Udayavni Special

ವಿಶ್ವಕಪ್‌ ಫ‌ುಟ್ಬಾಲ್‌ ಅಂಗಣ ರಷ್ಯ ಬಗ್ಗೆ ನಮಗೆಷ್ಟು ಗೊತ್ತು?


Team Udayavani, Jul 18, 2018, 10:56 AM IST

football.jpg

ಸೋವಿಯತ್‌ ಒಕ್ಕೂಟದ ಪತನದ ಬಳಿಕ ರಷ್ಯ ಉಕ್ರೇನ್‌ ಹಾಗೂ ಜಾರ್ಜಿಯಗಳ ಮೇಲೆ ದಾಳಿ ನಡೆಸಿತು. ಈ ಎರಡೂ ಸ್ವತಂತ್ರ ಗಣರಾಜ್ಯಗಳ ಕೆಲ ಭೂಭಾಗಗಳು ರಷ್ಯನ್‌ ಮಿಲಿಟರಿಯ ಕಬೆjಯಲ್ಲಿವೆ. ಇನ್ನು ಮೊರ್ದಾವಿಯದ ಕತೆಯೂ ಇದೇ. ಇಂದು ಮೊರ್ದಾವಿಯಾ ರಷ್ಯನ್‌ ಗಣರಾಜ್ಯವಾಗಿದೆ. ಈ ಬಾರಿಯ ವಿಶ್ವಕಪ್‌ ಫ‌ುಟ್ಬಾಲ್‌ ಪಂದ್ಯಾವಳಿಯ ಒಂದು ಪಂದ್ಯ ನಡೆದಿರುವುದು ಇದೇ ಮೊರ್ದಾವಿಯದ ರಾಜಧಾನಿಯಾದ ಸರನ್‌ಸ್ಕ್ನಲ್ಲಿ. ಹೀಗೆಯೇ ಇನ್ನೊಂದು ಪಂದ್ಯ ನಡೆದಿರುವ ಜಾಗವಾದ ಕಝನ್‌ ಒಂದು ಪರಿಪೂರ್ಣ ಸ್ವಾಯತ್ತೆಯ ರಷ್ಯನ್‌ ನಗರವೇನಲ್ಲ. 

ಕಳೆದ ಒಂದು ತಿಂಗಳಿಂದ ನಡೆಯುತ್ತಿದ್ದ ಫಿಫಾ ವಿಶ್ವಕಪ್‌ ಫ‌ುಟ್ಬಾಲ್‌ ಪಂದ್ಯಾವಳಿ ಭಾನುವಾರ ಮುಕ್ತಾಯಗೊಂಡಿದೆ. 

ಆದರೆ ಈ ನಡುವೆ ಚರಿತ್ರೆಯ ಬಹುಮುಖ್ಯವಾದ ಯಾತನಾಮಯ ಭಾಗವನ್ನು ನಾವು ಈ ಹೊತ್ತಿನಲ್ಲಿ ನೆನಪು ಮಾಡಿಕೊಳ್ಳದೆ ಇರುವಂತಿಲ್ಲ. ಹಿಂದಿನ ಕಾಲದ ಕಮ್ಯುನಿಸ್ಟರಿಗೆ ಈ ಐತಿಹಾಸಿಕ ದುರಂತದ ಕತೆ ಚೆನ್ನಾಗಿ ತಿಳಿದಿತ್ತು. ಪಂದ್ಯಾವಳಿಯನ್ನು 12 ನಗರದಲ್ಲಿ ಏರ್ಪಡಿಸಲಾಗಿತ್ತು. ರಷ್ಯದ ಏಷ್ಯಾ ಭಾಗದಲ್ಲಿರುವ ಉರಾಲ್‌ ಪರ್ವತ ರಷ್ಯ ಶ್ರೇಣಿಗಳಿರುವ ಪ್ರದೇಶವಾದ ಯೆಕತೆರಿನ್‌ ಬರ್ಗ್‌ ಇವುಗಳಲ್ಲೊಂದಾಗಿದ್ದು, ಈ ಜಾಗಕ್ಕೂ, ಮೇಲೆ ಹೇಳಿದ ರಷ್ಯದ ಕಹಿ ಚರಿತ್ರೆಗೂ ಅವಿನಾಭಾವ ಸಂಬಂಧವಿದೆ.

