Udayavni Special

ಬಾಲ್ಯದ ಮಳೆ ದಿನಗಳು…

Team Udayavani, Jul 1, 2020, 5:12 AM IST

balya-male

ನಮ್ಮ ಮನೆಗೆ ದೆವ್ವ ಬಾರದಿರಲಿ ಎಂಬ ಸದಾಶಯದಿಂದಲೇ ಮುಂಬಾಗಿಲಿನ ಮೇಲೆ ನಾಳೆ ಬಾ ಎಂದು ಬರೆಯುತ್ತಿದ್ದೆವು. ಒಂದು ವೇಳೆ ಮಧ್ಯರಾತ್ರಿಯಲ್ಲಿ ದೆವ್ವ ಬಂದರೂ, ನಾವು ಬರೆದಿರುವುದನ್ನು ಓದಿ ವಾಪಸ್‌ ಹೋಗುತ್ತದೆ ಎಂಬ  ನಂಬಿಕೆ ನಮ್ಮದಿತ್ತು! 

ನಮ್ಮದು ಮಲೆನಾಡು. ಬಾಲ್ಯ ಸಂಪನ್ನವಾಗಿದ್ದು ದಟ್ಟ ಕಾಡು ಕಣಿವೆಗಳ ನಡುವೆಯೇ. ಆ ದಿನಗ ಳನ್ನು ನೆನೆದರೆ ಈಗಲೂ ಮನಸು ಮಗುವಾಗಿ ಬಿಡುತ್ತದೆ. ಮಳೆಗಾಲದ ಕೆಲವೊಂದು ತಮಾಷೆಯ ಸಂಗತಿಗಳು ಪದೇ ಪದೆ ನೆನಪಾಗಿ  ನಗು ತರಿಸುತ್ತವೆ. ಜೋರು ಮಳೆಗಾಲದಲ್ಲಿ ನಾವು ಒಳ್ಳೆಯ ಛತ್ರಿ ತೆಗೆದುಕೊಂಡು ಶಾಲೆಗೆ ಹೊರಟರೂ, ಮನೆಗೆ ಬರುತ್ತಿದ್ದುದು ಮುರಿದ ಛತ್ರಿ ಜೊತೆಗೆ! ದಾರಿಯುದ್ದಕ್ಕೂ ಉಂಬಳಗಳ ಕಾಟ, ಜೀರುಂಡೆ ಸದ್ದು…

ಮಳೆ ನಿಂತರೂ,  ಜೋರಾಗಿ ಬೀಸಿದ ಗಾಳಿಗೆ ಮರದ ಎಲೆಗಳು ಮೈ ಕೊಡವಿಕೊಂಡಾಗ, ಭರ್ರನೆ ಬೀಳುವ ಹನಿಗಳಿಗೆ ಬೆಚ್ಚಿಬೀಳುತ್ತಿದ್ದೆವು. ಎಷ್ಟೋ ಸಲ, ಜೀರುಂಡೆಗಳ ಸದ್ದು ಎಲ್ಲಿಂದ ಬರ್ತಾ ಇದೆ ಎಂದು ತಿಳಿಯುವ ಕುತೂಹಲದಿಂದ ಹುಡುಕುತ್ತಾ ದೂರ ಸಾಗಿ, ಹೆದರಿ ವಾಪಸ್ಸಾಗಿದ್ದೂ ಇದೆ. ಅಲ್ಲದೇ ಶಾಲೆಯಲ್ಲಿ ಸೀನಿಯರ್‌ಗಳು ರಂಜನೀಯವಾಗಿ ಹೇಳುತ್ತಿದ್ದ ದೆವ್ವದ ಕಥೆಗಳನ್ನು ಕೇಳಿ ಹೆದ ರದ ಮಕ್ಕಳಿಲ್ಲ. ದೆವ್ವ ಮನೆಗೆ ಬರಬಾರದು ಎಂದು ಬಾಗಿಲಿನ ಮೇಲೆ “ನಾಳೆ ಬಾ’ ಎಂದು  ಬರೆಯುತ್ತಿದ್ದೆವು.

