Udayavni Special

ಪರಿಣಾಮಕಾರಿ ಅನುಷ್ಠಾನ ಮುಖ್ಯ


Team Udayavani, Feb 25, 2020, 6:11 AM IST

majji-38

ಪ್ರಸ್ತುತ 18 ವರ್ಷ ಪ್ರಾಯವಾದವರು ಸಿಗರೇಟು ಅಥವಾ ಬೇರೆ ಯಾವುದೇ ತಂಬಾಕು ಉತ್ಪನ್ನಗಳನ್ನು ಅಂಗಡಿಯಿಂದ ಖರೀದಿಸಿ ಸೇವಿಸಬಹುದು. ಈ ವಯೋಮಿತಿಯನ್ನು 21 ವರ್ಷಕ್ಕೇರಿಸಿ ಯುವಕರ ಕೈಗೆ ತಂಬಾಕು ಉತ್ಪನ್ನಗಳು ಸಿಗದಂತೆ ಮಾಡುವ ಪ್ರಸ್ತಾವ ಇದು.

ತಂಬಾಕು ಸೇವನೆ ವಯೋಮಿತಿಯನ್ನು 18ರಿಂದ 21 ವರ್ಷಕ್ಕೆ ಹೆಚ್ಚಿಸುವ ಕುರಿತು, ಅಂತೆಯೇ ತಂಬಾಕು ನಿಯಮಗಳನ್ನು ಉಲ್ಲಂ ಸುವವರಿಗೆ ವಿಧಿಸುವ ದಂಡದ ಮೊತ್ತಗಳನ್ನು ಹೆಚ್ಚಿಸುವ ಪ್ರಸ್ತಾವವೊಂದು ಆರೋಗ್ಯ ಸಚಿವಾಲಯದ ಪರಿಶೀಲನೆಯಲ್ಲಿದೆ. ಪ್ರಸ್ತುತ 18 ವರ್ಷ ಪ್ರಾಯವಾದವರು ಸಿಗರೇಟು ಅಥವಾ ಬೇರೆ ಯಾವುದೇ ತಂಬಾಕು ಉತ್ಪನ್ನಗಳನ್ನು ಅಂಗಡಿಯಿಂದ ಖರೀದಿಸಿ ಸೇವಿಸಬಹುದು. ಈ ವಯೋಮಿತಿಯನ್ನು 21 ವರ್ಷಕ್ಕೇರಿಸಿ ಯುವಕರ ಕೈಗೆ ತಂಬಾಕು ಉತ್ಪನ್ನಗಳು ಸಿಗದಂತೆ ಮಾಡುವ ಕಾನೂನು ಇದು. ಅಮೆರಿಕದಂಥ ಮುಂದುವರಿದ ಕೆಲವು ರಾಷ್ಟ್ರಗಳಲ್ಲಿ ತಂಬಾಕು ಸೇವನೆ ವಯೋಮಿತಿ 21ಕ್ಕೇರಿ ದಶಕಗಳೇ ಕಳೆದಿವೆ. ನಾವು ಈಗಷ್ಟೇ ಈ ಕುರಿತು ಚಿಂತಿಸಲುತೊಡಗಿದ್ದೇವೆ.