ಈ ಕಹಿ ಘಟನೆ ನಡೆದದ್ದು, ಇಂದಿಗೆ ಸರಿಯಾಗಿ ನೂರು ವರ್ಷಗಳ ಹಿಂದೆ. 1918ರ ಜುಲೈ 17ರಂದು ಬಾಲೆÏವಿಕರು (ರಷ್ಯನ್‌ ಕಮ್ಯುನಿಸ್ಟರು) ರಷ್ಯನ್‌ ಚಕ್ರವರ್ತಿಯಾಗಿದ್ದ ಝಾರ್‌ ದ್ವಿತೀಯ ನಿಕೊಲಸ್‌ನನ್ನು ಆತನ ರಾಣಿ ಅಲೆಗಾÕಂದ್ರಾ ಹಾಗೂ ಈ ದಂಪತಿಯ ನಾಲ್ವರು ಪುತ್ರಿಯರನ್ನು ಮತ್ತು ಏಕೈಕ ಪುತ್ರನನ್ನು ಗುಂಡಿಕ್ಕಿ ಕೊಲ್ಲಿಸಿದ ಕತೆ ಇದು. ಈ ಏಳು ಮಂದಿಯನ್ನು ಸೈಂಟ್‌ ಪೀಟರ್ಬರ್ಗ್‌ನಿಂದ ಯೆಕತೆರಿನ್‌ಬರ್ಗ್‌ಗೆ “ಸ್ಥಳಾಂತರಿಸಲಾಯಿತು’ – ವಧಾಕಾರರ ಗುಂಡುಗಳಿಗೆ ಬಲಿಯಾಗಿಸುವುದಕ್ಕಾಗಿ. ಈ ಕುಟುಂಬದ ನಾಲ್ವರು ರಾಜಕುಮಾರಿಯರ ಪೈಕಿ ಅನಾಸ್ತಾಸಿಯಾ ಎಂಬಾಕೆ ಮರಣದಂಡನೆ ನೀಡಲು ಅಣಿಯಾಗಿದ್ದ ಹಂತಕರ ಕಣ್ತಪ್ಪಿಸಿ ಏಕಾಯೇಕಿ ನಾಪತ್ತೆಯಾಗಿ, ಎಷ್ಟೋ ವರ್ಷಗಳ ಬಳಿಕ ಅಮೆರಿಕವನ್ನು ಪ್ರವೇಶಿಸಿ ಅಲ್ಲೇ ವಾಸ್ತವ ಹೂಡಿದಳೆಂಬ ವದಂತಿ ಹಬ್ಬಿತ್ತು. ಆಕೆ ಬದುಕಿದ್ದು, ಅಮೆರಿಕದಲ್ಲಿ ಕಾಣಿಸಿಕೊಂಡಿದ್ದು ನಿಜವೆಂದು ಹೇಳಿದಾಕೆ ನಿಕೋಲಸ್‌ ಕುಟುಂಬದೊಂದಿಗೆ ನಿಕಟ ಸಂಬಂಧ ಹೊಂದಿದ್ದ ವಿವಾದಿತ “ಯೋಗಿ’ ರಾಸ್‌ ಪುಟಿನ್‌ (ಗ್ರಿಗೊರಿ ರಾಸ್‌ ಪುಟಿನ್‌)ನ ಪುತ್ರಿ. ಆದರೆ ಆಕೆಯ ಈ ಮಾತು ಸುಳ್ಳೆಂದೂ, ಹಾಗೆ ಅಮೆರಿಕದಲ್ಲಿ ಕಾಣಿಸಿಕೊಂಡವಳು ಝಾರ್‌ ನಿಕೊಲಸ್‌ನ ಪುತ್ರಿಯನ್ನು ಹೋಲುವ ಇನ್ನೊಬ್ಬ ಮಹಿಳೆಯೆಂದೂ ವಾದಿಸುವವರಿದ್ದಾರೆ. ಝಾರ್‌ ನಿಕೊಲಸ್‌ಗೆ ಬ್ರಿಟಿಷ್‌ ರಾಜವಂಶದೊಂದಿಗೆ, 20ನೆಯ ಶತಮಾನದ ಆದಿಭಾಗದಲ್ಲಿ ಯುರೋಪಿನಲ್ಲಿ ಅಸ್ತಿತ್ವದಲ್ಲಿದ್ದ ರಾಜವಂಶಗಳೊಂದಿಗೆ ಸಂಬಂಧವಿತ್ತು. ನಿಕೊಲಸ್‌ ಚಕ್ರವರ್ತಿಯ ತಾಯಿ ಕಡೆಯ ಸಂಬಂಧಿಗಳ ಪೈಕಿ ಬ್ರಿಟಿಷ್‌ ದೊರೆ ಏಳನೆಯ ಎಡ್ವರ್ಡ್‌ ಆತನ ಚಿಕ್ಕಪ್ಪನಾಗಬೇಕು. 

ಅದೇನೇ ಇರಲಿ, 1918ರ ಬಳಿಕ ಇಂದಿನವರೆಗಿನ ಈ ಒಂದು ಶತಮಾನದ ಅವಧಿಯಲ್ಲಿ ರಷ್ಯ ಒಂದು ವಿಭಿನ್ನ ನಿಲುವಿನ ರಾಷ್ಟ್ರವಾಗಿ ಹೊರಹೊಮ್ಮಿದೆ. ಅದು ಈಗ ಕಮ್ಯುನಿಸಮ್‌ಗೆ ತಿಲಾಂಜಲಿಯಿತ್ತಿದೆ. ತನ್ನ ಮಾರ್ಗದರ್ಶಿ ದೀಪಿಕೆಗಳಾಗಿದ್ದ ಲೆನಿನ್‌, ಸ್ಟಾಲಿನ್‌ ಮತ್ತಿತರರನ್ನು ಕಸದ ಬುಟ್ಟಿಗೆ ಎಸೆದಿದೆ. ಹಳೆಯ ರಾಜವಂಶಕ್ಕೆ ಪುನರ್ವಸತಿ ಕಲ್ಪಿಸಿದೆ; ಜತೆಗೆ ಸಂಪ್ರದಾಯವಾದಿ ರಷ್ಯನ್‌ ಚರ್ಚ್‌ ಅನ್ನು ಪುನರುಜ್ಜೀವಿತಗೊಳಿಸಿದೆ. 1991ರಿಂದ ಸೋವಿಯತ್‌ ಒಕ್ಕೂಟ ಅಸ್ತಿತ್ವದಲ್ಲಿಲ್ಲ; ಅದೀಗ 10 ಗಣರಾಜ್ಯ ಗಳಾಗಿ ಪರಿವರ್ತಿತವಾಗಿದೆ. ಈ ಎಲ್ಲ ರಾಜ್ಯಗಳೂ ಸ್ವತಂತ್ರ ನೆಲೆಯ (ಸಾರ್ವಭೌಮ) ಗಣರಾಜ್ಯಗಳು.

ರಷ್ಯದಲ್ಲಿ, ಅರ್ಥಾತ್‌ ಅದರ ವಿವಿಧ ನಗರಗಳಲ್ಲಿ ನಡೆದಿರುವ ಫ‌ುಟ್ಬಾಲ್‌ ಪಂದ್ಯಗಳು ಭಾರತದ ಟಿವಿ ವೀಕ್ಷಕರಿಗೆ ಒಂದು ಉಪಕಾರವನ್ನಂತೂ ಮಾಡಿವೆ. ರಷ್ಯ ಜಗತ್ತಿನ ಅತ್ಯಂತ ದೊಡ್ಡ, ತನ್ನದೇ ಸಿರಿವಂತಿಕೆ ಹೊಂದಿರುವ ರಾಷ್ಟ್ರವೆಂಬ ಅರಿವು ಅನೇಕ ಭಾರತೀಯ ವೀಕ್ಷಕರಲ್ಲಿ ಮೂಡಿರಲೇಬೇಕು.

