CONNECT WITH US  

ಪಂಚರ್

ಇನ್ನು ಮುಲಾಯಂ ಸಿಂಗ್‌ಗೂ ದೇಗುಲ!
-ಎಲ್ಲಾ ಗಾಯಕ್ಕೂ ದೇವರೇ ಮುಲಾಂ ಅಂತ ಹೇಳ್ಳೋದು ಇದನ್ನೇ!
"ಮೋದಿ ಮಂದಿರ' ನಿರ್ಮಾಣಕ್ಕೆ ಖುದ್ದು ಮೋದಿ ಬ್ರೇಕ್‌.
-ತಾನು ದೇವರಲ್ಲ ಅಂತ ದಿಲ್ಲಿ ತೋರಿಸಿಕೊಟ್ಟಿರಬೇಕು!
ಅಶ್ಲೀಲ ಕಾರ್ಯಕ್ರಮ ಆರೋಪ ಸಾಬೀತಾದ್ರೆ ಕರಣ್‌, ರಣವೀರ್‌, ಅರ್ಜುನ್‌ ಕಪೂರ್‌ಗೆ 3 ವರ್ಷ ಜೈಲು.
-ಯಾವುದು ಅಶ್ಲೀಲ ಅಂತ ಹ್ಯಾಗ್‌ ಹೇಳ್ಳೋದು ಅಂತ ಸನ್ನಿಲೀಯಾನ್‌ ಕೇಳ್ತಿದರಂತೆ!
ಕಾಂಗ್ರೆಸ್‌ಗೂ ಬೇಕು ಒಬ್ಬ ಕೇಜ್ರಿವಾಲ್‌ : ಕಾರ್ತಿ
-ಒಬ್ಬ ಕ್ರೇಜಿ ಸ್ಟಾರ್‌ ಇದ್ದಾನಲ್ಲ, ಸಾಲದೇ!
ಇಂದು ಮೋದಿ-ಕೇಜ್ರಿವಾಲ್‌ ಚಾಯ್‌ ಪೇ ಚರ್ಚಾ
- ಭೇಟಿ ವೇಳೆ ಕೇಜ್ರಿವಾಲರಿಂದ ಮೋದಿಗೆ ಮಫ್ಲರ್‌ ಕೊಡುಗೆ!
ರೈಲಿಗಿಂತಲೂ ಕಡಿಮೆ ದರದಲ್ಲಿ ಸ್ಪೈಸ್‌ಜೆಟ್‌ ವಿಮಾನ ಟಿಕೆಟ್‌
- ಶ್‌! ಮೆಲ್ಲಗೆ ಹೇಳಿ ಮಕ್ಕಳು ಕೇಳಿಸಿಕೊಂಡ್ರೆ ಕಷ್ಟ!
ದೆಹಲಿ ಸೋಲು: ಶಾ ಮದುವೆ ಮನೆಯಲ್ಲಿ ಕರಿ ಛಾಯೆ
- ಬೇಸರದಲ್ಲಿ ಬಂದವರಿಗೂ ಕರೀ ಚಹಾ ಕೊಟ್ರೇನ್ರೀ..?
ಕಷ್ಟದಲ್ಲಿ ನೆರವಾಗುವ ಕೇಜ್ರಿವಾಲ್‌ರನ್ನು ಜನ ಏನೆಂದು ಕರೀಬಹುದು,
-ಆಪ್‌ತ್ಬಾಂಧವ.
ಮೋದಿ ತಮ್ಮ ಪಕ್ಷವೇ ಗೆಲ್ಲುತ್ತೆ ಅಂದ್ಕೊಂಡಿದ್ದರಂತೆ!
-ಯಾರಿಗೆ ಓಟು ಹಾಕುತ್ತೀರಿ ಅಂತ ಕೇಳಿದಾಗ ಮತದಾರರು ಆಪ್‌ಕೋ ಅಂದಿದ್ದನ್ನು ತಮಗೆ ಅಂತ ತಪ್ಪಾಗಿ ಅರ್ಥಮಾಡಿಕೊಂಡರಂತೆ!
