ನೆಹರು ಪರಂಪರೆಯ ನಾಶವಲ್ಲ, ಅನ್ಯರಿಗೆ ನ್ಯಾಯ ಒದಗಿಸುವ ಕಾರ್ಯ


Team Udayavani, Jul 10, 2019, 5:00 AM IST

s-13

ಪ್ರಧಾನಿ ನರೇಂದ್ರ ಮೋದಿ, ನೆಹರು ಪರಂಪರೆಯನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸುತ್ತಿದ್ದಾರೆ ಎಂದು ಬಹಳಷ್ಟು ಟೀಕೆಗಳು ಕೇಳಿ ಬರುತ್ತಿವೆ. ಒಂದು ವರ್ಗದ ಮಾಧ್ಯಮ ಮತ್ತು ತಥಾಕಥಿತ “ಬುದ್ಧಿಜೀವಿಗಳು’ ನರೇಂದ್ರ ಮೋದಿ, ಬಿಜೆಪಿ ಮತ್ತು ಇವರಿಗಿಂತಲೂ ಹೆಚ್ಚಾಗಿ ಆರ್‌ಎಸ್‌ಎಸ್‌ ದೇಶದಲ್ಲಿ “ನೆಹರು ವಾದದ ಕಡೆಗಣನೆ’ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂಬ ಭಾವನೆಯನ್ನು ಸೃಷ್ಟಿಸಿ ನಂಬಿಸಲು ಪ್ರಯತ್ನಿಸುತ್ತಿದ್ದಾರೆ.

ಹೀಗೆ ನಂಬಿಸಲೆತ್ನಿಸುವವರು ಹಿಂದಿನ ಸೋವಿಯತ್‌ ಯೂನಿಯನ್‌ನಲ್ಲಿ ನಿಕಿಟ ಕ್ರುಶ್ಚೇವ್‌ ಮತ್ತು ಇತರ ಕಮ್ಯುನಿಸ್ಟ್‌ ನಾಯಕರು 1953ರಲ್ಲಿ ಸರ್ವಾಧಿಕಾರಿ ಜೋಸೆಫ್ ಸ್ಟಾಲಿನ್‌ ಮರಣಾನಂತರ ಪ್ರಾರಂಭಿಸಿದ್ದ ಪ್ರಸಿದ್ಧ “ಡಿ-ಸ್ಟಾಲಿನೈಸೇಶನ್‌’ (ಸ್ಟಾಲಿನ್‌ ಪರಂಪರೆಯ ನಾಶ) ಕಾರ್ಯಕ್ರಮವನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪ್ರಸ್ತಾವಿಸುತ್ತಿದ್ದಾರೆ. ಸ್ಟಾಲಿನ್‌ ನೀತಿಯನ್ನು ನಿರಾಕರಿಸಿದ ಕ್ರುಶೇವ್‌ ಕಮ್ಯುನಿಸ್ಟ್‌ ಪಾರ್ಟಿ ಮತ್ತು ಸೋವಿಯತ್‌ ರಶ್ಯಾದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುವ ಪ್ರಯತ್ನಗಳನ್ನು ಮಾಡಲಾಯಿತು. ಡಿ ಸ್ಟಾಲಿನೈಸೇಶನ್‌ ಸಂಕೇತವಾಗಿ ಸ್ಟಾಲಿನ್‌ ಪ್ರತಿಮೆಗಳನ್ನು ಕೆಡವಲಾಯಿತು ಮತ್ತು ಸ್ಟಾಲಿನ್‌ ಹೆಸರಿದ್ದ ಸ್ಥಳಗಳ ಪುನರ್‌ ನಾಮಕರಣ ಮಾಡಲಾಯಿತು. ಉದಾಹರಣೆಗೆ ಹೇಳುವುದಾದರೆ ಸ್ಟಾಲಿನ್‌ಗಾಡ್‌ ನಗರ ವೋಲ್ಗೊಗ್ರಾಡ್‌ ಎಂದಾಯಿತು. ಅದೇ ರೀತಿ ಸ್ಟಾಲಿನ್‌ನ ಕಾಮ್ರೇಡ್‌ಗಳ ಹೆಸರುಗಳನ್ನೂ ಕಿತ್ತು ಹಾಕಲಾಯಿತು.