ಪಂದ್ಯಗಳನ್ನು ಏರ್ಪಡಿಸಲಾಗಿರುವ ರಷ್ಯದ 12 ನಗರಗಳು ಪರಸ್ಪರ ದೂರದಲ್ಲಿರುವುದರಿಂದ, ತಮ್ಮ ತಮ್ಮ ರಾಷ್ಟ್ರಗಳ ತಂಡಗಳ ಪಂದ್ಯಗಳನ್ನು ವೀಕ್ಷಿಸಬೇಕೆಂಬ ತವಕದಲ್ಲಿದ್ದ ಕ್ರೀಡಾ ಪ್ರೇಮಿಗಳಿಗೆ ಆರ್ಥಿಕ ದೃಷ್ಟಿಯಿಂದ ಇದೊಂದು ದುಬಾರಿ ಪಂದ್ಯಾವಳಿ ಭಾವನೆ ಬಂದಿರಲೂ ಸಾಕು. ಭಾರತದಿಂದ ಸುಮಾರು 14,000 ಮಂದಿ ಪಂದ್ಯಗಳನ್ನು ವೀಕ್ಷಿಸಲೆಂದೇ ರಷ್ಯಕ್ಕೆ ತೆರಳಿದ್ದರೆಂದು ವರದಿಗಳು ಹೇಳುತ್ತಿವೆ. ಆದರೆ ಟಿ.ವಿ.ಯಲ್ಲಿ ತೋರಿಸಲಾದ ಪಂದ್ಯಗಳ ಪ್ರಸಾರದ ವೇಳೆ ಕಾಣಿಸಿಕೊಂಡ ವೀಕ್ಷಕರಲ್ಲಿ ಒಬ್ಬ ಭಾರತೀಯನೂ ನನ್ನ ಕಣ್ಣಿಗೆ ಬೀಳಲಿಲ್ಲ. ಏನೇ ಇರಲಿ, ಈ ಬಾರಿಯ ಪಂದ್ಯಾವಳಿಗೆ ಮಾನ್ಯತೆ ಪಡೆದುಕೊಂಡಿದ್ದ 32 ರಾಷ್ಟ್ರಗಳಲ್ಲಿ ಭಾರತ ಇಲ್ಲ ಎಂಬ ವಾಸ್ತವಾಂಶವನ್ನು ಪರಿಗಣಿಸಿ ಹೇಳುವುದಾದರೆ ಸಾವಿರಾರು ಮಂದಿ ಭಾರತೀಯರು ವೀಕ್ಷಣೆಗೆಂದೇ ಅಲ್ಲಿಗೆ ಹೋಗಿದ್ದಾರೆಂಬುದು ಒಂದು ಹೃದಯಸ್ಪರ್ಶಿ ವಿದ್ಯಮಾನವೇ ಹೌದು.

ಅಂದ ಹಾಗೆ ಈ ಪಂದ್ಯಗಳನ್ನು ವೀಕ್ಷಿಸಿರುವ ಅನೇಕರು ಇಂಟರ್‌ನೆಟ್‌ನಲ್ಲಿ ತೋರಿಸಲಾಗಿದ್ದ 12 ಪಂದ್ಯ ಸ್ಥಳಗಳ ಪೈಕಿ ಕನಿಷ್ಠ 10 ನಗರಗಳನ್ನು ಗುರುತಿಸುವುದಕ್ಕಾಗಿ ಅಟ್ಲಾಸ್‌ಗಳ ಮೊರೆ ಹೋಗಿರುವ ಸಾಧ್ಯತೆಯಿದೆ! ಸಾಮಾನ್ಯ ಟಿ.ವಿ. ವೀಕ್ಷಕರಿಗಾ ಗಲಿ, ಪತ್ರಿಕೆಗಳನ್ನು ಓದುಗರಿಗಾಗಲಿ ಮಾಸ್ಕೋ ಹಾಗೂ ಸೈಂಟ್‌ ಪೀಟರ್ ಬರ್ಗ್‌ನಂಥ ಪರಿಚಿತ ನಗರಗಳನ್ನು ಬಿಟ್ಟರೆ ಉಳಿದ ನಗರಗಳು ಎಲ್ಲಿವೆ ಎಂದೇ ತಿಳಿದಿರಲಾರದೆಂದು ತೋರುತ್ತದೆ.

ಹಾಗೆ ನೋಡಿದರೆ ನಮ್ಮ ದೇಶದ ಜನರಿಗೆ (ಇವರಲ್ಲಿ ವಿದ್ಯಾವಂತರೂ ಇದ್ದಾರೆ) ರಷ್ಯಾಕ್ಕಿಂತಲೂ ಅಮೆರಿಕದ ಬಗ್ಗೆ ಹೆಚ್ಚು ಗೊತ್ತು ! ಭಾರತೀಯರು ದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ನಿಮಿತ್ತ ಅಥವಾ ವಿದ್ಯಾರ್ಜನೆಗಾಗಿ ಅಮೆರಿಕಕ್ಕೆ ಹೋಗಿ, ಕೆಲವರು ಅಲ್ಲೇ ನೆಲೆಸಿರುವುದು ಇದಕ್ಕೆ ಕಾರಣ. ಈಗ ಡೊನಾಲ್ಡ್‌ ಟ್ರಂಪ್‌ ಅಧ್ಯಕ್ಷರಾಗಿರುವುದರಿಂದ ಬಹುಶಃ ಬಹುತೇಕ ಭಾರತೀ ಯರು ಅಮೆರಿಕದಲ್ಲಿನ ಉದ್ಯೋಗ/ಶಿಕ್ಷಣಾವಕಾಶದತ್ತ ಹೆಚ್ಚಿನ ಒಲವು ತೋರಲಾರರು ಎಂಬುದೇನೋ ನಿಜವೇ. ಆದರೂ ಭಾರತ ಹಾಗೂ ಅಮೆರಿಕದ ನಡುವಿನ ಸಂಬಂಧಕ್ಕೆ ಹೋಲಿಸಿದರೆ, ಭಾರತ ಹಾಗೂ ಭೂತಪೂರ್ವ ಸೋವಿಯತ್‌ ಒಕ್ಕೂಟದ ನಡುವಿನ ದೀರ್ಘ‌ಕಾಲದ “ಕಾಮ್ರೇಡ್‌ತನ’ದ ಹೊರತಾಗಿಯೂ ನಮ್ಮ ಹಾಗೂ ರಷ್ಯನರ ನಡುವಿನ ಸಂಬಂಧ ಅಷ್ಟೇನೂ ಹೇಳಿಕೊಳ್ಳುವಷ್ಟು ಆಪ್ತವಾಗಿ ಇಲ್ಲ. 