ಒಂದು ವೇಳೆ ದೆವ್ವ ಬಂದರೂ ಅದು ಈ ಸಾಲು ಓದಿ ವಾಪಸ್ಸು ಹೊರಟು ಹೋಗುತ್ತದೆ ಅನ್ನುವ ನಂಬಿಕೆ ನಮ್ಮದು. ಒಮ್ಮೆ ಗೆಳತಿಯರೊಂದಿಗೆ ಕಾಡುದಾರಿಯಲ್ಲಿ ಶಾಲೆಗೆ ಹೋಗುತ್ತಿ ದ್ದಾಗ, ದೊಡ್ಡ ಮರದ  ಪೊಟರೆಯ ಒಳಗೆ ಒಂದು ಕಲ್ಲನ್ನಿಟ್ಟು ಅರಿಶಿನ ಕುಂಕುಮ ಬಳಿದು, “ನಾ ಇಂದೇ ಬರ್ತೆ’ ಎಂದು ಮಸಿಯಲ್ಲಿ ಬರೆದಿದ್ದನ್ನು ನೋಡಿದೆವು. ಅಲ್ಲಿ ಒಂದಷ್ಟು ಬೇಡದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅದನ್ನೆಲ್ಲ ನೋಡಿ, “ಇದು  ದೆವ್ವದ್ದೇ ಕೆಲಸ’ ಅಂತ ಹೆದರಿ, ಒಂದೇ ಉಸಿರಿಗೆ ಶಾಲೆ ಸೇರಿದ್ದೆವು.

ಶಾಲೆಯಲ್ಲಿ ಕೆಲವೇ ನಿಮಿಷಗಳಲ್ಲಿ ಈ ವಿಷಯ ಹಬ್ಬಿ, ಎಲ್ಲರ ಕಣ್ಣಲ್ಲೂ ಭಯ ಹುಟ್ಟಿತ್ತು. ಅಷ್ಟರಲ್ಲಿ, ಸೀನಿಯರ್‌ ಹುಡು ಗರು ನಮ್ಮ ಕಡೆ ನೋಡಿ ಕೇಕೆ ಹಾಕಿ ನಗುತ್ತಿ ರುವುದನ್ನು ನೋಡಿ,  ಇವರದ್ದೇ ಕಿತಾಪತಿ ಎಂದು ತಿಳಿಯಿತು. ಈ ಘಟನೆಯ ಪರಿಣಾಮ ಹೇಗಿತ್ತೆಂದರೆ, ಒಬ್ಬಳೇ ಆ ಮರದ ಹತ್ತಿರ ಹೋಗಲು ಭಯ ಆಗುತ್ತಿತ್ತು. ಈಗಲೂ ಆ ದಾರಿಯಲ್ಲಿ ಸಾಗುವಾಗ, ಬಾಲ್ಯದಲ್ಲಿ ನನ್ನನ್ನು ಆವರಿಸಿಕೊಂಡಿದ್ದ ಭಯದ  ಸಂದರ್ಭ ನೆನಪಾಗುತ್ತದೆ.

* ರೇಖಾ ಭಟ್‌ ಹೊನಗದ್ದೆ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ: 17 ಮಂದಿಯ ಮೇಲೆ ಎಫ್ಐಆರ್, ನಾಲ್ವರ ಬಂಧನ

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ: 17 ಮಂದಿಯ ಮೇಲೆ ಎಫ್ಐಆರ್, ನಾಲ್ವರ ಬಂಧನ

