ಶೇರ್‌ಖಾನ್‌

ಷೇರು ಮಾರುಕಟ್ಟೆಯಲ್ಲಿ ಹೊಸ ಆಟಗಾರರು!

Team Udayavani, Jul 6, 2020, 4:59 AM IST

hare-khan

ಷೇರುಪೇಟೆಯಲ್ಲಿ ಲಾಭ ತಂದು ಕೊಡುವ ಷೇರುಗಳನ್ನು ಆರಿಸಲು ಜಾಣ್ಮೆ ಅತ್ಯಗತ್ಯ. ಇಕ್ವಿಟಿ ಹೂಡಿಕೆಗಳ ಕುರಿತಾಗಿ ಕೆಲ ಸರಳ ವಿಚಾರಗಳನ್ನು ತಿಳಿದುಕೊಳ್ಳಬೇಕಾದ್ದು ಅವಶ್ಯ.

ಕೋವಿಡ್‌ 19 ಸೋಂಕು ಮಾರುಕಟ್ಟೆಯ ಮೇಲೆ ನಿರೀಕ್ಷೆಗಿಂತ ಹೆಚ್ಚಿನ ದುಷ್ಪರಿಣಾಮ ಬೀರುತ್ತಿದೆ. ಆರ್ಥಿಕತೆ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಈ ಸಮಯದಲ್ಲಿಯೂ, ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ಸ್ಟಾಕ್‌ ಮಾರುಕಟ್ಟೆ  ಹಿಂದೆ ಬಿದ್ದಿಲ್ಲ. ಈ ವರ್ಷ ಮೊದಲ ಐದು ತಿಂಗಳಲ್ಲಿ ಹೊಸದಾಗಿ ತೆರೆಯಲಾದ ಡಿಮ್ಯಾಟ್‌ ಖಾತೆಗಳ ಸಂಖ್ಯೆಯೇ ಅದಕ್ಕೆ ಸಾಕ್ಷಿ.

ಈ ಸಂಖ್ಯೆ, ಕಳೆದ ವರ್ಷ ತೆರೆಯಲಾದ ಡಿಮ್ಯಾಟ್‌ ಖಾತೆಗಳ ಸಂಖ್ಯೆಯನ್ನೂ ಮೀರಿಸುವ ಗತಿಯಲ್ಲಿ  ಏರಿಕೆ ಕಾಣುತ್ತಿದೆ. ಫೆಬ್ರವರಿ ಹಾಗೂ ಮಾರ್ಚ್‌ ತಿಂಗಳಲ್ಲಿ ಹೂಡಿಕೆದಾರರು ಹೆಚ್ಚು ಹೆಚ್ಚು ಹೂಡಿಕೆ ನಡೆಸಲು ಮುಂದಾಗಿದ್ದರು. ಸಂಕಷ್ಟದ ಸಮಯದಲ್ಲೂ ಅವಕಾಶಗಳ ಬಾಗಿಲು ತೆರೆದಿರುವುದನ್ನು ಗಮನಿಸಿ, ನೇರವಾಗಿ ಇಕ್ವಿಟಿಗಳಲ್ಲಿಯೇ ಹಣ ತೊಡಗಿಸಿದ್ದರು.

ಹೆಚ್ಚಿನ ರಿಟರ್ನ್ಸ್‌ ಆಸೆ: ಮಾರುಕಟ್ಟೆಯಲ್ಲಿ ಹಲವು ಷೇರುಗಳ ಬೆಲೆ  ಕುಸಿದಿದ್ದರಿಂದಾಗಿ, ಇದುವರೆಗೂ ಷೇರುಪೇಟೆಯತ್ತಗಮನ ನೀಡದವರೂ ಆಸಕ್ತಿ ತೋರುವಂತಾಯಿತು. ಇದೇ ಸರಿಯಾದ ಸಮಯವೆಂದು ತಿಳಿದ ಹಲವರು,  ಪ್ರಥಮ ಬಾರಿಗೆ ಷೇರುಗಳನ್ನು ಖರೀದಿಸಿದರು. ಬ್ಯಾಂಕುಗಳಲ್ಲಿ ಕಡಿಮೆ ಬಡ್ಡಿ ದರ ನಿಗದಿಪಡಿಸಿದ್ದರಿಂದ ಅನೇಕರು ಹೆಚ್ಚಿನ ಮೊತ್ತದ ರಿಟರ್ನ್ಸ್‌ ಆಸೆಯಿಂದ ಆ ಹಣವನ್ನೂ ಷೇರುಪೇಟೆಯಲ್ಲಿ ಹೂಡಲು ಮುಂದಾಗುತ್ತಿದ್ದಾರೆ.