ಪಂಡಿತ್‌ ನೆಹರು ಮತ್ತು ದೇಶಕ್ಕೆ ಅವರು ನೀಡಿರುವ ಕೊಡುಗೆಗಳನ್ನು ನರೇಂದ್ರ ಮೋದಿ ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸುವವರು ಸೋವಿಯತ್‌ ಯೂನಿಯನ್‌ನಲ್ಲಿ ನಡೆದ ಡಿ ಸ್ಟಾಲಿನೈಸೇಶನ್‌ ಕಾರ್ಯಕ್ರಮದ ಬಗ್ಗೆಯೂ ಅಸಂತೃಪ್ತಿ ಹೊಂದಿದವರೇ. ವ್ಲಾಡಿಮಿರ್‌ ಲೆನಿನ್‌ ಮತ್ತು ಸ್ಟಾಲಿನ್‌ ಇಂದಿನ ರಷ್ಯಾದಲ್ಲಿ ಅನಪೇಕ್ಷಿತ ಮತ್ತು ಮರೆತು ಹೋದ ನಾಯಕರಾಗಿದ್ದರೂ ನಮ್ಮ ದೇಶದ ಎಡಪಂಥೀಯರಿಗೆ ಅವರು ಈಗಲೂ ಆರಾಧ್ಯ ಪುರುಷರು. ಹೆಚ್ಚೇಕೆ ಕಮ್ಯುನಿಷ್ಟರಲ್ಲದ ತಮಿಳುನಾಡಿನ ಡಿಎಂಕೆ ನಾಯಕ ದಿ. ಎಂ.ಕರುಣಾನಿಧಿಯವರೂ ಸ್ಟಾಲಿನ್‌ ಮೇಲಿನ ಅಭಿಮಾನದಿಂದ ತಮ್ಮ ಎರಡನೇ ಮಗನಿಗೆ ಸ್ಟಾಲಿನ್‌ ಎಂದೇ ಹೆಸರಿಟ್ಟಿದ್ದರು. ಸ್ಟಾಲಿನ್‌ನನ್ನು ಆರಾಧಿಸುವವರು
ಆತ ಅಡಾಲ್ಫ್ ಹಿಟ್ಲರ್‌ಗಿಂತ ಭಿನ್ನವಾಗಿರಲಿಲ್ಲ
ಎಂಬುದನ್ನು ಒಪ್ಪಿಕೊಳ್ಳಲು ತಯಾರಿಲ್ಲ.

ಪ್ರಧಾನಿಯನ್ನು ಟೀಕಿಸುವವರು ತಮ್ಮ ಟೀಕೆಗಾಗಿ ಜೂ.20ರಂದು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಜಂಟಿ ಸದನವನ್ನುದ್ದೇಶಿಸಿ ಮಾಡಿದ ಭಾಷಣದಲ್ಲೂ ಹುಳುಕು ಹುಡುಕಿದ್ದಾರೆ. ಒಂದು ವರ್ಗದ ಆಂಗ್ಲ ಪತ್ರಿಕೆಗಳು ರಾಷ್ಟ್ರಪತಿಗಳು ಸರ್ದಾರ್‌ ಪಟೇಲ್‌, ಬಾಬಾಸಾಹೇಬ್‌ ಅಂಬೇಡ್ಕರ್‌ ಮತ್ತು ಮಹಾತ್ಮ ಗಾಂಧೀಜಿಯವರ ಹೆಸರನ್ನಷ್ಟೇ ಪ್ರಸ್ತಾವಿಸಿದ್ದಾರೆ.ಜಾತ್ಯಾತೀತತೆ, ಬಹುತ್ವ, ಸಿದ್ಧಾಂತಕ್ಕೆ ಅಚಲ ಬದ್ಧತೆಯನ್ನು ಹೊಂದಿದ್ದ ಹಾಗೂ ಗಣತಂತ್ರವನ್ನು ಸಂರಕ್ಷಿಸಿದ ಮೊದಲ ಪ್ರಧಾನಿ ನೆಹರು ಹೆಸರನ್ನು ಪ್ರಸ್ತಾವಿಸಿಲ್ಲ ಎಂದು ಕೊಂಕು ತೆಗೆದಿದ್ದಾರೆ. ಇದು ಟೀಕೆಗಾಗಿ ಟೀಕೆಯಷ್ಟೆ. ರಾಷ್ಟ್ರಪತಿ ಭಾಷಣದಲ್ಲಿ ಮತ್ತು ಪ್ರಧಾನಿ ಮಂತ್ರಿ ನೆಹರು ಹೆಸರನ್ನು ಪ್ರಸ್ತಾವಿಸಲಿಲ್ಲ ಎನ್ನುವುದು ಸರಿ. ಆದರೆ ನೆಹರುವನ್ನು ಟೀಕಿಸಲಿಲ್ಲ ಎಂಬುದು ಸ್ಪಷ್ಟ.