“ಪಾರದರ್ಶಕ ತೆರಿಗೆ” ಪಾವತಿ ಪ್ಲಾಟ್ ಫಾರ್ಮ್ ಗೆ ಪ್ರಧಾನಿ ಮೋದಿ ಚಾಲನೆ

Live: “ಪಾರದರ್ಶಕ ತೆರಿಗೆ” ಪಾವತಿ ಪ್ಲಾಟ್ ಫಾರ್ಮ್ ಗೆ ಪ್ರಧಾನಿ ಮೋದಿ ಚಾಲನೆ

ಮಹಮ್ಮದ್ ಪೈಗಂಬರರನ್ನು ನಿಂದಿಸಿರುವುದು ವೈಯಕ್ತಿಕವಾಗಿ ನನಗೂ ನೋವಾಗಿದೆ: ಜಮೀರ್ ಅಹಮದ್

ಮಹಮ್ಮದ್ ಪೈಗಂಬರರನ್ನು ನಿಂದಿಸಿರುವುದು ವೈಯಕ್ತಿಕವಾಗಿ ನನಗೂ ನೋವಾಗಿದೆ: ಜಮೀರ್ ಅಹಮದ್

ಟಿವಿ-ಮೊಬೈಲ್‌ ಇಲ್ಲದಿದ್ದರೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ

ಟಿವಿ-ಮೊಬೈಲ್‌ ಇಲ್ಲದಿದ್ದರೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ

ಪುಲ್ವಾಮಾ: ಉಗ್ರರ ಅಡಗುತಾಣ ಪತ್ತೆ, ಗ್ರೆನೇಡ್ಸ್, ಸ್ಫೋಟಕ, ಮದ್ದುಗುಂಡು ವಶಕ್ಕೆ

ಪುಲ್ವಾಮಾ: ಉಗ್ರರ ಅಡಗುತಾಣ ಪತ್ತೆ, ಗ್ರೆನೇಡ್ಸ್, ಸ್ಫೋಟಕ, ಮದ್ದುಗುಂಡು ವಶಕ್ಕೆ

ಸರಳ ಸ್ವಾತಂತ್ರ್ಯ ದಿನಾಚರಣೆಗೆ ತಯಾರಿ: ಸಾರ್ವಜನಿಕ ಪ್ರವೇಶ, ಸಾಂಸ್ಕೃತಿಕ ಕಾರ್ಯಕ್ರಮವಿಲ್ಲ

ಸರಳ ಸ್ವಾತಂತ್ರ್ಯ ದಿನಾಚರಣೆಗೆ ತಯಾರಿ: ಸಾರ್ವಜನಿಕ ಪ್ರವೇಶ, ಸಾಂಸ್ಕೃತಿಕ ಕಾರ್ಯಕ್ರಮವಿಲ್ಲ

ಮುಂಬೈ ಕನಸು ನನಸಾಗಿಸಲು 45 ಸಾವಿರ ರೂ.ಗೆ ಮಗುವನ್ನೇ ಮಾರಿದ ತಾಯಿ!

ಮುಂಬೈ ಕನಸು ನನಸಾಗಿಸಲು 45 ಸಾವಿರ ರೂ.ಗೆ ಮಗುವನ್ನೇ ಮಾರಿದ ತಾಯಿ!
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ಪೀಕಿಂಗ್ ಸ್ತ್ರೀ :  ಭಗವಂತನನ್ನು ನೋಡುವುದು ಹೇಗೆ?

ಸ್ಪೀಕಿಂಗ್ ಸ್ತ್ರೀ : ಭಗವಂತನನ್ನು ನೋಡುವುದು ಹೇಗೆ?

ಹಲಸು ತಿಂದು ಹೆದರಿಬಿಟ್ಟೆ..

ಹಲಸು ತಿಂದು ಹೆದರಿಬಿಟ್ಟೆ..