ವರ್ಕ್‌ ಫ್ರಮ್‌  ಹೋಮ್‌ನಿಂದಾಗಿ ಬಹಳಷ್ಟು ಮಂದಿ ಮನೆಯಿಂದಲೇ ಕೆಲಸ ನಿರ್ವಹಿಸುತ್ತಿರು ವುದರಿಂದ, ಅವರ ಪರ್ಸನಲ್‌ ಹಣಕಾಸು ವಿಚಾರಗಳತ್ತ ಲಕ್ಷ ವಹಿಸಲು ಸಾಧ್ಯವಾಗುತ್ತಿದೆ. ಜನಸಾಮಾನ್ಯರು ಸ್ಟಾಕ್‌ ಮಾರುಕಟ್ಟೆಯಲ್ಲಿ ನೇರವಾಗಿ  ಭಾಗಿಯಾಗುವುದು ದೊಡ್ಡ ರಿಸ್ಕ್‌ ತಂದೊಡ್ಡಬಲ್ಲುದು. ಇದೀಗ ಹೂಡಿಕೆಯತ್ತ ಹೊರಳಿದವರಿಗೆಅಲ್ಲಿನ ರೀತಿ ರಿವಾಜುಗಳ ಪರಿಚಯ ಇರುವುದಿಲ್ಲ. ಹಾಗಾಗಿ, ಸಕಾಲದಲ್ಲಿ ನಿರ್ಣಯಗಳನ್ನು ಕೈಗೊಳ್ಳಲು ಕಷ್ಟವಾಗಬಹುದು. ಅಂಥವರು, ಈ  ಕೆಳಗಿನ ಮಾರ್ಗಗಳ ಮೊರೆ ಹೋಗಬಹುದು.

ಮ್ಯೂಚುವಲ್‌ ಫ‌ಂಡ್‌: ಷೇರುಪೇಟೆಯಲ್ಲಿ ಲಾಭ ತಂದುಕೊಡುವ ಷೇರುಗಳನ್ನು ಆರಿಸಲು ಜಾಣ್ಮೆ ಅತ್ಯಗತ್ಯ. ಇಕ್ವಿಟಿ ಹೂಡಿಕೆಗಳ ಕುರಿತಾಗಿ ಕೆಲ ಸರಳ ವಿಚಾರಗಳನ್ನು ತಿಳಿದುಕೊಳ್ಳ ಬೇಕಾದ್ದು ಅವಶ್ಯ. ಕಂಪನಿಗಳ ಹಣಕಾಸು ವರದಿಯನ್ನು ಪರಿಶೀಲಿಸಿ, ಯಾವ ಯಾವ ಬಗೆಯ  ಷೇರುಗಳನ್ನು ಸಂಸ್ಥೆ ಕೊಡುತ್ತಿದೆ ಎಂಬುದನ್ನು ತಿಳಿದುಕೊಳ್ಳ ಬೇಕಾಗುತ್ತದೆ. ಹೀಗಾಗಿ, ಸಮಯ ಮತ್ತು ಅನುಭವ ವನ್ನು ಬೇಡುವ ಕೆಲಸವಿದು. ಹೂಡಿಕೆದಾ ರರು ತಂತಮ್ಮ  ಕೆಲಸಗಳಲ್ಲಿ ಬಿಝಿಯಾಗಿರುವುದರಿಂದ ಷೇರುಪೇಟೆಯ ಕಡೆ ಗಮನ ನೀಡಲು ಸಾಧ್ಯವಾಗದೇ ಹೋಗಬಹುದು.