ದೇಶದಲ್ಲೀಗ ಸುಮಾರು 10 ಕೋಟಿ ಧೂಮಪಾನಿಗಳು ಇದ್ದಾರೆ ಎಂಬುದು ಒಂದು ಅಂದಾಜು. ಗುಟ್ಕಾ, ಜರ್ದಾದಂಥ ಇನ್ನಿತರ ತಂಬಾಕು ಉತ್ಪನ್ನಗಳನ್ನು ಬಳಸುವವರ ಅಂಕಿಅಂಶ ಬೇರೆಯೇ ಇದೆ. ಚೀನದ ಬಳಿಕ ಅತಿ ಹೆಚ್ಚು ಧೂಮಪಾನಿಗಳಿರುವ ದೇಶ ನಮ್ಮದು. ತಂಬಾಕು ವ್ಯಸನದಿಂದ ಬರುವ ಕ್ಯಾನ್ಸರ್‌ನಂಥ ರೋಗಗಳಲ್ಲೂ ದೇಶ ಅಗ್ರಸ್ಥಾನದಲ್ಲಿದೆ. ಆದರೆ ತಂಬಾಕು ಬಳಕೆಗೆ ಸಂಬಂಧಿಸಿದಂತೆ ಸರಕಾರದ ನೀತಿಯಲ್ಲೇ ವೈರುಧéಗಳಿವೆ. ಒಂದೆಡೆ ಸರಕಾರ ಜನರ ಆರೋಗ್ಯ ಮಟ್ಟವನ್ನು ಹೆಚ್ಚಿಸುವ ಸಲುವಾಗಿ ಪ್ರತಿ ಬಜೆಟ್‌ನಲ್ಲಿ ಅನುದಾನದ ಮೊತ್ತವನ್ನು ಹೆಚ್ಚಿಸುತ್ತಿದೆ. ಆದರೆ ಇದೇ ವೇಳೆ ರೋಗಗಳಿಗೆ ಕಾರಣವಾಗುವ ತಂಬಾಕು, ಮದ್ಯಪಾನದಂಥ ವ್ಯಸನಗಳಿಗೆ ಜನರು ಬಲಿಯಾಗದಂತೆ ತಡೆಯಲು ಸಮಗ್ರ ನೀತಿಗಳನ್ನು ಜಾರಿಗೊಳಿಸುವುದಿಲ್ಲ. ತಂಬಾಕಿಗೆ ಸಂಬಂಧಿಸಿದಂತೆ ಅನೇಕ ಕಾನೂನುಗಳು ಇದ್ದರೂ ವ್ಯಸನ ಹಿಂದಿನಂತೆಯೇ ಮುಂದುವರಿದಿದೆ. ತಂಬಾಕು ಆರೋಗ್ಯಕ್ಕೆ ಹಾನಿಕರ ಎಂದು ಗೊತ್ತಿದ್ದರೂ ಅದನ್ನು ಸಂಪೂರ್ಣವಾಗಿ ನಿಷೇಧಿಸುವ ದಿಟ್ಟತನ ಸರಕಾರಕ್ಕಿಲ್ಲ. ಏಕೆಂದರೆ ಇದು ಹಲವು ಆರ್ಥಿಕ ಆಯಾಮಗಳನ್ನು ಒಳಗೊಂಡಿರುವ ಜಟಿಲ ವಿಚಾರ. ಹೀಗಾಗಿ ಹೊಸ ಹೊಸ ಕಾನೂನುಗಳನ್ನು ರಚಿಸುವ ಮೂಲಕ ತಂಬಾಕು ಬಳಕೆಯನ್ನು ಕಡಿಮೆ ಮಾಡುವ ಪ್ರಯತ್ನವನ್ನಷ್ಟೇ ಮಾಡುತ್ತಿದೆ.

ಶಾಲಾ ಕಾಲೇಜು ಸಮೀಪ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಬಾರದು, 18ಕ್ಕಿಂತ ಕಡಿಮೆ ವಯಸ್ಸಿನವರಿಗೆ ತಂಬಾಕು ಉತ್ಪನ್ನಗಳನ್ನು ಮಾರಬಾರದು ಎಂಬೆಲ್ಲ ಕಾನೂನುಗಳು ಇವೆ. ಆದರೆ ಅವುಗಳು ಎಷ್ಟರಮಟ್ಟಿಗೆ ಪಾಲನೆಯಾಗುತ್ತಿವೆ ಎಂಬ ವಾಸ್ತವ ಆಳುವವರಿಗೆ ತಿಳಿದಿಲ್ಲ.ತಂಬಾಕು ಚಟ ಹೊಂದಿರುವ ಈಗಿನ ಪೀಳಿಗೆ ಶಾಲಾ-ಕಾಲೇಜುಗಳಲ್ಲಿ ಇರುವಾಗಲೇ ಸಿಗರೇಟು ಹಾಗೂ ಇನ್ನಿತರ ತಂಬಾಕು ಉತ್ಪನ್ನಗಳ ರುಚಿ ನೋಡಿರುತ್ತದೆ ಎನ್ನುತ್ತದೆ ಒಂದು ಸಮೀಕ್ಷೆ. ಕಾನೂನು ಎಷ್ಟು ಪರಿಣಾಮಕಾರಿಯಾಗಿ ಅನುಷ್ಠಾನವಾಗುತ್ತಿದೆ ಎಂಬುದಕ್ಕೆ ಈ ಸಮೀಕ್ಷೆಯಲ್ಲಿ ಉತ್ತರವಿದೆ. ಚಿಲ್ಲರೆ ಸಿಗರೇಟುಗಳನ್ನು ಮಾರಬಾರದು ಎಂಬ ಕಾನೂನಿನದ್ದೂ ಇದೇ ಕತೆ.