ಖಾಲಿ ಬೆಂಚೂ ಕಳೆದ ನಗುವೂ…

ಖಾಲಿ ಬೆಂಚೂ ಕಳೆದ ನಗುವೂ…

avalu-tdy-1

ಅವಳಿಗೆ ಪ್ರೀತಿಯ ಬಡಿಸಿ

ಶ್ರಾವಣ ಬಂದರೂ ಸಂಭ್ರಮವಿಲ್ಲ…

ಶ್ರಾವಣ ಬಂದರೂ ಸಂಭ್ರಮವಿಲ್ಲ…

MUST WATCH

udayavani youtube

ವರ್ಷಕ್ಕೊಮ್ಮೆಯಾದರೂ ಭೂಮಿತಾಯಿಯ ಸೇವೆಯನ್ನು ಮಾಡೋಣ ಎಂದು ವಿನಂತಿಸಿದ ಕೃಷಿಕ Rangayya Naik

udayavani youtube

ಪಾರಂಪರಿಕ ಕುಂಬಾರಿಕೆ ವೃತ್ತಿಗೆ Modern Touch | Traditional Pottery Making

udayavani youtube

ಕೂಲಿ ಕೆಲಸದ ಜೊತೆಗೆ ವಿದ್ಯಾಭ್ಯಾಸ ಮಾಡಿ SSLCಯಲ್ಲಿ616 ಅಂಕ : ಶಿಕ್ಷಣ ಸಚಿವರಿಂದ ಅಭಿನಂದನೆ

udayavani youtube

ಕೋವಿಡ್ ತಡೆಗೆ ಸಿದ್ಧವಾಯ್ತ ವಿಶ್ವದ‌ ಮೊದಲ ಲಸಿಕೆ? ಪುಟಿನ್ ಪುತ್ರಿಗೂ ವ್ಯಾಕ್ಸಿನ್?

udayavani youtube

ಮಿತ್ತಬಾಗಿಲು ಗ್ರಾಮದ ಕಾಡುಮನೆ ಬಳಿ ಭಾರಿ ಭೂಕುಸಿತ: ಆತಂಕದಲ್ಲಿ ನಿವಾಸಿಗಳುಹೊಸ ಸೇರ್ಪಡೆ

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ: 17 ಮಂದಿಯ ಮೇಲೆ ಎಫ್ಐಆರ್, ನಾಲ್ವರ ಬಂಧನ

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ: 17 ಮಂದಿಯ ಮೇಲೆ ಎಫ್ಐಆರ್, ನಾಲ್ವರ ಬಂಧನ

ಅಭಿವೃದ್ಧಿ ಕಾರ್ಯ ಶೀಘ್ರ ಪೂರ್ಣಗೊಳಿಸಿ : ಅಧಿಕಾರಿಗಳಿಗೆ ಸಂಸದರ ಸೂಚನೆ

ಅಭಿವೃದ್ಧಿ ಕಾರ್ಯ ಶೀಘ್ರ ಪೂರ್ಣಗೊಳಿಸಿ : ಅಧಿಕಾರಿಗಳಿಗೆ ಸಂಸದರ ಸೂಚನೆ

ಕೊರೊನಾ ಲಾಕ್‌ಡೌನ್‌ನಿಂದಾಗಿ ಅತಿಥಿ ಉಪನ್ಯಾಸಕರ ಪರದಾಟ

ಕೊರೊನಾ ಲಾಕ್‌ಡೌನ್‌ನಿಂದಾಗಿ ಅತಿಥಿ ಉಪನ್ಯಾಸಕರ ಪರದಾಟ

“ಪಾರದರ್ಶಕ ತೆರಿಗೆ” ಪಾವತಿ ಪ್ಲಾಟ್ ಫಾರ್ಮ್ ಗೆ ಪ್ರಧಾನಿ ಮೋದಿ ಚಾಲನೆ

Live: “ಪಾರದರ್ಶಕ ತೆರಿಗೆ” ಪಾವತಿ ಪ್ಲಾಟ್ ಫಾರ್ಮ್ ಗೆ ಪ್ರಧಾನಿ ಮೋದಿ ಚಾಲನೆ

ಮಹಮ್ಮದ್ ಪೈಗಂಬರರನ್ನು ನಿಂದಿಸಿರುವುದು ವೈಯಕ್ತಿಕವಾಗಿ ನನಗೂ ನೋವಾಗಿದೆ: ಜಮೀರ್ ಅಹಮದ್

ಮಹಮ್ಮದ್ ಪೈಗಂಬರರನ್ನು ನಿಂದಿಸಿರುವುದು ವೈಯಕ್ತಿಕವಾಗಿ ನನಗೂ ನೋವಾಗಿದೆ: ಜಮೀರ್ ಅಹಮದ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.