ತಾವು ಕೊಳ್ಳಬೇಕಿರುವ ಷೇರುಗಳ ಸಂಸ್ಥೆಯ ಇತ್ಯೋಪರಿಯನ್ನು ಜಾಲಾಡಲು ತುಸು ಕಷ್ಟವಾಗಬಹುದು. ಇಂಥವರು  ಮ್ಯೂಚುವಲ್‌ ಫ‌ಂಡ್‌ ಮೊರೆ ಹೋಗಬಹುದು. ಮ್ಯೂಚುವಲ್‌ ಫ‌ಂಡ್‌ ಗಳನ್ನು ವೃತ್ತಿಪರ ಫ‌ಂಡ್‌ ಮ್ಯಾನೇಜರ್‌ ಗಳು ನಿರ್ವಹಿಸುತ್ತಿರು ತ್ತಾರೆ. ಅವರ ಕೆಲಸವೇ ಲಾಭ ತಂದುಕೊಡುವ ಷೇರುಗಳನ್ನು ಆರಿಸಿ ಅದರಲ್ಲಿ ಹಣ ತೊಡಗಿಸುವುದು. ಅವರು ತಮ್ಮ  ಅನುಭವದಿಂದ ಲಾಭ ದೊರಕಿಸಿಕೊಡುವ ಷೇರುಗಳನ್ನು ಪತ್ತೆ ಹಚ್ಚಿ, ಆ ಸಂಸ್ಥೆಯ ಇತ್ಯೋಪರಿಯನ್ನು ಹೂಡಿಕೆದಾರರ ಮುಂದಿರಿಸುತ್ತಾರೆ. ಇದರಿಂದಾಗಿ ಹೂಡಿಕೆದಾರರ ಅರ್ಧ ತಲೆನೋವು  ನಿವಾರಣೆಯಾಗುತ್ತದೆ.

ಫ‌ಂಡ್‌ ಮ್ಯಾನೇಜರ್‌ಗಳು ಹತ್ತು ಹಲವು ವಿವಿಧ ಬಗೆಯ ಸಂಸ್ಥೆಗಳನ್ನು ಅಧ್ಯಯನಕ್ಕೊಳಪಡಿಸಿ, ಅವುಗಳ ಪೋರ್ಟ್‌ ಫೋಲಿಯೋಗಳನ್ನು ಹೂಡಿಕೆದಾರರ ಮುಂದಿರಿಸು ತ್ತಾರೆ. ಅದರಲ್ಲಿ ತಮಗಿಷ್ಟವಾದ  ಪ್ಯಾಕೇಜುಗಳನ್ನು ಆರಿಸಿಕೊಂಡು ಹೂಡಿಕೆ ದಾರರು ಹಣ ತೊಡಗಿಸ ಬಹುದು. ಇದಕ್ಕಾಗಿ ಫ‌ಂಡ್‌ ಮ್ಯಾನೇಜಿಂಗ್‌ ಸಂಸ್ಥೆಗಳು ನಿಗದಿತ ಶುಲ್ಕ ವಿಧಿಸುತ್ತವೆ. ಮ್ಯೂಚುವಲ್‌ ಫ‌ಂಡ್‌ ಉದ್ಯಮ, “ಕ್ಯಾಪಿಟಲ್‌ ಮಾರ್ಕೆಟ್‌ ರೆಗ್ಯುಲೇಟರ್‌  ಸೆಕ್ಯುರಿಟೀಸ್‌ ಅಂಡ್‌ ಎಕ್ಸ್‌ ಚೇಂಚ್‌ ಬೋರ್ಡ್‌ ಆಫ್ ಇಂಡಿಯಾ’ದ ನಿಯಂತ್ರಣಕ್ಕೆ ಒಳಪಟ್ಟಿದೆ. ಹೂಡಿಕೆ  ದಾರರಿಗೆ ಅನುಕೂಲ ಮಾಡಿಕೊಡುವುದೇ ಈ ಮಂಡಳಿಯ ಗುರಿ.

ಹೀಗಾಗಿ ಮ್ಯೂಚುವಲ್‌ ಫ‌ಂಡ್‌ಗಳು ರಿಸ್ಕ್‌ ರಹಿತ ಹೂಡಿಕೆಗೆ  ಅವಕಾಶ ಮಾಡಿಕೊಡು ತ್ತವೆ. ಇಕ್ವಿಟಿ ಮಾರು ಕಟ್ಟೆಯಲ್ಲಿ 500 ರೂ.ನಷ್ಟು ಸಣ್ಣ ಮೊತ್ತದ ಹೂಡಿಕೆಯನ್ನು ಮಾಡಲೂ ಮ್ಯೂಚುವಲ್‌ ಫ‌ಂಡ್‌ ಅನುವು ಮಾಡಿಕೊಡುತ್ತದೆ. ಮ್ಯೂಚು ವಲ್‌ ಫ‌ಂಡ್‌ನ‌ಲ್ಲಿ ಸಿಸ್ಟಮ್ಯಾಟಿಕ್‌ ಇನ್ವೆಸ್ಕ್‌ಮೆಂಟ್‌  ಪ್ಲಾನ್‌(ಎಸ್‌ ಐಪಿ) ಮಾರ್ಗವನ್ನು ಅನುಸರಿಸುವುದು ಉತ್ತಮ. ಎಸ್‌ ಐಪಿ ಮುಖಾಂತರ ಒಂದೆರಡು ಇಕ್ವಿಟಿ ಫ‌ಂಡ್‌ಗಳಲ್ಲೂ ಹಣ ಹೂಡಿದರೆ ಮೂರ್ನಾಲ್ಕು ವರ್ಷಗಳಲ್ಲಿ ಮಾರುಕಟ್ಟೆ ಯಾವ ರೀತಿ ವರ್ತಿಸುತ್ತದೆ ಎನ್ನುವುದು ಹೂಡಿಕೆದಾರರಿಗೆ ತಿಳಿದು ಬಿಡುತ್ತದೆ. ಇಕ್ವಿಟಿಗಳಿಂದ  ಉತ್ತಮ ಲಾಭಾಂಶವನ್ನು ಪ್ರತಿವರ್ಷ ನಿರೀಕ್ಷಿಸ ಲಾಗದು. ಕೆಲ ವರ್ಷಗಳ ಕಾಲ ಅಲ್ಲಿಯೇ ಬಿಡಬೇಕು.