ನೆಹರುವನ್ನು ಸಂದರ್ಭಾನುಸಾರ ಹೊಗಳುತ್ತಾರೆ ಎನ್ನುವುದು ಮೋದಿ ವಿರುದ್ಧ ಟೀಕಾಕಾರರು ಮಾಡುತ್ತಿರುವ ಮತ್ತೂಂದು ಆರೋಪ. ವಿದೇಶ ಪ್ರವಾಸ ಸಂದರ್ಭದಲ್ಲಿ ಅಥವಾ ದೇಶದ ಹಿಂದಿನ ವಿದೇಶಾಂಗ ನೀತಿಯ ವಿಚಾರ ಬಂದಾಗ ಮಾತ್ರ ನೆಹರುವನ್ನು ಹೊಗಳುತ್ತಾರೆ. ಆದರೆ ಸ್ಥಳೀಯ ವೇದಿಕೆಗಳಲ್ಲಿ ಅವರನ್ನು ನಿರ್ಲಕ್ಷಿಸುತ್ತಾರೆ ಎನ್ನುವುದು ಅವರ ಆಕ್ಷೇಪ. ನೆಹರು ಅವರ ಪಾಶ್ಚಾತ್ಯ ಹವ್ಯಾಸಗಳು, ಮಹಿಳೆಯರ ಜೊತೆಗಿನ ಸಲುಗೆ, ತನಗೊಂದು ಅಂತಾರಾಷ್ಟ್ರೀಯ ನಾಯಕನ ಇಮೇಜ್‌ ಕೊಟ್ಟುಕೊಂಡಿರುವುದು ಆರ್‌ಎಸ್‌ಎಸ್‌ಗೆ ಪಥ್ಯವಾಗುತ್ತಿರಲಿಲ್ಲ ಎನ್ನುವುದು ಈ ಟೀಕಾಕಾರರು ಹೇಳುವ ಕಾರಣ.

