ಶ್ರಾವಣ ಮಾಸದ ಸಾಂಪ್ರದಾಯಿಕ ಚೂಡಿ ಪೂಜೆ ಆರಂಭ

Team Udayavani, Aug 15, 2021, 6:46 PM IST

15-15

ಸಾಗರ: ಇಲ್ಲಿನ ಗೌಡ ಸಾರಸ್ವತ ಸಮಾಜದ ಮಹಿಳೆಯರು ಶ್ರಾವಣ ಮಾಸದಲ್ಲಿನ ಚೂಡಿ ಪೂಜೆಯನ್ನು ಶುಕ್ರವಾರ ನೆರವೇರಿಸುವ ಮೂಲಕ ಸಾಂಪ್ರದಾಯಿಕ ಪ್ರಕೃತಿ ಪೂಜೆ ಆರಂಭಿಸಿದ್ದಾರೆ. ಆ. 15ರ ಭಾನುವಾರದಿಂದ ತೊಡಗಿ ಶ್ರಾವಣ ಮಾಸದ ಪ್ರತಿ ಶುಕ್ರವಾರ ಭಾನುವಾರಗಳಂದು ಪೂಜೆ ನಡೆಯಲಿದೆ.

ಸೂರ್ಯನು ಸ್ವಕ್ಷೇತ್ರ ಸಿಂಹ ರಾಶಿಯಲ್ಲಿ ಆಗಮಿಸಿದ ಸಂದರ್ಭದಲ್ಲಿ ಸೂರ್ಯನ ಬಿಂಬವನ್ನು ರಂಗೋಲಿಯಲ್ಲಿ ರಚಿಸಿ, ಸೂರ್ಯಾರಾಧನೆ ಮಾಡಿದರು. ಗರಿಕೆ, ಬಣ್ಣ ಬಣ್ಣದ ಲಕ್ಷಿ$¾ ಸಾನ್ನಿಧ್ಯವುಳ್ಳ ಹೂವುಗಳನ್ನು ಅರ್ಪಿಸಿ ಸೂರ್ಯನಿಗೆ ವಂದನೆ ಸಲ್ಲಿಸಿದರು.

ತುಳಸಿ ಸನ್ನಿಧಿಯಲ್ಲಿ ಶ್ರಾವಣ ಮಾಸದ ಪ್ರತಿ ಶುಕ್ರವಾರ ಮತ್ತು ಭಾನುವಾರ ನಡೆಯುವ ಚೂಡಿ ಪೂಜೆಯನ್ನು ಗೌಡ ಸಾರಸ್ವತ ಕುಟುಂಬದ ಹೆಂಗಸರು ಪದ್ಧತಿ ಪ್ರಕಾರ ನಡೆಸಿದರು. ಗರಿಕೆಯೊಂದಿಗೆ ರಥ ಪುಷ್ಪ, ಕರವೀರ, ರತ್ನಗಂ, ಮಿಠಾಯಿ ಹೂವು ಹಾಗೂ ವೈವಿಧ್ಯಮಯ ಸಸ್ಯಗಳಾದ ಅನ್ವಾಳೆ, ಲಾಯೆಮಾಡ್ಡೊ, ನೆಲ ನೆಲ್ಲಿ, ಕಾಟ್‌ ಚಿಡೋì, ಕಾಯ್‌ಳಾ0ದೋಳ್ಳೋ ಮಜ್ರಾನಾಂಕುಟ, ಗಾಂಟಿಮಾಡ್ಡೊ ಇತ್ಯಾದಿ ಕಾಟು ಹೂಗಳನ್ನೆಲ್ಲಾ ಸೇರಿಸಿ ಕಟ್ಟಿದ ಚೂಡಿಯನ್ನು ದೇವರಿಗೆ ಅರ್ಪಿಸಲಾಯಿತು.

ಬಾವಿ ಕಟ್ಟೆಗೆ ಅರಿಶಿನ ಕುಂಕುಮ ಹಚ್ಚಿ, ಪುಷ್ಪಾಲಂಕಾರ ಮಾಡಿ, ನೀರನ್ನು ಸಹ ಪೂಜಿಸಲಾಗುತ್ತದೆ. ಗಂಗಾ ಸ್ಮರಣ ಪೂರ್ವಕ ನೀರನ್ನು ತಂಬಿಗೆಯಲ್ಲಿಟ್ಟು ಪೂಜಿಸಲಾಗುತ್ತದೆ. ಆನಂತರ ತುಳಸಿ ಕಟ್ಟೆ, ಮನೆ ದ್ವಾರದ ಹೊಸ್ತಿಲನ್ನು ಅಲಂಕರಿಸಿ ಚೂಡಿ ಪೂಜೆ ಆರಂಭಿಸುತ್ತಾರೆ. ತುಳಸಿಗೆ ನೀರೆರೆದು ಅರಸಿನ ಕುಂಕುಮ, ಗಂಧ ಹಚ್ಚಿ, ವೀಳ್ಯ ಚೂಡಿ ಅರ್ಪಿಸಿ, ಹಣ್ಣುಕಾಯಿ, ಪಂಚ ಕಜ್ಜಾಯ ನೈವೇದ್ಯ ಮಾಡಿ ಆರತಿ ಬೆಳಗಲಾಗುತ್ತದೆ. ಬಳಿಕ ತುಳಸಿಗೆ 5 ಪ್ರದಕ್ಷಿಣೆ ಹಾಕಿ ಪ್ರತಿ ಸುತ್ತಿನಲ್ಲಿಯೂ ತುಳಸಿಗೂ ಸೂರ್ಯ ದೇವನಿಗೂ ಅಕ್ಷತೆ ಹಾಕಲಾಗುತ್ತದೆ. ಕೆಲವರು ತೆಂಗಿನ ಮರಕ್ಕೆ ಸಹ ಚೂಡಿ ಅರ್ಪಿಸುತ್ತಾರೆ.

