀತಿ ಜಿಲ್ಲೆಗಳಿಗೆ ರೆಡ್‌ ಅಲರ್ಟ್

ರಾಜ್ಯದಲ್ಲಿ ಭೀಕರ ಮಳೆ, ಪ್ರವಾಹ ಭೀತಿ ಜಿಲ್ಲೆಗಳಿಗೆ ರೆಡ್‌ ಅಲರ್ಟ್

ಅಡುಗೆ ಸಿಲಿಂಡರ್ ಸ್ಫೋಟಗೊಂಡು ಮೂವರಿಗೆ ಗಂಭಿರ ಗಾಯ

ಅಡುಗೆ ಸಿಲಿಂಡರ್ ಸ್ಫೋಟಗೊಂಡು ಮೂವರಿಗೆ ಗಂಭಿರ ಗಾಯ

ದಾವಣಗೆರೆ ಕೋವಿಡ್ ಸೋಂಕಿಗೆ ಗರ್ಭಿಣಿ ಮಹಿಳೆ ಸೇರಿ ಆರು ಮಂದಿ ಸಾವು

ದಾವಣಗೆರೆ ಕೋವಿಡ್ ಸೋಂಕಿಗೆ ಗರ್ಭಿಣಿ ಮಹಿಳೆ ಸೇರಿ ಆರು ಮಂದಿ ಸಾವು

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ಕೋವಿಡ್ ಪಾಸಿಟಿವ್

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ಕೋವಿಡ್ ಪಾಸಿಟಿವ್

ಕೋವಿಡ್ ಕಳವಳ-ಆಗಸ್ಟ್ 05: 5619 ಹೊಸ ಪ್ರಕರಣಗಳು ; 5407 ಡಿಸ್ಚಾರ್ಜ್ ; 100 ಸಾವು

ಕೋವಿಡ್ ಕಳವಳ-ಆಗಸ್ಟ್ 05: 5619 ಹೊಸ ಪ್ರಕರಣಗಳು ; 5407 ಡಿಸ್ಚಾರ್ಜ್ ; 100 ಸಾವು

ಲುಧಿಯಾನಾ ನಗರಕ್ಕೆ ಕಾಡಿದ ಆತ್ಮಹತ್ಯೆ ಭೂತ

ಲುಧಿಯಾನಾ ನಗರಕ್ಕೆ ಕಾಡಿದ ಆತ್ಮಹತ್ಯೆ ಭೂತ

ಬೀದರ್: ಕೋವಿಡ್ ಸೋಂಕಿಗೆ ಇಬ್ಬರು ಸಾವು, 52 ಹೊಸ ಸೋಂಕಿತ ಪ್ರಕರಣ ದೃಢ

ಬೀದರ್: ಕೋವಿಡ್ ಸೋಂಕಿಗೆ ಇಬ್ಬರು ಸಾವು, 52 ಹೊಸ ಸೋಂಕಿತ ಪ್ರಕರಣ ದೃಢ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಿಕ್ಷಣ ಸಂವಾದ: ಅಸ್ಮಿತೆಯೆಡೆಗೆ ಮಕ್ಕಳ ಮೊದಲ ಹೆಜ್ಜೆ ಐತಿಹಾಸಿಕ ಸತ್ಯಗಳಿಂದ ಆರಂಭವಾಗಲಿ