ಹೊಸದಿಲ್ಲಿಯಲ್ಲಿರುವ ನೆಹರು ಸ್ಮಾರಕವನ್ನು ಎಲ್ಲ ಮಾಜಿ ಪ್ರಧಾನಿಗಳ ಸ್ಮಾರಕವಾಗಿ ಬದಲಾಯಿಸಲು ಹೊರಟದ್ದೇ ಮೋದಿ ಸರಕಾರದ ನೆಹರು ಪರಂಪರೆ ನಾಶ ಮಾಡುವ ಮೊದಲ ಹೆಜ್ಜೆ ಎನ್ನುವುದು ಟೀಕಾಕಾರರ ಅನುಮಾನ. ತೀನ್‌ಮೂರ್ತಿ ಹೌಸ್‌ನಲ್ಲಿರುವ ಈ ಸ್ಮಾರಕ ಹಿಂದೆ ಬ್ರಿಟಿಷ್‌ ಸೇನಾ ದಂಡನಾಯಕನ ನಿವಾಸವಾಗಿತ್ತು. ವಿವಾದದ ಬಳಿಕ ಕೇಂದ್ರ ಸರಕಾರ ಇದೇ ತೀನ್‌ ಮೂರ್ತಿ ಹೌಸ್‌ನ 25 ಎಕ್ರೆ ವಿಶಾಲ ನಿವೇಶನದಲ್ಲಿ ಉಳಿದ ಮಾಜಿ ಪ್ರಧಾನಿಗಳಿಗಾಗಿ ಪ್ರತ್ಯೇಕ ಸ್ಮಾರಕವನ್ನು ನಿರ್ಮಿಸಲು ನಿರ್ಧರಿಸಿದೆ. ಹೀಗಾಗಿ ನೆಹರು ಸ್ಮಾರಕ ಯಥಾಸ್ಥಿತಿಯಲ್ಲಿ ಉಳಿದುಕೊಳ್ಳಲಿದೆ. ನೆಹರು ಪರಂಪರೆಯನ್ನು ಕಡೆಗಣಿಸುವ ಉದ್ದೇಶ ನಮಗಿಲ್ಲ ಎಂದು ಕೇಂದ್ರ ಸರಕಾರ ಮತ್ತು ಕೇಂದ್ರದ ಸಚಿವರು ಆಗಾಗ ಹೇಳು ತ್ತಲೇ ಇರುತ್ತಾರೆ. ನೆಹರು ಹೆಸರು ಹೊತ್ತಿರುವ ಯಾವುದೇ ಸಂಸ್ಥೆ, ಸ್ಥಳ, ಕಾರ್ಯಕ್ರಮ, ವಿಶ್ವ ವಿದ್ಯಾಲಯಗಳು, ಕಾಲೇಜುಗಳು, ಶಾಲೆಗಳು ಇತ್ಯಾದಿಗಳ ಹೆಸರನ್ನು ಕೇಂದ್ರ ಸರಕಾರ ಬದಲಾಯಿಸಿಲ್ಲ ಎನ್ನುವುದನ್ನು ಗಮನಿಸಬೇಕು. ನೆಹರು ವ್ಯಕ್ತಿತ್ವದ ಆರಾಧನೆಯನ್ನು ಬದಿಗಿರಿಸಿದರೂ ಅವರು 17 ವರ್ಷ ದೇಶದ ಪ್ರಧಾನಿಯಾಗಿದ್ದರು ಎನ್ನುವುದು ವಾಸ್ತವ. (ಸ್ವಾತಂತ್ರ್ಯಪೂರ್ವದ ಮಧ್ಯಂತರ ಅವಧಿಯನ್ನು ಸೇರಿಸಿದರೆ ಇನ್ನೂ ಹೆಚ್ಚಾಗುತ್ತದೆ). ಇಷ್ಟೆಲ್ಲ ವರ್ಷಗಳಲ್ಲಿ ದೇಶ ನೆಹರು ವಾದದ ಪ್ರಭಾವಕ್ಕೆ ಒಳಗಾಗಿದೆ. ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರಾéನಂತರ ದೇಶಕ್ಕೆ ನೆಹರು ನೀಡಿರುವ ಹಲವು ಕೊಡುಗೆಗಳಿಗೆ ಸರಿಸಾಟಿ ಯಾವುದೂ ಇಲ್ಲ ಎನ್ನುವುದು ನಿರಾಕರಿಸಲಾಗದ ಸತ್ಯ. ಇಷ್ಟೆಲ್ಲವನ್ನು ಅವರು ಭ್ರಷ್ಟಾಚಾರದ ಒಂದೇ ಒಂದು ಆರೋಪ ಇಲ್ಲದೆ ಮಾಡಿದ್ದಾರೆ ಎನ್ನುವುದು ಮತ್ತೂ ಮುಖ್ಯ. ಆದರೆ ಈ ಮಾತನ್ನು ಅವರ ಸಚಿವರಿಗೆ ಹಾಗೂ ಅನಂತರ ಪ್ರಧಾನಿ ಪಟ್ಟವನ್ನು ಅಲಂಕರಿಸಿದವರಿಗೆ ಅನ್ವಯಿಸಿ ಹೇಳಲು ಕಷ್ಟವಾಗುತ್ತದೆ.