ದೇವರ ಕೋಣೆಯಲ್ಲಿ ಜ್ಯೋತಿ ಬೆಳಗಿ, ಪತಿಗೆ ಆರೋಗ್ಯ, ಆಯುಷ್ಯ, ಗೃಹಿಣಿಯರಿಗೆ ಮುತ್ತೆ$çದೆ ಸೌಭಾಗ್ಯ , ಕುಟುಂಬದ ಪ್ರೀತಿ ವಿಶ್ವಾಸ, ಸಂಬಂಧ ಉತ್ತಮ ರೀತಿಯಲ್ಲಿ ಇರಲು ಸೂರ್ಯನಲ್ಲಿ ಹಾಗೂ ತುಳಸಿ ಸನ್ನಿಧಿಯಲ್ಲಿ ಕುಲ ದೇವರನ್ನು ಸ್ಮರಿಸಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

ಗೀತಾ ಅಮರನಾಥ ಕಾಯ್ಕಿಣಿ, ಪ್ರಜ್ಞಾ ಪ್ರಭು, ಗಾಯಿತ್ರಿ, ಸೌಮ್ಯ ಗಾಯೊ¤ಂಡೆ, ಉಮಾ, ಪ್ರತಿಭಾ, ಮಿಥಿಲಾ, ವೀಣಾ, ಭಾರತಿ, ಸುಮಾ, ಪಾವನಿ, ದೀಪಾ, ಶ್ವೇತಾ, ಶಾಂತೇರಿ ಹುಲೇಕಲ್‌ ಮುಂತಾದವರು ಸಾಂಪ್ರದಾಯಿಕ ಚೂಡಿ ಪೂಜೆ ನೇರವೇರಿಸಿದರು.

ಟಾಪ್ ನ್ಯೂಸ್

Dandeli: ಪಂಪ್ ಹೌಸ್ ಬಳಿ ಅಕ್ರಮವಾಗಿ ಕಟ್ಟಿಹಾಕಿದ್ದ 22 ಜಾನುವಾರುಗಳ ರಕ್ಷಣೆ

Dandeli: ಪಂಪ್ ಹೌಸ್ ಬಳಿ ಅಕ್ರಮವಾಗಿ ಕಟ್ಟಿಹಾಕಿದ್ದ 22 ಜಾನುವಾರುಗಳ ರಕ್ಷಣೆ

3-belthangady

ತಿರುವನಂತಪುರ ಅನಂತಪದ್ಮನಾಭ ದೇಗುಲ; ಪ್ರಧಾನ ಅರ್ಚಕರಾಗಿ ಸತ್ಯನಾರಾಯಣ ತೋಡ್ತಿಲ್ಲಾಯ ಆಯ್ಕೆ

VK Sasikala: ರಾಜಕೀಯ ಪ್ರವೇಶಕ್ಕೆ ಸಮಯ ಪಕ್ವವಾಗಿದೆ… ವಿ.ಕೆ. ಶಶಿಕಲಾ ಮಹತ್ವದ ಘೋಷಣೆ

VK Sasikala: ರಾಜಕೀಯ ಪ್ರವೇಶಕ್ಕೆ ಸಮಯ ಪಕ್ವವಾಗಿದೆ… ವಿ.ಕೆ. ಶಶಿಕಲಾ ಮಹತ್ವದ ಘೋಷಣೆ

Pannun: ಪನ್ನು ಹತ್ಯೆಗೆ ಸಂಚು ಆರೋಪ: ಭಾರತೀಯ ಮೂಲದ ನಿಖಿಲ್ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ

Pannun: ಪನ್ನು ಹತ್ಯೆಗೆ ಸಂಚು ಆರೋಪ: ಭಾರತೀಯ ಮೂಲದ ನಿಖಿಲ್ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ

2-thirthahalli

Thirthahalli: ಬಸ್-ಲಾರಿ ಡಿಕ್ಕಿ; ಕೆಲವರಿಗೆ ಸಣ್ಣಪುಟ್ಟ ಗಾಯ

NEET ಬೃಹತ್‌ ಹಗರಣ: ವಿಪಕ್ಷ ಆಕ್ರೋಶ ತೀವ್ರ

NEET ಬೃಹತ್‌ ಹಗರಣ: ವಿಪಕ್ಷ ಆಕ್ರೋಶ ತೀವ್ರ

1-24–monday

Daily Horoscope: ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ, ಉದ್ಯಮದಲ್ಲಿ ಪ್ರಗತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-thirthahalli

Thirthahalli: ಬಸ್-ಲಾರಿ ಡಿಕ್ಕಿ; ಕೆಲವರಿಗೆ ಸಣ್ಣಪುಟ್ಟ ಗಾಯ

Thirthahalli ಖಾಸಗಿ ಲಾಡ್ಜ್ ನಲ್ಲಿ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು!

Thirthahalli ಖಾಸಗಿ ಲಾಡ್ಜ್ ನಲ್ಲಿ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು!

ಬಕ್ರೀದ್ ಹಬ್ಬದ ಹಿನ್ನೆಲೆ: ತೀರ್ಥಹಳ್ಳಿ ಡಿವೈಎಸ್ಪಿ ಹೇಳಿದ್ದೇನು?  

ಬಕ್ರೀದ್ ಹಬ್ಬದ ಹಿನ್ನೆಲೆ: ತೀರ್ಥಹಳ್ಳಿ ಡಿವೈಎಸ್ಪಿ ಹೇಳಿದ್ದೇನು?  

Sagara: ಪೌಷ್ಟಿಕ ಆಹಾರ ಪೂರೈಕೆ ವ್ಯತ್ಯಯ… ಜೂ.19ರಿಂದ ಅನಿರ್ದಿಷ್ಟಾವಧಿ ಧರಣಿ

Sagara: ಪೌಷ್ಟಿಕ ಆಹಾರ ಪೂರೈಕೆ ವ್ಯತ್ಯಯ… ಜೂ.19ರಿಂದ ಅನಿರ್ದಿಷ್ಟಾವಧಿ ಧರಣಿ

1aaaaaa

Holehonnur:ಗೋವುಗಳ ಕೊಂಬು,ಮೂಳೆಗಳನ್ನು ಸಾಗಿಸುತ್ತಿದ್ದ ಲಾರಿ ವಶ

MUST WATCH

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

udayavani youtube

ಇಡ್ಲಿ, ವಡೆ, ಚಟ್ನಿ ಗೆ ತುಂಬಾ ಫೇಮಸ್ ಈ ಹೋಟೆಲ್

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಹೊಸ ಸೇರ್ಪಡೆ

Dandeli: ಪಂಪ್ ಹೌಸ್ ಬಳಿ ಅಕ್ರಮವಾಗಿ ಕಟ್ಟಿಹಾಕಿದ್ದ 22 ಜಾನುವಾರುಗಳ ರಕ್ಷಣೆ

Dandeli: ಪಂಪ್ ಹೌಸ್ ಬಳಿ ಅಕ್ರಮವಾಗಿ ಕಟ್ಟಿಹಾಕಿದ್ದ 22 ಜಾನುವಾರುಗಳ ರಕ್ಷಣೆ

3-belthangady

ತಿರುವನಂತಪುರ ಅನಂತಪದ್ಮನಾಭ ದೇಗುಲ; ಪ್ರಧಾನ ಅರ್ಚಕರಾಗಿ ಸತ್ಯನಾರಾಯಣ ತೋಡ್ತಿಲ್ಲಾಯ ಆಯ್ಕೆ

VK Sasikala: ರಾಜಕೀಯ ಪ್ರವೇಶಕ್ಕೆ ಸಮಯ ಪಕ್ವವಾಗಿದೆ… ವಿ.ಕೆ. ಶಶಿಕಲಾ ಮಹತ್ವದ ಘೋಷಣೆ

VK Sasikala: ರಾಜಕೀಯ ಪ್ರವೇಶಕ್ಕೆ ಸಮಯ ಪಕ್ವವಾಗಿದೆ… ವಿ.ಕೆ. ಶಶಿಕಲಾ ಮಹತ್ವದ ಘೋಷಣೆ

Pannun: ಪನ್ನು ಹತ್ಯೆಗೆ ಸಂಚು ಆರೋಪ: ಭಾರತೀಯ ಮೂಲದ ನಿಖಿಲ್ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ

Pannun: ಪನ್ನು ಹತ್ಯೆಗೆ ಸಂಚು ಆರೋಪ: ಭಾರತೀಯ ಮೂಲದ ನಿಖಿಲ್ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ

2-thirthahalli

Thirthahalli: ಬಸ್-ಲಾರಿ ಡಿಕ್ಕಿ; ಕೆಲವರಿಗೆ ಸಣ್ಣಪುಟ್ಟ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.