ವಿಶ್ವಕಪ್‌ ಫ‌ುಟ್ಬಾಲ್‌ ಪರ್ವದ ಸಂಭ್ರಮದ ಎಡೆಯಲ್ಲೇ ರಷ್ಯದ ಖಯಾಲಿಯೊಂದನ್ನು ಅಗತ್ಯವಾಗಿ ಗಮನಿಸಬೇಕು. ಅದಂತೂ ಕಣ್ಣಿಗೆ ರಾಚುವಂತಿದೆ. ರಷ್ಯವನ್ನು ನೀವು ಯಾವ ಹೆಸರಿನಿಂದ ಬೇಕಾದರೂ ಕರೆಯಿರಿ. ಆ ರಾಷ್ಟ್ರ ಗಾತ್ರದಲ್ಲಿ ಎಷ್ಟೇ ವಿಶಾಲ ವಾಗಿರಲಿ, ಅಥವಾ ಅದು ಏಷ್ಯಾ ಖಂಡದ ದೊಡ್ಡ ಭೂ ಪ್ರದೇಶವನ್ನು ಪಡೆದುಕೊಂಡಿರಲಿ, ಅದರ ಭೂಬಾಕತನವಂತೂ ಎದ್ದು ತೋರುವ ರೀತಿಯಲ್ಲಿ ಪ್ರಕಟವಾಗಿದೆ. ಝಾರ್‌ ಆಳ್ವಿಕೆಯ ಕಾಲದಲ್ಲೇ ಆಗಲಿ, ಆ ಮೇಲಿನ ಕಮ್ಯೂನಿಸ್ಟ್‌ ಆಡಳಿತದ ಕಾಲದಲ್ಲಾಗಲಿ ಅಥವಾ ಕಮ್ಯುನಿಸ್ಟ್‌ ಯುಗಾನಂತರದ ದಿನಗಳ ಲ್ಲಾಗಲಿ, ರಷ್ಯಾದ ಆಡಳಿತಗಾರರು ನೆರೆರಾಷ್ಟ್ರಗಳ ಭೂಮಿಯನ್ನು ಆಕ್ರಮಿಸಿ ತಮ್ಮ ಗಡಿಗೆ ಸೇರ್ಪಡೆಗೊಳಿಸುತ್ತಲೇ ಬಂದಿದ್ದಾರೆ. ನಮ್ಮ ದೇಶ ರಷ್ಯಾವನ್ನು ಸಾಮ್ರಾಜ್ಯಶಾಹಿ ಅಥವಾ ವಸಾಹತುಶಾಹಿಗಳೆಂದು ಪರಿಗಣಿಸಿರದಿದ್ದರೂ ಅಲ್ಲಿನ ಆಡಳಿತ ಗಾರರ ಒಲವು – ನಿಲುವುಗಳು ಇವೇ ಎಂಬುದು ಸರ್ವವಿದಿತ. ಉದಾಹರಣೆಗೆ ಈ ಬಾರಿಯ ಪಂದ್ಯ ಸ್ಥಳಗಳಲ್ಲೊಂದಾದ ಕಲಿನಿನ್‌ಗಾÅಡ್‌ ನಗರವನ್ನೇ ತೆಗೆದುಕೊಳ್ಳಿ. ಇದರ ಹಳೆಯ ಹೆಸರು ಕಾನಿಂಗ್ಸ್‌ ಬರ್ಗ್‌. ಇದು ಜರ್ಮನಿಯ ಭಾಗವಾಗಿತ್ತು. 1945ರಲ್ಲಿ ರಷ್ಯ ಇದನ್ನು ಆಕ್ರಮಿಸಿ ತನ್ನ ತೆಕ್ಕೆಗೆ ಸೇರಿಸಿಕೊಂಡಿತು. ಪೋಲೆಂಡ್‌ ಹಾಗೂ ಲಿಥುವೇನಿಯಗಳ ನಡುವೆ ಇರುವ ಇದು ಇಂದು ರಷ್ಯದ “ಪರರಾಷ್ಟ್ರ ಆವೃತ’ ಭೂಭಾಗ. ರಷ್ಯದ ಕಮ್ಯುನಿಸ್ಟ್‌ ಆಡಳಿತ ಕೋನಿಂಗ್ಸ್‌ಬರ್ಗ್‌ ಎಂಬ ಹೆಸರನ್ನು ಕೈಬಿಟ್ಟು ಜೋಸೆಫ್ ಸ್ಟಾಲಿನ್‌ ಅವರ ಸಹವರ್ತಿಯಾಗಿದ್ದ ಕಲಿನಿನ್‌ ಅವರ ಹೆಸರನ್ನು ಇದಕ್ಕೆ ಇರಿಸಿತು. ಕಲಿನಿನ್‌ ಗ್ರಾಡ್‌ಗೂ ಕರ್ನಾಟಕಕ್ಕೂ ಸ್ವಲ್ಪ ಮಟ್ಟಿನ ಸಂಬಂಧವಿದೆ. ನಮ್ಮ ಅಂದಿನ ಮೈಸೂರಿನ ಸುವಿಖ್ಯಾತ ವಾಸ್ತುಶಿಲ್ಪಿಗಳು ಹಾಗೂ ನಗರ ನಿರ್ಮಾಣ ಯೋಜನಾಧಿಕಾರಿಗಳಲ್ಲೊಬ್ಬರಾದ ಓಟೋ ಕೋನಿಂಗ್ಸ್‌ಬರ್ಗರ್‌ ಅವರು ಈ ನಗರದಿಂದ ಬಂದವರು. ನಾಝಿಗಳಿಂದ ಆಗಬಹುದಾಗಿದ್ದ ಪ್ರಾಣಾಪಾಯದಿಂದ ತಪ್ಪಿಸಿ ಕೊಳ್ಳುವ ಸಲುವಾಗಿ ಅವರು ಈ ನಗರದಿಂದ ಪಲಾಯನ ಗೈದು ಮೈಸೂರಿಗೆ ಬಂದಿದ್ದರು. ಅವರೊಂದಿಗೆ ಪ್ರತಿಭಾನ್ವಿತ ಭೌತ ಶಾಸ್ತ್ರಜ್ಞರಾಗಿದ್ದ ಅವರ ಚಿಕ್ಕಪ್ಪ ಮ್ಯಾಕ್ಸ್‌ ಬ್ರೌನ್‌ ಕೂಡ ಬಂದಿದ್ದರು. ಬ್ರೌನ್‌ ಅವರು ಮುಂದೆ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್‌ನ ಭೌತಶಾಸ್ತ್ರ ವಿಭಾಗ ಸೇರಿದರು. 