ನೆಹರು ಕುರಿತಾಗಿರುವ ಮುಖ್ಯ ಟೀಕೆ ವಿದೇಶಾಂಗ ನೀತಿಗೆ ಸಂಬಂಧಿಸಿದಂತೆ ಅವರು ಮಾಡಿದ ಭಾರೀ ಪ್ರಮಾದಗಳದ್ದು. ಅದಾಗ್ಯೂ ಅವರು ಅನುಸರಿಸಿದ ಆಲಿಪ್ತ ನೀತಿ ತುಸು ಸೋವಿಯತ್‌ ಯೂನಿಯನ್‌ನತ್ತ ವಾಲಿಕೊಂಡಿದ್ದರೂ ಅದನ್ನು ಸಮರ್ಥಿಸಿ ಕೊಳ್ಳಬಹುದು. ನಾವು ಅಮೆರಿಕದ “ಉಪಗ್ರಹ ದೇಶ’ವಾಗಲು ನಿರಾಕರಿಸಿ ದೊಡ್ಡಣ್ಣನ ಅವಕೃಪೆಗೆ ಪಾತ್ರರಾಗಿದ್ದೆವು ಮತ್ತು ಬ್ರಿಟಿಷರು ಅವರ ಸಾಮ್ರಾಜ್ಯದ ಗಾತ್ರವನ್ನು ಕಿರಿದುಗೊಳಿಸಿದ ನಮ್ಮನ್ನು ಎಂದಿಗೂ ಕ್ಷಮಿಸಲಿಲ್ಲ. ಸೋವಿಯತ್‌ ಯೂನಿಯನ್‌ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತನ್ನ ವಿಟೊ ಅಧಿಕಾರವನ್ನು ಬಳಸಿ ಜಮ್ಮು-ಕಾಶ್ಮೀರವನ್ನು ನಮಗೆ ಉಳಿಸಿಕೊಟ್ಟಿತು. ಆದರೆ ಚೀನದ ನಾಯಕರ ದುರುದ್ದೇಶಗಳನ್ನು ಅರ್ಥಮಾಡಿಕೊಳ್ಳುವಲ್ಲಿ ನೆಹರು ವಿಫ‌ಲರಾದರು. ಬೆನ್ನಿಗಿರಿದ ಚೀನಿಯರು ಈಶಾನ್ಯ ಗಡಿಭಾಗವನ್ನು ಆಕ್ರಮಿಸಿಕೊಂಡರು. ಜಮ್ಮು-ಕಾಶ್ಮೀರ ಮೊದಲ ಪ್ರಧಾನಿ ಮಾಡಿದ ಮಹಾ ಪ್ರಮಾದ. ಅದರ ಫ‌ಲವನ್ನು ನಾವು ಈಗಲೂ ಅನುಭವಿಸುತ್ತಿದ್ದೇವೆ.

ಆಗದೆ ಇರುವ ನೆಹರು ಪರಂಪರೆ ನಾಶದ ವಿಚಾರಕ್ಕಿಂತಲೂ ನರೇಂದ್ರ ಮೋದಿ ಟೀಕಾಕಾರರನ್ನು ಚುಚ್ಚುತ್ತಿರುವುದು ಸರ್ದಾರ್‌ ಪಟೇಲ್‌, ಸುಭಾಶ್‌ಚಂದ್ರ ಬೋಸ್‌, ಡಾ|ಶಾಮಾ ಪ್ರಸಾದ್‌ ಮುಖರ್ಜಿ ಮತ್ತು ಇವರಷ್ಟು ಪ್ರಸಿದ್ಧಿಯಾಗಿರದ ದೀನ್‌ ದಯಾಳ್‌ ಉಪಾಧ್ಯಾಯರ ಹೊಗಳಿಕೆ. ಅಂತೆಯೇ ಮಹಾತ್ಮ ಗಾಂಧಿ ಮತ್ತು ಡಾ| ಬಿ.ಆರ್‌.ಅಂಬೇಡ್ಕರ್‌ ಅವರ ಪ್ರಶಂಸೆಯೂ ಟೀಕಾಕಾರರ ಸಿಟ್ಟಿಗೆ ಕಾರಣ. ಸದ್ಯಕ್ಕೆ ಶ್ರೀರಾಮ ಮತ್ತು ಆಯೋಧ್ಯೆಯಿಂದಾಚೆಗೆ ಬಿಜೆಪಿ ಹೋಗುವುದನ್ನು ಅವರು ನಿರೀಕ್ಷಿಸಿಲ್ಲ. ವಾಜಪೇಯಿ ಸರಕಾರ 20ಕ್ಕೂ ಹೆಚ್ಚಿದ್ದ ಮಿತ್ರಪಕ್ಷಗಳ ಬೆಂಬಲ ಉಳಿಸಿಕೊಳ್ಳುವ ಸಲುವಾಗಿ ರಾಮ ಮಂದಿರ ವಿಚಾರವನ್ನೇ ಕೈಬಿಟ್ಟಿತ್ತು ಎಂಬುದು ಉಲ್ಲೇಖನೀಯ.