ಯುವ ಜನರು ತಂಬಾಕು ಉತ್ಪನ್ನಗಳತ್ತ ಆಕರ್ಷಿತರಾಗುವುದು ಸೆಲೆಬ್ರಿಟಿಗಳನ್ನು ನೋಡಿ. ಈ ಹಿನ್ನೆಲೆಯಲ್ಲಿ ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ತಂಬಾಕು ಜಾಹೀರಾತುಗಳನ್ನು ಪ್ರಸಾರ ಮಾಡುವುದನ್ನು ನಿಷೇಧಿಸಲಾಗಿದೆ. ಸಿನೇಮಾ ಪ್ರಾರಂಭವಾಗುವ ಮೊದಲು ಕಡ್ಡಾಯವಾಗಿ ತಂಬಾಕು ಸೇವನೆಯ ಘೋರ ಪರಿಣಾಮಗಳನ್ನು ತಿಳಿಸುವ ಕಿರುಚಿತ್ರವೊಂದನ್ನು ತೋರಿಸಲಾಗುತ್ತದೆ. ವಿಚಿತ್ರ ಎಂದರೆ ಈ ಕಿರುಚಿತ್ರವನ್ನು ನೋಡಿದವರೇ ಇಂಟರ್‌ವಲ್‌ನಲ್ಲಿ ಹೊರಗೆ ಬಂದು ಸಿಗರೇಟು ಸೇದುತ್ತಾರೆ. ಸಿಗರೇಟು ಸೇದುವುದು ಸ್ಟೈಲ್‌ ಎಂಬಂಥ ಒಂದು ರೀತಿಯ ಭ್ರಮೆಯೇ ಯುವ ಜನರು ಅದರತ್ತ ಹೆಚ್ಚು ಆಕರ್ಷಿತರಾಗಲು ಕಾರಣ. ಇಂಥ ಭ್ರಮೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸರಕಾರಗಳು ಹೆಚ್ಚಿನ ಗಮನ ಹರಿಸಬೇಕಾಗಿದೆ. ತಂಬಾಕಿಗೆ ಸಂಬಂಧಪಟ್ಟ ಕೆಲವು ಕಾನೂನುಗಳ ಬಗ್ಗೆ ಜನಸಾಮಾನ್ಯರಿಗೆ ಅರಿವು ಕೂಡ ಇಲ್ಲ. ಉದಾಹರಣೆಗೆ ಹೇಳುವುದಾದರೆ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನು ಸೇವಿಸಬಾರದು ಎಂಬ ಕಾನೂನು ಇದೆ ಎನ್ನುವುದು ಅನೇಕರಿಗೆ ಗೊತ್ತೇ ಇಲ್ಲ.

ಗುಟ್ಕಾದಂಥ ಕೆಲವು ತಂಬಾಕು ಉತ್ಪನ್ನಗಳನ್ನು ನಿಷೇಧಿಸಿದರೂ ಉತ್ಪಾದಕರು ಅವುಗಳನ್ನು ಜನರಿಗೆ ತಲುಪಿಸಲು ರಂಗೋಲಿ ಕೆಳಗೆ ತೂರುವ ತಂತ್ರ ಅನುಸರಿಸುತ್ತಿದ್ದಾರೆ. ಅಂತೆಯೇ ಸಿಗರೇಟು ಕಂಪೆನಿಗಳು ಜಾಹೀರಾತಿನ ಬದಲಾಗಿ ತಮ್ಮ ಬ್ರಾಂಡ್‌ಗಳ ಪರಿವರ್ತನೆಗೆ ಇನ್ನಿತರ ಹಾದಿಗಳನ್ನು ಕಂಡುಕೊಂಡಿವೆ. ಹೀಗಾಗಿ ಎಷ್ಟೇ ನಿಷೇಧಗಳನ್ನು ಹೇರಿದರೂ ಅವುಗಳು ಜನರನ್ನು ತಲುಪುತ್ತವೆ. ಇನ್ನೂ ಒಂದು ವಿಪರ್ಯಾಸ ಎಂದರೆ ಜನರಿಗೆ ಸಿಗರೇಟು ಸೇದಬೇಡಿ ಎಂದು ತಿಳಿ ಹೇಳಬೇಕಾದ ವೈದ್ಯರಲ್ಲೇ ಶೇ. 50 ಮಂದಿ ಧೂಮಪಾನ ಪ್ರಿಯರು. ಹೀಗೆ ತಂಬಾಕಿಗೆ ಸಂಬಂಧಪಟ್ಟಂತೆ ನಮ್ಮಲ್ಲಿ ವೈರುಧéಗಳೇ ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಹೇಳುವುದಾದರೆ ಕಾನೂನು ರಚಿಸಿದರಷ್ಟೇ ಸಾಲದು ಅದು ಪರಿಣಾಮಕಾರಿಯಾಗಿ ಅನುಷ್ಠಾನವಾಗುವಂತೆ ನೋಡಿಕೊಳ್ಳಬೇಕು. ಜೊತೆಗೆ ತಂಬಾಕಿನ ಬಗ್ಗೆ ಇರುವ ಸಾಮಾಜಿಕವಾದ ಮತ್ತು ಆರ್ಥಿಕವಾದ ಭ್ರಮೆಗಳನ್ನು ದೂರ ಮಾಡುವಂಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Covid-19; 60 ದಿನಗಳ ಬಳಿಕ ವುಹಾನ್ ಲಾಕ್ ಡೌನ್ ಅಂತ್ಯ, ಚೀನಾದ ಉಳಿದೆಡೆ ಆರಂಭ