ಮೈಸೂರು ಸರಕಾರ ಕೋನಿಂಗ್ಸ್‌ಬರ್ಗರ್‌ ಅವರನ್ನು ಮುಖ್ಯ ವಾಸ್ತು ವಿನ್ಯಾಸಕಾರನೆಂದು ನೇಮಕ ಮಾಡಿತ್ತು. ಕೋನಿಂಗ್ಸ್‌ ಬರ್ಗರ್‌ ಬೆಂಗಳೂರು ಹಾಗೂ ಮೈಸೂರುಗಳಲ್ಲಿ ಪರಂಪರಾಗತ ಶೈಲಿ/ವಿನ್ಯಾಸಗಳನ್ನೊಳಗೊಂಡ ಕಟ್ಟಡಗಳ ನಿರ್ಮಾಣಕ್ಕೆ ಕಾರಣ ರಾದರು. ಮುಂದೆ ಅವರು ಭಾರತ ಸರಕಾರದ ಸೇವೆಗೆ ನೇಮಿತರಾಗಿ ಒಡಿಶಾದ ರಾಜಧಾನಿಯಾದ ಭುವನೇಶ್ವರ ನಗರದ ನಿರ್ಮಾಣ ಕಾರ್ಯಕ್ಕೆ ಮಹಣ್ತೀದ ಕೊಡುಗೆಯಿತ್ತರು. ಕಲಿನಿನ್‌ ಗ್ರಾಡ್‌ಗೆ ರಷ್ಯದ ಆಡಳಿತಗಾರರು ತುಂಬ ಪ್ರಾಮುಖ್ಯ ನೀಡಿದ್ದಾರೆ; ಅದನ್ನು ತಮ್ಮ ಮುಷ್ಟಿಯೊಳಗೇ ಇರಿಸಿಕೊಳ್ಳುವಲ್ಲಿ ತೀವ್ರ ಆಸಕ್ತಿಯನ್ನು ತೋರುತ್ತ ಬಂದಿದ್ದಾರೆ; ಏಕೆಂದರೆ ರಷ್ಯದ ಪರಮಾಣು ಶಸ್ತ್ರಾಸ್ತ್ರಗಳ ದಾಸ್ತಾನಿನ ಒಂದು ಭಾಗ ಇರುವುದು ಇಲ್ಲೇ. ಅಲ್ಲದೆ, ಇದು ಬಾಲ್ಟಿಕ್‌ ಸಮುದ್ರದ ಮೇಲೆ ಕಣ್ಗಾವಲು ಇರಿಸಿರುವ ನೌಕಾನೆಲೆಯೂ ಹೌದು.

ಸೋವಿಯತ್‌ ಒಕ್ಕೂಟದ ಪತನದ ಬಳಿಕ ರಷ್ಯ ಉಕ್ರೇನ್‌ ಹಾಗೂ ಜಾರ್ಜಿಯಗಳ ಮೇಲೆ ದಾಳಿ ನಡೆಸಿತು. ಈ ಎರಡೂ ಸ್ವತಂತ್ರ ಗಣರಾಜ್ಯಗಳ ಕೆಲ ಭೂಭಾಗಗಳು ರಷ್ಯನ್‌ ಮಿಲಿಟರಿಯ ಕಬೆjಯಲ್ಲಿವೆ. ಇನ್ನು ಮೊರ್ದಾವಿಯದ ಕತೆಯೂ ಇದೇ. ಇಂದು ಮೊರ್ದಾವಿಯಾ ರಷ್ಯನ್‌ ಗಣರಾಜ್ಯವಾಗಿದೆ. ಈ ಬಾರಿಯ ವಿಶ್ವಕಪ್‌ ಫ‌ುಟ್ಬಾಲ್‌ ಪಂದ್ಯಾವಳಿಯ ಒಂದು ಪಂದ್ಯ ನಡೆದಿ ರುವುದು ಇದೇ ಮೊರ್ದಾವಿಯದ ರಾಜಧಾನಿಯಾದ ಸರನ್‌
ಸ್ಕ್ನಲ್ಲಿ. ಹೀಗೆಯೇ ಇನ್ನೊಂದು ಪಂದ್ಯ ನಡೆದಿರುವ ಜಾಗವಾದ ಕಝನ್‌ ಒಂದು ಪರಿಪೂರ್ಣ ಸ್ವಾಯತ್ತೆಯ ರಷ್ಯನ್‌ ನಗರವೇನಲ್ಲ. ಅದು ಇನ್ನೊಂದು ರಷ್ಯನ್‌ ಗಣರಾಜ್ಯವಾದ ಟೌಟರ್‌ಸ್ಟಾನ್‌ನ ರಾಜಧಾನಿ. ಮೊರ್ದಾವಿಯ ಹಾಗೂ ಟೌಟರ್‌ಸ್ಟಾನ್‌ ಸ್ವತಂತ್ರ ರಾಷ್ಟ್ರಗಳಲ್ಲವಾದರೂ ಪೂರ್ಣ ಪ್ರಮಾಣದಲ್ಲಿ ರಷ್ಯದ ಅವಿಭಾಜ್ಯ ಅಂಗಗಳೆನಿಸಿವೆ ಎನ್ನುವ ಹಾಗಿಲ್ಲ.