ಲೇಖನದಲ್ಲಿ ಮೊದಲೇ ಹೇಳಿರುವಂತೆ ಕಾಂಗ್ರೆಸ್‌, ಟೀಕಾಕಾರರು ಮತ್ತಿತರರು ಕಳೆದ ಐದು ವರ್ಷಗಳಿಂದ ನಾವು ಸೈದ್ಧಾಂತಿಕವಾಗಿ ಮತ್ತು ತಾತ್ವಿಕವಾಗಿ ಕಾಂಗ್ರೆಸ್‌ ಅಥವಾ ಬೇರೆ ಯಾವುದೇ ಪಕ್ಷದಿಂದ ಭಿನ್ನವಾಗಿರುವ ಸರಕಾರವನ್ನು ಹೊಂದಿದ್ದೇವೆ ಎಂಬ ಅಂಶವನ್ನು ಮರೆಯಬಾರದು. ವಾಜಪೇಯಿ ಸರಕಾರವೂ ಭಿನ್ನವಾಗಿತ್ತಾದರೂ ಅದು ತೃಣಮೂಲ ಕಾಂಗ್ರೆಸ್‌, ಎರಡು ಡಿಎಂಕೆಗಳು ಅಥವಾ ತೆಲುಗು ದೇಶಂ ಪಕ್ಷಗಳಂಥ ಪ್ರಾದೇಶಿಕ ಶಕ್ತಿಗಳ ಹಂಗಿನಲ್ಲಿತ್ತು. ವಾಜಪೇಯಿ ಮತ್ತು ಮೋದಿಯನ್ನು ಹೊರತುಪಡಿಸಿದರೆ ನಮ್ಮ ಎಲ್ಲ ಮಾಜಿ ಪ್ರಧಾನಿಗಳು ಒಂದಲ್ಲ ಒಂದು ಕಾಲಘಟ್ಟದಲ್ಲಿ ಕಾಂಗ್ರೆಸ್‌ ಹಿನ್ನೆಲೆ ಹೊಂದಿದವರೇ. ಈ ಪೈಕಿ ಹೆಚ್ಚಿನವರು ನೈಜ ಅಥವಾ ಹುಸಿ ಜಾತ್ಯಾತೀತವಾದವನ್ನು ಮತ್ತು ಸಮಾಜವಾದವನ್ನು ಪ್ರತಿಪಾದಿಸುತ್ತಿದ್ದರು.