ಪರಿಣತರ ಸಹಾಯ: ದೈನಂದಿನ ಚಟುವಟಿಕೆಗಳಲ್ಲಿ ಮುಳುಗಿರುವವರು, ಷೇರುಪೇಟೆ ಮಾರುಕಟ್ಟೆಯ ಬೆಳವಣಿಗೆಗಳ ಬಗ್ಗೆ ಗಮನ ಹರಿಸಲು ಸಾಧ್ಯವಾಗದೇ ಇರುವವರು ಹಣಕಾಸು ಪರಿಣತರ ನೆರವು ಪಡೆಯಬಹುದು. ಇವರನ್ನು ಫೈನಾನ್ಷಿಯಲ್‌ ಪ್ಲಾನರ್‌ ಎಂದು ಕರೆಯುತ್ತಾರೆ. ಮಾರುಕಟ್ಟೆಯಲ್ಲಿ  2,500ಕ್ಕೂ ಹೆಚ್ಚಿನ ಮ್ಯೂಚುವಲ್‌ ಫ‌ಂಡ್‌ ಯೋಜನೆಗಳಿವೆ. ಫೈನಾನ್ಷಿಯಲ್‌ ಪ್ಲಾನರ್‌ ಅಥವಾ ಸೆಬಿ (ಸ್ಟಾಕ್‌ ಎಕ್ಸ್‌ ಚೇಂಜ್‌ ಬೋರ್ಡ್‌ ಆಫ್ ಇಂಡಿಯಾ) ನೋಂದಾಯಿತ ಹೂಡಿಕೆ ಸಲಹೆಗಾರನ ಸಹಾಯ ಪಡೆದುಕೊಂಡು,  ಸೂಕ್ತವೆನಿಸಿದ ಮ್ಯೂಚುವಲ್‌ ಫ‌ಂಡ್‌ ಯೋಜನೆಯನ್ನು ಆರಿಸಿಕೊಳ್ಳಬಹುದು.

ಪ್ರತಿ ಯೋಜನೆಯಲ್ಲಿಯೂ ವಿವಿಧ ಬಗೆಯ ಸಂಸ್ಥೆಯ ಷೇರುಗಳಿರುತ್ತವೆ. ಫೈನಾನ್ಷಿಯಲ್‌ ಪ್ಲಾನರ್‌ಗಳು ನಿಷ್ಪಕ³ಪಾತಿಗಳಾಗಿರುತ್ತಾರೆ. ಅವರು  ಹೂಡಿಕೆದಾರನ ಆದಾಯ, ಖರ್ಚು ವೆಚ್ಚಗಳನ್ನು ಪರಿಗಣಿಸಿ ತಮ್ಮ ಅನುಭವದ ಆಧಾರದ ಮೇಲೆ ಸೂಕ್ತವಾದ ಮ್ಯೂಚುವಲ್‌ ಫ‌ಂಡ್‌ ಯೋಜನೆಯನ್ನು ಆರಿಸುತ್ತಾರೆ. ಅಲ್ಲದೆ, ಹೂಡಿಕೆಯನ್ನು ಕಾಲಕಾಲಕ್ಕೆ ಪರಾಮರ್ಶೆಗೆ ಗುರಿಪಡಿಸಿ  ಅದರ ವರದಿಯನ್ನು ಹೂಡಿಕೆದಾರರಿಗೆ ನೀಡುತ್ತಾರೆ.

ಟಾಪ್ ನ್ಯೂಸ್

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.