ರಷ್ಯ 2008ರಲ್ಲಿ ಜಾರ್ಜಿಯದ ಮೇಲೆ ತನ್ನ ಹಸ್ತ ಚಾಚಿತು; ಅದರ ಎರಡು ಗಡಿ ಪ್ರದೇಶಗಳಾದ ಒಸೆಟಿಯಾ ಹಾಗೂ ಅಬ್ಕಾರ್ಜಿಯಾಗಳ ಸ್ವಾತಂತ್ರ್ಯವನ್ನು ವೈರಿಪಡೆಗಳಿಂದ ಉಳಿಸಿಕೊ ಳ್ಳುವ ಜಾರ್ಜಿಯದ ಆಶಯದ ಬೆಂಬಲಕ್ಕಾಗಿ ನೀಡಿದ ನೆರವಿನ ನೆಪದಲ್ಲಿ ನಡೆದ ಅತಿಕ್ರಮಣ ಇದೆನ್ನಬಹುದು. ಇಲ್ಲಿರುವ ಸೇನಾಪಡೆಗಳನ್ನು ರಷ್ಯ ಇನ್ನೂ ಹಿಂದಕ್ಕೆ ಕರೆಸಿಕೊಂಡಿಲ್ಲ. 

ರಷ್ಯ ಹಾಗೂ ಭಾರತದ ಪ್ರಜೆಗಳ ಮಧ್ಯೆ ವೈಯಕ್ತಿಕ ಸಂಪರ್ಕ ಇಲ್ಲವೆಂಬ ಮಾತನ್ನು ಒತ್ತಟ್ಟಿಗಿಟ್ಟು ನೋಡಿದರೆ, ರಷ್ಯದ ಬಗ್ಗೆ ನಮಗೆ ಹೆಚ್ಚೇನೂ ತಿಳಿದಿಲ್ಲ ಎಂಬಂಥ ನಮ್ಮ ಇಂದಿನ ಸ್ಥಿತಿಗೆ ನಮ್ಮ ಭೂಗೋಳ ಶಾಸ್ತ್ರದ ಪಠ್ಯಗಳೇ ಕಾರಣ ಎನ್ನಬೇಕಾಗಿದೆ. ಜಿಯಾಗ್ರಫಿ ಅಥವಾ ಭೂಗೋಳಶಾಸ್ತ್ರ ಅನೇಕ ವಿದ್ಯಾರ್ಥಿಗಳ ಪಾಲಿಗೆ ಒಂದು “ಬೋರಿಂಗ್‌ ಸಬೆjಕ್ಟ್’, ಯಾವ ತೆರನ ಆಸಕ್ತಿಯನ್ನೂ ಹುಟ್ಟಿಸದ ವಿಷಯ; ನಕ್ಷೆ (ಮ್ಯಾಪ್‌) ಎಂದರೆ ಮೂಗುಮುರಿ ಯುವವರೇ ಅನೇಕರು. ಟೆಲಿವಿಜನ್‌ ಆವಿಷ್ಕಾರದ ಬಳಿಕ ಅನೇಕ ವಿದೇಶೀ ಭೂಭಾಗಗಳು ನಮ್ಮ ಮನೆಬಾಗಿಲಿಗೇ ಬಂದಿವೆ; ಹೀಗಿದ್ದರೂ ಭೂಗೋಳ ಪಠ್ಯ ಹಾಗೂ ನಕ್ಷೆಗಳ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆಯೇನೂ ಆಗಿಲ್ಲ.

ಸ್ವಾತಂತ್ರ್ಯಪೂರ್ವ ವರ್ಷ ಗಳಲ್ಲಿ ಇಂಗ್ಲಿಷ್‌ನಲ್ಲಿದ್ದ ನಮ್ಮ ಹೆಚ್ಚಿನ ಭೂಗೋಳಶಾಸ್ತ್ರ ಪಠ್ಯ ಪುಸ್ತಕಗಳು ಬ್ರಿಟನಿನ ಮೇಲೆಯೇ ತಮ್ಮ ಗಮನವನ್ನು ಕೇಂದ್ರೀ ಕರಿಸಿದ್ದವು. ಸರ್‌ ಡ್ನೂಡ್ಲಿ ಸ್ಟಾಂಪರ್‌ರಂಥ ಬ್ರಿಟಿಷ್‌ ಭೂಗೋಳ ಶಾಸ್ತ್ರಜ್ಞರು ಇಂಥ ಪಠ್ಯಗಳ ಲೇಖಕರಾಗಿದ್ದರು. ಭಾರತದ ಶಾಲಾ ಮಕ್ಕಳಿಗಾಗಿ ಈತ ರಚಿಸಿದ್ದ ಪಠ್ಯ ಪುಸ್ತಕವೊಂದರಲ್ಲಿ, ಸುಮಾರು 100ಕ್ಕೂ ಹೆಚ್ಚಿನ ಪುಟಗಳು ಬ್ರಿಟನ್‌ ಒಂದಕ್ಕೇ ಮೀಸಲಾಗಿದ್ದವು. ಇಂದಿನ ಎರಡು ಕೊರಿಯಾಗಳು ಹಾಗೂ ವಿಯೆಟ್ನಾಮ್‌ಗಾಗಿ ಡ್ನೂಡ್ಲಿಯ ಪಠ್ಯದಲ್ಲಿ ಬಳಕೆಯಾಗಿದ್ದುದು ತಲಾ ಅರ್ಧಪುಟ ಮಾತ್ರ!