ನೆಹರು-ಇಂದಿರಾ ಗಾಂಧಿ ವಂಶ ನಮ್ಮ ರಾಷ್ಟ್ರೀಯ ನಾಯಕರಿಗೆ ಮಾಡಿರುವ ಅನ್ಯಾಯಗಳನ್ನು ನರೇಂದ್ರ ಮೋದಿ ತಂಡ ಸರಿ ಮಾಡುವ ಪ್ರಯತ್ನದಲ್ಲಿರುವಂತಿದೆ. ಈ ಪ್ರಕ್ರಿಯೆಯಲ್ಲಿ ಜವಹರಲಾಲ್‌ ನೆಹರು ಅವರನ್ನು ಇನ್ನಷ್ಟು ವೈಭವೀಕರಿಸುವ ಅಗತ್ಯವಿಲ್ಲ ಎನ್ನುವುದು ಸರಕಾರದ ಭಾವನೆಯಾಗಿರಬಹುದು. ಆದರೆ ಇದನ್ನು ಮಹಾನ್‌ ರಾಷ್ಟ್ರೀಯ ನಾಯಕರ ಸಾಲಿನಿಂದ ನೆಹರು ಹೆಸನ್ನು ಅಳಿಸಿ ಹಾಕುವುದು ಎಂಬುದಾಗಿ ಗ್ರಹಿಸಲಾಗುತ್ತಿದೆ. ಕಾಂಗ್ರೆಸಿಗರು ಮತ್ತು ಎಡಪಂಥೀಯ ನಾಯಕರ ಕೈಯಲ್ಲಿ ಸಾಕಷ್ಟು ಅನುಭವಿಸಿದ್ದು ಸರ್ದಾರ್‌ ಪಟೇಲ್‌ ಒಬ್ಬರೇ ಅಲ್ಲ. ರಾಷ್ಟ್ರೀಯ ವಿಚಾರದಲ್ಲಿ ಗಾಂಧೀಜಿಗಿಂತಲೂ ಹೆಚ್ಚು ಕಷ್ಟ ಅನುಭವಿಸಿದ್ದ ಬಾಲಗಂಗಾಧರ ತಿಲಕ್‌, ಅರಬಿಂದೊ ಘೋಶ್‌, ವೀರ ಸಾವರ್ಕರ್‌ ಮತ್ತು ಸುಧಾರಣಾವಾದಿ ರಾಷ್ಟ್ರೀಯ ನಾಯಕರಾಗಿದ್ದ ಗೋಪಾಲಕೃಷ್ಣ ಗೋಖಲೆ ಅಥವಾ ಸುರೇಂದ್ರನಾಥ ಬ್ಯಾನರ್ಜಿ ಮತ್ತು ನೆಹರು ಅವರ ಸೈದ್ಧಾಂತಿಕ ವಿರೋಧಿಯಾಗಿದ್ದ ಸಿ. ರಾಜಗೋಪಾಲಚಾರಿ ಅವರನ್ನು ನಾವು ಮರೆತಿರುವಂತೆ ಕಾಣಿಸುತ್ತದೆ. ಮಾಜಿ ಪ್ರಧಾನಿಗಳಾದ ಗುಲ್ಜಾರಿಲಾಲ್‌ ನಂದ, ಲಾಲ್‌ ಬಹಾದೂರ್‌ ಶಾಸ್ತ್ರಿ, ಮೊರಾರ್ಜಿ ದೇಸಾಯಿ, ಐ.ಕೆ.ಗುಜ್ರಾಲ್‌ ಮತ್ತು ಪಿ. ವಿ.ನರಸಿಂಹ ರಾವ್‌ ಉನ್ನತ ವ್ಯಕ್ತಿತ್ವವನ್ನು ಹೊಂದಿದ್ದರು ಮತ್ತು ಹೊಗಳಿಕೆಗೆ ಅರ್ಹರು. ನಂದ ಎರಡು ಸಲ ಮಧ್ಯಂತರ ಪ್ರಧಾನಿಯಾಗಿದ್ದರು. ಭ್ರಷ್ಟಾಚಾರ ವಿರುದ್ಧ ಹೋರಾಡಿದ ಮೊದಲ ಪ್ರಧಾನಿ ಅವರು. ಇದಾಗಿದ್ದು 1960ರಲ್ಲಿ. ಆದರೆ ಅನಂತರ ಭ್ರಷ್ಟಾಚಾರ ಎಂಬ ಪಿಡುಗು ಬೃಹದಾಕಾರದಲ್ಲಿ ಬೆಳೆಯಿತು. ಇವರೆಲ್ಲ ಕಿರು ಅವಧಿಗೆ ಪ್ರಧಾನಿ ಪಟ್ಟದಲ್ಲಿದ್ದರೂ ದೇಶಕ್ಕೆ ನೀಡಿದ ಕೊಡುಗೆ ಕಡಿಮೆಯೇನಲ್ಲ.

– ಅರಕೆರೆ ಜಯರಾಮ್‌

ಟಾಪ್ ನ್ಯೂಸ್

1-asasa

Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

1-waadassda

OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Paper leak case: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: 15 ಮಂದಿ ಆರೋಪಿಗಳು ಖುಲಾಸೆ

Paper leak case: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ; 15 ಮಂದಿ ಆರೋಪಿಗಳು ಖುಲಾಸೆ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್‌ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ

ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್‌ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ

1-asasa

Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.