ಶಿಕ್ಷಣ ಸಂವಾದ: ಅಸ್ಮಿತೆಯೆಡೆಗೆ ಮಕ್ಕಳ ಮೊದಲ ಹೆಜ್ಜೆ ಐತಿಹಾಸಿಕ ಸತ್ಯಗಳಿಂದ ಆರಂಭವಾಗಲಿ

ಕೋವಿಡ್ 19 ಅವಧಿಯಲ್ಲಿ ರಕ್ಷಾ ಬಂಧನವೆಂಬ ಮಮತೆಯ ಹಬ್ಬ

ಕೋವಿಡ್ 19 ಅವಧಿಯಲ್ಲಿ ರಕ್ಷಾ ಬಂಧನವೆಂಬ ಮಮತೆಯ ಹಬ್ಬ

ರಾಷ್ಟ್ರೀಯ ಶಿಕ್ಷಣ ನೀತಿ 2020: ಉನ್ನತ ಶಿಕ್ಷಣ ಇನ್ನು ಹೆಚ್ಚು ವೃತ್ತಿಪರ, ಸಂಶೋಧನೆ ಪರ

ರಾಷ್ಟ್ರೀಯ ಶಿಕ್ಷಣ ನೀತಿ 2020: ಉನ್ನತ ಶಿಕ್ಷಣ ಇನ್ನು ಹೆಚ್ಚು ವೃತ್ತಿಪರ, ಸಂಶೋಧನೆ ಪರ

ಮಕ್ಕಳಿಗೆ ನಾವೇನು ಕಲಿಸಬೇಕು?: ಮಗುವಿನೊಂದಿಗೆ ಪೋಷಕರ ಸಂಬಂಧ ‘ಫೆದರ್ ಟಚ್’ ಇದ್ದಂತೆ

ಮಕ್ಕಳಿಗೆ ನಾವೇನು ಕಲಿಸಬೇಕು?: ಮಗುವಿನೊಂದಿಗೆ ಪೋಷಕರ ಸಂಬಂಧ ‘ಫೆದರ್ ಟಚ್’ ಇದ್ದಂತೆ

ಶಿಕ್ಷಣದ ಶ್ರೇಷ್ಠತೆಯ ಹೊಸ ಅಲೆ ಆರಂಭ

ಶಿಕ್ಷಣದ ಶ್ರೇಷ್ಠತೆಯ ಹೊಸ ಅಲೆ ಆರಂಭ

MUST WATCH

udayavani youtube

ಮಕ್ಕಳನ್ನು ಬೆಳೆಸಬೇಡಿ; ಬೆಳೆಯಲು ಬಿಡಿ | How to Nurture a Child | Udayavani

udayavani youtube

ಆಸ್ಪತ್ರೆಯಲ್ಲೂ B. S. Yediyurappa ಕರ್ತವ್ಯ ಪ್ರಜ್ಞೆ ; ಪ್ರಮುಖ Files ಪರಿಶೀಲನೆ

udayavani youtube

MGM ಕಾಲೇಜಿನ ನವೀಕೃತ ನೂತನ ರವೀಂದ್ರ ಮಂಟಪದ ಪ್ರಾರಂಭೋತ್ಸವ | Udayavani

udayavani youtube

MALASIYAN ಹಣ್ಣುಗಳನ್ನು ಬೆಳೆದು ಯಶಸ್ಸನ್ನು ಕಂಡ Khajane Agricultural farm

udayavani youtube

ಸುಶಾಂತ್ ಸಾವಿನ ಸುತ್ತ ಅನುಮಾನದ ಹುತ್ತ | Sushant Singh Rajput Death Mysteryಹೊಸ ಸೇರ್ಪಡೆ

ರಾಜ್ಯದಲ್ಲಿ ಭೀಕರ ಮಳೆ, ಪ್ರವಾಹ ಭೀತಿ ಜಿಲ್ಲೆಗಳಿಗೆ ರೆಡ್‌ ಅಲರ್ಟ್

ರಾಜ್ಯದಲ್ಲಿ ಭೀಕರ ಮಳೆ, ಪ್ರವಾಹ ಭೀತಿ ಜಿಲ್ಲೆಗಳಿಗೆ ರೆಡ್‌ ಅಲರ್ಟ್

ಅಡುಗೆ ಸಿಲಿಂಡರ್ ಸ್ಫೋಟಗೊಂಡು ಮೂವರಿಗೆ ಗಂಭಿರ ಗಾಯ

ಅಡುಗೆ ಸಿಲಿಂಡರ್ ಸ್ಫೋಟಗೊಂಡು ಮೂವರಿಗೆ ಗಂಭಿರ ಗಾಯ

ದಾವಣಗೆರೆ ಕೋವಿಡ್ ಸೋಂಕಿಗೆ ಗರ್ಭಿಣಿ ಮಹಿಳೆ ಸೇರಿ ಆರು ಮಂದಿ ಸಾವು

ದಾವಣಗೆರೆ ಕೋವಿಡ್ ಸೋಂಕಿಗೆ ಗರ್ಭಿಣಿ ಮಹಿಳೆ ಸೇರಿ ಆರು ಮಂದಿ ಸಾವು

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ಕೋವಿಡ್ ಪಾಸಿಟಿವ್

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ಕೋವಿಡ್ ಪಾಸಿಟಿವ್

ಕೋವಿಡ್ ಕಳವಳ-ಆಗಸ್ಟ್ 05: 5619 ಹೊಸ ಪ್ರಕರಣಗಳು ; 5407 ಡಿಸ್ಚಾರ್ಜ್ ; 100 ಸಾವು

ಕೋವಿಡ್ ಕಳವಳ-ಆಗಸ್ಟ್ 05: 5619 ಹೊಸ ಪ್ರಕರಣಗಳು ; 5407 ಡಿಸ್ಚಾರ್ಜ್ ; 100 ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.