ಇಂದು ನಮ್ಮ ಹೆಚ್ಚಿನ ರಸ್ತೆಗಳಲ್ಲಿ ಕಾರುಬಾರು ನಡೆಸುತ್ತಿರುವ ಹುಂಡೈ ಕಾರುಗಳ ವಿನ್ಯಾಸ ಕಾರ್ಯ ಹಾಗೂ ಅಭಿವೃದ್ಧಿಪಡಿಸುವ ಕಾರ್ಯ ನಡೆಯುತ್ತಿರುವುದು ದಕ್ಷಿಣ ಕೊರಿಯಾದಲ್ಲಿ; ಆದರೆ ಭಾರತದಲ್ಲಿ ಹುಂಡೈ ಕಾರಿನ ಭಾಗಗಳ ಸಂಯೋಜನ ಕಾರ್ಯವಷ್ಟೇ ನಡೆಯುತ್ತಿದೆ. ಈ ಮೂಲಕ “ಮೇಡ್‌ ಇನ್‌ ಇಂಡಿಯಾ’ ಎನ್ನಿಸಿಕೊಂಡಿವೆ.

ಆದರೆ ಬ್ರಿಟಿಷ್‌ ಕಾರುಗಳಿಗೆ ಒಂದು ಪರಂಪರಾ ಮೌಲ್ಯವಿದೆ.ಬ್ರಿಟಿಷ್‌ ಕಂಪೆನಿಗಳು ತಮ್ಮ ದೇಶದಲ್ಲಿ ಕೇವಲ “ಫಾರಿನ್‌ ಮೇಕ್‌’ಗಳನ್ನಷ್ಟೆ ಉತ್ಪಾದಿಸುತ್ತವೆ. ಈ ಮಾತನ್ನು ಇಲ್ಲಿ ಉಲ್ಲೇಖೀಸುತ್ತಿರುವುದು ಉಳಿದೆಲ್ಲ ಕೈಗಾರಿಕಾ ಉತ್ಪನ್ನಗಳಿಗಿಂತ ನಮ್ಮ ಕಣ್ಣಿಗೆ ಇಂದು ಹೆಚ್ಚಾಗಿ ಬೀಳುತ್ತಿರುವುದು ಕಾರುಗಳೇ ಎಂಬ ಕಾರಣಕ್ಕಾಗಿ. 

ಏನಿದ್ದರೂ, ಬಹು ಹಿಂದಿನಿಂದಲೂ ನಮ್ಮ ಪಾಲಿಗೆ ಇಂಗ್ಲಿಷ್‌ ಪಠ್ಯಪುಸ್ತಕಗಳಿಗಿಂತಲೂ ಕನ್ನಡ ಪಠ್ಯ ಪುಸ್ತಕಗಳೇ ಪ್ರಸ್ತುತವೆನಿಸಿದ್ದವು. ಅವುಗಳಲ್ಲಿನ ವಿಷಯ ಸಂಗ್ರಹವೂ ಸಾಕಷ್ಟು ಉತ್ಕೃಷ್ಟ ಗುಣಮಟ್ಟದಿಂದ ಕೂಡಿತ್ತು. ಅದು ರಾಷ್ಟ್ರೀಕೃತ ಪಠ್ಯಪುಸ್ತಕಗಳ ಕಾಲವಲ್ಲ, ಖಾಸಗಿ ಪಠ್ಯಗಳ ಕಾಲ. ಮೈಸೂರು ವಿ.ವಿ.ಯ ಭೂವಿಜ್ಞಾನ ವಿಭಾಗದ ಪ್ರೊ| ಗುಲಾಂ ಮಹಮ್ಮದ್‌ ಘೋರಿ ಅವರು ಇಂಥ ಪಠ್ಯಪುಸ್ತಕವೊಂದನ್ನು ರಚಿಸಿದ್ದರು. ಇನ್ನು ಜಾಗತಿಕ ಭೂಗೋಳಶಾಸ್ತ್ರವನ್ನು ವಿಸ್ತೃತವಾಗಿ ವಿವರಿಸುವ ಡಾ| ಕೋಟ ಶಿವರಾಮ ಕಾರಂತರ ಮೂರು ಸಂಪುಟಗಳ ಮಕ್ಕಳ ವಿಶ್ವಕೋಶ “ಬಾಲ ಪ್ರಪಂಚ’ವನ್ನು ಮರೆಯುವುದು ಹೇಗೆ? ಅವರ ಈ ಕೃತಿಯಲ್ಲಿ ವಿಶ್ವಕಪ್‌ ಪಂದ್ಯಾವಳಿ ನಡೆದಿರುವ ಕೆಲವೊಂದು ಸ್ಥಳಗಳನ್ನು (ಉದಾಹರಣೆಗೆ – ವಿಜಿ, ನೊವ್‌ಗೊರೋಡ್‌)ಉಲ್ಲೇಖೀಸಿ ತಕ್ಕ ವಿವರಣೆಯನ್ನು ನೀಡುವ ಮೂಲಕ ಅಲ್ಲೆಲ್ಲ ಈ ಕಾಲದ ಮಕ್ಕಳು ವಿಹರಿಸುವಂತೆ ಮಾಡಿದ್ದಾರೆ. ಇಂದು ಗಗನಚುಂಬಿ ಕಟ್ಟಡಗಳಿಗಾಗಿ ಹಾಗೂ ಕೈಗಾರಿಕೀಕರಣಕ್ಕಾಗಿ ಸಾಕಷ್ಟು ಹೆಸರು ಮಾಡಿರುವ ಈ ನಗರಕ್ಕೆ ರಷ್ಯನ್‌ ಆಡಳಿತ ತಮ್ಮಲ್ಲಿನ ಸುಪ್ರಸಿದ್ಧ ಲೇಖಕ ಮ್ಯಾಕ್ಸಿಂ ಗಾರ್ಕಿಯ ನೆನಪಿಗಾಗಿ ಗಾರ್ಕಿ ಎಂದೇ ಮರುನಾಮಕರಣ ಮಾಡಿದೆ.