Covid-19; 60 ದಿನಗಳ ಬಳಿಕ ವುಹಾನ್ ಲಾಕ್ ಡೌನ್ ಅಂತ್ಯ, ಚೀನಾದ ಉಳಿದೆಡೆ ಆರಂಭ

ಅಂದು ಆ ಜ್ವರ ಹತ್ತಿಕ್ಕಲು ಇದೊಂದೇ ಅಸ್ತ್ರ

ಅಂದು ಆ ಜ್ವರ ಹತ್ತಿಕ್ಕಲು ಇದೊಂದೇ ಅಸ್ತ್ರ

ಪ್ರಚೋದನಾಕಾರಿ ಹೇಳಿಕೆ ನೀಡಿದ ಶಾಸಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ: ಸಿದ್ದರಾಮಯ್ಯ

ಪ್ರಚೋದನಾಕಾರಿ ಹೇಳಿಕೆ ನೀಡಿದ ಶಾಸಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ: ಸಿದ್ದರಾಮಯ್ಯ

ಕೋವಿಡ್ 19 ಪರಿಹಾರ ನಿಧಿಗೆ ಕೆ.ಎಚ್. ಮುನಿಯಪ್ಪ ಪಿಂಚಣಿಯಲ್ಲಿ ಪ್ರತಿ ತಿಂಗಳು ಶೇ.30 ಅರ್ಪಣೆ

ಕೋವಿಡ್ 19 ಪರಿಹಾರ ನಿಧಿಗೆ ಕೆ.ಎಚ್. ಮುನಿಯಪ್ಪ ಪಿಂಚಣಿಯಲ್ಲಿ ಪ್ರತಿ ತಿಂಗಳು ಶೇ.30 ಅರ್ಪಣೆ

ಲಾಕ್‌ಡೌನ್‌ ಎಫೆಕ್ಟ್ ವರ್ಕ್‌ ಫ್ರಮ್‌ ಮೃಗಾಲಯ

ಲಾಕ್‌ಡೌನ್‌ ಎಫೆಕ್ಟ್ ವರ್ಕ್‌ ಫ್ರಮ್‌ ಮೃಗಾಲಯ

ಮಿಸ್‌ ಇಂಗ್ಲೆಂಡ್‌ ಈಗ ವೈದ್ಯೆ

ಮಿಸ್‌ ಇಂಗ್ಲೆಂಡ್‌ ಈಗ ವೈದ್ಯೆ

ಆರೋಗ್ಯ ಸಂಕಟದ ಸಮಯದಲ್ಲಿ ಕೋಮು ದ್ವೇಷ ಹೊತ್ತಿಸುವುದು ಅಕ್ಷಮ್ಯ ಅಪರಾಧ: ಕುಮಾರಸ್ವಾಮಿ

ಆರೋಗ್ಯ ಸಂಕಟದ ಸಮಯದಲ್ಲಿ ಕೋಮು ದ್ವೇಷ ಹೊತ್ತಿಸುವುದು ಅಕ್ಷಮ್ಯ ಅಪರಾಧ: ಕುಮಾರಸ್ವಾಮಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾನಸಿಕ ಸಮಸ್ಯೆ ಹೆಚ್ಚಿಸಿದ ಕೋವಿಡ್ 19 ವೈರಸ್