ದೆಹಲಿ ಚುನಾವಣೆಯ ಹೈಲೈಟ್ಸ್‌ ಏನು?
-ಬಂದರೆ ಪೊರಕೆ, ಬಿಜೆಪಿ ಗೊರಕೆ, ಕಾಂಗ್ರೆಸ್‌ ಹೊರಕೆ!
ಮೋದಿ ಟ್ವಿಟರ್‌ ಮೂಲಕ ಮತದಾರರನ್ನು ಒಲಿಸಿಕೊಳ್ಳಲು ನೋಡಿದ್ದು ವ್ಯರ್ಥವಾಯಿತಾ?
-ಕೇಜ್ರಿವಾಲ್‌ ವಾಟ್ಸ್‌ ಆಪ್‌ ಬಳಸಿ ಗೆದ್ದದ್ದೇ ಸಾಕ್ಷಿ!
ಅತ್ಯುತ್ತಮ ಕೆಲಸಕ್ಕೆ ಉಡುಗೊರೆ: ನಂ.1 ನೀಲಿತಾರೆಯೊಂದಿಗೆ ರಾತ್ರಿ ಕಳೆಯುವ ಅವಕಾಶ!
-ಅತ್ಯುತ್ತಮ ಕೆಲಸ!
ಜನರ ಪ್ರೀತಿ ಕಂಡು ಕಣ್ಣೀರು ಹಾಕಿದ ಕಿರಣ್‌ಬೇಡಿ
ಬೇಡಿ, ಕಣ್ಣೀರು ಹಾಕಬೇಡಿ ಅಂತ ಜನ ಕೇಳ್ಕೊಂಡ್ರಂತೆ!
ಸೂರತ್‌ನಲ್ಲಿ 12ಸಾವಿರ ವಜ್ರಗಳಿಂದ ಶೂ ತಯಾರಿ.
-ಕೆರ ತಗೊಂಡು ಹೊಡಿತೀನಿ ಅನ್ನೋದು ಇನ್ಮುಂದೆ ದುಬಾರಿಯಾಗಬಹುದು!
ಜೆಡಿಯು ಪಕ್ಷದಿಂದ ಮಾಂಝಿ ಉಚ್ಚಾಟನೆ.
ಮಾಂಝಿಗೆ ಮಾಂಜಾ ಕೊಡುದು ಅಂದ್ರೆ ಇದೆ.
ಆಪ್‌ನಲ್ಲಿ ಜಾಲೀ ಮೂಡ್‌, ಬಿಜೆಪಿಯಲ್ಲಿ ಟಾಕ್‌ ಮೂಡ್‌
ಕಾಂಗ್ರೆಸ್‌ನಲ್ಲಿ ಮೂಡ್‌ ಆಫ್!
ಮುಂದಿನ ಚುನಾವಣೆಗೂ ಸಿದ್ದು ನೇತೃತ್ವ: ಸಚಿವ ಆಂಜನೇಯ
ನಾವು ಬಿಟ್ರಲ್ವೇ..? ಅಂದ್ರಂತೆ ಭಿನ್ನರು!
ಅಭ್ಯಾಸದಲ್ಲೂ ಸೋಲುಂಡ ಧೋನಿ ತಂಡ
ವಿಶ್ವಕಪ್‌ನಲ್ಲೂ ಸೋತರೆ "ಘರ್‌ ವಾಪಾಸಿ'
ಚೀನಾದಿಂದ ಪಾಕ್‌ನಲ್ಲಿ 6 ಅಣುವಿದ್ಯುತ್‌ ಯೋಜನೆ
ಪಾಕ್‌ನ ಅಣು ಅಣುವಲ್ಲೂ "ಚೀನಾ!'

Pages

Back to Top