– ಅರಕೆರೆ ಜಯರಾಮ್‌

ಟಾಪ್ ನ್ಯೂಸ್

ನರೇಗಾ ಕೆಲಸದ‌ ವಿಷಯದಲ್ಲಿ ಎರಡು ಗುಂಪಿನ ಮಧ್ಯೆ ಘರ್ಷಣೆ : 10 ಜನರ ಬಂಧನ

ನರೇಗಾ ಕೆಲಸದ‌ ವಿಷಯದಲ್ಲಿ ಎರಡು ಗುಂಪಿನ ಮಧ್ಯೆ ಘರ್ಷಣೆ : 10 ಜನರ ಬಂಧನ

ಹೇರ್‌ಕಟ್‌ ಎಡವಟ್ಟು; 2 ಕೋಟಿ ರೂ. ಪರಿಹಾರ!

ಹೇರ್‌ಕಟ್‌ ಎಡವಟ್ಟು; 2 ಕೋಟಿ ರೂ.ನಷ್ಟ ತುಂಬಬೇಕಾದ ಸೆಲೂನ್‌

gvhytytuy

ಯುಪಿಎಸ್‌ಸಿ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ | ಶುಭಮ್ ಕುಮಾರ್ ಪ್ರಥಮ ರ್‍ಯಾಂಕ್‌

ಯೋಗಿ ಹೆಸರಿಂದ ಅಪರಾಧಿಗಳಿಗೆ ನಡುಕ: ರಾಜನಾಥ್‌ ಸಿಂಗ್‌

ಯೋಗಿ ಹೆಸರಿಂದ ಅಪರಾಧಿಗಳಿಗೆ ನಡುಕ: ರಾಜನಾಥ್‌ ಸಿಂಗ್‌

dandeli

ದಾಂಡೇಲಿ : ಹಂದಿ, ನಾಯಿಗಳಿಗೆ ಹಬ್ಬದೂಟ ನೀಡುವ ಕಸದ ಡಬ್ಬಗಳು

fcgdgr

ಕೋವಿಡ್ : ರಾಜ್ಯದಲ್ಲಿಂದು  789 ಪ್ರಕರಣ|1050 ಸೋಂಕಿತರು ಗುಣಮುಖ

dxfre

ಆನೆ ರಕ್ಷಣೆ ಕಾರ್ಯಾಚರಣೆ ವರದಿಗೆ ತೆರಳಿದ್ದ ಪತ್ರಕರ್ತ ಸಾವು ! ವಿಡಿಯೋ ನೋಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ದಾಂಡೇಲಿ : ಹಂದಿ, ನಾಯಿಗಳಿಗೆ ಹಬ್ಬದೂಟ ನೀಡುವ ಕಸದ ಡಬ್ಬಗಳು

udayavani youtube

ಕೊಂಬು ಕಹಳೆ ವಾಧ್ಯ ತಯಾರಿಸುವ ಚಿಕ್ಕೋಡಿ ಕಲೈಗಾರ ಕುಟುಂಬ

udayavani youtube

ಆಧುನಿಕ ಭರಾಟೆಗೆ ಸಿಲುಕಿ ನಲುಗಿದ ಕುಲುಮೆ ಕೆಲಸಗಾರರ ಬದುಕು

udayavani youtube

ರಾತ್ರೋರಾತ್ರಿ ಕೋಟ್ಯಧಿಪತಿಯಾದ ಆಟೋ ಚಾಲಕ

udayavani youtube

ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ವಿಧಾನ ಪರಿಷತ್ ಸದಸ್ಯ ಘೋಟ್ನೇಕರ್ ಆಗ್ರಹ

ಹೊಸ ಸೇರ್ಪಡೆ

ನರೇಗಾ ಕೆಲಸದ‌ ವಿಷಯದಲ್ಲಿ ಎರಡು ಗುಂಪಿನ ಮಧ್ಯೆ ಘರ್ಷಣೆ : 10 ಜನರ ಬಂಧನ

ನರೇಗಾ ಕೆಲಸದ‌ ವಿಷಯದಲ್ಲಿ ಎರಡು ಗುಂಪಿನ ಮಧ್ಯೆ ಘರ್ಷಣೆ : 10 ಜನರ ಬಂಧನ

ಹೇರ್‌ಕಟ್‌ ಎಡವಟ್ಟು; 2 ಕೋಟಿ ರೂ. ಪರಿಹಾರ!

ಹೇರ್‌ಕಟ್‌ ಎಡವಟ್ಟು; 2 ಕೋಟಿ ರೂ.ನಷ್ಟ ತುಂಬಬೇಕಾದ ಸೆಲೂನ್‌

gvhytytuy

ಯುಪಿಎಸ್‌ಸಿ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ | ಶುಭಮ್ ಕುಮಾರ್ ಪ್ರಥಮ ರ್‍ಯಾಂಕ್‌

ಯೋಗಿ ಹೆಸರಿಂದ ಅಪರಾಧಿಗಳಿಗೆ ನಡುಕ: ರಾಜನಾಥ್‌ ಸಿಂಗ್‌

ಯೋಗಿ ಹೆಸರಿಂದ ಅಪರಾಧಿಗಳಿಗೆ ನಡುಕ: ರಾಜನಾಥ್‌ ಸಿಂಗ್‌

dandeli

ದಾಂಡೇಲಿ : ಹಂದಿ, ನಾಯಿಗಳಿಗೆ ಹಬ್ಬದೂಟ ನೀಡುವ ಕಸದ ಡಬ್ಬಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.