ಮಾನಸಿಕ ಸಮಸ್ಯೆ ಹೆಚ್ಚಿಸಿದ ಕೋವಿಡ್ 19 ವೈರಸ್

ಜರ್ಮನಿ, ದ. ಕೊರಿಯಾ ಮಾದರಿಯಾಗಲಿ ; ವ್ಯಾಪಕ ಪರೀಕ್ಷೆ, ಕಟ್ಟು ನಿಟ್ಟಿನ ಕ್ರಮ

ಜರ್ಮನಿ, ದ. ಕೊರಿಯಾ ಮಾದರಿಯಾಗಲಿ ; ವ್ಯಾಪಕ ಪರೀಕ್ಷೆ, ಕಟ್ಟು ನಿಟ್ಟಿನ ಕ್ರಮ

ಹುಸಿ ಸುದ್ದಿಗಳ ಹರಿದಾಟ ಎಚ್ಚರಿಕೆ ಇರಲಿ

ಹುಸಿ ಸುದ್ದಿಗಳ ಹರಿದಾಟ ಎಚ್ಚರಿಕೆ ಇರಲಿ

ಹಿಂದಿರುಗುತ್ತಿರುವ ವಲಸೆ ಕಾರ್ಮಿಕರು! ಕಷ್ಟಕ್ಕೆ ಕೂಡಲೇ ಸ್ಪಂದಿಸಿ

ಹಿಂದಿರುಗುತ್ತಿರುವ ವಲಸೆ ಕಾರ್ಮಿಕರು! ಕಷ್ಟಕ್ಕೆ ಕೂಡಲೇ ಸ್ಪಂದಿಸಿ

ಎಲ್ಲ ವರ್ಗದವರಿಗೂ ನೆರವು ಅಗತ್ಯ

ಎಲ್ಲ ವರ್ಗದವರಿಗೂ ನೆರವು ಅಗತ್ಯ

MUST WATCH

udayavani youtube

Coronavirus Lockdown : ಮಟ್ಟುಗುಳ್ಳ ಮಂದಗತಿಯ ಮಾರುಕಟ್ಟೆ Saddens Muttugulla Growers

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

ಹೊಸ ಸೇರ್ಪಡೆ

Covid-19; 60 ದಿನಗಳ ಬಳಿಕ ವುಹಾನ್ ಲಾಕ್ ಡೌನ್ ಅಂತ್ಯ, ಚೀನಾದ ಉಳಿದೆಡೆ ಆರಂಭ

Covid-19; 60 ದಿನಗಳ ಬಳಿಕ ವುಹಾನ್ ಲಾಕ್ ಡೌನ್ ಅಂತ್ಯ, ಚೀನಾದ ಉಳಿದೆಡೆ ಆರಂಭ

08-April-24

ಕೊರೊನಾ ತಡೆಗೆ ಶ್ರಮಿಸಿ: ಪಾಟೀಲ

ಅಗತ್ಯ ವಸ್ತುಗಳ ಬೆಲೆ ದೀಢೀರ್ ಏರಿಕೆ: ಸರಿಯಾದ ಕ್ರಮಕ್ಕೆ ಸಿದ್ದರಾಮಯ್ಯ ಒತ್ತಾಯ

ಅಗತ್ಯ ವಸ್ತುಗಳ ಬೆಲೆ ದೀಢೀರ್ ಏರಿಕೆ: ಸರಿಯಾದ ಕ್ರಮಕ್ಕೆ ಸಿದ್ದರಾಮಯ್ಯ ಒತ್ತಾಯ

ಅಂದು ಆ ಜ್ವರ ಹತ್ತಿಕ್ಕಲು ಇದೊಂದೇ ಅಸ್ತ್ರ

ಅಂದು ಆ ಜ್ವರ ಹತ್ತಿಕ್ಕಲು ಇದೊಂದೇ ಅಸ್ತ್ರ

ಕೋವಿಡ್ ಪರಿಹಾರಕ್ಕೆ ತನ್ನ ಪಿಗ್ಗಿ ಬ್ಯಾಂಕ್‌ನ ಸೇವಿಂಗ್ಸ್ ಕೊಟ್ಟ ಬಾಲಕಿ

ಕೋವಿಡ್ ಪರಿಹಾರಕ್ಕೆ ತನ್ನ ಪಿಗ್ಗಿ ಬ್ಯಾಂಕ್‌ನ ಸೇವಿಂಗ್ಸ್ ಕೊಟ್ಟ ಬಾಲಕಿ